ಉಚಿತ ಯೋಗ ಕಲಿಸುವ"ಪ್ರಿಯಾ"ಗುರು..!

ಟೀಮ್​ ವೈ.ಎಸ್​. ಕನ್ನಡ

ಉಚಿತ ಯೋಗ ಕಲಿಸುವ"ಪ್ರಿಯಾ"ಗುರು..!

Thursday March 16, 2017,

2 min Read

ಇವತ್ತಿನ ಯುವ ಮನಸುಗಳು ದುಡಿಮೆಗಿಂತಲೂ ಹೆಚ್ಚು ವ್ಯಕ್ತಿತ್ವ ಬೆಳವಣಿಗೆಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇಂದು ಉದ್ಯೋಗಗಳಿಗೆ ಕೊರತೆಯಿಲ್ಲ. ಸ್ಟಾರ್ಟ್​ ಅಪ್​ಗಳಿಂದಲೇ ಬದುಕು ಗೆಲ್ಲುವಷ್ಟು ಅವಕಾಶಗಳಿವೆ. ಜಾಗತೀಕವಾಗಿ ಇಷ್ಟೆಲ್ಲಾ ಅವಕಾಶವಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಒಳ ಮನಸಿನ ಗುರಿಯನ್ನು ಸಾಧಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಅದರಲ್ಲೂ ಯಾವುದೇ ಹಣದ ಅಪೇಕ್ಷೆ ಇಲ್ಲದೇ ಸಾವಿರಾರೂ ಯುವ ಮನಸುಗಳು ಉಚಿತವಾಗಿ ಯೋಗವನ್ನು ಕಲಿಸುವ ಕಾಯಕದಲ್ಲಿ ಮುಂದಾಗಿದ್ದಾರೆ. ಅದರಲ್ಲಿ ಎಂ.​ಕಾಂ. ಪಧವೀಧರೆ ಪ್ರಿಯಾ ಕೂಡ ಒಬ್ಬರು

image


ಮೂಲತಃ ಬೆಂಗಳೂರಿನವರಾದ ಪ್ರಿಯಾ ಎಂ.ಕಾಂ. ಪದವಿ ಮುಗಿಸಿದ್ದಾರೆ. ಮದುವೆ ನಂತರ ಕೆಲಸ ಮಾಡಲು ಸಾಧ್ಯವಾಗದ ಕಾರಣ ಗೃಹಿಣಿಯಾಗಿದ್ದರು. ದಿನಗಳು ಕಳೆಯುತ್ತಿದ್ದವು. ಬಾಲ್ಯದಲ್ಲಿ ಕಲಿತಿದ್ದ ಯೋಗವನ್ನಾದರೂ ಮುಂದುವರೆಸೋಣ ಅನಿಸಿದಾಗ, ಯೋಗ ಸೆಂಟರ್​ ಹುಡುಕಲು ಪ್ರಾರಂಭಿಸಿದರು. ಆದರೆ ಅವರು ವಾಸಿಸುತ್ತಿದ್ದ ಸ್ಥಳದಲ್ಲಿ ಎಲ್ಲೂ ಯೋಗ ಕ್ಲಾಸ್​ ಇರಲಿಲ್ಲ. ತಾವು ಉಚಿತವಾಗಿ ಕಲಿತ ಯೋಗವನ್ನು ಇತರರಿಗೂ ಉಚಿತವಾಗಿ ಕಲಿಸಬೇಕೆಂಬ ಹಂಬಲ ಅವರೊಳಗಿತ್ತು.

ಇದನ್ನು ಓದಿ: ನಿಮ್ಮ ಮನೆಗೆ ಮರಳು, ಇಟ್ಟಿಗೆ ಬೇಕಿಲ್ಲ ಇದೊಂದಿದ್ರೆ ಸಾಕು!

