ಭಾರತೀಯ ಮಹಿಳೆಯರಿಗಾಗಿ 'ಟಾಯ್ಲೆಟ್ ಫೈಂಡರ್'..!

ಟೀಮ್​​.ವೈ.ಎಸ್​​.

0

ಕೆಲವು ತಿಂಗಳುಗಳ ಹಿಂದೆ ನಾನು ತುಂಬು ಗರ್ಭಿಣಿಯಾಗಿದ್ದೆ. ನಾನು ಪುಣೆಯ ಪಿಜ್ಜಾ ಹಟ್ ಒಂದಕ್ಕೆ ಹೋಗಿದ್ದೆ. ನನಗೆ ಪಿಜ್ಜಾ ಬೇಕಿರಲಿಲ್ಲ. ತುರ್ತಾಗಿ ಶೌಚಾಲಯಕ್ಕೆ ಹೋಗಬೇಕಿತ್ತು. ನಾನು ಅಲ್ಲಿನ ವೈಟರ್‍ಗಳು ಅತ್ತಕಡೆ ಹೋಗುವುದನ್ನೇ ಕಾಯುತ್ತಿದ್ದೆ. ಇಲ್ಲದಿದ್ದರೆ ಅವರ ಅಸಂಬದ್ಧ ಪ್ರಶ್ನೆಗಳಿಗೆ ಉತ್ತರಿಸಿ ತಪ್ಪಿಸಿಕೊಂಡು ಹೊರಗೆ ಬರುವುದು ಸಾಧ್ಯವಾಗುತ್ತ ಇರಲಿಲ್ಲ. ಈಗ ಹಲವು ಟಾಯ್ಲೆಟ್ ಫೈಂಡರ್ ಅಪ್ಲಿಕೇಶನ್‍ಗಳಿರುವುದನ್ನು ಕೇಳಿ ಖುಷಿಯಾಗುತ್ತಿದೆ.

ಭಾರತದಲ್ಲಿನ ಬಹುತೇಕ ಮಹಿಳೆಯರು ಈ ಸಮಸ್ಯೆಯನ್ನು ಪ್ರತಿದಿನ ಎದುರಿಸುತ್ತಾರೆ. ಆದರೆ, ಅವರಲ್ಲಿ ಕೆಲವೇ ಕೆಲವು ಮಂದಿಗಷ್ಟೇ ಅವರಿಗೆ ಲಭ್ಯವಿರುವ ಆಯ್ಕೆಗಳ ಬಗ್ಗೆ ಮಾಹಿತಿ ಇರುತ್ತದೆ.

ಕಳೆದ ವಾರ ಕೂಡಾ ದೆಹಲಿ ಮೂಲದ ಮಹಿಳೆಯರ ಅರೋಗ್ಯ, ಮತ್ತು ಆಂತರಿಕ ಆರೈಕೆ ಉತ್ಪನ್ನಗಳ ತಯಾರಿಕಾ ಸಂಸ್ಥೆ ಪೀಬಡ್ಡಿ ಕೂಡಾ ಹೊಸ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಿದೆ. ಗೂಗಲ್ ಪ್ಲೇನಲ್ಲಿ ಯೂಸ್-ರೆಫ್ಯೂಸ್ ಹೆಸರಿನಲ್ಲಿ ಆ್ಯಪ್ ಲಭ್ಯವಿದೆ.

ಮಹಿಳೆಯರು ಕೇವಲ ಶೌಚಾಲಯದಲ್ಲಿದ್ದಾಗಲಷ್ಟೇ ಪೀ ಬಡ್ಡಿ ( ಬಳಸಿ ಬಿಸಾಡಬಹುದಾದ ಆಂತರಿಕ ಬಳಕೆ ಉತ್ಪನ್ನ) ಯನ್ನು ಬಳಸಬಹುದು. ಇದು ಒಳ್ಳೆಯದೋ ಕೆಟ್ಟದ್ದೋ ಎಂದು ನಿರ್ಧರಿಸಬಹುದು. ಆದರೆ ಶೌಚಾಲಯ ಎಲ್ಲಿದೆ? ಈ ಪ್ರಶ್ನೆ ಎದುರಾದಾಗಲೇ ನಾವು ಹತ್ತಿರದಲ್ಲಿರುವ ಟಾಯ್ಲೆಟ್‍ಅನ್ನು ಹುಡುಕುವ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು ನಿರ್ಧರಿಸಿದೆವು ಎಂದು ಪೀ ಬಡ್ಡಿ ಸಂಸ್ಥಾಪಕ ದೀಪ್ ಬಜಾಜ್ ಹೇಳುತ್ತಾರೆ.

