ಸಮಾಜ ಸೇವೆಯೇ ಗುರಿ: ಇದು ‘Power For One’ ಕಾಳಜಿ.!

ಟೀಮ್​​ ವೈ.ಎಸ್​. ಕನ್ನಡ

0

ಪರಿಸರ ಮತ್ತು ಸಾಮಾಜಿಕ ಕಾಳಜಿ ವಿಷಯಗಳು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನರ ಗಮನ ಸೆಳೆಯುತ್ತಿವೆ. ಯಾಕೆಂದರೆ ಬದಲಾದ ಪರಿಸ್ಥಿತಿಯಲ್ಲಿ ಈ ವಿಷಯಗಳು ಅತ್ಯಂತ ಹೆಚ್ಚಿನ ಮಹತ್ವ ಪಡೆದುಕೊಂಡಿವೆ. ಹೀಗಿರುವಾಗ ಕೇವಲ ಸಾಮಾಜಿಕ ಕಾಳಜಿಯನ್ನು ಮಾತ್ರ ಬೆಂಬಲಿಸುವ ಸಂಘಟನೆಗಳು, ಸಂಪನ್ಮೂಲ ಸಂಗ್ರಹದಲ್ಲಿ ಕೂಡ ಹಿಂದೆ ಬಿದ್ದಿಲ್ಲ. ಈ ಸಾಮಾಜಿಕ ಕಾಳಜಿಯನ್ನು ಬೆಂಬಲಿಸುವ ವೇದಿಕೆಗಳು, ಈ ಗುರಿ ಸಾಧನೆಗಾಗಿ ನಿಧಿ ಸಂಗ್ರಹಿಸುತ್ತಿವೆ. ಭಾರತ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ.

ಸಾಮಾಜಿಕ ಕಾಳಜಿ ಇರುವ ವೆಬ್​​​ಸೈಟ್ ಬಗ್ಗೆ ಹೇಳುವುದಾದರೆ ಗಿವ್ ಇಂಡಿಯಾ, ಯುನೈಡೆಟ್ ವೇ, ಮತ್ತು ಮಿಲಾಪ್ ಪ್ರಮುಖ ಸಾಮಾಜಿಕ ಕಾಳಜಿ ಸಂಘ ಸಂಸ್ಥೆಗಳಾಗಿವೆ. ಈ ಸಾಲಿಗೆ ಇತ್ತೀಚೆಗೆ ಸೇರ್ಪಡೆಯಾದ ಸಂಸ್ಥೆ Power For One. ದಾನಿಗಳು ಮತ್ತು ಫಲಾನುಭವಿಗಳನ್ನು ಬೆಸೆಯುವ ತಂತಿಯಾಗಿ ಇದು ಕಾರ್ಯ ನಿರ್ವಹಿಸುತ್ತದೆ.

‘ಪವರ್ ಫೋರ್ ಒನ್ ’ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಮಿಹಿರಿ ಲುನಿಯಾ ಈ ರೀತಿ ಹೇಳುತ್ತಾರೆ. ಬಡವರು ಮತ್ತು ಶ್ರೀಮಂತರು ನಡುವಿನ ಅಂತರ ಕೊನೆಗೊಳಿಸುವ ಸಂಬಂಧ, ಅವರಿಬ್ಬರ ಮಧ್ಯೆ ಒಂದು ಸಂಪರ್ಕ ಸೇತುವೆ ಸ್ಥಾಪಿಸುವ ನಿಟ್ಟಿನಲ್ಲಿ ನಾನು ಮತ್ತು ಇಶಾನ್ ಚರ್ಚೆ ನಡೆಸಿದೆವು. ಕಲ್ಪನೆಗಳನ್ನು ಹಂಚಿಕೊಂಡೆವು. ಇದು ಲುನಿಯಾ ಮಾತು.

2010ರಲ್ಲಿ ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ಈ ಕಲ್ಪನೆ ಮೊಳಕೆಯೊಡೆದಿತ್ತು ಎನ್ನುತ್ತಾರೆ ಮಿಹಿರಿ. ಸಾಮಾಜಿಕ ಕಾಳಜಿ ಮತ್ತು ಪರಿಸರ ಪ್ರೇಮಿ ಸಂಸ್ಥೆಗಳ ಬಗ್ಗೆ ಮಾತನಾಡುತ್ತಾ ಹೇಳಿದ ಮಿಹಿರಿ, ಇಲ್ಲಿ ಎರಡು ರೀತಿಯ ಸಂಸ್ಥೆಗಳಿವೆ. ಒಂದು ಅತ್ಯಂತ ಶ್ರೀಮಂತ ಸಂಸ್ಥೆಗಳು. ಮಾನವ ಸಂಪನ್ಮೂಲ ಮತ್ತು ಆರ್ಥಿಕ ಸಾಮರ್ಥ್ಯ ಹೊಂದಿರುವ ಸಂಸ್ಥೆಗಳು ಒಂದೆಡೆಯಾದರೆ, ಇನ್ನೊಂದು ಕುಟುಂಬದ ಭಾಗಗಳಂತೆ ಇರುವ ಸಂಸ್ಥೆಗಳು. ಇವು ಸ್ಪಷ್ಟ ಬೆಳವಣಿಗೆ ಗುರಿ ಹೊಂದಿರಲಿಲ್ಲ. ಇಂತಹ ಸಂಸ್ಥೆಗಳನ್ನು ಗುರುತಿಸಿ, ಅಭಿವೃದ್ಧಿಯ ಭಾಗಗಳಾಗಿ ಪರಿವರ್ತಿಸಲು ನಿರ್ಧರಿಸಲಾಯಿತು.

