50 ರೂಪಾಯಿಗೆ ಸಿಗಲಿದೆ ಧ್ವನಿ ಪೆಟ್ಟಿಗೆ: ಪ್ರಾಯೋಗಿಕ ಪರೀಕ್ಷೆ ಯಶಸ್ವಿ

ಉಷಾ ಹರೀಶ್​

0

ಮನುಷ್ಯನಿಗೆ ಮಾತೆ ಬಂಡವಾಳ ಅದು ನಿಂತು ಹೋದರೆ ಆತನ ಜಂಘಾಬಲವೇ ನಿಂತು ಹೋದಂತಾಗುತ್ತದೆ. ಹಾಗೆ ಮಾತು ನಿಂತುಹೋಗುವುದು ಸಾಮಾನ್ಯವಾಗಿ ಗಂಟಲು ಕ್ಯಾನ್ಸರ್ ಬಂದಾಗ. ಇದು ಬಂದ ಕೂಡಲೇ ಮೊದಲು ತೊಂದರೆಯಾಗುವುದು ನಮ್ಮ ಧ್ವನಿ ಪೆಟ್ಟಿಗೆಗೆ. ಕೆಲವು ಬಾರಿ ಧ್ವನಿ ಪೆಟ್ಟಿಗೆ ಸಂಪೂರ್ಣವಾಗಿ ಕಳೆದುಕೊಳ್ಳಬೇಕಾಗುತ್ತದೆ. ಆದರೆ ಶಸ್ತ್ರಚಿಕಿತ್ಸೆ ಮೂಲಕ ಧ್ವನಿ ಪೆಟ್ಟಿಗೆ ಅಳವಡಿಸಿಕೊಂಡು ಮಾತನಾಡಬಹುದು.

ಹಾಗೆ ಗಂಟಲು ಕ್ಯಾನ್ಸರ್​ನಿಂದ ಧ್ವನಿ ಪೆಟ್ಟಿಗೆ ಕಳೆದುಕೊಂಡವರಿಗೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ ಸಾವಿರಾರು ರೂಪಾಯಿ ಆಗುತ್ತಿದ್ದ ಧ್ವನಿ ಪೆಟ್ಟಿಗೆ ಇನ್ನು ಮುಂದೆ ಕೇವಲ 50 ರೂ.ಗೆ ಲಭಿಸಲಿದೆ. ಇದನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತೆ ಮಾತನಾಡುವ ಅವಕಾಶ ತಮ್ಮದಾಗಿಸಿಕೊಳ್ಳಬಹುದು.

ವಿದೇಶಗಳ ಧ್ವನಿ ಪೆಟ್ಟಿಗೆ ಇದೀಗ ಬೆಂಗಳೂರಿನಲ್ಲಿ

ವಿದೇಶಗಳಿಂದ ನಗರಕ್ಕೆ ಆಮದಾಗುತ್ತಿದ್ದ ಈ ಧ್ವನಿಪೆಟ್ಟಿಗೆಗಳು ಇನ್ನು ಬೆಂಗಳೂರಿನಲ್ಲೇ ಸಿಗಲಿವೆ.

ಗಂಟಲು ಕ್ಯಾನ್ಸರ್ ಸಮಸ್ಯೆಯಿಂದ ಬಳಲಿ ತಮ್ಮ ಧ್ವನಿಯನ್ನು ಕಳೆದುಕೊಂಡವರು ಈ ಮೊದಲು ಸಾವಿರಗಟ್ಟಲೆ ವ್ಯಯ ಮಾಡಬೇಕಿತ್ತು. ಆದರೆ ಬೆಂಗಳೂರಿನ ವೈದ್ಯರೊಬ್ಬರು ಹೊಸ ಮಾದರಿಯ ಧ್ವನಿ ಪೆಟ್ಟಿಗೆಯನ್ನು ಕಂಡು ಹಿಡಿದು ಅದನ್ನು ರೋಗಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅತೀ ಕಡಿಮೆ ಬೆಲೆಗೆ ಸಿಗುವಂತೆ ಮಾಡುತ್ತಿದ್ದಾರೆ.