ಇತರ ರೆಸ್ಟೋರೆಂಟ್‍ಗಳನ್ನು ಹುಡುಕವ ಅಪ್ಲಿಕೇಶನ್‍ಗಳ ಮಾದರಿಯಲ್ಲೇ ಟಾಯ್ಲೆಟ್ ಫೈಂಡರ್ ಕೆಲಸ ಮಾಡುತ್ತದೆ. ಗ್ರಾಹಕರಿಗೆ ತಮ್ಮ ಸ್ಥಳದ ಸಮೀಪವಿರುವ ಶೌಚಾಲಯಗಳನ್ನು ಅವರು ಊಹಿಸದ ರೀತಿಯಲ್ಲಿ ಅದು ಪ್ರಸ್ತುತಪಡಿಸುತ್ತದೆ.

ಟಾಯ್ಲೆಟ್ ಫೈಂಡರ್ ಆ್ಯಪ್ ಲಿಸ್ಟ್​​ನಲ್ಲಿರುವ ಕೆಲವು ಶೌಚಾಲಯಗಳ ಫೋಟೋ, ಅಲ್ಲಿನ ವೈಶಿಷ್ಟ್ಯಗಳು, ರೇಟಿಂಗ್ಸ್ ಸೇರಿದಂತೆ ಅಲ್ಲಿ ಸಿಗುವ ಸೌಕರ್ಯಗಳು ಅಂದ್ರೆ, ಟಾಯ್ಲೆಟ್ ಪೇಪರ್, ಆರೋಗ್ಯ ಸಂಬಂಧಿತ ವಸ್ತುಗಳ ಪಟ್ಟಿ ಸಹಿತ ಅಪ್‍ಲೋಡ್ ಆಗಿವೆ. ಉಳಿದ ಶೌಚಾಲಯಗಳ ಬಗ್ಗೆ ಪ್ರಾಥಮಿಕ ಮಾಹಿತಿ ಅಂದರೆ ಅವರು ಉಚಿತ ಬಳಕೆಯೇ ಅಥವಾ ಪಾವತಿ ಮಾಡಿ ಬಳಸಬಹುದಾದ ಶೌಚಾಲಯವೇ ಎಂಬ ಮಾಹಿತಿಯನ್ನು ಒದಗಿಸುತ್ತದೆ.

ಈ ಎಲ್ಲಾ ಅಪ್ಲಿಕೇಶನ್‍ಗಳ ಸಾಮಾನ್ಯ ಅಂಶವೇನೆಂದರೆ, ಅವು ಬಳಕೆದಾರರು ಇರುವ ಸ್ಥಳದ ಜಿಪಿಎಸ್ ಮಾಹಿತಿಯನ್ನು ಆಧರಿಸಿ ಹತ್ತಿರದ ಶೌಚಾಯಲದ ಸ್ಥಳವನ್ನು ಸೂಚಿಸುತ್ತದೆ.

ಗೂಗಲ್ ಪ್ಲೇಸ್ಟೋರ್‍ನಲ್ಲಿ ಇಂತಹ ಅಪ್ಲಿಕೇಶನ್‍ಗಳನ್ನು ಹುಡುಕುವುದು ಕಷ್ಟವೇನಲ್ಲ. ಅದರಲ್ಲಿ ಸಾಕಷ್ಟು ಆ್ಯಪ್‍ಗಳಿವೆ. ಮೂತ್ರಾಲಯ, ಫ್ಲಶ್, ಸ್ವಚ್ಛ್ ಭಾರತ್ ಟಾಯ್ಲೆಟ್ ಲೊಕೇಟರ್, ಗೊಟ್ಟಾಗೋ, ಟಾಯ್ಲೆಟ್ ಫಸ್ಟ್, ಮತ್ತು ಸುಸುವಿಧಾ ಪ್ರಮುಖವಾದ ಆ್ಯಪ್‍ಗಳಾಗಿವೆ.

ಶೌಚಾಲಯ ಹುಡುಕಲು ಸಹಾಯ ಮಾಡುವ ಬಹುತೇಕ ಆ್ಯಪ್‍ಗಳು, ಮಹಿಳಾ ಸುರಕ್ಷಾ ಆ್ಯಪ್ ನಿರ್ಭಯಾದ ತಯಾರಕರಾಗಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳ ಮಾಹಿತಿಯನ್ನು ಆ್ಯಪ್‍ನಲ್ಲಿ ಅಳವಡಿಸಿಕೊಂಡಿವೆ. ಮಹಿಳೆಯರಿಗೆ ಮೂಲಭೂತವಾಗಿ ಅಗತ್ಯವಾಗಿರುವ ಶೌಚಾಲಯಗಳು ಅವರ ಸುರಕ್ಷತೆಯಲ್ಲೂ ಪ್ರಮುಖ ಪಾತ್ರವಹಿಸುತ್ತವೆ ಎನ್ನುವುದು ಬಹುತೇಕ ಆ್ಯಪ್ ಡೆವಲಪರ್ಸ್‍ಗಳ ಅಭಿಪ್ರಾಯ.