ಪವರ್ ಫೋರ್ ಒನ್ - ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಪ್ರತಿ ತಿಂಗಳು ಒಡಂಬಡಿಕೆ ಮಾಡುತ್ತವೆ. ಯಾವ ಉದ್ದೇಶಕ್ಕಾಗಿ ಈ ಸಂಘ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ ಎಂಬ ಸಮಗ್ರ ಮಾಹಿತಿಯನ್ನು ವೆಬ್​​​ಸೈಟ್​​​ನಲ್ಲಿ ಪ್ರಚುರ ಪಡಿಸುತ್ತೇವೆ. ಹಣಕಾಸು ನೆರವಿಗೆ ಸಂಸ್ಥೆಗಳನ್ನು ಆಯ್ಕೆ ಮಾಡುವ ವೇಳೆಯೂ ಕೂಲಂಕಶ ಪರಿಶೀಲನೆ ಮಾಡಲಾಗುತ್ತದೆ. ಅವರ ಪೂರ್ವಾಪರ ವಿಷಯಗಳ ಪರಾಮರ್ಶೆ ಮಾಡುತ್ತೇವೆ. ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಇದೆಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಧಿಯನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ. ಮೊದಲಿಗೆ ಆರ್ಥಿಕ ಸಹಾಯ ‘ಪವರ್ ಪೋರ್ ಒನ್’ ಕೈ ಸೇರುತ್ತದೆ. ಬಳಿಕ ಅದರ ಹಂಚಿಕೆ ಯಾಗುತ್ತದೆ. ವಾರ ಅಥವಾ ತಿಂಗಳ ಆಧಾರದಲ್ಲಿ ಇದು ನಡೆಯುತ್ತದೆ. ಪ್ರತಿ ಕೊಡುಗೆ ಹಣದಲ್ಲಿ 800 ರೂಪಾಯಿಯಿಂದ 1000 ರೂಪಾಯಿ ವರೆಗೆ ಪವರ್ ಪೋರ್ ಒನ್ ಕಾದಿರಿಸುತ್ತಿದೆ.

ಸಾಮಾಜಿಕ ಕಾಳಜಿ ಇರುವ ಸಂಘ ಸಂಸ್ಥೆಗಳಿಗೆ ನಿಧಿ ಎತ್ತುವಳಿ ಯಾಕೆ ಬೇಕು ಎಂಬ ಪ್ರಶ್ನೆಗೆ ಮಿಹಿರ್ ಈ ರೀತಿ ಉತ್ತರಿಸುತ್ತಾರೆ. ಯಾಕೆಂದರೆ, ಈ ಸಂಘ ಸಂಸ್ಥೆಗಳು ತಮ್ಮ ಚಟುವಟಿಕೆ ನಡೆಸಲು ಕಷ್ಟ ಪಡುತ್ತಿವೆ. ಈ ಸಂದರ್ಭದಲ್ಲಿ ನಿಧಿ ಅತ್ಯಗತ್ಯವಾಗಿದೆ. ಇದಲ್ಲದೆ ಸಾಮಾಜಿಕ ಜಾಲ ತಾಣಗಳ ಮೂಲಕ ನೆರವಿನ ಹಸ್ತ ಚಾಚಲು ಮುಂದಾಗಿದ್ದೇವೆ ಎನ್ನುತ್ತಾರೆ ಮಿಹಿರ್.

ಮಿಲಾಫ್ ಮತ್ತು ನಮ್ಮ ಸಂಸ್ಥೆಯ ಚಟುವಟಿಕೆಗೆ ಸಂಬಂಧಿಸಿದಂತೆ ಕೆಲವು ವ್ಯತ್ಯಾಸಗಳಿವೆ. ಮಿಲಾಫ್, ಬಡವರಿಗೆ ಸಾಲ ವ್ಯವಸ್ಥೆ ಮಾಡುತ್ತದೆ. ಆದರೆ ನಮ್ಮ ಸಂಸ್ಥೆ ಕೊಡುಗೆ ಲಭಿಸುವಂತಾಗಲು ಹಾದಿ ಸುಗಮಗೊಳಿಸುತ್ತದೆ. ಇದು ಮಿಹಿರ್ ಹೇಳುವ ಮಾತು.

