ಇನ್ವೆಸ್ಟ್‌ ಮೆಂಟ್ ಬ್ಯಾಂಕರ್ ಫ್ಯಾಷನಿಸ್ಟ್ ಆಗಿ ಬದಲಾದ ಕಥೆ

ಟೀಮ್​​ ವೈ.ಎಸ್​​.

0

ನ್ಯೂಯಾರ್ಕ್‌ನ ಯುಬಿಎಸ್‌ನಲ್ಲಿ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿ ಯಶಸ್ವಿಯಾಗಿದ್ದ ಪೂರ್ಣಿಮ ವರ್ಧನ್, ಉದ್ಯಮಿಯಾಗುವುದಕ್ಕಾಗಿಯೇ ಭಾರತಕ್ಕೆ ವಾಪಾಸಾದರು. ತಾವು ಉದ್ಯಮವನ್ನು ಆರಂಭಿಸುವುದಕ್ಕೂ ಮುನ್ನ ಪೂರ್ಣಿಮ ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಜನರು ಉತ್ತಮವಾದುದನ್ನು ಅನುಭವಿಸುವುದಕ್ಕಿಂತ ಚೆನ್ನಾಗಿ ಕಾಣುವುದನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಈ ಸಮಯದಲ್ಲಿ ಪೂರ್ಣಿಮ ಅರ್ಥಮಾಡಿಕೊಂಡರು. ಜನ ಎಲ್ಲದರಲ್ಲಿಯೂ ಫಿಟ್ ಆಗಿರುವುದನ್ನು ಬಯಸುತ್ತಾರೆ. ಆದರೆ ಆತ್ಮವಿಶ್ವಾಸದಂತಹ ಫಿಟ್‌ನೆಸ್ ಎಲ್ಲಿಯೂ ಕಾಣಸಿಗುವುದಿಲ್ಲ. ನಮ್ಮ ಉಡುಗೆ ತೊಡುಗೆಗಳಿಂದ ನಮಗೆ ಆತ್ಮವಿಶ್ವಾಸ ದೊರಕುವುದು, ನಾವು ಆತ್ಮವಿಶ್ವಾಸವನ್ನು ಅನುಭವಿಸುವುದು ಮತ್ತು ಅಂತೆಯೇ ಕಾಣುವುದು ತುಂಬಾ ಮುಖ್ಯವಾದ ಅಂಶ ಎಂಬುದು ಪೂರ್ಣಿಮಾರ ವಾದ. ಈ ವಾದದ ಆಧಾರದ ಮೇಲೆ ಆರಂಭವಾಗಿದ್ದೇ 335th ಎಂಬ ಫಿಟ್ ವೇರ್ ಸಂಸ್ಥೆ. ಶೇಪ್ ವೇರ್ ನಿಂದ ಹಿಡಿದು ಸ್ಮೂತ್ ವೇರ್ ವರೆಗೆ ಎಲ್ಲಾ ರೀತಿಯಲ್ಲೂ ನೀವು ತೆಳ್ಳಗೆ ಕಾಣುವಂತೆ ಮಾಡುವ ಬಟ್ಟೆಗಳು ಹಾಗೂ ಅಲಂಕಾರಿಕ ವಸ್ತುಗಳು ಇಲ್ಲಿ ಲಭ್ಯ.

ಓರ್ವ ಇನ್ವೆಸ್ಟ್ ಮೆಂಟ್ ಬ್ಯಾಂಕರ್, ಫ್ಯಾಶನಿಸ್ಟ್ ಆಗಿ ಬದಲಾದ ಬಗೆ

ನವದೆಹಲಿಯ ಸಂತ ಸ್ಟೀಫನ್ ಕಾಲೇಜಿನಲ್ಲಿ ಗಣಿತ ವಿಚಾರದಲ್ಲಿ ಪದವಿ ಪೂರ್ವ ಶಿಕ್ಷಣ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ ನಲ್ಲಿ ಕಾರ್ಯಕಾರಿ ಸಂಶೋಧನಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ವಾರ್ಟನ್ ಸ್ಕೂಲ್‌ನಲ್ಲಿ ಆರ್ಥಿಕ ವಿಭಾಗದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ ಪೂರ್ಣಿಮಾ. ಆರ್ಥಿಕ ಮತ್ತು ಅಕೌಂಟಿಂಗ್ ಪರಿಣಿತರಾಗಿರುವ ಪೂರ್ಣಿಮಾರವರಿಗೆ ಫ್ಯಾಶನ್ ಪ್ರಪಂಚದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಚೀನಾದ ವಿಭಿನ್ನ ಬಗೆಯ ಬಟ್ಟೆಗಳಿಂದ ದೇಹಕ್ಕೆ ಹೇಗೆ ಶೇಪ್ ನೀಡಬಹುದು ಎಂಬುದರ ಕುರಿತು ಅಧ್ಯಯನ ನಡೆಸುವುದರ ಮೂಲಕ ತಮಗೆ ಬೇಕಾದ ಮಾಹಿತಿ ಪಡೆದರು.

