ಇಲ್ಲಿ ಕೈದಿಗಳೇ ಕೆಲಸಗಾರರು..!

ಟೀಮ್​ ವೈ.ಎಸ್​. ಕನ್ನಡ

ಇಲ್ಲಿ ಕೈದಿಗಳೇ ಕೆಲಸಗಾರರು..!

Thursday June 29, 2017,

2 min Read

ಜೈಲುಶಿಕ್ಷೆ ಅನುಭವಿಸಿ ಬಂದವರಿಗೆ ಸಮಾಜದಲ್ಲಿ ಇರುವ ಗೌರವ ಎಂತಹದ್ದು ಅನ್ನುವುದು ಎಲ್ಲರಿಗೂ ಗೊತ್ತಿದೆ. ಜೈಲುಶಿಕ್ಷೆಯ ವೇಳೆ ಮನಸ್ಸು ಬದಲಾಗಿದ್ದರೂ, ಸಮಾಜ ಅವರನ್ನು ಒಪ್ಪಿಕೊಳ್ಳುವುದು ಕಷ್ಟದ ಮಾತು. ಆದ್ರೆ ತೆಲಂಗಾಣ ರಾಜ್ಯ ಬಂಧೀಖಾನೆ ಇಲಾಖೆ ದೇಶದಲ್ಲೇ ಮೊದಲ ಬಾರಿ ಎನ್ನುವಂತೆ, ಮಾಜಿ ಮಹಿಳಾ ಕೈದಿಗಳಿಗಾಗಿ ಹೈದ್ರಾಬಾದ್​​ನಲ್ಲಿ ಪೆಟ್ರೋಲ್ ಪಂಪ್ ಒಂದನ್ನು ತೆರೆದಿದೆ.

image


ಬಂಧಿಖಾನೆ ಇಲಾಖೆ ತೆಲಂಗಾಣ ರಾಜ್ಯದ ವಿವಿಧ ಭಾಗಗಳಲ್ಲಿ 10 ಪೆಟ್ರೋಲ್ ಪಂಪ್ ಗಳನ್ನು ಹೊಂದಿದ್ದು, ಇದರಲ್ಲಿ ಪುರುಷ ಕೈದಿಗಳು ಕೆಲಸ ಮಾಡುತ್ತಿದ್ದಾರೆ. ಈ ಪಂಪ್​ಗಳು ವಾರ್ಷಿಕ ಸುಮಾರು 300 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿವೆ.

“ ಮಾಜಿ ಕೈದಿಗಳಿಗೆ ಉದ್ಯೋಗ ಕೊಡುವ ಉದ್ದೇಶ ಇಲಾಖೆಗೆ ಇದೆ. ಚಂಚಲಗುಡ ಜೈಲಿನಿಂದ ಬಿಡಗಡೆಗೊಂಡಿರುವ ಸುಮಾರು 25 ಮಹಿಳಾ ಕೈದಿಗಳಿಗೆ ಈ ಪೆಟ್ರೋಲ್ ಪಂಪ್​​ಗಳಲ್ಲಿ ಕೆಲಸ ಕೊಡಲಾಗುತ್ತಿದೆ. ಪೆಟ್ರೋಲ್ ಪಂಪ್​​ನಲ್ಲಿ ಕೆಲಸ ಮಾಡುವ ಇವರಿಗೆ ತಿಂಗಳಿಗೆ 12,000 ರೂಪಾಯಿಗಳ ವೇತನ ನೀಡಲಾಗುತ್ತದೆ. ”
- ಎನ್. ನರಸಿಂಹ ರೆಡ್ಡಿ, ಗೃಹಸಚಿವರು, ತೆಲಂಗಾಣ

ಚಂಚಲ ಗುಡ ಜೈಲಿನ ಸಮೀಪವೇ ಪೆಟ್ರೋಲ್ ಪಂಪ್ ಒಂದನ್ನು ಸ್ಥಾಪಿಸಲಾಗಿತ್ತು. ಇದರಲ್ಲಿ ಜೈಲು ಶಿಕ್ಷೆ ಮುಗಿಸಿದ ಪುರುಷರು ಕೆಲಸ ಮಾಡುತ್ತಿದ್ದರು. ಇದು ಈಗ ಮಹಿಳೆಯರಿಗಾಗಿ ಪೆಟ್ರೋಲ್ ಪಂಪ್ ಆರಂಭಿಸಲು ಸ್ಫೂರ್ತಿ ನೀಡಿದೆ.

