ಬೆಳೆಯುತ್ತಿರೋ ಇ- ಕಾಮರ್ಸ್‍ನಲ್ಲಿ, 2020ರ ವೇಳೆಗೆ ಭಾರತದ ಪುಸ್ತಕ ವಹಿವಾಟು739 ಬಿಲಿಯನ್‍ಡಾಲರ್‍ ಉದ್ಯಮವಾಗುತ್ತದೆ..!

ಟೀಮ್​​ ವೈ.ಎಸ್​. ಕನ್ನಡ

ಬೆಳೆಯುತ್ತಿರೋ ಇ- ಕಾಮರ್ಸ್‍ನಲ್ಲಿ, 2020ರ ವೇಳೆಗೆ ಭಾರತದ ಪುಸ್ತಕ ವಹಿವಾಟು739 ಬಿಲಿಯನ್‍ಡಾಲರ್‍ ಉದ್ಯಮವಾಗುತ್ತದೆ..!

Thursday December 10, 2015,

2 min Read

ಸಧ್ಯ ಭಾರತದ ಪುಸ್ತಕೋದ್ಯಮ 261 ಬಿಲಿಯನ್‍ಡಾಲರ್‍ನೊಂದಿಗೆ ವಿಶ್ವದಲ್ಲಿ ಆರನೇ ಸ್ಥಾನದಲ್ಲಿದೆ ಹಾಗೂ ಇಂಗ್ಲಿಷ್ ಭಾಷೆಗೆ 2ನೇ ದೊಡ್ಡ ಮಾರುಕಟ್ಟೆಯಾಗಿದೆ ಮತ್ತು 2020ರ ವೇಳೆಗೆ ಇದು 739 ಮಿಲಿಯನ್‍ಡಾಲರ್ ಮುಟ್ಟುವ ನಿರೀಕ್ಷೆಯಿದೆ. “ನೀಲ್ಸನ್‍ ಇಂಡಿಯಾ ಬುಕ್ ಮಾರ್ಕೆಟ್‍ ರಿಪೋರ್ಟ್ 2015: ಅಂಡರ್‍ಸ್ಟಾಂಡಿಂಗ್ ದಿ ಇಂಡಿಯನ್‍ ಬುಕ್ ಮಾರ್ಕೆಟ್ ಸಮೀಕ್ಷೆಯನ್ನು ಅಸೋಸಿಯೇಷನ್ ಆಫ್ ಪಬ್ಲಿಷರ್ಸ್‍ಇನ್‍ ಇಂಡಿಯಾ ಮತ್ತು ಫೆಡೆರೇಷನ್‍ ಆಫ್‍ ಇಂಡಿಯನ್ ಪಬ್ಲಿಷರ್ಸ್ ಸಹಯೋಗದಲ್ಲಿ ಮಾರುಕಟ್ಟೆಯ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಜತೆಗೆ ಮಾರುಕಟ್ಟೆ ಭವಿಷ್ಯದ ಬಗ್ಗೆ ಮೌಲ್ಯಮಾಪನ ಮಾಡಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಉದ್ಯಮದ ಸಂಯುಕ್ತ ವಾರ್ಷಿಕಬೆಳವಣಿಗೆ 19.3% ವೇಗದದಲ್ಲಿಇರುತ್ತದೆಎಂದುವರದಿತಿಳಿಸುತ್ತದೆ.ಆದರೂ ಭಾರತೀಯ ಪುಸ್ತಕೋದ್ಯಮ ಸರ್ಕಾರದಿಂದಯಾವುದೇ ನೇರ ಹೂಡಿಕೆ ಪಡೆಯುವುದಿಲ್ಲ. ವರದಿ ಹೇಳುವಂತೆ ಇದುಪ್ರಕಾಶಕರಿಗೆಇದುಗಂಭೀರವಾದರಸ್ತೆತಡೆಯಾಗಿದೆ.ಛಿದ್ರಗೊಂಡ ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು, ವಿತರಣಾಜಾಲದ ಹಿಂಸೆ, ನಗದುಹರಿವಿಗೆತಡೆಯೊಡ್ಡುವ ದೀರ್ಘಸಾಲದಅವಧಿ ಮತ್ತು ಸೇರ ವೆಚ್ಚದ ಹೆಚ್ಚಳ ಬೇರೆ ಸವಾಲುಗಳಾಗಿವೆ. ಕೃತಿಚೌರ್ಯ ಹೆಚ್ಚಾಗಿದ್ದುದೇಶದ ಪ್ರತಿಗಲ್ಲಿಯಲ್ಲೂ ಮಾರಾಟ ಮಾಡುವ ಪುಸ್ತಕಗಳು ಪೈರಸಿಗೆ ಒಳಗಾದ ಪುಸ್ತಕಗಳಾಗಿವೆ.

