ಕ್ರಿಕೆಟಿಗರಿಗೆ ಮಾನಸಿಕ ನೆಮ್ಮದಿ ತಂದುಕೊಟ್ಟ ಗುರು- ಯೋಗದಿಂದ ಒತ್ತಡ ಮೆಟ್ಟಿನಿಂತ ಕ್ರೀಡಾತಾರೆಗಳು..!

ಟೀಮ್​ ವೈ.ಎಸ್​. ಕನ್ನಡ

0

ಸ್ಮಾರ್ಟ್‌ ಜೀವನದ ಬ್ಯುಸಿ ಲೈಫ್‌ನಲ್ಲಿ ಯಾವುದಕ್ಕೂ ಸಮಯವಿಲ್ಲ. ಒಂದು ಕೆಲಸ ಮಾಡಿ ಮುಗಿಯುವಷ್ಟರಲ್ಲಿ ಮತ್ತೊಂದಕ್ಕೆ ಸಜ್ಜಾಗಲೇಬೇಕು. ಊಟ, ತಿಂಡಿ ನಿದ್ದೆ, ಕೊನೆಗೆ ವೈಯಕ್ತಿಕ ಜೀವನವೂ ಸರಿಯಾಗಿ ನಡೆಯೋದಿಲ್ಲ. ಮಾನಸಿಕ ನೆಮ್ಮದಿ ಅನ್ನೋದು ಮರೆತು ಹೋದ ವಿಷಯವೇ ಆಗಿದೆ. ಆರೋಗ್ಯದಲ್ಲಿ ಏರುಪೇರು ಕಂಡಾಗ ಒಂದ್ಸಾರಿ ವೈದ್ಯರನ್ನು ಬೇಟಿ ಮಾಡಿ ಬರುತ್ತೇವೆ. ಮೆಡಿಸಿನ್‌ ಅನ್ನೋ ಕಾನ್ಸೆಪ್ಟ್‌ ಸಾವಿರಾರು ರೂಪಾಯಿಗೆ ಕತ್ತರಿ ಹಾಕೋದು ಗ್ಯಾರೆಂಟಿ. ಕೊನೆಗೆ ಯಾವುದೂ ಉಪಯೋಗಕ್ಕೆ ಬಾರದೇ ಇದ್ದಾಗ ವಾಕಿಂಗ್‌, ದೈಹಿಕ ವ್ಯಾಯಾಮದತ್ತ ಮುಖ ಮಾಡುತ್ತೇವೆ. ಜೊತೆಗೆ ನಮ್ಮಲ್ಲೇ ಇರುವ ಯೋಗದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇವೆ.

ಯೋಗ ನಮ್ಮಲ್ಲೇ ಇದೆ

ಇವತ್ತು ವಿಶ್ವ ಯೋಗ ದಿನ. ಶತಮಾನಗಳ ಹಿಂದೆ ಭಾರತದಲ್ಲಿ ಹುಟ್ಟಿದ ಯೋಗಾಭ್ಯಾಸವನ್ನು ವಿಶ್ವಕ್ಕೆ ತಿಳಿ ಹೇಳಬೇಕು. ಭಾರತದ ಕಡೆ ಎಲ್ಲರೂ ಒಂದು ಬಾರಿ ತಿರುಗಿ ನೋಡಬೇಕು. ನಮ್ಮಲ್ಲೇ ಇರುವ,ನಮಗೆ ತಕ್ಕ ಮಟ್ಟಿಗೆ ಗೊತ್ತಿರುವ ಯೋಗವನ್ನು ಸರಿಯಾಗಿ ಬಳಸಿಕೊಳ್ಳಲು ಇದಕ್ಕಿಂತ ಇನ್ಯಾವ ಸುವರ್ಣಾವಕಾಶ ಬೇಕು ಅಲ್ಲವೇ..? ಯೋದ ಎಲ್ಲಾ ಆಸನಗಳು ಸಾಮಾನ್ಯರಿಗೆ ಗೊತ್ತಿರಲು ಸಾಧ್ಯವಿಲ್ಲ. ಆದ್ರೆ ಯೋಗದ ಉಪಯೋಗ ಪ್ರತಿಯೊಬ್ಬ ಭಾರತೀಯನಿಗೂ ಗೊತ್ತಿದ್ದೇ ಗೊತ್ತಿರುತ್ತದೆ. ನಾವೆಲ್ಲರೂ ಒಂದಲ್ಲ ಒಂದು ಬಾರಿ ಯೋಗದ ಆಸನಗಳನ್ನು ಮಾಡಿಯೇ ಇರುತ್ತೇವೆ.

