“ರಯೀಸ್” ವಿವಾದ ಮತ್ತು “ಕಾಬಿಲ್” ಮೇಲೆ ಪ್ರೀತಿ ಅಷ್ಟಕ್ಕೇ ಎಲ್ಲಾ ನಿಂತಿಲ್ಲ- ಅಶುತೋಷ್

ಟೀಮ್​ ವೈ.ಎಸ್​. ಕನ್ನಡ

“ರಯೀಸ್” ವಿವಾದ ಮತ್ತು “ಕಾಬಿಲ್” ಮೇಲೆ ಪ್ರೀತಿ ಅಷ್ಟಕ್ಕೇ ಎಲ್ಲಾ ನಿಂತಿಲ್ಲ- ಅಶುತೋಷ್

Saturday January 28, 2017,

4 min Read

ಇದನ್ನು ಏನು ಅನ್ನಬೇಕು. ಒಂದು ಕೋಮಿನ ನಾಯಕನ ಹುಡುಗಾಟದ ಹೇಳಿಕೆ ಅನ್ನಬೇಕೋ ಅಥವಾ ಸಿದ್ಧಾಂತಕ್ಕಾಗಿ ಹೋರಾಡುವವನ ಕೂಗು ಅನ್ನಬೇಕೋ..? ಎರಡು ಚಲನಚಿತ್ರಗಳ ನಡುವೆ ಸಾಮ್ಯತೆ ಮಾಡುವುದು ಹೊಸದಲ್ಲ. ಇದು ಎಲ್ಲಾ ಕಡೆಯೂ ನಡೆಯುತ್ತದೆ. ಒಂದು ಸ್ವಲ್ಪ ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿಗೂ ಸಹಾಯ ಮಾಡುತ್ತದೆ. ಸಿನಿಮಾ ವೀಕ್ಷಕನ ಯೋಚನೆಗೆ ಒಂದು ಹೊಸ ರೂಪ ಕೊಡುತ್ತದೆ. ಕ್ರೀಯೆಟಿವ್ ಯೋಚನೆಗೆ ಕೆಲಸವನ್ನೂ ನೀಡುತ್ತದೆ. ಹೊಸ ದೃಷ್ಟಿಕೋನಕ್ಕೆ ದಾರಿ ತೋರಿಸುತ್ತದೆ. ಹೊಸ ಯೋಚನೆಗಳ ಜೊತೆ ಹೊಸ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ. ಆದ್ರೆ ದುರಾದೃಷ್ಟ ಅನ್ನುವಂತೆ ಇವತ್ತು ಕ್ರಿಯೇಟಿವ್ ಅನ್ನೋದು ಧರ್ಮ ನಿಂದನೆಗೆ ಇರುವ ಮತ್ತೊಂದು ಹೆಸರಾಗಿ ಬದಲಾಗಿ ಬಿಟ್ಟಿದೆ. ಇವತ್ತು ನಾವು ಡೊನಾಲ್ಡ್ ಟ್ರಂಪ್ ಜಮಾನದಲ್ಲಿದ್ದೇವೆ. ಹೊಸ ಜಗತ್ತಿನಲ್ಲಿ ಕಾಲಕಳೆಯುತ್ತಿದ್ದೇವೆ. ಹೀಗಾಗಿ ಕೈಲಾಶ್ ವಜೇವರ್ಗಿಯವರ ಅಸಭ್ಯತೆಯ ಚರ್ಚೆ ಅಚ್ಚರಿ ತುರುವುದಿಲ್ಲ. ಹೀಗಾಗಿ ಶಾರೂಕ್ ಖಾನ್​ರ "ರಯೀಸ್​"ಗಿಂತ ಹೃತಿಕ್​ರ "ಕಾಬಿಲ್​"ಗೆ ಹೆಚ್ಚು ಮಹತ್ವ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಇವುಗಳೆಲ್ಲಾ ನಿರುಪದ್ರವಿಯಂತೆ ಕಾಣಬಹುದು. ಇದು ಅವರಿಗೆ ಮತ್ತು ಅವರ ಒಳಗಿರುವ ಚಿತ್ರದ ಬಗೆಗಿನ ಆಸಕ್ತಿಗಳನ್ನು ಹೊರಹಾಕಬಹುದು. ಆದ್ರೆ ಕೈಲಾಶ್​ರ ಟ್ವೀಟ್ ಮಾತ್ರ ಅಷ್ಟು ಸುಲಭವಾಗಿ ಬಿಡುವಂತಹದ್ದಲ್ಲ. ಕೈಲಾಶ್ "ರಯೀಸ್" ದೇಶಕ್ಕಾಗಿ ಅಲ್ಲ, ಅದರಿಂದ ಉಪಯೋಗವೂ ಇಲ್ಲ. ಆದ್ರೆ "ಕಾಬಿಲ್" ನಿಜವಾದ ದೇಶಭಕ್ತ, ಹೀಗಾಗಿ ಅವನಿಗೆ ಎಲ್ಲರ ಬೆಂಬಲ ಇರಲಿ ಎಂದು ಟ್ವೀಟ್ ಮಾಡಿದ್ದರು. ಇಂತಹ ಟ್ವೀಟ್ ಮಾಡಿರುವ ಕೈಲಾಶ್ ಸಾಮಾನ್ಯ ವ್ಯಕ್ತಿಯಲ್ಲ. ಕೈಲಾಶ್ ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿಯ ಜನರಲ್ ಸೆಕ್ರೇಟರಿ. ವಿವಾದಾತ್ಮಕವಾಗಿ ಹೇಳಿಕೆ ನೀಡಿ ಮಾಧ್ಯಮಗಳಲ್ಲಿ ಹೆಡ್​ಲೈನ್ ಆಗುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅವರನ್ನು ಅವರ ಪಾರ್ಟಿಯೇ ಸಾಕಷ್ಟು ಬಾರಿ ಖಂಡಿಸಿದೆ. ಆದ್ರೆ ಕೈಲಾಶ್ ಬೇರೆಯದ್ದೇ ಆದ ರೀತಿಯಲ್ಲಿ ಮತ್ತೆ ಬರುತ್ತಾರೆ. ಆದ್ರೆ ನಿರೂಪಣೆ ಮಾತ್ರ ಒಂದೇ ಆಗಿರುತ್ತದೆ. ಅದೂ ಕೋಮು, ದ್ವೇಷದಿಂದಲೇ ಕೂಡಿರುತ್ತದೆ. ಒಂದು ಕೋಮಿನ ಜನರವನ್ನು ಟಾರ್ಗೆಟ್ ಮಾಡುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ.