ಇಂಗ್ಲಿಷ್ ಭಾಷಾ ವಿಷಯದ ಮುದ್ರಣದಲ್ಲಿ 9 ಸಾವಿರಕ್ಕೂ ಹೆಚ್ಚು ಪ್ರಕಾಶಕರಿರುವ ಭಾರತ ವಿಶ್ವದಲ್ಲೇ 2ನೇ ಅತೀ ದೊಡ್ಡ ರಾಷ್ಟ್ರವಾಗಿದೆ ಎಂದು ವರದಿಯಲ್ಲಿ ಹೇಳಿದೆ. ಭಾರತದಲ್ಲಿ 70%ಗೂ ಹೆಚ್ಚಿನ ಪ್ರಕಾಶಕರು ಇ ಬುಕ್ ಪ್ರಕಾಶನ ಮಾಡುವ ಸಲುವಾಗಿ ವಿಷಯವನ್ನುಡಿಜಿಟಲೀಕರಣ ಮಾಡಿದ್ದಾರೆ.ಈ ಡಿಜಿಟಲ್ ವಿಷಯಗಳನ್ನು ಸ್ಮಾರ್ಟ್‍ಫೋನ್ ಮತ್ತು ಇ ರೀಡರ್ಸ್ ಮೂಲಕ ಇದನ್ನುಓದಲು ಸಾಧ್ಯವಾಗಿಸುತ್ತಿದ್ದಾರೆ. ಇ ಕಾಮರ್ಸ್ ವ್ಯಾಪಾರದಲ್ಲಿಪುಸ್ತಕಗಳು ಉಪಕರಣ ವರ್ಗದಲ್ಲಿಗುರುತಿಸಿಕೊಂಡಿದ್ದು,ವಿದ್ಯುನ್ಮಾನ(34%) ಮತ್ತು ಬಟ್ಟೆ(30%) ನಂತ್ರ ಒಟ್ಟಾರೆ ಇ ಕಾಮರ್ಸ್ ವ್ಯಾಪಾರದ ಸುಮಾರು 15% ಪಾಲು ಡಿಜಿಟಲ್‍ಪುಸ್ತಕ ಪಡೆದುಕೊಂಡಿದೆ.