ಉದ್ಯಮ ಆರಂಭವಾಗಿದ್ದು ಹೇಗೆ..?

ವಿಷಯ ಮತ್ತು ಉತ್ಪನ್ನವನ್ನು ಅಭಿವೃದ್ಧಿಪಡಿಸುವಾಗ ತಮ್ಮ ನೌಕರರು ಅರೆಕಾಲಿಕವಾಗಿ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಲಾಯಿತು. ಇಂತಹ ಯೋಜನೆಗಳನ್ನು ಆರಂಭಿಸುವಾಗ ತಮ್ಮ ಉದ್ಯಮದೊಂದಿಗೆ ಕೈಜೋಡಿಸುವಂತೆ ಜನರನ್ನು ಮನವೊಲಿಸುವುದೇ ಒಂದು ಸವಾಲಾಗಿರುತ್ತದೆ. ಆದರೆ ಅದೃಷ್ಟವಶಾತ್ ತಾವು ಅಂತಹ ಸಮಸ್ಯೆ ಎದುರಿಸಲಿಲ್ಲ ಎನ್ನುತ್ತಾರೆ ಪೂರ್ಣಿಮಾ. ಸಂಶೋಧನೆ ಮತ್ತು ಅಭಿವೃದ್ಧಿಯ ಆಧಾರದ ಮೇಲೆ ಯಾವುದೇ ಸಂಸ್ಥೆಯ ಆರಂಭ ಅವಲಂಬಿಸಿರುತ್ತದೆ.

ಹೆಸರಲ್ಲೇನಿದೆ?

ಸಂಸ್ಥೆಗೆ ಹೆಸರಿಡುವುದೇ ಒಂದು ಪ್ರಯಾಸಕರ ಕೆಲಸ. 335th ಎಂಬ ಹೆಸರನ್ನಿಟ್ಟಿದ್ದೇ ಒಂದು ಕುತೂಹಲಕರ ಘಟನೆ. 335th ಎಂಬ ವಿಳಾಸದಲ್ಲಿಯೇ ನಮ್ಮ ಫಿಟ್ ವೇರ್ ಉದ್ಯಮದ ಅಂತಿಮ ರೂಪುರೇಷೆ ಸಿದ್ಧಗೊಂಡಿದ್ದು. ಹೀಗಾಗಿ ಸಂಸ್ಥೆಗೆ 335th ಎಂಬ ಹೆಸರೇ ಅಂತಿಮವಾಯಿತು ಎಂದು ನೆನಪಿಸಿಕೊಳ್ಳುತ್ತಾರೆ ಪೂರ್ಣಿಮಾ. ಜಾಗತಿಕ ಹಾಗೂ ಭಾಷೆಯ ಗಡಿಯನ್ನು ಮೀರಿರುವ ಒಂದು ಹೆಸರನ್ನು ಸಂಸ್ಥೆಗೆ ಇಡುವುದು ಪೂರ್ಣಿಮಾರ ಇಚ್ಛೆಯಾಗಿತ್ತು.

ಸ್ಥಾನೀಕರಣ ಮತ್ತು ಅವಕಾಶಗಳು

ನಿಮ್ಮ ದೇಹವನ್ನು ಸರಿಯಾದ ಆಕಾರಕ್ಕೆ ತರಬಲ್ಲ, ಸರಿಯಾದ ಫಿಟ್‌ನೆಸ್‌ ಇರುವ ವಸ್ತ್ರಗಳು ಹಾಗೂ ಅಲಂಕಾರಿಕ ವಸ್ತುಗಳಿಗೆ 335th ಒಂದು ಅತ್ಯುತ್ತಮ ಬ್ರಾಂಡ್ ಆಗಿದೆ. ತಮಗೆ ಬೇಕಾದ ಸ್ಟೈಲ್, ಕ್ವಾಲಿಟಿ ಹಾಗೂ ಆರಾಮ ಎನಿಸುವ ವಿಸ್ತೃತವಾದ ಆಯ್ಕೆಯ ಅವಕಾಶ ಇಲ್ಲಿದೆ. ಅಲ್ಲದೇ ದೇಹದ ಅಸ್ಥಿರತೆಯನ್ನು ತೋರ್ಪಡಿಸದ ವಸ್ತ್ರಗಳೂ ಸಹ ಇಲ್ಲಿ ಲಭ್ಯವಿದೆ. ಪ್ರಥಮ ಬಾರಿಗೆ ವೈಶಿಷ್ಟ್ಯಪೂರ್ಣವಾದ ಮಹಿಳೆಯರ ಲೆಗ್ಗಿಂಗ್ಸ್ ಗಳ ವಿಶಾಲ ಸಂಗ್ರಹವೂ ಇದೆ.