image


ಅಂದಹಾಗೇ, "ರಯೀಸ್" ಒಂದು ಜೀವನ ಚರಿತ್ರೆ ಆಧರಿತ ಕಥೆ. ಶಾರೂಕ್ ಖಾನ್ ಇದರಲ್ಲಿ ಮಾಫಿಯಾ ಡಾನ್ ಆಗಿ ಅಭಿನಯಿಸಿದ್ದಾರೆ. "ಕಾಬಿಲ್" ದೃಷ್ಟಿ ಕಳೆದುಕೊಂಡಿರುವ ದಂಪತಿಗಳ ಪ್ರೀತಿ ಮತ್ತು ಸೇಡಿನ ಕಥೆ. ಹೃತಿಕ್ ರೋಷನ್ ಪ್ರಮುಖ ಪಾತ್ರಧಾರಿ. ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆ ಆಗಿವೆ. ಇದು ಅಚ್ಚರಿಯೂ ಹೌದು. ಅಚ್ಚರಿ ಅಂದ್ರೆ ಎರಡೂ ಚಿತ್ರಗಳ ಸೂಪರ್ ಸ್ಟಾರ್ ಹೀರೋಗಳಾದ ಶಾರೂಖ್ ಆಗಲಿ ಅಥವಾ ಹೃತಿಕ್ ಆಗಲಿ ಈ ಬಿಡುಗಡೆಯ ಮಹೂರ್ತದ ಬಗ್ಗೆ ಒಂದು ಮಾತೂ ಆಡಿಲ್ಲ. ಅಷ್ಟೇ ಅಲ್ಲ ಸಮಾಜದಲ್ಲಿ ಇಬ್ಬರೂ ನಾಯಕರು ಮಾದರಿ ಆಗಿದ್ದಾರೆ. ಒಬ್ಬರಿಗೊಬ್ಬರು ಗೌರವದಿಂದ ಇದ್ದಾರೆ. ಹೀಗಾಗಿ ಕೈಲಾಶ್ ತುಂಬಾ ಬುದ್ಧಿವಂತಿಕೆಯ ಮೂಲಕ "ರಯೀಸ್" ಚಿತ್ರವನ್ನು ತುಳಿದು, "ಕಾಬಿಲ್​" ಒಳ್ಳೆಯ ಪ್ರಮೋಷನ್ ಕೊಡುತ್ತೊದ್ದಾರೆ. ಹೃತಿಕ್ ಇಂತಹ ಚೀಪ್ ಗಿಮಿಕ್​​ಗಳಿಗೆ ಬೆಲೆಕೊಡುವ ವ್ಯಕ್ತಿಯಲ್ಲ. ಇದು ಕೇವಲ ಕೈಲಾಶ್​ ಯೋಚನೆ ಮಾತ್ರ ಆಗಿರುತ್ತದೆ.

