1ವರ್ಷದಲ್ಲೇ 1 ಲಕ್ಷ ಆರ್ಡರ್ ಪೂರೈಕೆ- ಇದು ಲೇಟೆಸ್ಟ್​​​ಒನ್.ಕಾಮ್ ಕಮಾಲ್

ಟೀಮ್​​ ವೈ.ಎಸ್​​.

1ವರ್ಷದಲ್ಲೇ 1 ಲಕ್ಷ ಆರ್ಡರ್ ಪೂರೈಕೆ- ಇದು ಲೇಟೆಸ್ಟ್​​​ಒನ್.ಕಾಮ್ ಕಮಾಲ್

Tuesday October 27, 2015,

2 min Read

ಬಟ್ಟೆಯಿಂದ ಹಿಡಿದು ತರಕಾರಿವರೆಗೆ, ವಿದ್ಯುತ್ ಉಪಕರಣಗಳಿಂದ ಹಿಡಿದು ಔಷಧಗಳವರೆಗೆ, ಎಲ್ಲವೂ ಇಂದು ಆನ್‍ಲೈನ್‍ನಲ್ಲಿ ಲಭ್ಯ. ಹಾಗೇ ಪ್ರತಿದಿನ ಹೊಸ ಹೊಸ ವೇದಿಕೆಗಳು ಈ ವಲಯದಲ್ಲಿ ಸೇರ್ಪಡೆಯಾಗುತ್ತಿವೆ. ಆದ್ರೂ ಇ- ಕಾಮರ್ಸ್ ಉದ್ಯಮದ ಹಾದಿ ಸುಗಮವಲ್ಲ. ಹಲವು ಹೊಸ ಹಾಗೂ ಹಳೆಯ ಕಂಪನಿಗಳು ಲಾಭ ಗಳಿಸಲು ಶತಾಯ – ಗತಾಯ ಹೋರಾಟ ನಡೆಸುತ್ತಿವೆ.

ಲೇಟೆಸ್ಟ್​​​ ಒನ್ ತಂಡ

ಈ ಎಲ್ಲಾ ಇ-ಕಾಮರ್ಸ್ ತಾಣಗಳನ್ನು ಹೋಲಿಸಿದ್ರೆ, ಪಾಲ್ರೆಡ್ ಟೆಕ್ನಾಲಜೀಸ್‍ನ ಲೇಟೆಸ್ಟ್​​​ ಒನ್.ಕಾಮ್ ಬೇರೆ ತಾಣಗಳಿಗಿಂತ ಅದ್ಭುತ ಬೆಳವಣಿಗೆ ಕಂಡಿದೆ. 2014ರ ಜೂನ್‍ನಲ್ಲಿ ಪ್ರಾರಂಭವಾದ ಪಾಲೆಮ್ ಶ್ರೀಕಾಂತ್ ರೆಡ್ಡಿಯವರ ಲೇಟೆಸ್ಟ್​​ಒನ್.ಕಾಮ್‍ನಲ್ಲಿ, ಮೊಬೈಲ್ ಕವರ್‍ಗಳು, ಟ್ಯಾಬ್ಲೆಟ್ ಬಿಡಿಭಾಗಗಳು, ಕೇಬಲ್, ಪವರ್ ಬ್ಯಾಂಕ್, ಆಂಡ್ರಾಯ್ಡ್ ಟಿವಿ, ಸಿಸಿಟಿವಿ ಸೇರಿದಂತೆ ಮೊಬೈಲ್, ಟ್ಯಾಬ್ಲೆಟ್ ಸಂಬಂಧಿ ಉಪಕರಣಗಳು ದೊರಕುತ್ತವೆ. ವಿಶೇಷ ಅಂದ್ರೆ ಮೊಬೈಲ್ ಬಿಡಿಭಾಗಗಳಿಗಷ್ಟೇ ಸೀಮಿತವಾದ ಭಾರತದ ಏಕೈಕ ಇ-ಕಾಮರ್ಸ್ ತಾಣ ಅನ್ನೋ ಹೆಗ್ಗಳಿಕೆ ಈ ಲೇಟೆಸ್ಟ್​​ಒನ್.ಕಾಮ್‍ಗೆ ಸಲ್ಲುತ್ತದೆ.