image


“ಸಾಮಾನ್ಯ ಮತ್ತು ಸಾಹಿತ್ಯ ಕಲ್ಪನೆ” ಪ್ರಾಕಾರಗಳು ಪುಸ್ತಕ ವಲಯದಲ್ಲಿ ಮೊದಲನೇ ಶ್ರೇಯಾಂಕ ಪಡೆದಿದ್ದರೇ ನಂತರದ ಸ್ಥಾನ ಅಕಾಡೆಮಿಕ್ ವಲಯದ “ಟೆಸ್ಟ್ ಪ್ರಿಪರೇಷನ್ಸ್” ಪುಸ್ತಕಗಳು ಪಡೆದುಕೊಂಡಿದೆ. 18 ವರ್ಷಕ್ಕೂ ಮೇಲ್ಪಟ್ಟ ಸುಮಾರು 2ಸಾವಿರ ಗ್ರಾಹಕರು, ನಗರವಾಸಿಗಳಿಗೆ ನಡೆಸಿದ ಅಧ್ಯಯನದಿಂದ ಭಾರತದಲ್ಲಿ ಪುಸ್ತಕ ವಿಷಯದಲ್ಲಿ ಬದಲಾಗುತ್ತಿರುವ ಗ್ರಾಹಕರ ಆಸಕ್ತಿ ಬಗ್ಗೆ ಆಳವಾದ ಮಾಹಿತಿ ಸಿಗುತ್ತದೆ.ಗ್ರಾಹಕರ ಅಧ್ಯಯನದಲ್ಲಿ ಸರಾಸರಿ ಜನರು ವಾರಕ್ಕೆ 2.1 ಬಾರಿ ಪುಸ್ತಕವನ್ನುಓದುತ್ತಾರೆ.ಸುಮಾರು ಮುಕ್ಕಾಲು ಭಾಗ ಜನ ಕೆಲವೊಮ್ಮೆಮಾತ್ರ ಪುಸ್ತಕ ಓದುತ್ತಾರೆ. ಅಲ್ಲದೇ ಸುಮಾರು 56% ಜನ ವರ್ಷಕ್ಕೊಮ್ಮೆಯಾದ್ರೂಒಂದು ಇ-ಬುಕ್‍ ಕೊಳ್ಳುತ್ತಾರೆ. ಇವರಲ್ಲಿ ಅರ್ಧದಷ್ಟು ಜನ ವರ್ಷಕ್ಕೆ 3 ರಿಂದ 4 ಇ-ಪುಸ್ತಕಗಳನ್ನು ಖರೀದಿಸುತ್ತಿರೋದು ಡಿಜಿಟಲ್ ಪುಸ್ತಕಗಳ ಬೇಡಿಕೆ ಹೆಚ್ಚಳವನ್ನು ತೋರಿಸುತ್ತದೆ.

ಭಾರತದಲ್ಲಿ 55% ಇಂಗ್ಲಿಷ್ ಭಾಷೆಯ ಪುಸ್ತಕ ವ್ಯಾಪಾರವಾಗುತ್ತದೆ. ಭಾರತದ ಭಾಷೆಗಳಲ್ಲಿ ಹಿಂದಿ ಭಾಷೆಯ ಪುಸ್ತಕಗಳ ವ್ಯಾಪಾರ 35% ಇದೆ.ಆದ್ರೆ ಹೆಚ್ಚಿನ ಮಾರಾಟದ ಪಾಲು ಇತರೆ ವರ್ಗಕ್ಕೆ ಹೋಗುತ್ತದೆ. ಸ್ಥಳೀಯ ಪ್ರಕಾಶಕರು ಹೆಚ್ಚು ಅಸಂಘಟಿತರಾಗಿದ್ದಾರೆ ಎಂದು ವರದಿ ಹೇಳುತ್ತದೆ. ವ್ಯಾಪಾರ ಮತ್ತು ಶೈಕ್ಷಣಿಕ ಪುಸ್ತಕ ಪ್ರಕಾಶನದಲ್ಲಿ ಹೆಚ್ಚಿನ ಬೆಳವಣಿಗೆ ಇದೆ.ಆದ್ರೆ ಮಾರುಕಟ್ಟೆ ಹೆಚ್ಚು ಛಿದ್ರಗೊಂಡಿರೋದ್ರಿಂದ ಬಲವರ್ಧನೆಯ ಅಗತ್ಯವಿದೆ. ವಿದೇಶೀ ನೇರಹೂಡಿಕೆಗೆ ಸರ್ಕಾರ ಶೇ100 ರಷ್ಟು ಅವಕಾಶವನ್ನು ಕಲ್ಪಿಸಿರೋದ್ರಿಂದ ಎಂಎನ್‍ಸಿ ಕಂಪನಿಗಳು ಈ ವಲಯದಲ್ಲಿ ಹೂಡಿಕೆಗೆ ಮುಂದಾಗಿದೆ.