ಕೈಲಾಶ್ ಬಿಜೆಪಿ ಮುಖಂಡ. ಬಿಜೆಪಿಗೆ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಅಷ್ಟಕಷ್ಟೇ ಒಲವಿದೆ. ಆರ್ ಎಸ್ ಎಸ್ ಮತ್ತು ಬಿಜೆಪಿ ಬಹಿರಂಗವಾಗಿ ಹಿಂದುತ್ವ ಮತ್ತು ಹಿಂದೂ ರಾಷ್ಟ್ರದ ಮಾತನಾಡುತ್ತಿದೆ. ಅವರ ಪಾಲಿಗೆ ಅಲ್ಪ ಸಂಖ್ಯಾತರು ದ್ವಿತೀಯ ದರ್ಜೆಯ ಪ್ರಜೆಗಳು. ಇದರ ಹಳೆಯ ಮುಖಂಡರು ಅಲ್ಪಸಂಖ್ಯಾತರ ಬಗ್ಗೆ ಅದೆಷ್ಟೋ ಬಾರಿ ಮಾತನಾಡಿದ್ದಾರೆ. ಆರ್ ಎಸ್ ಎಸ್ ಮತ್ತು ಬಿಜೆಪಿ ಭಾರತ ಮತ್ತು ಪಾಕಿಸ್ತಾನಗಳ ರಚನೆಗೆ ಮುಸ್ಲಿಮರೇ ಕಾರಣ ಅನ್ನುವುದನ್ನ ಇವತ್ತಿಗೂ ಪ್ರತಿಪಾದಿಸುತ್ತಿದೆ. ಇತಿಹಾಸದಲ್ಲಿ ಆದ ಘಟನೆಗಳಿಗೆ ಮುಸ್ಲಿಮರನ್ನು ದ್ವೇಷಿಸುತ್ತಾರೆ. ರಾಜಕೀಯ ಅಂದರೆ ಅವರ ಕಣ್ಣಿನಲ್ಲಿ ಇವತ್ತಿಗೂ ನಾಗರೀಕತೆಯ ಘರ್ಷಣೆ ಆಗಿದೆ.

ಇದನ್ನು ಓದಿ: ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದು..!