ಯೋಗ ಎಲ್ಲೆಲ್ಲಿದೆ..?

ಕೆಲ ವರ್ಷಗಳ ಹಿಂದೆ ಯೋಗ ಅಂದ್ರೆ ಅದೆಷ್ಟೋ ಜನ ಮೂಗು ಮುರಿದಿದ್ದರು. ಅಸಡ್ಡೆ ತೋರಿಸಿದ್ದರು. ಆದ್ರೆ ಅದ್ಯಾವಾಗ ವಿದೇಶಿ ಪ್ರಜೆಗಳು ಯೋಗಾಸನ ಕಲಿತು, ಅದ್ರ ಲಾಭದ ಬಗ್ಗೆ ಮಾತೆತ್ತಿದರೋ ಅವತ್ತಿನಿಂದ ಪ್ರಾಚೀನ ಯೋಗಕ್ಕೆ ಯೊಸ ಆಯಾಮ ಸಿಕ್ತು. ಯೋಗಕ್ಕೆ ಸಿಗಬೇಕಾದ ಬೆಲೆಯೂ ಸಿಕ್ತು. ಇವತ್ತು ಯೋಗ ಅನ್ನೋದಿ ಎಲ್ಲಾ ಕಡೆ ವ್ಯಾಪಿಸಿದೆ. ಯೋಗಾಸನದ ಮುಂದೆ ಆಧುನಿಕ ವ್ಯಾಯಾಮಗಳಾದ ಜಿಮ್‌, ಬಾಡಿ ಬಿಲ್ಡಿಂಗ್‌ ಕೂಡ ಮಕಾಡೆ ಮಲಗಿವೆ. ಭಾರತದ ಪ್ರಾಚೀನ ವಿದ್ಯೆಯಾದ ಯೋಗವು ಇಂದು ಬಹುರೂಪಿಯಾಗಿ ವಿಶ್ವಾದ್ಯಂತ ಹರಡಿರುವುದು ಮೇಲ್ನೋಟಕ್ಕೇ ಕಾಣಿಸುತ್ತದೆ.

ಇದನ್ನು ಓದಿ: ಸಾಂಸ್ಕೃತಿಕ ನಗರಿಯ ಹೊಸ ಶೈಕ್ಷಣಿಕ ಸಾಧನೆ

ಪತ್ರಿಕೆಗಳ ಆರೋಗ್ಯ ಅಂಕಣಗಳಿಂದ ಟಿವಿ ಚಾನಲ್‌ಗಳವರೆಗೆ, ಭಾರತದಿಂದ ಅಮೆರಿಕದವರೆಗೆ, ಮಕ್ಕಳಿಂದ ವೃದ್ಧರವರೆಗೆ ಎಲ್ಲೆಲ್ಲೂ ವ್ಯಾಪಕವಾಗಿ ಯೋಗವು ಸರ್ವಸಮ್ಮತವಾಗಿ ಬಿಟ್ಟಿದೆಯೆಂದೇ ಬಿಂಬಿಸಲಾಗುತ್ತಿದೆ. ವಿಜ್ಞಾನ, ಗಣಿತ, ತತ್ವಶಾಸ್ತ್ರ, ಕಲೆ ಇವೇ ಮುಂತಾದ ಕ್ಷೇತ್ರಗಳಿಗೆ ಪ್ರಾಚೀನ ಭಾರತದ ಕೊಡುಗೆಗಳೆಲ್ಲ ನಗಣ್ಯವಾಗಿ ಯೋಗಶಾಸ್ತ್ರವೇ ಮನುಕುಲಕ್ಕೆ ಭಾರತದ ಅತಿ ಶ್ರೇಷ್ಠವಾದ ಕೊಡುಗೆಯೆಂದು ಹೇಳಲಾಗುತ್ತಿದೆ.