"ಈಗಿನ ದಿನಗಳಲ್ಲಿ ಮಹಿಳೆಯರು ಕೆಲಸದ ನಿಮಿತ್ತ ಗೊತ್ತಿರದ ಸ್ಥಳಗಳಿಗೆ ಭೇಟಿ ನೀಡಬೇಕಾಗುತ್ತದೆ. ನಗರದಿಂದ ಹೊರಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ, ಈ ಮಾಹಿತಿಗಳು ಅವರಿಗೆ ತುಂಬಾ ಉಪಯುಕ್ತವಾಗಿವೆ. ನಾವು ಎಲ್ಲಾ ಕಾರ್ಯನಿರ್ವಹಿಸುತ್ತಿರುವ ಶೌಚಾಲಯಗಳ ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ಅವು ಆ್ಯಪ್‍ನಲ್ಲಿರುವ ಭೂಪಟದಲ್ಲಿ ಲಭ್ಯವಿದೆ. " ಎನ್ನುತ್ತಾರೆ ಸ್ಮಾರ್ಟ್ ಕ್ಲೌಡ್ ಇನ್ಫೋಟೆಕ್‍ನ ಸಿಇಓ ಗಜಾನನ್ ಸಖರೆ..

ಭಾರತದಲ್ಲಿ ಶೌಚಾಲಯಗಳ ಕೊರತೆ ಇರುವುದೇ ಅತಿ ದೊಡ್ಡ ಸವಾಲು. ರಾಷ್ಟ್ರೀಯ ಸ್ಯಾಂಪಲ್ ಸಮೀಕ್ಷಾ ಕಚೇರಿ 2012ರಲ್ಲಿ ನಡೆಸಿರುವ ಸಮೀಕ್ಷೆಯೊಂದರ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 32% ಮನೆಗಳಷ್ಟೇ ಸ್ವಂತ ಶೌಚಾಲಯವನ್ನು ಹೊಂದಿವೆ. ಸುಮಾರು 9% ಜನರಿಗೆ ಮನೆಯ ಹೊರಗೆ ಅಂದರೆ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇದೆ.

ಕಳೆದ ಕೆಲವು ವರ್ಷಗಳಿಂದ ಶೌಚಾಲಯ ನಿರ್ಮಾಣದ ವಿಚಾರವೇ ಹೆಚ್ಚು ಸುದ್ದಿಯಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡಾ 100 ಮಿಲಿಯನ್ ಶೌಚಾಲಯಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದರು. ಆದರೆ, ಅವುಗಳನ್ನು ನಿರ್ವಹಿಸುವುದೇ ಮುಖ್ಯವಾಗಿ ಈಗಾಗಲೇ ಅಸ್ಥಿತ್ವದಲ್ಲಿರುವ ಶೌಚಾಲಯಗಳನ್ನು ನಿರ್ವಹಿಸುವುದೇ ದೊಡ್ಡ ಸವಾಲಾಗಿದೆ.

''ಎಲ್ಲಾ ಶೌಚಾಲಯಗಳು ಶುಚಿಯಾಗಿರಬೇಕು ಎಂದು ನಾವು ಬಯಸುತ್ತೇವೆ. ಸಾರ್ವಜನಿಕ ಸ್ಥಳಗಳ ಮಾಲೀಕರು ಶೌಚಾಲಯಗಳಿಗಾಗಿ ಹೆಚ್ಚು ಹಣ ಹೂಡುವುದಿಲ್ಲ ಎಂದರ್ಥವಲ್ಲ. ಆದರೆ, ಅವುಗಳ ಮೇಲೆ ಗಮನ ಕೇಂದ್ರೀಕರಿಸುವುದು ಕಷ್ಟಸಾಧ್ಯ. ಆದರೆ, ಆ್ಯಪ್‍ಗಳ ಮೂಲಕ ಶೌಚಾಲಯ ನಿರ್ವಾಹಕರಿಗೆ ತಮ್ಮ ಸೇವೆಗಳ ಬಗ್ಗೆ ನಿರ್ವಹಣೆ ಬಗ್ಗೆ ಗ್ರಾಹಕರು ಏನು ಅಭಿಪ್ರಾಯ ಸೂಚಿಸುತ್ತಾರೆ ಎನ್ನುವುದನ್ನು ತಿಳಿಯಲು ಸಾಧ್ಯವಾಗುತ್ತದೆ" ಎನ್ನುತ್ತಾರೆ ದೀಪ್.