ಇದೇ ಸಮಯದಲ್ಲಿ ಬೆಂಗಳೂರಿನ ವಿಜಯ ನಗರದ ತಮ್ಮ ಮನೆಯ ಬಳಿಯಲ್ಲಿ ಬಡಾವಣೆಯೊಂದರಲ್ಲಿ ಉಚಿತವಾಗಿ ಯೋಗ ತರಗತಿ ಆರಂಭಿಸಿದ್ರು. ಆರಂಭದಲ್ಲಿ 10 ಜನರಿದ್ದ ಯೋಗ ತರಗತಿ ಬರು ಬುರುತ್ತಾ ಸಂಪೂರ್ಣ ಯೋಗ ಹಾಲ್​ ಪೂರ್ತಿ​ ತುಂಬಿಕೊಂಡುಬಿಟ್ಟಿತ್ತು.

image


ಪ್ರಿಯಾ ಆತ್ಮಪೂರ್ವಕವಾಗಿ ತಮ್ಮನ್ನು ಈ ಸೇವೆಯಲ್ಲಿ ತೊಡಗಿಸಿಕೊಂಡರು. ವಯಸ್ಸಾದವರು, ಅನಾರೋಗ್ಯದಿಂದ ಬಳಲುವವರು ಎಲ್ಲರನ್ನು ಗಮನದಲ್ಲಿಟ್ಟುಕೊಂಡು ನಿಧಾನವಾಗಿ ಕಲಿಸಲು ಆರಂಭಿಸಿದ್ರು. 45 ದಿನಗಳಲ್ಲಿ ಮುಗಿಯುವ ಕೋರ್ಸ್​ 8 ತಿಂಗಳ ತನಕ ನಡೆಯುತ್ತಿದೆ ಅಂದ್ರೆ ಅಲ್ಲಿ ಪ್ರಿಯಾ ಅವರ ಡೆಡಿಕೇಷನ್ ಗಮನಿಸಬೇಕಾಗುತ್ತದೆ.

" ಆರಂಭದಲ್ಲಿ ನಾನು ತರಗತಿಗಳನ್ನು ಆರಂಭಿಸಿದಾಗ ಯಶಸ್ಸು ಪಡೆಯುತ್ತೇನೆ ಅನ್ನುವ ನಂಬಿಕೆ ಇತ್ತು. ಆದ್ರೆ ಇವತ್ತು ನನಗೆ ಸಾಧನೆ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಇಲ್ಲಿ ಎಲ್ಲರೂ ಯೋಗದ ಹೆಸರಿನಲ್ಲಿ ಒಂದಾಗುತ್ತಿದ್ದಾರೆ. ನಾನು ಕೂಡ ಅವರೊಂದಿಗೆ ಒಂದಾಗಿ ಸಂತೋಷ ಅನುಭವಿಸುತ್ತಿದ್ದೇನೆ."
- ಪ್ರಿಯಾ, ಯೋಗ ಗುರು

ಈ 8 ತಿಂಗಳಲ್ಲಿ ಪ್ರಿಯಾರ ಯೋಗ ತರಬೇತಿಯಿಂದ ಫಲಿತಾಂಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಂಡಿ ನೋವು, ಕಣ್ಣು ನೋವು, ಬ್ಯಾಕ್​ ಪೇಯಿನ್​, ಮುಟ್ಟಿನ ಸಮಸ್ಯೆ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಯೋಗದ ಮೂಲಕ ಪರಿಹಾರ ಕಂಡುಕೊಂಡ ಹಲವರನ್ನು ಪ್ರಿಯಾ ಅವರ ಕ್ಲಾಸ್​ನಲ್ಲಿ ಕಾಣಬಹುದು. ಸುಮಾರು 50 ಜನ ವಿದ್ಯಾರ್ಥಿಗಳೊಟ್ಟಿಗೆ ಸೇರಿ 2 ಬಾರಿ ತಮ್ಮ ಯೋಗ ಕ್ಲಾಸ್​ನಲ್ಲಿ ಕುಂಕುಮವನ್ನು ಕುಟ್ಟಿ ಎಲ್ಲರೂ ತಯಾರಿಸಿದ್ದಾರೆ. ನವರಾತ್ರಿ ಉತ್ಸವವನ್ನು ಆಚರಿಸಿದ್ದಾರೆ. ಶಿವರಾತ್ರಿ ಹಬ್ಬದಲ್ಲಿ ಶಿವ ನಮಸ್ಕಾರ, ಸೂರ್ಯ ನಮಸ್ಕಾರ ಮಾಡಲು ಕಷ್ಟ ಪಡುತ್ತಿದ್ದ ಹಿರಿಯ ಮಹಿಳೆಯರೆಲ್ಲಾ ಸೇರಿ ರಥ ಸಪ್ತಮಿಯ ದಿವಸ 21 ಸೂರ್ಯ ನಮಸ್ಕಾರ ಮಾಡುವ ಹಂತಕ್ಕೆ ಬಂದ ಶಕ್ತಿ ಹಿಂದೆ ಪ್ರಿಯಾ ಅವರಲ್ಲಿರುವ ಗುರುವಿನ ಶಕ್ತಿಯನ್ನು ತೋರಿಸುತ್ತದೆ. ಇದಿಷ್ಟೇ ಅಲ್ಲದೇ ಕೈ ತುತ್ತಿನ ಸಾರವನ್ನು ಸಾರುವ ಮಾತೃ ಭೋಜನ ಕೂಟ ಆಯೋಜಿಸಿದ್ದಾರೆ. ಇದೆಲ್ಲವೂ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕಾಯಕಗಳಾದರೂ ಅದನ್ನು ಅಚ್ಚುಕಟ್ಟಾಗಿ ತಮ್ಮ ಸ್ವಂತಿಕೆ ಬೆರೆಸಿ ಮಾಡಿದ್ದಾರೆ ಪ್ರಿಯಾ.