ಆರ್​ಎಸ್​ಎಸ್​​ಗೆ ಭಾರತೀಯ ಇತಿಹಾಸ ಅಂದ್ರೆ ಅದು ಹಿಂದೂಗಳ ಇತಿಹಾಸ. ಮುಸ್ಲಿಮರು ಮತ್ತು ಕ್ರೈಸ್ತರು ವಿದೇಶಿಯರು. ವೀರ್​ಸಾವರ್ಕರ್ ಹೇಳಿದ್ದ ಮಾತೇ ಅವರಿಗೆ ಮುಖ್ಯ. ಸಾವರ್ಕರ್ ಹಿಂದೂಗಳೆಂದ್ರೆ ತಾಯಿ ನಾಡು ಮತ್ತು ಕರ್ಮಭೂಮಿ ಒಂದೇ ಆಗಿದ್ದವರು ಮಾತ್ರ ಭಾರತೀಯರು ಅಂತ ಹೇಳಿದ್ದರು. ಮುಸ್ಲಿಮರು ಮತ್ತು ಕ್ರೈಸ್ತರು ಸಾವರ್ಕರ್ ಪಾಲಿಗೆ ವಿದೇಶಿಯಂತೆ ಇದ್ದು, ಪ್ರತಿ ಬಾರಿಯೂ ಸಂದೇಹದಿಂದಲೇ ಅವರನ್ನು ಕಾಣುತ್ತಿದ್ದರು. ಇದು ಅಲ್ಪಸಂಖ್ಯಾತ ಸಮುದಾಯದೆಡೆಗಿನ ದ್ವೇಷಕ್ಕೆ ಮೂಲ ಕಾರಣವಾಗಿತ್ತು.

ಭಾರತ ಬದಲಾಗುತ್ತಿದ್ದರೂ, ಆಧುನೀಕರಣ, ಜಾತ್ಯಾತೀತತೆ ಮತ್ತು ನಗರೀಕರಣದ ಮಧ್ಯೆಯೂ ಆರ್​ಎಸ್ಎಸ್ ಮತ್ತು ಬಿಜೆಪಿ ಇನ್ನೂ ಹಳೆಯ ಯೋಚನೆಯಿಂದ ಹೊರಬಂದಿಲ್ಲ. ಅವರ ನಾಯಕರೂ ಇವತ್ತಿಗೂ ತಮ್ಮ ಯೋಚನೆಯನ್ನು ಬದಲಿಸಿಕೊಂಡಿಲ್ಲ . ಕೈಲಾಶ್ ಈಗ ಮಾಡಿರುವ ಟ್ವೀಟ್ ಅಚ್ಚರಿಯೇ ಅಲ್ಲ. ಆದ್ರೆ ಇದು ಹೊಸ ರೂಪ ಮತ್ತು ನಿರೂಪಣೆ ಮಾತ್ರ. ಇದು ಹಳೆಯ ಯೋಚನೆ. ಅವರು ಒಂದು ಚಿತ್ರವನ್ನು ಮಾತ್ರ ಟಾರ್ಗೆಟ್ ಮಾಡಿಲ್ಲ. ಶಾರೂಕ್ ಖಾನ್​ರನ್ನು ಟಾರ್ಗೆಟ್ ಮಾಡಿದ್ದಾರೆ. ಯಾಕಂದ್ರೆ ಶಾರೂಖ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಕೈಲಾಶ್​ ಯೋಚನೆಯಂತೆ ಹಲವು ನಾಯಕರು ಕೂಡ ಯೋಚನೆ ಮಾಡಿರುತ್ತಾರೆ. ಯಾಕಂದ್ರೆ ಯೋಚನಾ ಶೈಲಿ ಬದಲಾಗಿಲ್ಲ.

ಕೈಲಾಷ್ ಹೃತಿಕ್​ರನ್ನು ಮತ್ತೊಬ್ಬ ನಟನಾಗಿ ನೋಡಿಲ್ಲ. ಬದಲಾಗಿ ಹಿಂದೂ ಅನ್ನೋ ಮುಖದಿಂದ ನೋಡಿದ್ದಾರೆ. ಶಾರೂಕ್​ರನ್ನು ಬೇರೊಂದು ಮುಖದಿಂದ ನೋಡಿದ್ದಾರೆ. ಅವರ ಪ್ರತಿಭೆಯ ಬಗ್ಗೆ ಬರೆಯುವ ಬದಲು ಅವರ ಧರ್ಮವನ್ನು ನೋಡಿದ್ದಾರೆ. "ಕಾಬಿಲ್" ಮತ್ತು "ರಯೀಸ್" ಅನ್ನು ಚಿತ್ರವಾಗಿ ನೋಡುವ ಬದಲು ಅದಕ್ಕೆ ರಾಜಕೀಯದ ಸ್ಪರ್ಶ ನೀಡಿದ್ದಾರೆ. ಕಾಲ ಬದಲಾದರೂ ಯೋಚನೆಯ ಲಹರಿಯನ್ನು ಬದಲಾಯಿಸಿಕೊಂಡಿಲ್ಲ.