image


‘ಲೇಟೆಸ್ಟ್​​​ಒನ್.ಕಾಮ್ ಪ್ರಾರಂಭಿಸಿದ್ದೇ ತಂತ್ರಜ್ಞಾನದ ಬಗ್ಗೆ ಸೆಳೆತವಿರುವ ಮೊಬೈಲ್ ಬಳಕೆದಾರರಿಗೆ ನೂತನ ಡಿಸೈನ್‍ಗಳು, ಮಾಡೆಲ್ಸ್, ಗ್ಯಾಡ್ಜೆಟ್ಸ್ ಹಾಗೂ ಬಿಡಿಭಾಗಗಳನ್ನು ಪೂರೈಸಲು. ನಾವು ಬೇರೆ ಕಂಪನಿಗಳಂತೆ ಎಲ್ಲಾ ವಿಭಾಗಗಳಿಗೂ ಕೈ ಹಾಕಿಲ್ಲ. ಮೊಬೈಲ್ ಮತ್ತು ಟ್ಯಾಬ್ಲೆಟ್ ಬಿಡಿಭಾಗಗಳು ಹಾಗೂ ಉಪಕರಣಗಳ ಬಳಕೆದಾರರಿಗೆ ಸೀಮಿತವಾಗಿರೋದೇ, ನಮ್ಮ ಯಶಸ್ಸಿಗೆ ಕಾರಣ’ ಅಂತಾರೆ ಲೇಟೆಸ್ಟ್​​​ಒನ್.ಕಾಮ್ ಸಂಸ್ಥಾಪಕ ನಿರ್ದೇಶಕ ಶ್ರೀಕಾಂತ್ ರೆಡ್ಡಿ. ಇನ್ನು ಕಂಪನಿಯನ್ನು ತಾಂತ್ರಿಕವಾಗಿ ಸದೃಢಗೊಳಿಸಲು ಸುಮಾರು 30 ಕೋಟಿ ರೂಪಾಯಿಯಷ್ಟು ವೆಚ್ಚ ಮಾಡಲಾಗಿದೆ. ಹಾಗೇ ಕಡಿಮೆ ಬೆಲೆಯ ಸಾಮಗ್ರಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿರುವುದರಿಂದ ನಾವು ಬೇರೆ ಇ-ಕಾಮರ್ಸ್ ವಿಭಾಗಗಳಿಂದ ವಿಭಿನ್ನ ಅಂತ ಹೇಳುವುದನ್ನೂ ಶ್ರೀಕಾಂತ್ ಮರೆಯುವುದಿಲ್ಲ.

ಲೇಟೆಸ್ಟ್​​​ಒನ್.ಕಾಮ್‍ಗೆ ಭಾರತದಾದ್ಯಂತ ಸರಿಸುಮಾರು 5 ಲಕ್ಷ ಮಂದಿ ಗ್ರಾಹಕರಿದ್ದಾರೆ. ಇದರಲ್ಲಿ ಶೇಕಡಾ 25ರಷ್ಟು ಆರ್ಡರ್‍ಗಳು ಮುಂಬೈ ಮತ್ತು ಪುಣೆ ಭಾಗದಿಂದ ಬರುತ್ತವಂತೆ. ಶೇಕಡಾ 20ರಷ್ಟು ದೆಹಲಿ- ಎನ್‍ಸಿಆರ್ ಹಾಗೂ ಶೇಕಡಾ 15ರಷ್ಟು ಬೆಂಗಳೂರಿನಿಂದ, ಉಳಿದ ಶೇಕಡಾ 40ರಷ್ಟು ಆರ್ಡರ್‍ಗಳು ದೇಶದ ಬೇರೆ ಬೇರೆ ಭಾಗಗಳಿಂದ ಬರುತ್ತವೆ.

ಸಾಧನೆಗಳು

ಪ್ರತಿದಿನ 1.50 ಲಕ್ಷದಷ್ಟು ಮಂದಿ ಲೇಟೆಸ್ಟ್​​​ಒನ್.ಕಾಮ್‍ಗೆ ಭೇಟಿ ಕೊಡ್ತಾರೆ. ವಿಶೇಷ ಅಂದ್ರೆ ಪ್ರಾರಂಭವಾದ ಮೊದಲ ವರ್ಷದ, ತಿಂಗಳೊಂದರಲ್ಲೇ ಬರೋಬ್ಬರಿ ಒಂದು ಲಕ್ಷ ಆರ್ಡರ್‍ಗಳನ್ನು ಪೂರೈಸಿದ ಖ್ಯಾತಿ ಲೇಟೆಸ್ಟ್​​​ಒನ್.ಕಾಮ್‍ಗೆ ಸಲ್ಲುತ್ತದೆ. ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 50ರಷ್ಟು ಅಭಿವೃದ್ಧಿ ಹೊಂದುತ್ತಿರುವ ಈ ಕಂಪನಿಯ ಸದ್ಯದ ತ್ರೈಮಾಸಿಕ ಅವಧಿಯ ಲಾಭ 12 ಕೋಟಿ ರೂಪಾಯಿಯಿದೆ.