ಎಸ್​​ಸಿಜೆ ಆಸ್ಪತ್ರೆಯ ವೈದ್ಯ ಡಾ.ವಿಶಾಲ್ರಾವ್ ಮತ್ತವರ ಸ್ನೇಹಿತರು ಸೇರಿಕೊಂಡು ಇಂತಹ ಒಳ್ಳೆ ಕಾರ್ಯಕ್ಕೆ ಕೈಹಾಕಿದ್ದಾರೆ.

ಬೀಡಿ, ಸಿಗರೇಟು ಸೇವನೆ, ಗುಟ್ಕಾ ಸೇವನೆಯಂತಹ ದುಶ್ಚಟಗಳಿಂದ ಗಂಟಲು ಕ್ಯಾನ್ಸರ್​ನಂತಹ ಮಹಾಮಾರಿ ಬರುತ್ತದೆ ಇಂಥವರು ಶಸ್ತ್ರಚಿಕಿತ್ಸೆ ಮೂಲಕ ಧ್ವನಿಪೆಟ್ಟಿಗೆ ಅಳವಡಿಸಿಕೊಳ್ಳಲು ಈ ಹಿಂದೆ 30ರಿಂದ 35 ಸಾವಿರ ಹಣ ನೀಡಬೇಕಿತ್ತು. ಆದರೆ ಈಗ ಅದನ್ನು ಇಲ್ಲಿಯೇ ತಯಾರಿಸಿದ್ದು, 50 ರೂ.ಗೆ ನೀಡಲಾಗುತ್ತಿದೆ.

ಪ್ರಾಯೋಗಿಕವಾಗಿ ಮೂರು ರೋಗಿಗಳಿಗೆ ಅಳವಡಿಕೆ

ಪ್ರಾಯೋಗಿಕವಾಗಿ ಈಗಾಗಲೇ ಮೂವರು ರೋಗಿಗಳಿಗೆ ಈ ಪೆಟ್ಟಿಗೆ ಅಳವಡಿಸಿ ಚಿಕಿತ್ಸೆ ನೀಡಲಾಗಿದ್ದು, ಅವರ ಧ್ವನಿ ಮೊದಲಿನಂತೆಯೇ ಇದೆ. ಅವರಿಗೆ ವರ್ಷದ ಹಿಂದೆ ಚಿಕಿತ್ಸೆ ನೀಡಲಾಗಿದ್ದು, ಮತ್ತೆ ಆ ಪೆಟ್ಟಿಗೆ ತೆಗೆದು ಪುನಃ ಹೊಸ ಪೆಟ್ಟಿಗೆ ಅಳವಡಿಸಲಾಗಿದೆ,’’ಎಂದರು.