ಸೌತ್ ಏಷಿಯಾದಲ್ಲೇ ಭಾರತೀಯ ಸಿನೆಮಾ ರಂಗ ಬೇರೆಯದ್ದೇ ಆದ ಇತಿಹಾಸವನ್ನು ಹೊಂದಿದೆ. ಇಲ್ಲಿ ಜಾತಿ ಅಥವಾ ಧರ್ಮಕ್ಕೆ ಬೆಲೆ ಇಲ್ಲ. ಪ್ರತಿಭೆಗೆ ಮಾತ್ರ ಇಲ್ಲಿ ಸ್ಥಾನ. ಯಶಸ್ಸು ಮತ್ತು ವೈಫಲ್ಯಕ್ಕೆ ಜಾತಿ ಮತ್ತು ಧರ್ಮ ಮುಖ್ಯವಾಗಿಲ್ಲ. 50ರ ದಶಕದಲ್ಲಿ ರಾಜ್ ಕಪೂರ್ ಮತ್ತು ದೇವ್ ಆನಂದ್ ಸೂಪರ್ ಸ್ಟಾರ್​ಗಳಾಗಿದ್ದರೆ, 60ರ ದಶಕದಲ್ಲಿ ದಿಲೀಪ್ ಕುಮಾರ್ ಮತ್ತು ಯೂಸುಫ್ ಖಾನ್ ಮಿಂಚಿದ್ದರು. 70ರ ದಶಕದಲ್ಲಿ ಅಮಿತಾಬ್ ಬಚ್ಚನ್ ಇದ್ರೆ, ನಾಸಿರುದ್ದೀನ್ ಶಾ 80ರ ದಶಕದ ಹೀರೋ.

90ರ ದಶಕದಲ್ಲಿ ಭಾರತ ರಾಮಮಂದಿರದ ಹೆಸರಿನಲ್ಲಿ ಕೋಮು ದ್ವೇಷಕ್ಕೆ ತಿರುಗಿತ್ತು. ಆರ್​ಎಸ್ಎಸ್ ಮತ್ತು ಬಿಜೆಪಿ ಇದರ ತಪ್ಪಿತಸ್ಥರು. ಆದ್ರೂ ಶಾರೂಕ್ ಖಾನ್, ಆಮಿರ್ ಖಾನ್ ಮತ್ತು ಸಲ್ಮಾನ್ ಖಾನ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್​ಗಳಾಗಿದ್ದರು. ಸೈಫಲ್ ಆಲಿ ಖಾನ್, ಇರ್ಫಾನ್ ಖಾನ್, ನಜಾಝುದ್ದೀನ್ ಸಿದ್ದೀಕಿ ಹೀಗೆ ಹಲವು ಇನ್ನೂ ಇದ್ದಾರೆ. ಹೃತಿಕ್, ಅಕ್ಷಯ್ ಕುಮಾರ್, ಅಮಿತಾಬ್, ಅಜಯ್ ದೇವಗನ್ ಬಂದ್ರೂ ಖಾನ್​ಗಳ ಪಾರುಪತ್ಯಕ್ಕೆ ಅಡಿಯಾಗಲಿಲ್ಲ. 50ರ ಹರೆಯದಲ್ಲೂ ಆಮಿರ್, ಸಲ್ಮಾನ್ ಮತ್ತು ಶಾರೂಕ್ ಖಾನ್ ಇವತ್ತಿಗೂ ಅಭಿಮಾನಿಗಳಿಂದ ಪ್ರೀತಿಗಳಿಸಿದ್ದಾರೆ. ಡೈರೆಕ್ಟರ್ ಮತ್ತು ನಿರ್ಮಾಪಕರಿಗೆ ಇವತ್ತಿಗೂ ಖಾನ್​ಗಳೇ ಫೆವರೀಟ್​ಗಳು.