ಕ್ರಿಕೆಟಿಗರಿಗೂ ಬೇಕು ಯೋಗ..!

ಭಾರತದಲ್ಲಿ ಕ್ರಿಕೆಟ್‌ಗೆ ಇರುವಷ್ಟು ಪ್ರಸಿದ್ಧಿ ಇನ್ಯಾವುದಕ್ಕೂ ಇಲ್ಲ. ಕ್ರಿಕೆಟಿಗರೂ ಏನೇ ಮಾಡಿದ್ರೂ ಟ್ರೆಂಡ್‌ ಮತ್ತು ಫ್ಯಾಷನ್‌. ಕ್ರಿಕೆಟಿಗರನ್ನೇ ಹೆಜ್ಜೆ ಹೆಜ್ಜೆಗೂ ಅನುಕರಣೆ ಮಾಡುವ ಯುವಕರಿಗೇನು ಕಡಿಮೆ ಇಲ್ಲ. ಇಂತಹ ಕ್ರಿಕೆಟಿಗರು ಕೂಡ ಯೋಗ ಮಾಡ್ತಾರೆ. ಕ್ರಿಕೆಟಿಗರು ಅದೆಷ್ಟೇ ವ್ಯಾಯಾಮ, ರನ್ನಿಂಗ್‌ ಮಾಡಿದ್ರೂ ಯೋಗ ಬೇಕೇ ಬೇಕು. ಆನ್‌ಫೀಲ್ಡ್‌ ಜೊತಗೆ ಆಫ್‌ಫೀಲ್ಡ್‌ ಒತ್ತಡವನ್ನು ನಿಭಾಯಿಸಲು ಯೋಗಕ್ಕಿಂತ ಉತ್ತಮವಾದ ಮಾರ್ಗ ಬೇರೆ ಇಲ್ಲ ಅನ್ನೋದು ಕ್ರಿಕೆಟಿಗರ ಮನದ ಮಾತು.

ಕ್ರಿಕೆಟಿಗರಿಗೊಬ್ಬ ಯೋಗ ಗುರು..

ಡಾ. ಓಂಕಾರ್‌. ಪ್ರತಿಯೊಬ್ಬ ಕ್ರಿಕೆಟಿಗನಿಗೂ ಗೊತ್ತಿರುವ ಹೆಸರು. ಯೋಗರತ್ನ ಡಾ. ಓಂಕಾರ್‌ ಟೀಮ್‌ ಇಂಡಿಯಾದ ಖ್ಯಾತನಾಮ ಕ್ರಿಕೆಟರ್‌ಗಳಿಗೆಲ್ಲಾ ಯೋಗದ ಪಾಠ ಹೇಳಿಕೊಟ್ಟಿದ್ದಾರೆ. ಆಟಗಾರರ ಮೇಲಿರುವ ಒತ್ತಡವನ್ನು ಕಡಿಮೆ ಮಾಡಿದ್ದಾರೆ. ಕನ್ನಡಿಗರಾದ ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌ರಿಂದ ಹಿಡಿದು ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ತನಕ ಎಲ್ಲರೂ ಈ ಯೋಗ ಗುರುವಿನ ಪಾಠ ಕೇಳಿದವರೇ.

