ಡಿಜಿಟಲ್ ಇಂಡಿಯಾ ಕಾನ್ಸೆಪ್ಟ್​ಗೆ ಹೊಸ ಸೇರ್ಪಡೆ- ಹಿರಾಚುನಿ ಗ್ರಾಮಸ್ಥರೆಲ್ಲಾ ಫುಲ್ ಟೆಕ್​ಫ್ರೆಂಡ್ಲಿ..!

ಟೀಮ್​ ವೈ.ಎಸ್​. ಕನ್ನಡ

0

ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಕಾನ್ಸೆಪ್ಟ್​ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುವ ಜನತೆಗಂತೂ ಡಿಜಿಟಲ್ ಇಂಡಿಯಾ ಪ್ರೋಗ್ರಾಂ ಹೊಸ ಉತ್ಸಾಹವನ್ನೇ ತಂದಿದೆ. ಈ ಕುರಿತು ಕೇಂದ್ರ ಸರ್ಕಾರ ಕೂಡ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಡಿಜಿಟಲ್ ಸಾಕ್ಷರತೆಯನ್ನ ಹೆಚ್ಚಿಸವ ಸಲುವಾಗಿ ಕೇಂದ್ರ ಸರ್ಕಾರ ಜಾರ್ಖಂಡ್ ರಾಜ್ಯದ ಪೂರ್ವ ಸಿಂಗ್​ಬುಮ್ ಜಿಲ್ಲೆಯ ಹಿರಾಚುನಿ ಗ್ರಾಮವನ್ನು ಪ್ರಾಯೋಗಿಕವಾಗಿ ಡಿಜಿಟಲೈಸ್​ ಮಾಡಿ ಬಿಟ್ಟಿದೆ.

2011ರ ಜನಗಣತಿಯ ಪ್ರಕಾರ ಈ ಜಿಲ್ಲೆಯಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಿದೆ. ಅದ್ರಲ್ಲೂ ಪುರುಷರ ಶೈಕ್ಷಣಿಕ ಅರ್ಹತೆ ಹೆಚ್ಚಿದೆ. 300 ಜನರಿರುವ ಈ ಗ್ರಾಮದಲ್ಲಿ ಸುಮಾರು 60 ಮನೆಗಳಿವೆ. ಅಚ್ಚರಿ ಅಂದ್ರೆ ಈ ಎಲ್ಲಾ ಮನೆಗಳಿಗೂ ಇಂಟರ್ನೆಟ್ ಸಂಪರ್ಕವಿದೆ.

“ ಆರಂಭದಲ್ಲೇ ನ್ಯಾಷನಲ್ ಹೈವೇ 33ರ ಪಕ್ಕದಲ್ಲಿರುವ ಹಿರಾಚಿನಿ ಗ್ರಾಮವನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ. ಜೆಮ್​ಶೆಡ್​ಪುರದ ಸಮೀಪದಲ್ಲಿರುವ ಈ ಗ್ರಾಮದಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿದೆ. ಇಲ್ಲಿನ ಇಂಟರ್​ನೆಟ್​ ವ್ಯವಸ್ಥೆ ಬಗ್ಗೆ ಎರಡು ಮಾತಿಲ್ಲ ”
- ಸಂಜಯ್ ಕುಮಾರ್, ಪಿಆರ್​ಒ  ಪೂರ್ವ ಸಿಂಗ್​ಬುಮ್ ಜಿಲ್ಲೆ