ಇದನ್ನು ಓದಿ: ಒಂದು ರೂಪಾಯಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ- ಸಿಂಪಲ್​ ಆಗಿದೆ ತರಕಾರಿಯಲ್ಲಿ ವಿಷ ಪರೀಕ್ಷೆ ಮಾಡುವ ಯಂತ್ರ

ಜೈಲಿನಿಂದ ಪರಾರಿಯಾಗುವ ಯತ್ನ ಮಾಡದೇ ಇರುವ ಕೈದಿಗಳಿಗೆ ಈ ವ್ಯವಸ್ಥೆ ಮಾಡಿಕೊಡಲಾಗಿದೆ. ಜೈಲು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಸರಕಾರದ ಈ ಕೆಲಸದಿಂದ ಮನಸ್ಸು ಬದಲಿಸಿಕೊಳ್ಳಲಿ ಅನ್ನುವ ಯೋಚನೆ ಇಲ್ಲಿದೆ. 2014ರಲ್ಲಿ ಆರಂಭವಾದ ಈ ಪೆಟ್ರೋಲ್ ಪಂಪ್​​ಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಕೂಡ ಕೆಲಸ ಮಾಡುತ್ತಿದ್ದಾರೆ.

“ ನಾನು ಕೆಲಸದ ವೇಳೆಯಲ್ಲಿ ಕೈದಿ ಅನ್ನುವುದನ್ನೇ ಮರೆತು ಬಿಡುತ್ತೇನೆ. ನಾನು ನನ್ನ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇನೆ. ನಾನು ಜೈಲಿನ ಒಳಗೆ ಮತ್ತೆ ಹೋದರೂ, ನಾನು ಹೊರಗಿನ ಜಗತ್ತಿನ ಬಗ್ಗೆ ತಿಳಿದುಕೊಂಡು ಹೋಗುತ್ತೇನೆ. ನನ್ನ ಮನಸ್ಸಿಗೆ ಇದು ನೆಮ್ಮದಿ ನೀಡುತ್ತದೆ.”
- ಕೆ. ಗೋಪಾಲ್ ರೆಡ್ಡಿ, ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿರುವ ಕೈದಿ

ಪೆಟ್ರೋಲ್ ಪಂಪ್ ಗಳಲ್ಲಿ ಕೈದಿಗಳು ಕೆಲಸ ಮಾಡುತ್ತಿರುವುದರಿಂದ ಅವರ ಬದುಕಿಗೂ ನೆಮ್ಮದಿ ಸಿಗುತ್ತಿದೆ. ಅಚ್ಚರಿ ಅಂದ್ರೆ ಕೆಲವು ಪೆಟ್ರೋಲ್ ಪಂಪ್​​ಳು ದಿನದ 24 ಗಂಟೆಯೂ ಓಪನ್ ಆಗಿದ್ದು, ಮೂರೂ ಪಾಳಿಗಳಲ್ಲೂ ಕೈದಿಗಳೇ ಕೆಲಸ ಮಾಡುತ್ತಿದ್ದಾರೆ. ಇದು ಇಲಾಖೆಗೆ ಹೆಚ್ಚಿನ ಆದಾಯವನ್ನೂ ತಂದುಕೊಡುತ್ತಿದೆ.

ಒಟ್ಟಿನಲ್ಲಿ ಜೈಲುಶಿಕ್ಷೆಯಲ್ಲಿ ತಪ್ಪಿತಸ್ಥನ ಮನಸ್ಸು ಬದಲಾಗಲಿ ಅನ್ನುವ ಉದ್ದೇಶದಿಂದಲೇ ಶಿಕ್ಷೆ ವಿಧಿಸಲಾಗಿರುತ್ತದೆ. ಆದ್ರೆ ಕೈದಿಗಳು ಪೆಟ್ರೋಲ್ ಪಂಪ್​​ಗಳಲ್ಲಿ ಕೆಲಸ ಮಾಡುತ್ತಿರುವುದು ಅವರ ಬದಲಾವಣೆಗೆ ಹಿಡಿದ ಕೈಗನ್ನಡಿ.

ಇದನ್ನು ಓದಿ:

1. ವ್ಯವಹಾರ ಕುದುರಿಸಿಕೊಳ್ಳುವುದು ಸುಲಭದ ಮಾತಲ್ಲ..! ಅದಕ್ಕೂ ಬೇಕು ಸಖತ್​​ ಐಡಿಯಾ..!

2. ಶೇಫ್ ಆಫ್ ಯೂ; ಪಡ್ಡೆಗಳನ್ನು ಹುಚ್ಚೆಬ್ಬಿಸುತ್ತಿರುವ ಮ್ಯೂಸಿಕ್

3. ಇಸ್ರೇಲ್​ನ Start TLV ಸ್ಪರ್ಧೆ : ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲು 10 ಪ್ರಮುಖ ಕಾರಣಗಳು…