6 ತಿಂಗಳಿಗೊಮ್ಮೆ ಬದಲು

ಈ ಧ್ವನಿಪೆಟ್ಟಿಗೆಯನ್ನೂ ಸಹ 6 ತಿಂಗಳಿಗೊಮ್ಮೆ ಬದಲಿಸಬೇಕು. ಈ ಚಿಕಿತ್ಸೆಗೆ 20 ಸಾವಿರಕ್ಕೂ ಅಧಿಕ ಖರ್ಚಾಗುತ್ತದೆ. ಹಾಗಾಗಿ ಪೆಟ್ಟಿಗೆ ಅಳವಡಿಕೆ ಹಾಗೂ ಚಿಕಿತ್ಸೆ ಎಲ್ಲಾ ಸೇರಿ 5 ಸಾವಿರದೊಳಗೆ ಚಿಕಿತ್ಸೆ ನೀಡಲು ಪರಿಶೀಲನೆ ನಡೆಸಲಾಗುತ್ತಿದೆ. ಧ್ವನಿಪೆಟ್ಟಿಗೆ ಸಮಸ್ಯೆಯಿಂದ ಬಳಲುತ್ತಿರುವ 35 ಮಂದಿ ಈಗಾಗಲೇ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ಅವರ ವಿವರ ಪಡೆದಿರುವ ಡಾ ವಿಶಾಲ್ ರಾವ್ ಅವರ ತಂಡ ಈ ಸಂಬಂಧ ಆರೋಗ್ಯ ಇಲಾಖೆಗೆ ಮಾಹಿತಿ ಕಳುಹಿಸಿ, ಹೆಚ್ಚಿನ ಸಂಶೋಧನೆ ನಡೆಸಿ, ಕಡಿಮೆ ದರದಲ್ಲಿ ಈ ಚಿಕಿತ್ಸೆಯನ್ನು ಕೈಗೆಟಕುವಂತೆ ಮಾಡುವ ಗುರಿ ಹೊಂದಿದ್ದಾರೆ. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ವಿದೇಶಿ ಧ್ವನಿಪೆಟ್ಟಿಗೆಯಂತೆಯೇ ಇದು ಸಹ ಉತ್ತಮವಾಗಿ ಕೆಲಸ ಮಾಡುತ್ತದೆ. ರೋಗಿಗಳು ಧ್ವನಿಯನ್ನು ಮರಳಿ ಪಡೆಯಬಹುದು.

ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎನ್ನುವುದನ್ನು ಡಾ. ವಿಶಾಲ್ರಾವ್ ಖಚಿತ ಪಡಿಸಿದ್ದಾರೆ.

ಈ ರೀತಿ ಸಮಸ್ಯೆ ಇದ್ದವರು ಚಿಕಿತ್ಸೆ ಅಥವಾ ಮಾಹಿತಿಗಾಗಿ ದೂ.ಸಂ.99014 12139 ಸಂಪರ್ಕಿಸಬಹುದು

ಐದು ವರ್ಷಗಳ ಹಿಂದೆ ಗಂಟಲು ಕ್ಯಾನ್ಸರ್​ನಿಂದ ಧ್ವನಿಪೆಟ್ಟಿಗೆ ತೆಗೆಯಲಾಗಿತ್ತು. ಒಂದೆರಡು ಬಾರಿ 30 ಸಾವಿರ ನೀಡಿ ಧ್ವನಿಪೆಟ್ಟಿಗೆ ಖರೀದಿಸಿ ಚಿಕಿತ್ಸೆ ಮಾಡಿಸಿಕೊಂಡಿದ್ದೆ. ಡಾ. ವಿಶಾಲ್ ರಾವ್ ಅವರು ಈ ಬಾರಿ ಕಡಿಮೆ ವೆಚ್ಚದಲ್ಲಿ ಧ್ವನಿಪೆಟ್ಟಿಗೆ ಅಳವಡಿಸಿದ್ದು, ಮೊದಲಿನಂತೆ ಧ್ವನಿ ಇದ್ದು, ಯಾವುದೇ ತೊಂದರೆ ಇಲ್ಲ.


ಇದನ್ನು ಓದಿ...

1. ಕಲಾವಿದೆ, ಕ್ಯುರೇಟರ್ ಮತ್ತು ಉದ್ಯಮಿ : ಕಲೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬಹುಮುಖ ಪ್ರತಿಭೆ

2. ಸ್ವಂತ ಅನುಭವವೇ ಉದ್ಯಮಕ್ಕೆ ದಾರಿ.. ಇದು ಪಿಕ್ ಮೈ ಲಾಂಡ್ರಿ ಸ್ಟೋರಿ.. !

3. ಹೆಲ್ತಿ ಆರೋಗ್ಯಕ್ಕೆ ಟೆಸ್ಟಿ ಜ್ಯೂಸ್.. ಜ್ಯೂಸ್​​​ಗೆ ಸಾಥ್ ನೀಡೋಕೆ ಹೆಲ್ತಿ ಬೀಡಾ