" ಯೋಗ ಕ್ರಿಕೆಟ್‌ ಆಟಗಾರರಿಗೆ ತುಂಬಾ ಅನಿವಾರ್ಯ. ಕಠಿಣ ಅಭ್ಯಾಸದ ಬಳಿಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ಬಾಡಿ ಮಸಲ್‌ಗಳನ್ನು ಕೂಡ ಫ್ರೀ ಮಾಡಿಕೊಳ್ಳಬೇಕಾಗುತ್ತದೆ. ಯೋಗದಿಂದ ಇದೆಲ್ಲವೂ ಸಾಧ್ಯ. ಎಮೋಷನಲ್‌ ಬ್ಯಾಲೆನ್ಸ್‌ ಜೊತೆಗೆ ಮಾನಸಿಕ ಸಂತುಲಿತವನ್ನು ಕಾಪಡಿಕೊಳ್ಳಲು ಇದು ನೆರವಾಗಲಿದೆ. ಕ್ರಿಕೆಟಿಗರ ಜೀವನದಲ್ಲಾಗುವ ಏರಿಳಿತಗಳನ್ನು ತಡೆದುಕೊಳ್ಳುವ ಮಾನಸಿಕ ಶಕ್ತಿಯನ್ನು ಕೂಡ ಯೋಗ ನೀಡುತ್ತದೆ."
                         - ಡಾ. ಓಂಕಾರ್​, ಯೋಗ ಗುರು

ಯೋಗ ಕ್ರಿಕೆಟಿಗರ ಮಾನಸಿಕ ಶಕ್ತಿಯನ್ನು ಗಟ್ಟಿಗೊಳಿಸುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಜೀವನದಲ್ಲಾಗುವ ಬದಲಾವಣೆಗಳನ್ನು ಪಾಸಿಟಿವ್ ಆಗಿ ಸ್ವೀಕರಿಸಲು ಯೋಗ ಮತ್ತು ಪ್ರಾಣಾಯಾಮಗಳು ಸಹಾಯ ಮಾಡುತ್ತವೆ ಅನ್ನೋದು ಓಂಕಾರ್‌ ಮಾತು. ಕೇವಲ ಕ್ರಿಕೆಟ್‌ನಲ್ಲಿ ಮಾತ್ರವಲ್ಲ ಇತರ ಕ್ರೀಡಾಪಟುಗಳು ಕೂಡ ಯೋಗದಿಂದ ಸಾಕಷ್ಟು ಲಾಭ ಮಾಡಿಕೊಂಡಿದ್ದಾರೆ. ದೇಹದ ಅಂಗಾಂಗಳು ಅಂದವನ್ನು ಪಡೆದುಕೊಳ್ಳುವುದರ ಜೊತ ಶಕ್ತಿ ಮತ್ತು ಎನರ್ಜಿಯನ್ನು ಕೂಡ ಯೋಗದಿಂದ ಪಡೆದುಕೊಳ್ಳಬಹುದು.

ಕ್ರಿಕೆಟಿಗರ ಜೊತೆ ಒಂಕಾರ್‌ ಶ್ರಮ

ಡಾ. ಓಂಕಾರ್‌ ಟೀಮ್‌ ಇಂಡಿಯಾದ ಕ್ರಿಕೆಟಿಗರ ಪಾಲಿಗೆ ಸ್ಪೆಷಲ್‌ ವ್ಯಕ್ತಿ. ಈ ಯೋಗ ಗುರು ಟೀಮ್‌ ಇಂಡಿಯಾದ ಕ್ರಿಕೆಟಿಗರಿಗಾಗಿ 15 ಕ್ಯಾಂಪ್ಟನ್‌ಗಳನ್ನು ಮಾಡಿದ್ದಾರೆ. ಕರ್ನಾಟಕದ ರಣಜಿ ತಂಡದ ಜೊತೆಗಂತೂ ಸದಾ ಇರುತ್ತಾರೆ. ಓಂಕಾರ್‌ ಸಹಾಯದಿಂದ ಕ್ರಿಕೆಟಿಗರು ತಮ್ಮ ಮೇಲಿರುವ ಒತ್ತಡವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಓಂಕಾರ್‌ ಯೋಗ ಕ್ಲಾಸ್‌ಗಳನ್ನು ಮಾಡಿರುವುದಕ್ಕೆ ಲೆಕ್ಕವೇ ಇಲ್ಲ.