ಭವಿಷ್ಯದ ಯೋಜನೆಗಳು

ಸದ್ಯ ಸ್ಥಳೀಯ ಹೂಡಿಕೆದಾರರಿಂದ 150 ಕೋಟಿ ರೂಪಾಯಿ ಹೂಡಿಕೆ ಪಡೆಯಲು ಲೇಟೆಸ್ಟ್​​​ ಒನ್.ಕಾಮ್ ಸಿದ್ಧತೆ ನಡೆಸಿದೆ. ಈ ಮೂಲಕ ವಿದೇಶಗಳಲ್ಲೂ ಕಂಪನಿಯನ್ನು ವಿಸ್ತರಿಸುವ ಯೋಜನೆ ಶ್ರೀಕಾಂತ್ ರೆಡ್ಡಿ ಅವರದು. ಇದೇನಾದರೂ ಯಶಸ್ವಿಯಾದಲ್ಲಿ ಐದು ದೇಶಗಳಲ್ಲಿ ಕಾರ್ಯಾರಂಭ ಮಾಡುವ ಮೊತ್ತ ಮೊದಲ ಭಾರತೀಯ ಕಂಪನಿ ಅನ್ನೋ ಹೆಗ್ಗಳಿಕೆಗೆ ಲೇಟೆಸ್ಟ್​​​ಒನ್.ಕಾಮ್ ಪಾತ್ರವಾಗಲಿದೆ.

ಈ ವಲಯದಲ್ಲಿ ಬೆಳೆಯಲು ಅದ್ಭುತವಾದ ಅವಕಾಶಗಳಿವೆ. 20 ಸಾವಿರ ಕೋಟಿಗೂ ಮೀರಿದ ದೊಡ್ಡ ಮಾರುಕಟ್ಟೆಯಿದೆ. ಆದ್ರೆ ಈಗಿರುವ ಮಾರುಕಟ್ಟೆ ಕೇವಲ 500 ಕೋಟಿ ರೂಪಾಯಿಯಷ್ಟು ಬಳಕೆಯಾಗುತ್ತಿದೆಯಷ್ಟೇ. ಇನ್ನು ತಮ್ಮ ಕಂಪನಿಯ ಬೆಳವಣಿಗೆ ಕುರಿತು ಮಾತನಾಡುವ ಶ್ರೀಕಾಂತ್ ರೆಡ್ಡಿ, ‘ನಮ್ಮ ಕಂಪನಿಯ ಮೌಲ್ಯ ಇನ್ನು ಮೂರು ವರ್ಷಗಳಲ್ಲಿ 250 ಕೋಟಿಯಾಗುವ ಎಲ್ಲ ನಿರೀಕ್ಷೆಗಳೂ ಇವೆ’ ಅಂತಾರೆ.

‘ಅಲೆಕ್ಸಾದಲ್ಲಿ ನಮ್ಮ ಲೇಟೆಸ್ಟ್​​​ಒನ್.ಕಾಮ್ ಭಾರತದ ಆನ್‍ಲೈನ್ ಕಂಪನಿಗಳಲ್ಲಿ 1400ನೇ ಸ್ಥಾನದಲ್ಲಿದೆ. ಇನ್ನು ಪ್ರತಿ ತಿಂಗಳು ನಮಗೆ 1 ಲಕ್ಷ ಆರ್ಡರ್‍ಗಳು ಬರುತ್ತಿದ್ದು, ವೆಬ್‍ಸೈಟ್‍ಗೆ ಭೇಟಿ ನೀಡುವವರ ಸಂಖ್ಯೆ 50 ಲಕ್ಷದಷ್ಟಿದೆ. ಹಾಗೇ ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ 10 ಲಕ್ಷಕ್ಕಿಂತ ಹೆಚ್ಚು ಗ್ರಾಹಕರಿಗೆ ನಾವು ಉತ್ತಮ ಸೇವೆ ನೀಡಿದ್ದೇವೆ. ಇದನ್ನೆಲ್ಲಾ ನೋಡಿದ್ರೆ ಈ ವಲಯದಲ್ಲಿ ನಮಗೆ ಯಾವುದೇ ದೊಡ್ಡ ಪ್ರತಿಸ್ಪರ್ಧಿ ಇಲ್ಲ ಅನ್ನೋದು ತಿಳಿಯುತ್ತೆ’ ಅಂತ ಗೆಲುವಿನ ನಗೆ ಬೀರ್ತಾರೆ ಪೇಲಮ್ ಶ್ರೀಕಾಂತ್ ರೆಡ್ಡಿ.