image


ಇದರ ಮಧ್ಯೆ ಆರ್ಟ್​ ಮತ್ತು ಕ್ರಾಫ್ಟ್​ ಮಾಡುವ ಮೂಲಕ ತಮ್ಮೋಳಗಿನ ಕಲೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಎಂಬ್ರಾಯಿಡರಿ ಕುಸುರಿ ಕೆತ್ತನೆ ಮಾಡುತ್ತಾ ಸರಳ ಜೀವನ ನಡೆಸುತ್ತಾ, ಎಲ್ಲ ರೀತಿಯ ಸವಾಲುಗಳನ್ನು ಗೆಲ್ಲುತ್ತಾ ದೊಡ್ಡದೊಂದು ಗುರಿಯನ್ನು ಮುಟ್ಟುವ ತವಕದಲ್ಲಿದ್ದಾರೆ. ಇಷ್ಟೆಲ್ಲಾ ಅಂದುಕೊಂಡಿಲ್ಲದೇ ಆಗಿದೆ. ಡೆಡಿಕೇಷನ್ ಮತ್ತು ಪ್ರೀತಿ ಇದಕ್ಕೆಲ್ಲಾ ಕಾರಣ. ಯುವ ಮನಸುಗಳ ಆಸರೆ ಆರೋಗ್ಯಕರ ಸಮಾಜಕ್ಕೆ ಬೇಕು. ನಮ್ಮ ಭಾರತೀಯ ಪರಂಪರೆ ಉಳಿಯಬೇಕು. ಇದಕ್ಕೆ ಸಂಘದ ಕಾರ್ಯ ವೈಖರಿ ಅಳವಡಿಸಿಕೊಂಡಿದ್ದೇನೆ ಅಂತಾರೆ ಪ್ರಿಯಾ.

ಒಟ್ಟಿನಲ್ಲಿ ಏನೇ ಮಾಡಿದರು ಮನಸಿಟ್ಟು ಮಾಡಬೇಕು. ಹಣ ಮತ್ತು ಸೇವೆ ಎರಡು ಒಂದೊಂದು ರೀತಿಯ ಆತ್ಮತೃಪ್ತಿ ನೀಡುತ್ತೆ. ಅವರವರ ಬದುಕಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತೆ. ಒಟ್ಟಿನಲ್ಲಿ ಸೇವೆಯನ್ನು ಆಯ್ದುಕೊಂಡ ಪ್ರಿಯಾ ಕಾರ್ಯಲಕ ಎಲ್ಲರಿಗೂ ಸ್ಪೂರ್ತಿ ಆಗೋದ್ರಲ್ಲಿ ಎರಡು ಮಾತಿಲ್ಲ. 

ಇದನ್ನು ಓದಿ:

1. ಗಾನ ನೃತ್ಯದ "ಆರಾಧನ" ಅಪರ್ಣಾ 

2. ಹೃದಯದ ಡಾಕ್ಟರ್ ಅಲ್ಲ, ಆದ್ರೆ ಇವರೊಬ್ಬ 'ಹೃದಯವಂತ' ವೈದ್ಯ

3. ಇದು 60ರ ಅರಳುಮರಳಲ್ಲ- ಯುವಕರಿಗೆ ಮಾದರಿ ಆಗುವ ಸುಂದರ ಕಾರ್ಯ