" ಯೋಗದಿಂದ ಗಾಯಗೊಳ್ಳುವುದು ಕಡಿಮೆ ಆಗುತ್ತದೆ. ಇಂಜ್ಯುರಿ ಮಿನಿಮೈಸೇಷನ್‌ನಿಂದ ಆಟಗಾರರಿಗೆ ಕ್ರೀಡಾ ಜೀವನ ತುಂಬಾ ಸಮಯದವರೆಗೆ ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತದೆ. ಕ್ರೀಡಾಪಟುಗಳು ಯೋಗಾಭ್ಯಾಸದಿಂದ ಹೃಯದ ಮತ್ತು ಶ್ವಾಸಕೋಶದ ನಡುವೆ ಉತ್ತಮ ಸಂಪರ್ಕ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆಟಗಾರರ ಒತ್ತಡ ಕಡಿಮೆ ಆದ್ರೆ ಅವರ ಮೆಂಟಲ್‌ ಸ್ಟೇಟಸ್‌ ಕೂಡ ಉತ್ತಮವಾಗುತ್ತದೆ"
                           - ಡಾ.ಓಂಕಾರ್​, ಯೋಗ ಗುರು

ಯಾರಿಗೆಲ್ಲಾ ಯೋಗ ಬೇಕು..?

ಯೋಗ ಯಾರಿಗೆಲ್ಲಾ ಬೇಕು ಅನ್ನುವ ಪ್ರಶ್ನೆಗೆ ಉತ್ತರ ವೆರಿ ಸಿಂಪಲ್‌. ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಯೋಗ ಬೇಕೇ ಬೇಕು. ಯೋಗ ಕೇವಲ ದೈಹಿಕ ವ್ಯಾಯಾಮ ಮಾತ್ರವಲ್ಲ. ಇದು ಮನಸ್ಸಿನೊಳಗೆ ಉತ್ಸಾಹ ತುಂಬು ಕ್ರೀಯೆಯಾಗಿದೆ. ಹೀಗಾಗಿ ಪ್ರತಿಯೊಬ್ಬರು ಕೂಡ ಯೋಗ ಮಾಡಿದ್ರೆ ಎಲ್ಲಾ ವಿಚಾರದಲ್ಲೂ ತುಂಬಾ ಒಳ್ಳೆಯದು. ಆದ್ರೆ ಯೋಗವನ್ನು ಸರಿಯಾದ ದೃಷ್ಟಿಯಲ್ಲಿ ಅಭ್ಯಾಸ ಮಾಡಬೇಕು. ವೈಜ್ಞಾನಿಕವಾಗಿ ಹೇಳುವುದಾದ್ರೆ ಕೈಕಾಲುಗಳಿಗೆ ಎಷ್ಟು ಆ್ಯಕ್ಟಿವಿಟಿ ಸಿಗುತ್ತೋ ಅದರ ದುಪ್ಪಟ್ಟು ಮೆದುಳಿಗೆ ಕೆಲಸ ಇರುತ್ತದೆ. ಆದ್ರೆ ಅದನ್ನು ಮೆಟ್ಟಿ ನಿಲ್ಲೋದಿಕ್ಕೆ ಯೋಗ ಸಹಾಯ ಮಾಡುತ್ತದೆ.