ನಗರ ಪ್ರದೇಶಗಳಲ್ಲಿ ಪರಿಸ್ಥಿತಿ ಪರವಾಗಿಲ್ಲ. ನಾಗರಿಕರಿಗೆ ನೂರಾರು ಶೌಚಾಲಯಗಳ ಲಭ್ಯತೆ ಇದೆ. ಕೆಫೆಗಳು, ಪೆಟ್ರೋಲ್ ಬಂಕ್‍ಗಳು, ಬೃಹತ್ ರೆಸ್ಟೋರೆಂಟ್‍ಗಳಾದ ಕೆಎಫ್‍ಸಿಇ ಮತ್ತು ಮ್ಯಾಕ್‍ಡೊನಾಲ್ಡ್ಸ್‍ಗಳು ಶೌಚಾಲಯ ಸೇವೆ ಒದಗಿಸುತ್ತಿವೆ. ಇವುಗಳ ಬಗೆಗಿನ ಹೆಚ್ಚುವರಿ ಮಾಹಿತಿ ಯಾವತ್ತಿಗೂ ವರವಾಗಿರುತ್ತದೆ. ಗ್ರಾಹಕರು ಅಲ್ಲ ಎನ್ನುವ ಕಾರಣಕ್ಕೆ ಈ ಸ್ಥಳಗಳಲ್ಲಿ ಮಹಿಳೆಗೆ ಅವಕಾಶ ನಿರಾಕರಿಸಲ್ಪಡಬಾರದು, ಅಷ್ಟೇ. ಮಹಿಳೆ ಬಯಸುವುದೂ ಇದನ್ನೇ.

ಕೆಲವು ಆ್ಯಪ್‍ಗಳು ಬಹುತೇಕ ಸಾರ್ವಜನಿಕ ಶೌಚಾಲಯಗಳ ಪಟ್ಟಿಯನ್ನು ಹೊಂದಿರುತ್ತವೆ. ಆದರೆ, ಸಾರ್ವಜನಿಕರು ಬಳಸಬಹುದಾದ ಎಲ್ಲಾ ಶೌಚಾಲಯಗಳ ಮಾಹಿತಿ ಇದ್ದರೆ ಅವು ಮತ್ತಷ್ಟು ಅನುಕೂಲಕಾರಿಯಾಗುತ್ತವೆ.

ಉದಾಹರಣೆಗೆ, ಪೀಬಡ್ಡಿ ತಂಡವು ಮುಂಬೈನಲ್ಲಿ ಸ್ಥಳೀಯ ಶೌಚಾಲಯಗಳನ್ನು ಹುಡುಕಲು ಮತ್ತು ಅವುಗಳನ್ನು ಆ್ಯಪ್‍ನಲ್ಲಿ ಅಳವಡಿಸಲು ಡಜನ್‍ಗಟ್ಟಲೆ ಕಾರ್ಯಕರ್ತರ ತಂಡವನ್ನು ಹೊಂದಿದೆ. ಅವರು ಕಾರ್ಪೋರೇಟ್ ಸಂಸ್ಥೆಗಳನ್ನು, ಪೆಟ್ರೋಲ್ ಪಂಪ್‍ಗಳ ಮಾಲೀಕರನ್ನು ಭೇಟಿ ಮಾಡಿ ಅವರ ಶೌಚಾಲಯಗಳನ್ನು ನಿರ್ವಹಣೆ ಮಾಡಿ ಸಾಮಾಜಿಕ ಸೇವೆಯ ಅಂಗವಾಗಿ ಆ್ಯಪ್‍ನಲ್ಲಿ ಪಟ್ಟಿ ಮಾಡಲು ಮನವಿ ಮಾಡಿಕೊಳ್ಳಲಿದ್ದಾರೆ.

" ಅವರಿಗೆ ನಿಜವಾಗಿಯೂ ಗ್ರಾಹಕರ ಪರ ಕಾಳಜಿ ಇದ್ದರೆ, ಹಾಗೂ ಶೌಚಾಲಯಗಳನ್ನು ಶುಚಿಯಾಗಿ ಇಟ್ಟುಕೊಳ್ಳಲು ಗುಣಮಟ್ಟದ ಕಾರ್ಯವಿಧಾನ ಹೊಂದಿದ್ದಲ್ಲಿ, ಯೂಸ್-ರೆಫ್ಯೂಸ್ ನಂತಹ ಟಾಯ್ಲೆಟ್ ಫೈಂಡರ್ ಆ್ಯಪ್‍ಗಳಲ್ಲಿ ತಮ್ಮ ಶೌಚಾಲಯವನ್ನು ಪಟ್ಟಿ ಮಾಡಲು ಯಾವುದೇ ಹಿಂಜರಿಕೆ ಇರುವುದಿಲ್ಲ ಎಂದು ನಾನು ಭಾವಿಸುತ್ತನೆ," ಎನ್ನುತ್ತಾರೆ ದೀಪ್.