ಪೆಂಗ್ವಿನ್ ಮತ್ತು ರಾಂಡಮ್ ಹೌಸ್‍ಗಳ ವಿಲೀನ, ಹಾರ್ಪರ್ ಕಾಲಿನ್ಸ್​​​ನಿಂದ ಹಾರ್ಲೆಕ್ವೀನ್‍ನ ಸ್ವಾಧೀನದಿಂದ ವ್ಯಾಪಾರ ಪ್ರಕಾಶನದಲ್ಲಿ ಮಾತ್ರವಲ್ಲ,ಮಧುಬನ್, ವಿಕಾಸ್ ಪಬ್ಲಿಷಿಂಗ್ ಹೌಸ್ ಮತ್ತು ಸರಸ್ವತಿ ಬುಕ್ ಹೌಸ್‍ ಅನ್ನು ಸ್ವಾಧೀನ ಪಡಿಸಿಕೊಂಡ ಎಸ್‍ಚಾಂದ್, ಮ್ಯಾಕ್‍ಮಿಲ್ಲನ್ ಹೈಯರ್‍ ಎಜುಕೇಷನ್‍ ಅನ್ನು ಸ್ವಾಧೀನಪಡಿಸಿಕೊಂಡ ಲಕ್ಷ್ಮಿ ಪಬ್ಲಿಕೇಷನ್ಸ್​​​ಗಳಿಂದಶೈಕ್ಷಣಿಕ ಪ್ರಕಾಶನದಲ್ಲೂ ಇದು ಮುಂದುವರೆದಿದೆ. ಪುಸ್ತಕ ಮಾರುಕಟ್ಟೆಯ ಬಗ್ಗೆ ಈ ವರದಿ ಅಮೂಲ್ಯ ಒಳನೋಟ ಒದಗಿಸಿದೆ. “ಇದು ಕೇವಲ ಪುಸ್ತಕೋದ್ಯಮಕ್ಕೆ ಮಾತ್ರ ಸಹಾಯ ಮಾಡುವುದಿಲ್ಲ, ಜತೆಗೆ ಸಂಪೂರ್ಣ ಸಾಕ್ಷರತೆ ಮತ್ತು ವಿದ್ಯಾವಂತರಾಷ್ಟ್ರ ಮಾಡುವ ಯೋಜನೆಗೆ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳಿಗೂ ಸಹಾಯವಾಗುತ್ತದೆ” ಎಂದು ಎಪಿಐ ಅಧ್ಯಕ್ಷ ವಿಕಾಸ್ ಗುಪ್ತ ನೀಲ್ಸನ್‍ ವರದಿಯ ಬಗ್ಗೆ ಹೇಳುತ್ತಾರೆ.

ನೀಲ್ಸನ್ ಬುಕ್‍ ಇಂಡಿಯಾದ ಡೈರೆಕ್ಟರ್ ವಿಕ್ರಾಂತ್ ಮಾಥುರ್‍ ಹೇಳುವಂತೆ “ವರದಿಯ ಪ್ರಮುಖ ಅಂಶದಂತೆ ಭಾರತದ ಪುಸ್ತಕ ಮಾರುಕಟ್ಟೆಗೆಅಗಾಧ ಸಾಮರ್ಥ್ಯ ಇದೆ. ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು ಹಾಗೂ ಗ್ರಂಥಾಲಯಗಳು ಮಾರುಕಟ್ಟೆ ಬಗ್ಗೆ ಆಳವಾಗಿ ತಿಳಿದುಕೊಳ್ಳೋಕೆ ಸಹಾಯ ಮಾಡಿದೆ. ಅಭಿವೃದ್ಧಿ ಹೊಂದಬಹುದಾದ ಪ್ರದೇಶ ಮತ್ತು ಅದಕ್ಕೆ ಹೆಚ್ಚಿನ ದಕ್ಷತೆ ತರಲು ಮತ್ತು ಭಾರತದ ಪುಸ್ತಕ ಮಾರುಕಟ್ಟೆಯ ವೆಚ್ಚ ಉಳಿತಾಯಕ್ಕೆ ಮಾಡಬೇಕಿರೋ ಸೂಚಿತ ಅಂಶಗಳ ಬಗ್ಗೆ ವರದಿಯಲ್ಲಿ ವಿಸ್ತ್ರತವಾಗಿ ಮಾಹಿತಿ ನೀಡಲಾಗಿದೆ”.

ಅನುವಾದಕರು: ಆರ್​​.ಪಿ.