ಹೃತಿಕ್ ರೋಷನ್ ಬಲಬಂಥೀಯ ಮತ್ತು ಖಾನ್​ಗಳಿಗೆ ಟಾಂಗ್ ನೀಡಬಲ್ಲ ನಟ ಅಂತ ಬಿಂಬಿಸಲು ಪ್ರಯತ್ನಗಳು ನಡೆದಿತ್ತು. ಕೆಲವು ಮಾಧ್ಯಮಗಳು ಕೂಡ ಇಂತಹ ಪ್ರಯತ್ನ ಪಟ್ಟಿದ್ದವು. ಲವ್ ಜಿಹಾದ್ ಬಗ್ಗೆ ಪ್ರಶ್ನೆ ಮಾಡಿದ್ದವು. ಇದರ ಮೂಲಕ ಅಲ್ಪಸಂಖ್ಯಾತ ಸಮುದಾಯವನ್ನು ದ್ವೇಷಿಸುವ ಪರಿಸರ ಹುಟ್ಟಿಹಾಕುವ ಪ್ರಯತ್ನಗಳೂ ನಡೆದಿದ್ದವು. ಶಾರೂಕ್​ರ " ಮೈ ನೇಮ್ ಈಸ್ ಖಾನ್" ಮತ್ತು ಅಮಿರ್ ಖಾನ್​ರ ಹೇಳಿಕೆಗಳಿಗೆ ಬೇರೆಯದ್ದೇ ಸ್ವರೂಪ ಸಿಕ್ಕಿತ್ತು. ಆದ್ರೆ ಅವರಿಗಿರುವ ದೇಶಪ್ರೇಮ ಮತ್ತು ನಿಷ್ಠೆ ಬಗ್ಗೆ ಯಾರೂ ಮಾತನಾಡಿರಲಿಲ್ಲ.

"ರಯೀಸ್" ಮೂಲಕ ಶಾರೂಖ್ ಖಾನ್​ರ ದೇಶಪ್ರೇಮ ಅಳೆಯಲಾಗುವುದಿಲ್ಲ. ಅಷ್ಟೇ ಅಲ್ಲ ಒಂದು ಸಮಾಜವನ್ನು ಪ್ರಶ್ನೆ ಮಾಡುವುದು ಕೂಡ ಸಮಂಜಸವಲ್ಲ. ಆದ್ರೆ ಕೈಲಾಶ್ ಮಾಡಿರುವುದು ತಪ್ಪು ನಿರೂಪಣೆ ಮತ್ತು ತಪ್ಪು ಸಂದೇಶ. ಆದ್ರೆ ಕಳೆದ ಎರಡೂವರೆ ವರ್ಷಗಳಿಂದ ಒಂದು ಸಮುದಾಯದ ಬಗ್ಗೆ ದ್ವೇಷದ ಬೀಜ ಬಿತ್ತುವ ಕೆಲಸ ಮತ್ತು ಅವರ ದೇಶಭಕ್ತಿಯನ್ನು ಪ್ರಶ್ನಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದು ದೇಶದ ಭವಿಷ್ಯಕ್ಕೆ ಮತ್ತು ಅಭಿವೃದ್ಧಿಗೆ ಪೂರಕವಲ್ಲ.

ಲೇಖಕರು: ಅಶುತೋಷ್​​

ಇದನ್ನು ಓದಿ: 

1. ಕೆಲಸದ ಟೆನ್ಷನ್​ ಬಿಟ್ಟು ಬಿಡಿ- ಒಂದು ದಿನ ಕೃಷಿಕರಾಗಿ ಎಂಜಾಯ್​ ಮಾಡಿ..!

2. ಭಾರತಕ್ಕೆ ವಿಶ್ವಕಪ್​ ಗೆದ್ದು ಕೊಟ್ಟ ಸಾಧಕ- ದೃಷ್ಠಿ ವಿಕಲಚೇತನರ ಕ್ರಿಕೆಟ್​ನಲ್ಲಿ ಶೇಖರ್​ "ನಾಯಕ"

3. ಎಂಜಿನಿಯರಿಂಗ್​ಗೆ ಬೈಬೈ- ಕುದುರೆ ಸವಾರಿಗೆ ಹಾಯ್ ಹಾಯ್​- ಹವ್ಯಾಸವೇ ಫುಲ್‍ ಟೈಂ ಜಾಬ್ ಆದ ಕಥೆ..!