ಶ್ರದ್ಧೆಯಿಂದ ಮಾಡಿದ್ರೆ ಯೋಗ.. ಇಲ್ದೇ ಇದ್ರೆ ರೋಗ..!

ಡಾ. ಓಂಕಾರ್‌ ಹೇಳುವ ಹಾಗೇ, ಯೋಗ ಒಂದೆರಡು ದಿನದಲ್ಲಿ ಕಲಿಯುವ ವಿಧ್ಯೆಯಲ್ಲ. ಈ ಪ್ರಾಚೀನ ಕಲೆಯನ್ನು ಕಲಿಯೋದಿಕ್ಕೆ ವರ್ಷಗಳೇ ಬೇಕಾಗುತ್ತದೆ. ವಿಶ್ವ ಯೋಗ ದಿನ ಅಂತ ಹುರುಪಿನಿಂದ ಬಂದು ಒಂದೇ ದಿನದಲ್ಲಿ ಎಲ್ಲವನ್ನೂ ಮಾಡ ಹೋದರೆ ಅದು ಯೋಗವಾಗುವುದಿಲ್ಲ..ಬದಲಾಗಿ ಮೂಳೆ ಮುರಿದು ರೋಗವಾದ್ರೂ ಅಚ್ಚರಿ ಇಲ್ಲ. ಹೀಗಾಗಿ ಯೋಗವನ್ನು ಎಥಿಕ್ಸ್‌ ಆಫ್‌ ಲೈಫ್‌ ಅಂತನೇ ಓಂಕಾರ್‌ ಕರೆಯುತ್ತಾರೆ.

ಯೋಗವು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಒಂದು ಸಂತುಲಿತ ರೀತಿಯಲ್ಲಿ ಸುಧಾರಿಸಲು ಅಥವಾ ವೃದ್ಧಿಪಡಿಸಲು ಇರುವ ಒಂದು ವಿಧಾನ. ಅದು ಸಂಪೂರ್ಣ ಸ್ವ-ಸಾಫಲ್ಯ ಪಡೆಯುವ ಒಂದು ಹಾದಿಯನ್ನು ಒದಗಿಸುತ್ತದೆ. ಪತಂಜಲಿ ಮಹಾಋಷಿಯವರು ಹೇಳುವಂತೆ, ಯೋಗ ಎನ್ನುವುದು ಮನಸ್ಸಿನ ಮಾರ್ಪಾಡನ್ನು ಹತ್ತಿಕ್ಕುವ ಕ್ರಿಯೆಯಾಗಿದೆ.ಯೋಗವು ತನ್ನ ಆಚರಣೆ ಹಾಗೂ ಅಳವಡಿಸುವಿಕೆಯಲ್ಲಿ, ಯಾವುದೇ ಸಂಸ್ಕೃತಿ, ರಾಷ್ಟ್ರೀಯತೆ, ಜನಾಂಗ, ಜಾತಿ, ಮತ, ಲಿಂಗ ಅಥವಾ ದೈಹಿಕ ಸ್ಥಿತಿಯ ಬೇಧವಿಲ್ಲದೆ, ಸಾರ್ವತ್ರಿಕವಾಗಿದೆ. 

ಇದನ್ನು ಓದಿ

1. ಉತ್ತರ ಕರ್ನಾಟಕದ ಸವಿರುಚಿ ಬಯಸುವವರಿಗೆ ಸ್ವರ್ಗ ಹೊಟೇಲ್ ನಳಪಾಕ..

2. ಪೆಟ್ರೋಲ್ ಡೀಸೆಲ್ ಬೇಡ್ವೇ ಬೇಡ..! ನೀರಿನಿಂದಲೇ ಓಡುತ್ತೆ ಈ ಅದ್ಭುತ ಕಾರು

3. ಎಂಎನ್‍ಸಿ ಕಂಪನಿಗಳಿಗೆ ನಡುಕ ಹುಟ್ಟಿಸಿದ "ಪತಂಜಲಿ''