ಸಂಜಯ್ ಕುಮಾರ್ ಕಳೆದ ಭಾನುವಾರ ಈ ಗ್ರಾಮಕ್ಕೆ ಬೇಟಿ ನೀಡಿದ್ದರು. ಗ್ರಾಮಸ್ಥರೊಂದಿಗೆ ಮಾತುಕತೆ ಆಡಿದ್ದರು. ಗ್ರಾಮ ಪಂಚಾಯಿತಿಯ ಆಡಳಿತ ಸದಸ್ಯರು, ಮಾಜಿ ಸದಸ್ಯರು ಹಾಗೇಯೇ ಯುವಕ ಮಂಡಲಗಳ ಸದಸ್ಯರನ್ನು ಬೇಟಿ ಮಾಡಿ ಡಿಜಿಟಲ್ ಇಂಡಿಯಾದ ಐಡೆಂಟಿಟಿ ನೀಡಲು ಒಪ್ಪಿಗೆ ಪಡೆದುಕೊಂಡ್ರು. ಗ್ರಾಮದಲ್ಲಿರುವ 60 ಮನೆಗಳ ಪೈಕಿ 47 ಮನೆಗಳ ವಿವರಗಳನ್ನು ಪಡೆದುಕೊಳ್ಳಲಾಗಿದೆ. ಅಷ್ಟೇ ಅಲ್ಲ ಇ-ಮೇಲ್ ಐಡಿ, ವಾಟ್ಸ್ಆ್ಯಪ್ ಗ್ರೂಪ್​ಗಳನ್ನು ಮಾಡಲಾಗಿದೆ. ಸದ್ಯಕ್ಕೆ hirachuni.XYZ@gmail.com ಅಂತ ಇ-ಮೇಲ್ ನೀಡಲಾಗಿದೆ. ಇಲ್ಲಿ XYZ ಗ್ರಾಮದ ಪ್ರಜೆಗಳ ಹೆಸರುಗಳನ್ನು ಹೊಂದಿರುತ್ತದೆ. ಇದ್ರ ಜೊತೆಗೆ ಡಿಜಿಟಲ್ ಹಿರಾಚುನಿ ಅಂತ ಫೇಸ್ ಬುಕ್ ಐಡಿ ಮತ್ತು ವ್ಯಾಟ್ಸ್ಆ್ಯಪ್ ಗ್ರೂಪ್​ಗಳನ್ನು ಕೂಡ ಮಾಡಿಕೊಳ್ಳಲಾಗಿದೆ.

ಹಿರಾಚುನಿ ಗ್ರಾಮದ ಬಹುತೇಕ ಯುವಕರು ಸ್ಮಾರ್ಟ್​ಫೋನ್ ಮತ್ತು ಇಂಟರ್ನೆಟ್ ಸಂಪರ್ಕಗಳನ್ನು ಹೊಂದಿದ್ದಾರೆ. ಹೀಗಾಗಿ ಡಿಜಿಟಲ್ ಇಂಡಿಯಾ ಕಾನ್ಸೆಪ್ಟ್​​ನ್ನು ಪ್ರೊಮೋಟ್ ಮಾಡೋದಿಕ್ಕೆ ಹೆಚ್ಚು ಕಷ್ಟವಾಗುವುದಿಲ್ಲ. ಈ ಗ್ರಾಮದಲ್ಲಿ ಬಿಎಸ್ಎನ್ಎಲ್, ಏರ್​ಟೆಲ್, ಐಡಿಯಾ ಮತ್ತು ರಿಲಯನ್ಸ್ ಸಂಸ್ಥೆಗಳ ಮೊಬೈಲ್ ಸಂಪರ್ಕದೊಂದಿಗೆ 4ಜಿ ವ್ಯವಸ್ಥೆಯೂ ಇದೆ.

ಮುಂದಿನ 5 ವರ್ಷಗಳಲ್ಲಿ ಸುಮಾರು 250 ಮಿಲಿಯನ್ ಭಾರತೀಯರು ಸ್ಮಾರ್ಟ್​ಫೋನ್ ಮತ್ತು ಇಂಟರ್​ನೆಟ್ ಬಳಕೆ ಮಾಡಲಿದ್ದಾರೆ ಅನ್ನೋ ಮಾಹಿತಿ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಕಾನ್ಸೆಪ್ಟ್ ಆಡಳಿತದಲ್ಲೂ ನೆರವಾಗಬಹುದು ಅನ್ನೋ ನಂಬಿಕೆ ಬಲವಾಗಿದೆ.

ಇದನ್ನು ಓದಿ:

1. ‘ಬಿ-ಸೇಫ್’ ಆ್ಯಪ್​ ಬಳಸಿ, ಸುಗಮವಾಗಿ ಆಟೋದಲ್ಲಿ ಪ್ರಯಾಣಿಸಿ

2. ಆಟದಲ್ಲಿ ಬೆಳ್ಳಿ ಗೆದ್ರೂ ಹೃದಯ ಗೆದ್ದ ಭಾರತದ ಬಂಗಾರ..!

3. ಎಚ್ಚರ..! ಇನ್ನು 10 ವರ್ಷಗಳಲ್ಲಿ ಬಾಳೆಹಣ್ಣು ಸಿಗೋದೇ ಇಲ್ವಂತೆ..!