ಮಾವಿನ ತೋಟಕ್ಕೆ ಹೋಗಿ- ಟೇಸ್ಟೀ ಮಾವಿನ ಹಣ್ಣನ್ನು ಆರಿಸಿಕೊಳ್ಳಿ..!

ಟೀಮ್​ ವೈ.ಎಸ್​. ಕನ್ನಡ

0

ಮಾವಿನ ಹಣ್ಣು ತಿನ್ನಬೇಕು ಅಂದ್ರೆ ಇದುವರೆಗೆ ನೀವು ಅಂಗಡಿಗೆ ಹೋಗಿ ಪರ್ಚೆಸ್ ಮಾಡಿಕೊಂಡು ಬರ್ತಾ ಇದ್ರಿ. ಆದ್ರೆ ಈಗ ಕಾಲ ಬದಲಾಗಿದೆ. ಇನ್ನು ಮುಂದೆ ನೀವೇ ಸ್ವತಃ ರೈತರ ತೋಟಕ್ಕೆ ತೆರಳಿ ನಿಮಗಿಷ್ಟ ಬಂದ ಮಾವುಗಳನ್ನು ಕೊಂಡುಕೊಳ್ಳಬಹುದು. ಹೌದು ಇಂತಹದ್ದೊಂದು ಕಾರ್ಯಕ್ರಮವನ್ನು ತೋಟಗಾರಿಕಾ ಇಲಾಖೆ ಕೈಗೊಂಡಿದೆ. ವಿಷಮುಕ್ತವಾದ, ನಿಮಗಿಷ್ಟವಾದ ಹಣ್ಣನ್ನು ನೀವು ನೋಡಿ, ಆಯ್ಕೆ ಮಾಡಿಕೊಳ್ಳುವಂತಹ ಅದ್ಭುತ ಕಾರ್ಯಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ.

ಹಣ್ಣುಗಳ ರಾಜ ಮಾವು ಅಂದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ರಸಭರಿತ ಮಾವಿನ ಹಣ್ಣು ತಿನ್ನಲು ಜನ ಸೀಸನ್ ಹತ್ತಿರವಾಗ್ತಿದ್ದಂತೆ ಅಂಗಡಿಗಳಲ್ಲಿ ಪರ್ಚೇಸ್ ಮಾಡೋದು ಸಾಮಾನ್ಯ. ಆದರೆ ಅದ್ಯಾಕೋ ಗೊತ್ತಿಲ್ಲ ಈಗಿನ ಹಣ್ಣುಗಳು ನೋಡಲು ಚೆನ್ನಾಗಿ ಕಂಡ್ರೂ, ಒಳಗಡೆ ಕೊಳೆತು ಹೋಗಿರುತ್ತೆ. ನಾವು ಅಂದುಕೊಂಡಂತಹ ರುಚಿ ಅವು ಕೊಡುತ್ತಿಲ್ಲ. ದೊಡ್ಡ-ದೊಡ್ಡ ಹಣ್ಣಿನ ಅಂಗಡಿಗಳಲ್ಲಿ ಮಾವು ಖರೀದಿಸಿದ್ರು, ನಮ್ಮ ಆಸೆ ಮಾತ್ರ ಇಂಗುತ್ತಿಲ್ಲ. ಮಾವಿನ ಹಣ್ಣು ತಿಂದ ತೃಪ್ತಿ ಕೂಡ ಜನರಿಗಿಲ್ಲದಂತಾಗಿದೆ. ಹಾಗಾಗಿ ಈ ಎಲ್ಲ ಸಮಸ್ಯೆಗಳಿಗೆ ತೋಟಗಾರಿಕೆ ಇಲಾಖೆ, ಮಾಸ್ಟರ್ ಪ್ಲಾನ್ ಪರಿಹಾರವಾಗಿ ಹೊರ ಬಂದಿದೆ.

ಇದನ್ನು ಓದಿ: ಮೌನಜೀವಿಗಳಿಗೊಂದು ಹೊಸ ಸ್ಪೂರ್ತಿಯ ನೆಲೆ..

ಇನ್ನುಮುಂದೆ ನೀವೇ ಖುದ್ದಾಗಿ ರೈತರ ತೋಟಕ್ಕೆ ತೆರಳಿ ಮಾವು ಕಿತ್ತು ತರಬಹುದು. ಹೌದು ರೈತರು ಹಾಗೂ ಗ್ರಾಹಕರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಿನ್ನಲೆ ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ವತಿಯಿಂದ ಮ್ಯಾಂಗೋ ಪಿಕ್ಕಿಂಗ್ ಕಾರ್ಯಕ್ರಮ ಆಯೋಜಿಸಿದೆ. ಇದೇ ಮೊದಲ ಬಾರಿಗೆ ರೈತರ ತೋಟದಿಂದ ನೇರವಾಗಿ ಗ್ರಾಹಕರು ಮಾವು ಕೊಂಡುಕೊಳ್ಳುವ ವ್ಯವಸ್ಥೆಯನ್ನು ಆಯೋಜಿಸಲಾಗಿದ್ದು . ರೈತರ ತೋಟಕ್ಕೆ ಹೋಗಿ ಗ್ರಾಹಕರು ತಮ್ಮಗಿಷ್ಟವಾದ ತಳಿಯ, ತಾಜಾ ಹಣ್ಣನ್ನು ಆರಿಸಿಕೊಳ್ಳುವಂತಹ ಅವಕಾಶವನ್ನು ನೀಡುತ್ತಿದೆ ತೋಟಗಾರಿಕೆ ಇಲಾಖೆ.

"ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮ್ಯಾಂಗೋ ಪಿಕ್ಕಿಂಗ್ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗಾಗಿ ಕಬ್ಬನ್​ಪಾರ್ಕ್​ನಿಂದ ಪ್ರತೀ ಭಾನುವಾರ ಗ್ರಾಹಕರನ್ನು ಬಸ್​ಗಳಲ್ಲಿ ಉಚಿತವಾಗಿ ಕರೆದೊಯ್ಯಲಾಗ್ತಿದೆ. ಈ ಮೂಲಕ ಗ್ರಾಹಕರು ರೈತರ ತೋಟಗಳಿಗೆ ಭೆಟಿ ನೀಡಿ ತಾವೇ ಸ್ವತಃ ತಮಗಿಷ್ಟ ಬಂದ ಹಣ್ಣುಗಳನ್ನು ಪರ್ಚೇಸ್ ಮಾಡಬಹುದು"
 ಕಮಲಾಕ್ಷಿ ರಾಜಣ್ಣ, ಮಾವು ಅಭಿವೃದ್ದಿ ಮಂಡಳಿ ಅಧ್ಯಕ್ಷೆ 

ಮ್ಯಾಂಗೋ ಪಿಕ್ಕಿಂಗ್​ಗೆ ಹೋಗುವ ಮಾವು ಪ್ರಿಯರಿಗೂ ಕೆಲವು ಕಂಡೀಷನ್​ಗಳಿವೆ.  ಪ್ರತಿಯೊಬ್ಬರು ಕೂಡ ಕನಿಷ್ಠ 6 ಕೆ.ಜಿ. ಮಾವು ಪರ್ಚೇಸ್ ಮಾಡಲೇ ಬೇಕು. ಕಡಿಮೆ ದರದಲ್ಲಿ ಹಣ್ಣುಗಳು ಸಿಗಲಿದ್ದು, ರೈತರ ಸಮಸ್ಯೆಗಳನ್ನು ಆಲಿಸುವ ಜೊತೆಗೆ ಮಾವು ತಳಿ ಹಾಗೂ ಉತ್ತಮ ಮಾವು ಪಡೆಯಲು ಇದು ಸಹಕಾರಿಯಾಗಲಿದೆ.

ಅಂದ ಹಾಗೇ, ಮಾವು ಸೀಸನ್ ಮುಗಿಯೋವರೆಗೂ ಗ್ರಾಹಕರನ್ನು ಉಚಿತವಾಗಿ ರೈತರ ತೊಟಕ್ಕೆ ಕರೆದೊಯ್ಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಪ್ರತೀ ಜಿಲ್ಲೆಗಳಲ್ಲೂ ಈ ಕಾರ್ಯಕ್ರಮವನ್ನು ಮಾವು ಅಭಿವೃದ್ದಿ ಮಂಡಳಿ ಹಮ್ಮಿಕೊಳ್ಳಲಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗುವ ಜೊತೆಗೆ ರೈತರಿಗೆ ಹಾಗೂ ಗ್ರಾಹಕರಿಗೆ ಉತ್ತಮ ಬಾಂದವ್ಯ ಬೆಳೆಯಲಿದೆ. ಗ್ರಾಹಕರಿಗೆ ಉತ್ತಮ ಹಣ್ಣು ಸಿಕ್ಕರೆ. ರೈತರಿಗೆ ಮಾವು ಬೆಳೆಗೆ ತಕ್ಕ ಬೆಲೆ ಸಿಗಲಿದೆ.

ಇದನ್ನು ಓದಿ:

1. ಮಳೆ ಬಂದ್ರೂ ಮ್ಯಾಚ್​ ನಿಲ್ಲಲ್ಲ...ಟಿಕೆಟ್​ ಕೊಂಡವರಿಗೆ ಟೆನ್ಷನ್​ ಇಲ್ಲ..!

2. ಇದು ಫೋಟೋಗಳು ಕಥೆ ಹೇಳೊ ಸಮಯ

3.ಹೂವಿನ ಹಾದಿಯಲ್ಲಿ ಸಾಧನೆಯ ಕಂಪು..!

Related Stories