ಆಟೋಮೊಬೈಲ್ ಸ್ಟಾರ್ಟ್​ಅಪ್​​ಗಳಿಗೆ ಸ್ವರ್ಗ ಆನ್​ಲೈನ್ ಜಾಹೀರಾತು..!

ಟೀಮ್​ ವೈ.ಎಸ್​​​.ಕನ್ನಡ

0

ಆನ್​​​ಲೈನ್ ಜಾಹೀರಾತುವಿನಿಂದ ವಿಶ್ವದ ಗಮನಸೆಳೆಯುವಲ್ಲಿ ಜಾಹೀರಾತುದಾರರು ಸಫಲವಾಗಿದ್ದಾರೆ. ಅಮೇರಿಕಾದ ಜಾಹೀರಾತು ವೆಬ್​​ಸೈಟ್ ಕ್ರೈಗ್ಲಿಸ್ಟ್​​​ ಮತ್ತು ಚೀನಾದ 58.ಕಾಮ್ ಈ ಕ್ಷೆತ್ರದಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ಆನ್​ಲೈನ್ ಜಾಹೀರಾತು ಲೋಕ ವಿಶ್ವದ ಗಮನಸೆಳೆಯುತ್ತಿದೆ.

ಆಟೋಮೊಬೈಲ್ -ಕ್ಲಾಸಿಫೈಡ್ಸ್

ಸದ್ಯ ಅನಲೈನ್​​ನಲ್ಲಿ ಆಟೋಮೊಬೈಲ್ ಆರಂಭಿಕ ಕಂಪನಿಗಳು ರಾರಾಜಿಸುತ್ತಿವೆ ಎಲ್ಲಿ ನೋಡಿದ್ರಲ್ಲಿ ಆಟೋಮೊಬೈಲ್ ಜಾಹೀರಾತುಗಳನ್ನು ಕಾಣಬಹುದು. ಇದು ಹೆಚ್ಚು ಜನರ ಗಮನಸೆಳೆಯುವಲ್ಲಿ ಸಫಲವಾಗಿವೆ. ಹಾಗಾಗಿ ಆನ್​​ಲೈನ್ ಕ್ಲಾಸಿಫೈಡ್ಸ್​​​ನಲ್ಲಿ ಜನರನ್ನು ಸೆಳೆಯಲು ಕ್ವಿಕರ್ ಮತ್ತು ಒಲಾ ಕಂಪನಿಗಳು ಪೈಪೋಟಿಗೆ ಬಿದ್ದಿವೆ.

ಕಳೆದ ವಾರ ಕಾರ್​ವಾಲೇ ಕಂಪನಿ ಕಾರ್​​ಟ್ರೇಡ್ ಕಂಪನಿಯೊಂದಿಗೆ ವಿಲೀನವಾಯ್ತು. ಮತ್ತೊಂದೆಡೆ ಝಿಗ್​​​ವೀಲ್ಸ್​​​​ ಕಂಪನಿಯನ್ನು ಕಾರ್​​ದೇಖೋ ಸ್ವಾಧಿನಪಡಿಸಿಕೊಂಡಿತ್ತು.

ಕಳೆದ ವರ್ಷ ಒಟ್ಟು ಐದು ಕಂಪನಿಗಳು (ಕಾರ್​​​ಟ್ರೇಡ್, ಕಾರ್​​ವಾಲೇ, ಕಾರ್​​​ದೇಖೋ, ಗಾಡಿ ಮತ್ತು ಝಿಗ್​​​ವೀಲ್ಸ್) ಆಟೋಮೊಬೈಲ್ ಕ್ಲಾಸಿಫೈಡ್ಸ್ ರೇಸ್​​ನಲ್ಲಿದ್ದವು. ಆರಂಭದಲ್ಲಿ ಕಾರ್​​ಟ್ರೇಡ್ ಮತ್ತು ಕಾರ್​​ದೇಖೋ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. 2014ರ ಸೆಪ್ಟಂಬರ್​​ನಲ್ಲಿ ‘ಗಾಡಿ’ ಸಂಸ್ಥೆಯನ್ನು ಕಾರ್​​ದೇಖೋ ವಶಪಡಿಸಿಕೊಂಡಿತ್ತು. ಕಳೆದ ತಿಂಗಳು ಝಿಗ್​​ವೀಲ್ಸ್ ಕಂಪನಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಮತ್ತೊಂದೆಡೆ ಕಾರ್​​ವಾಲೆ ಮತ್ತು ಕಾರ್ ಟ್ರೇಡ್ ಈಗ ಜೋತೆಯಾಗಿ ಟಾಟಾ ಕಂಪನಿಯ ಸಹಾಯದಿಂದ ಆರಂಭವಾಗಿರುವ ಕಾರ್​​ದೇಖೋಗೆ ಪೈಪೋಟಿ ನೀಡಲು ಕಾರ್​​​ವಾಲೆ ಸಜ್ಜಾಗಿವೆ.

70 ಪ್ರತಿಶತ ಮಾರುಕಟ್ಟೆ ಅವ್ಯವಸ್ಥಿತವಾಗಿದ್ರೂ, ಕಂಪನಿಗಳು ಒಡಂಬಂಡಿಕೆ ಮಾಡಿಕೊಂಡು ಜೊತೆಯಾಗಿ ಕೆಲಸ ಯಾಕೇ ಮಾಡುತ್ತಿವೆ ಎಂಬುದು ತಿಳಿಯದಾಗಿದೆ.

ಕಳೆದ 15 ತಿಂಗಳಿಂದ ಸೇರಿಸಿಕೊಳ್ಳುವುದು ವಶಪಡಿಸಿಕೊಳ್ಳುವ ಪ್ರಕ್ರಿಯೆಗಳು ಹೆಚ್ಚಾಗಿ ನಡೆಯುತ್ತಿವೆ ಆದರೆ ಯಾಕೆಂದು ತಿಳಿಯುತ್ತಿಲ್ಲವೆಂದು ‘ಐಬಿಬೊ’ ಸಿಇಓ ಅಶಿಶ್ ಕಶ್ಯಪ್ ಅಭಿಪ್ರಾಯಪಡ್ತಾರೆ.

"ಕಾರ್​​ಟ್ರೇಡ್, ಕಾರ್​​ದೇಖೋ ಸ್ವಾಧೀನಪಡಿಸಿಕೊಂಡು, ಆನ್​​ಲೈನ್ ಅಟೋಮೊಬೈಲ್ ಜಾಹೀರಾತಿನಲ್ಲಿ ಜನರನ್ನು ಸೆಳೆಯಲು ಮುಂದಾಗಿವೆ. ಹಾಗಾಗಿ ಬೇಗ ಬೆಳೆಯಲು ಗ್ರಾಹಕನನ್ನು ಆಕರ್ಷಿಸಲು ಈ ಕಂಪನಿಗಳು ಪ್ರಯತ್ನಿಸುತ್ತಿವೆ. ಒಂದೆಡೆ ಜನರನ್ನು ಬೇಗ ಸೆಳೆಯುವುದು ಸುಲಭದ ಕೆಲಸವಲ್ಲ ಎಂದು ಕಶ್ಯಪ್ ನುಡಿಯುತ್ತಾರೆ.

ಇಷ್ಟೆಲ್ಲಾ ಆದರೂ ಈ ಎರಡು ಕಂಪನಿಗಳು ಅಟೋಮೊಬೈಲ್ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ವಾಧಿನ ಸಾಧಿಸಲು ಸಾಧ್ಯವಾಗಿಲ್ಲ. 70 ಪ್ರತಿಶತ ಮಾರುಕಟ್ಟೆ ಚದುರಿ ