ಸ್ಟಾರ್ಟ್ ಅಪ್ ಕಂಪನಿಗಳ ಸೀಕ್ರೆಟ್​​

ಟೀಮ್​ ವೈ.ಎಸ್​. ಕನ್ನಡ

0


ಯಾವುದೇ ಒಂದು ಉದ್ಯಮವನ್ನು ಆರಂಭಿಸುವ ಬಗ್ಗೆ ನನ್ನ ಆಲೋಚನೆಗಳು ಹಾಗೂ ಅದನ್ನು ಆರಂಭಿಸುವಾಗ ಆಗುವಂತಹ ಸಾಮಾನ್ಯ ತಪ್ಪುಗಳ ಬಗ್ಗೆ ಹಂಚಿಕೊಳ್ಳುತ್ತಿದ್ದೇನೆ. ಆದರೆ ನಾವೇನೇ ಮಾಡಿದರೂ, ಅದರಲ್ಲಿ ಯಶಸ್ಸು ಗಳಿಸುವ ಖಾತರಿ ಇರುವುದಿಲ್ಲ. ಆರಂಭದಲ್ಲೇ ಸೋಲನುಭವಿಸುವ ಕಂಪನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ-ಇದರರ್ಥ ಸ್ಥಾಪಕರು ಅಸಮರ್ಥರು ಎಂದಲ್ಲ, ಬಹುತೇಕ ಬಾರಿ ಮಾರ್ಕೆಟ್‍ನ ಸನ್ನಿವೇಶಗಳು ಫೇವರೇಬಲ್ ಆಗಿರುವುದಿಲ್ಲ.

ಒಂದು ಉದ್ಯಮವನ್ನು ಮುಚ್ಚಿದ ನಂತರ ಆರಂಭಿಕ ಸಂಸ್ಥಾಪಕ ಮಾಡಬೇಕಾದುದೇನು?

ಕೆಲಸಕ್ಕೆ ಸೇರಿಕೊಳ್ಳೋದಾ? ದುರದೃಷ್ಟ ಎಂದರೆ ಇದೇ ಅಲ್ಲವೇ. ಆರಂಭಿಕ ಉದ್ಯಮದಲ್ಲಿನ ಅನುಭವ ಸಾಂಪ್ರದಾಯಿಕ ಕೆಲಸಗಳಿಗೆ ಹೆಚ್ಚು ಸಹಾಯ ಆಗೋದಿಲ್ಲ. ಕಾರ್ಪೊರೇಟ್ ಕೆಲಸದ ಕೆಟ್ಟ ಅಂಶ ಎಂದರೆ ಅಲ್ಲಿ ಸಂತೋಷ ಎಂಬುದೇ ಇರುವುದಿಲ್ಲ.

ಮತ್ತೊಂದು ಆರಂಭಿಕ ಉದ್ಯಮ ಆರಂಭಿಸೋದಾ? ಆದರೆ ಅದು ಅಷ್ಟು ಸುಲಭವಲ್ಲ. ಅದಕ್ಕೆ ನಿಮಗೆ ಆರಂಭಿಕ ಬಂಡವಾಳ, ತಂಡ ಮತ್ತು ಮುಖ್ಯವಾಗಿ ಮಾರುಕಟ್ಟೆಗೆ ಹೊಂದುವಂತಹ ಒಂದು ಉತ್ಪನ್ನವನ್ನು ಗುರುತಿಸಲು ಸಾಕಷ್ಟು ಸಮಯ ಬೇಕು. ಈ ಎಲ್ಲಾ ಸಂಪನ್ಮೂಲಗಳೂ ನಿಮ್ಮಲ್ಲಿದ್ದರೆ ನೀವು ಪ್ರಸ್ತುತದ ಉದ್ಯಮವನ್ನು ಮುಚ್ಚುವ ಅಗತ್ಯವೇ ಇಲ್ಲ. ನೀವು ಸದಾ ಮುಂದಿರುತ್ತೀರಿ.

ಕಡೆಯ ಆಯ್ಕೆಯೆಂದರೆ, ಮತ್ತೊಂದು ಆರಂಭಿಕ ಉದ್ಯಮದಲ್ಲಿ ಸಹ ಸಂಸ್ಥಾಪಕನಾಗಿ ಅಥವಾ ಆರಂಭಿಕ ಉದ್ಯೋಗಿಯಾಗಿ ಸೇರಿಕೊಂಡು ನಿಮ್ಮ ಹಿಂದಿನ ಆರಂಭಿಕ ಉದ್ಯಮದ ಮೌಲ್ಯಗಳನ್ನು ನಿಮ್ಮ ಅನುಭವಗಳೊಂದಿಗೆ ಸೇರಿಸಿ ಕಾರ್ಯ ನಿರ್ವಹಿಸಬಹುದು.

ಯಶಸ್ವಿ ಉದ್ಯಮದ ಸೀಕ್ರೆಟ್​​

ಮಾರ್ಫಿಯಸ್ ಅಕ್ಸಲೆರೇಟರ್‍ನ ಸ್ಥಾಪಕ ಸಮೀರ್ ಗುಗ್‍ಲಾನಿ ಅವರು ಒಂದು ವೀಡಿಯೋದಲ್ಲಿ ಸ್ವಂತ ಉದ್ಯಮವನ್ನು ಆರಂಭಿಸುವ ಹಾಗೂ ಅಭಿವೃದ್ಧಿಸುವ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಅವರು ಕೆಲವು ಅನಿವಾರ್ಯ ಕಾರಣಗಳಿಂದ ತಮ್ಮ ಸುತ್ತಮುತ್ತಲಿನ ಉದ್ಯಮಿಗಳು ತಮ್ಮ ಸಂಸ್ಥೆಗಳನ್ನು ಮುಚ್ಚಿದ ಬಗ್ಗೆ ಹಾಗೂ ನಂತರ ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಯಶಸ್ವಿಯಾಗಿರುವ ಬಗ್ಗೆ ಉತ್ತಮ ಉದಾಹರಣೆಗಳನ್ನು ನೀಡಿದ್ದಾರೆ.

ದಿ ಮಾರ್ಫಿಯಸ್ ಗ್ಯಾಂಗ್‍ನ ಭಾಗವಾಗಿ, ನಿಖಿಲೇಶ್ ಅವರು, ಬಹಳಷ್ಟು ಉದ್ಯಮಿಗಳು ತಮ್ಮ ಸಾಹಸೋದ್ಯಮದಲ್ಲಿ ಸೋತಿರುವುದನ್ನು ಕಂಡಿದ್ದಾರೆ. ಎರಡೂವರೆ ವರ್ಷಗಳು ಚಾಲ್ತಿಯಲ್ಲಿದ್ದ ಅವರ ಪ್ರಥಮ ಆರಂಭಿಕ ಉದ್ಯಮ `ಸಿವಿಭೇಜೋ' ಮುಚ್ಚಿದ ಅವರು, ಮಾರ್ಫಿಯಸ್‍ನಲ್ಲಿ ತಮ್ಮ ಬೆಳವಣಿಗೆಯನ್ನು ಕಂಡರು. ಆದರೆ ಸ್ಟಾರ್ಟ್‍ಅಪ್‍ನ ನೇಮಕಾತಿಯಿಂದಾಗಿ ಅವರು ಬಹಳಷ್ಟು ಅನುಭವ ಪಡೆದರು. ಇತರ ಮಾಜಿ ಸಂಸ್ಥಾಪಕರುಗಳು ಮತ್ತೊಂದು ಉದ್ಯಮದಲ್ಲಿ ಎರಡನೇ ಅವಕಾಶ ಪಡೆಯುವಲ್ಲಿ ಮುತುವರ್ಜಿ ವಹಿಸಿದರು.

"ನಾನು ನನ್ನ ಸ್ಟಾರ್ಟ್‍ಅಪ್ ಅನ್ನು ಕ್ಲೋಸ್ ಮಾಡಿದ ನಂತರ ಏನು ಮಾಡೋದು ಅಂತಾನೇ ಗೊತ್ತಾಗಲಿಲ್ಲ. ನಾನು ಸಮೀರ್(ಸಹಸಂಸ್ಥಾಪಕ, ಮಾರ್ಫಿಯಸ್ ಗ್ಯಾಂಗ್) ಜೊತೆ ಚರ್ಚಿಸಿದೆ. ಅವರು ನನಗೆ ಗ್ಯಾಂಗ್ ಕಂಪನಿಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡುವ ಮೂಲಕ ಸಹಾಯ ಮಾಡುವುದಕ್ಕೆ ಹೇಳಿದರು. ಹಾಗೇ ಅವರಿಗೆ ಮಾಜಿ ಸಂಸ್ಥಾಪಕರು ಮತ್ತು ಮತ್ತೊಂದು ಆರಂಭಿಕ ಉದ್ಯಮದಲ್ಲಿ ಅವರ ಪಾತ್ರ, ಮಹತ್ವಗಳ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಿದ್ರು. ತಕ್ಷಣ ನಾನು ಸಂಸ್ಥಾಪಕರುಗಳು ಮತ್ತೊಂದು ಸ್ಟಾರ್ಟ್​ಅಪ್‍ಗೆ ಸೇರಲು ಸಹಾಯವಾಗುವಂತೆ ಉತ್ತಮ ವೇದಿಕೆ ಕಲ್ಪಿಸಲು ಒಪ್ಪಿದೆ. ನಮಗೆ `ಫೇಲ್ಡ್ ಎಂಟರ್‍ಪ್ರಿನ್ಯೂರ್ಸ್' ಎಂಬ ಟರ್ಮ್ ಇಷ್ಟವಾಗೋದಿಲ್ಲ. ಹಾಗಾಗಿ ನಾವು ಅವರನ್ನು `RIP ಸ್ಟಾರ್ಟ್​​ಅಪ್ಸ್​​' ಫೌಂಡರ್ಸ್​ ಎಂದು ಕರೆಯಲು ಆರಂಭಿಸಿದೆವು." ಎನ್ನುತ್ತಾರೆ ನಿಖಿಲೇಶ್.

ಹೈರಿಂಗ್ ಡಿಕೋಡರ್

ಸಾಮಾನ್ಯವಾಗಿ ಸಹಸಂಸ್ಥಾಪಕ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಒಂದು ಸಂಸ್ಥೆಗೆ 2 ರಿಂದ 4 ತಿಂಗಳು ಬೇಕಾಗುತ್ತದೆ. ಆದರೂ ಸಂಸ್ಥಾಪಕರುಗಳ ನಿರೀಕ್ಷೆಗೆ ಹೊಂದುವ ಅಭ್ಯರ್ಥಿ ಸಿಗುತ್ತಾರೆ ಎಂಬ ಖಾತ್ರಿ ಇರೋದಿಲ್ಲ. ಯಾಕಂದ್ರೆ ಇದು ಯಾವುದೇ ಹಣ ಅಥವಾ ಆಮಿಷ ತೋರಿಸಿದರೆ ಆಗುವಂತಹ ಕೆಲಸವಲ್ಲ.

ಒಬ್ಬ ಸಹ ಸಂಸ್ಥಾಪಕನ ನೇಮಕಾತಿಗೆ ಬಹಳಷ್ಟು ವೇದಿಕೆಗಳು ಹಾಗೂ ಗ್ರೂಪ್‍ಗಳಿದ್ದರೂ ಹೊರಗಿನ ನೆಟ್‍ವರ್ಕ್‍ನಲ್ಲಿ ಒಬ್ಬ ಸೂಕ್ತ ಸಹಸಂಸ್ಥಾಪಕನನ್ನು ಹುಡುಕುವುದು ಬಹಳಷ್ಟು ಮಂದಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಎಷ್ಟೋ ಮಂದಿ ಇದರಲ್ಲಿ ಯಶಸ್ವಿಯಾಗಿಲ್ಲ. ಸಹಸಂಸ್ಥಾಪಕರನ್ನು ಹುಡುಕುವಲ್ಲಿ ವೇದಿಕೆಗಳು ಹಾಗೂ ಫೇಸ್‍ಬುಕ್ ಗ್ರೂಪ್‍ಗಳು ಸಹಸಂಸ್ಥಾಪಕನಾಗಿ ಒಂದು ಸಂಸ್ಥೆಗೆ ಸೇರಲಿಚ್ಛಿಸುವವರೊಂದಿಗೆ ಸಂಪರ್ಕ ಕಲ್ಪಿಸುತ್ತದೆಯಾದರೂ ಇದರಿಂದ ಸೂಕ್ತ ವ್ಯಕ್ತಿಯನ್ನು ಆರಿಸುವಲ್ಲಿ ಸಹಾಯವಾಗುವುದಿಲ್ಲ. ಈ ಕಾರ್ಯ ಸ್ವಯಂಚಾಲಿತವಲ್ಲ, ಇದಕ್ಕೆ ನೇಮಕಾತಿ ಪ್ರಕ್ರಿಯೆಯ ಅನುಭವವೂ ಅವಶ್ಯ.

ನಿಖಿಲೇಶ್ ಅವರು ಮಾರ್ಷಿಯಸ್ ನೆಟ್‍ವರ್ಕ್ ಅಲ್ಲದೆ, ಇತರ ಕಂಪನಿಗಳಿಗೂ ನೇಮಕಾತಿ ವಿಷಯವಾಗಿ ಸಹಾಯ ಮಾಡಲು ಅವರ ಕಾರ್ಯ ವಿಸ್ತರಿಸಿ, ಅದಕ್ಕೆ `ಹೈರಿಂಗ್ ಡಿಕೋಡರ್' ಎಂದು ಹೆಸರಿಟ್ಟಿದ್ದಾರೆ. "ಆರಂಭಿಕ ಉದ್ಯಮವನ್ನು ಆರಂಭಿಸಲು ಗಂಭೀರ ಚಿಂತನೆ ನಡೆಸುವವರಿಗೆ ನಾನು ಸಹಾಯ ಮಾಡಬೇಕೆಂದಿದ್ದೇನೆ. ಹಾಗಾಗಿ ಕೇವಲ ಮಾರ್ಫಿಯಸ್​​ ಗ್ಯಾಂಗ್ ಕಂಪನಿಗಳಿಗೆ ಮಾತ್ರ ನನ್ನ ಕಾರ್ಯವನ್ನು ಸೀಮಿತಗೊಳಿಸಬೇಕೆಂದಿಲ್ಲ. ನಾನು ಆರಂಭಿಕ ಉದ್ಯಮಗಳ ಸಂಸ್ಥಾಪಕರುಗಳನ್ನು ಭೇಟಿ ಮಾಡುವಲ್ಲಿ ಹಾಗೂ ನೂತನ ಕಂಪನಿಗಳಿಗೆ ನೆರವಾಗಲಿಚ್ಛಿಸುವ ವ್ಯಕ್ತಿಗಳೊಂದಿಗೆ ಮಾತನಾಡುವುದನ್ನು ಆನಂದಿಸುತ್ತೇನೆ. ಹೀಗಾಗಿ ಯಾವುದೇ ಶ್ರಮವಿಲ್ಲದೆ ಹೈರಿಂಗ್ ಡಿಕೋಡರ್ ಸಂಸ್ಥೆ ಆರಂಭವಾಯಿತು" ಎನ್ನುತ್ತಾರೆ ನಿಖಿಲೇಶ್.

ನಿಖಿಲೇಶ್ ಅವರು ಒಂದು ಸಂಸ್ಥೆಗೆ ಸಹಸಂಸ್ಥಾಪಕ ಅಥವಾ ಹಿರಿಯ ಅಧಿಕಾರಿಯ ನೇಮಕಾತಿ ಪ್ರಕ್ರಿಯೆಯಲ್ಲಿ ಈ ಕೆಳಗಿನ ಅಂಶಗಳನ್ನು ಅನುಸರಿಸುತ್ತಾರೆ:

ಆರಂಭಿಕ ಸಂಸ್ಥೆ ಹಾಗೂ ಸಂಸ್ಥಾಪಕರ ಬಗ್ಗೆ ವಿಶ್ವಾಸಾರ್ಹತೆ ನಿರ್ಮಿಸುವುದು.

ವಿಶ್ವದೊಂದಿಗಿನ ಸಂಪರ್ಕ ಸುಧಾರಣೆ

ಉನ್ನತ ಹುದ್ದೆಗೆ ವ್ಯಕ್ತಿಗಳನ್ನು ಹೇಗೆ ನೇಮಕ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಶಿಕ್ಷಣ ನೀಡುವುದು.

ಸೂಕ್ತ ಅಭ್ಯರ್ಥಿಗಳೊಂದಿಗೆ ಸಂಪರ್ಕ ಕಲ್ಪಿಸುವುದು.

ಸಂದರ್ಶನಗಳಲ್ಲಿ ಸಹಾಯ ಮಾಡುವುದು.

ಪಕ್ಕಾ ಬ್ಯುಸಿನೆಸ್ ಮೈಂಡ್

ಮುಂದುವರೆದು ಹೇಳಿದ ಅವರು, "ನಾನು ಏಕವ್ಯಕ್ತಿ ಸಂಸ್ಥೆಯ ಸಂಸ್ಥಾಪಕರೊಂದಿಗೆ ಕಾರ್ಯನಿರ್ವಹಿಸಿದ್ದೇನೆ, ಹಾಗೇ ನಾವು ಸಹಸಂಸ್ಥಾಪಕರ ಸ್ಥಾನಕ್ಕೆ ವ್ಯಕ್ತಿಗಳನ್ನು ಹುಡುಕಿದ್ದೇವೆ. ನಾನು ಸಂಸ್ಥಾಪಕರುಗಳೊಂದಿಗೆ ಬಹಳ ನಿಕಟವಾಗಿ ಕಾರ್ಯನಿರ್ವಹಿಸಿ, ಅವರ ಜೀವನ ಪ್ರಯಾಣ, ಸ್ಟಾರ್ಟ್‍ಅಪ್ ಅನುಭವ ಹಾಗೂ ಉತ್ಸಾಹವನ್ನು ತಿಳಿದಿದ್ದೇನೆ. ಹಾಗಾಗಿ ಇದನ್ನು ವಿಶ್ವಕ್ಕೇ ತಿಳಿಸಿ ಸೂಕ್ತ ಜನರನ್ನು ಆಕರ್ಷಿಸಬಹುದು. ಇತ್ತೀಚೆಗೆ, ಸುಮಾರು ತಿಂಗಳ ಪ್ರಯತ್ನದ ನಂತರ ನಾನು ನನ್ನ ಅನುಭವಗಳ ಆಧಾರದ ಮೇಲೆ ಒಬ್ಬ ಸಹಸಂಸ್ಥಾಪಕನನ್ನು ಹುಡುಕಿದ್ದೇನೆ".

"ಉನ್ನತ ಮಟ್ಟದ ಹುದ್ದೆಗಳಾದ ಸಹಸಂಸ್ಥಾಪಕ, ಸಿಎಕ್ಸ್​ಒ, ವಿಪಿ ಅಥವಾ ಮಾಜಿ ಸಂಸ್ಥಾಪಕರನ್ನು ನೇಮಕ ಮಾಡುವುದು ಗಂಭೀರವಾದ ಸಮಸ್ಯೆ ಎಂದೇ ನಂಬಿದ್ದೇನೆ. ಒಬ್ಬ ವಾಣಿಜ್ಯೋದ್ಯಮಿ ಉತ್ಪನ್ನ, ಮಾರುಕಟ್ಟೆ, ಬಂಡವಾಳ ಹೂಡಿಕೆಗಳ ಬಗ್ಗೆ ಮಾತನಾಡುತ್ತಾನೆಯೇ ಹೊರತು ಒಂದು ಕಂಪನಿಗೆ ಅಗತ್ಯವಾದ ಸೂಕ್ತ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ತಿಳಿದಿರುವುದಿಲ್ಲ. ಒಂದು ಉತ್ತಮ ಕಾರ್ಯ ತಂಡವನ್ನು ಹೊಂದದಿದ್ದರೆ ನೀವು ಎಷ್ಟೇ ಬಂಡವಾಳ ಹೂಡಿದರೂ ಅದು ವ್ಯರ್ಥವಾದಂತೆಯೇ ಸರಿ".

ಸಂಸ್ಥಾಪಕರುಗಳ ವಾಣಿಜ್ಯೋದ್ಯಮದ ಪ್ರಯಾಣ ಕೇವಲ ಒಂದು ಸಂಸ್ಥೆಯನ್ನು ಆರಂಭಿಸುವುದಕ್ಕಷ್ಟೇ ಸೀಮಿತವಲ್ಲ ಮತ್ತು ಆತ ಮತ್ತೊಂದು ಸಂಸ್ಥೆಯನ್ನು ಆರಂಭಿಸುವ ಮೂಲಕ ಮುಂದುವರಿಯುತ್ತದೆ. ನಿಜವಾದ ಉದ್ಯಮಿಗಳಿಗೆ ತಮ್ಮ ಸಂಸ್ಥೆಗಳಿಗೆ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸಹಾಯ ಮಾಡಲು ಒಬ್ಬ ವ್ಯಕ್ತಿ ಪ್ರಯತ್ನಿಸುತ್ತಿದ್ದಾರೆ ಎಂದರೆ ಅದು ನಿಖಿಲೇಶ್. ಇಂತಹ ಉದ್ಯಮಶೀಲತೆಯುಳ್ಳವರ ಅವಶ್ಯಕತೆ ಹೆಚ್ಚಾಗಿದ್ದು ಮತ್ತಷ್ಟು ಜನರು ವಾಣಿಜ್ಯೋದ್ಯಮವನ್ನು ಆರಂಭಿಸಲು ಪ್ರೋತ್ಸಾಹಿಸುವಂತಾಗಬೇಕು.


ಲೇಖಕರು: ಪ್ರದೀಪ್​ ಗೋಯಲ್​

ಅನುವಾದಕರು: ಚೈತ್ರಾ ಎನ್​.

Related Stories

Stories by YourStory Kannada