ಭಾರತ ಹಾಗೂ ಚೀನಾದ ಉದ್ಯಮ ಪರಿಣಿತರೊಂದಿಗೆ ಕಾರ್ಯನಿರ್ವಹಿಸುತ್ತಿರುವ 335th , ಲೆಗ್ಗಿಂಗ್ಸ್‌ ಗಳಿಗಾಗಿ ವಿಶೇಷವಾದ ಪಾಲಿ ವಿಸ್ಕೋಸ್ ಎಲ್ಯಾಸ್ಟೆನ್ ಎಂಬ ವಸ್ತ್ರವನ್ನು ಸೃಷ್ಟಿಸಿದೆ. “ದೇಹ ರಚನೆಯನ್ನು ವ್ಯಾಖ್ಯಾನಿಸಬಲ್ಲ, ಆರಾಮದಾಯಕ, ವಿಶಿಷ್ಟ ಶೈಲಿಯ, ಸ್ಪರ್ಶಕ್ಕೆ ಮೃದುವಾಗುವಂತಹ ಬಟ್ಟೆಯನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿತ್ತು. ಕಾಲುಗಳು ತೆಳ್ಳಗೆ ಕಾಣುವಂತೆ ಮಾಡುವ, ದೇಹವನ್ನು ತೆಳ್ಳಗಾಗಿ ತೋರಿಸುವಂತಹ ಬಟ್ಟೆಗಳನ್ನು ಉತ್ಪಾದಿಸಲು 2 ಹಂತಗಳಲ್ಲಿ ಕಾರ್ಯನಿರ್ವಹಿಸಿದೆವು. 4 ಲೆಗ್ಗಿಂಗ್ಸ್ ಗಳಲ್ಲಿನ 4 ಇಂಚಿನ ಎಲಾಸ್ಟಿಕ್ ನಡುಪಟ್ಟಿ ಹೊಟ್ಟೆಯನ್ನು ಕಡಿಮೆ ಇರುವಂತೆ ತೋರಿಸುತ್ತದೆ.” ಎನ್ನುತ್ತಾರೆ ಪೂರ್ಣಿಮಾ

ಸವಾಲುಗಳು ಹಾಗೂ ಮುಂದಿನ ಹಾದಿ

“ಹೊಸ ಬ್ರಾಂಡ್‌ಗಳ ಮುಂದಿರುವ ಅತೀ ದೊಡ್ಡ ಸವಾಲೆಂದರೆ ಹಂಚಿಕೆ. 335th ಆನ್‌ಲೈನ್ ಮಾರುಕಟ್ಟೆ ಹಾಗೂ ಆಫ್‌ಲೈನ್ ಮಾರುಕಟ್ಟೆಗಳೆರಡರಲ್ಲೂ ಇಟ್ಟಿಗೆ ಮತ್ತು ಗಾರೆ ಮಾದರಿಯ ನೀತಿಯನ್ನು ಅಳವಡಿಸಿಕೊಂಡು ಮಾರುಕಟ್ಟೆಯ ಮೇಲೆ ಹತೋಟಿ ಸಾಧಿಸಿತು. ನಮ್ಮ ವಸ್ತುಗಳ ಹಂಚಿಕೆಗಾಗಿ ಅನೇಕ ವ್ಯಾಪಾರಿಗಳ ಮನವೊಲಿಸಬೇಕಾಯಿತು” ಎಂದು ನೆನಪಸಿಕೊಳ್ಳುತ್ತಾರೆ ಪೂರ್ಣಿಮಾ. ಇಂತಹ ಅನೇಕ ಸವಾಲುಗಳನ್ನು ಎದುರಿಸಿರುವ ಸಂಸ್ಥೆ ಸದ್ಯದಲ್ಲೇ ಇ-ಕಾಮರ್ಸ್ ಸ್ಟೋರ್‌ ಆರಂಭಿಸುವ ಯೋಜನೆ ರೂಪಿಸಿಕೊಂಡಿದೆ.

ಮುಂದಿನ ಋತುಕಾಲದೊಳಗೆ ಮಹಿಳೆಯರ ವಿಭಾಗದಲ್ಲಿ ವಿಸ್ತಾರವಾದ ನೂತನ ವಸ್ತ್ರವಿನ್ಯಾಸಗಳನ್ನು ಬಿಡುಗಡೆಗೊಳಿಸುವುದಾಗಿ ಪೂರ್ಣಿಮಾ ಹೇಳಿಕೊಂಡಿದ್ದಾರೆ. ಅಲ್ಲದೇ ಪುರುಷರ ವಸ್ತ್ರವಿನ್ಯಾಸಗಳ ಸಂಗ್ರಹಕ್ಕಾಗಿ ಸಂಸ್ಥೆ ಶ್ರಮಿಸುತ್ತಿದೆ. ಮುಂದಿನ 2 ವರ್ಷಗಳಲ್ಲಿ 335th ವಿವಿಧ ಬೌಗೋಳಿಕ ಪ್ರದೇಶಗಳಲ್ಲಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಲಿದ್ದು ಹೊಸ ಉತ್ಪನ್ನಗಳ ಅಭಿವೃದ್ಧಿಯತ್ತ ಗಮನಹರಿಸುವ ಉದ್ದೇಶ ಹೊಂದಿದೆ.

Related Stories