ಸಂಸ್ಥೆಯ ಚಟುವಟಿಕೆ ಹೇಗಿದೆ..?

ಸಾಲ ನೀಡುವುದದರ ಬದಲು ‘ಪವರ್ ಫೋರ್ ಒನ್’ ಸಂಸ್ಥೆ ಭಿನ್ನವಾಗಿ ಗುರುತಿಸಿಕೊಂಡಿದೆ. ಅತ್ಯಂತ ಹೆಚ್ಚಿನ ಪಾರದರ್ಶಕತೆ ಮತ್ತು ಸ್ಪಷ್ಟತೆ ಮಾನದಂಡದಲ್ಲಿ ನಿಧಿ ಹಂಚಿಕೆ ಯಾಗುತ್ತಿದೆ. ದಾನಿಗಳು ಎಲ್ಲಿದ್ದಾರೋ ಅವರನ್ನು ಫಲಾನುಭವಿಗಳ ಜೊತೆ ಬೆಸೆಯುವುದರ ಮೂಲಕ, ಕಾರ್ಯ ನಿರತವಾಗಿದ್ದೇವೆ. ದಾನಿಗಳಿಗೆ , ತಮ್ಮ ಕೊಡುಗೆ ಯಾರಿಗೆ ತಲುಪಬೇಕು ಮತ್ತು ಹೇಗೆ ತಲುಪಿಸಬೇಕು ಎಂಬ ಬಗ್ಗೆ ಸ್ಪಷ್ಚತೆ ಇರುವುದಿಲ್ಲ. ಈ ಸಂದರ್ಭದಲ್ಲಿ ಅಗತ್ಯ ಇರುವವರಿಗೆ ನಿಧಿ ಅದರಲ್ಲೂ ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ನೆರವು.. ಇದು ‘ಪವರ್ ಫೋರ್ ಒನ್’ ಸಂಸ್ಥೆಯ ಹೆಗ್ಗಳಿಕೆ ಎನ್ನುತ್ತಾರೆ ಸಂಸ್ಥಾಪಕರು.

ಕಾರ್ಯಾರಂಭ ಮಾಡಿ ಒಂದು ತಿಂಗಳ ಅವಧಿಯಲ್ಲಿ ಹತ್ತು ಸ್ವಯಂ ಸೇವಾ ಸಂಸ್ಥೆಗಳನ್ನು ಗುರುತಿಸಿ ಆ ಸಂಸ್ಥೆಗಳಿಗೆ ಆರ್ಥಿಕ ಚೈತನ್ಯದ ಬಲ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು 50ರಿಂದ 60 ರ ತನಕ ವಿಸ್ತರಿಸುವ ಗುರಿ ಹೊಂದಲಾಗಿದೆ.ಮೊಬೈಲ್ ಅಪ್ಲಿಕೇಷನ್ ಮೂಲಕ ಇನ್ನಷ್ಟು ಜನಪ್ರಿಯಗೊಳಿಸುವತ್ತ ಮುಂದುವರಿದಿದೆ.

ಸಂಸ್ಥೆಯ ಮೂಲಕ ಅಥವಾ ಸಂಘಟನೆಯ ಮೂಲಕ ನೆರವಿನ ಹಸ್ತ ಚಾಚುವ ಸಂದರ್ಭದಲ್ಲಿ ಅಲ್ಲಿ ವೈಯಕ್ತಿಕ ಛಾಪು ಕಣ್ಮರೆಯಾಗುತ್ತಿದೆ. ಪ್ರತಿಯೊಬ್ಬರು ಹೇಗೆ ಭಿನ್ನ ಎಂಬುದನ್ನು ತೋರಿಸಲು ಅಸಮರ್ಥವಾಗುವ ಸಂದರ್ಭಗಳು ಒದಗಿ ಬರುತ್ತಿವೆ. ಆದರೆ ಈ ಲೋಪವನ್ನು ಸಾಮಾಜಿಕ ಜಾಲ ತಾಣಗಳ ಪರಿಣಾಮಕಾರಿ ಬಳಕೆ ಮೂಲಕ ನೀಗಿಸುತ್ತಿದ್ದೇವೆ.. ಪ್ರತಿಯೊಂದನ್ನು ಪ್ರಮೋಟ್ ಮಾಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ವಾಟ್ಸ್ ಅಪ್​, ಟ್ವೀಟರ್ ಮೂಲಕ ಮನಸ್ಸುಗಳನ್ನು ಬೆಸೆಯಲಾಗುತ್ತಿದೆ.

ಲೇಖಕರು: ಫ್ರಾನ್ಸೆಸ್ಕಾ ಫೇರಾರಿಯೊ
ಅನುವಾದಕರು : ಎಸ್​.ಡಿ.

Related Stories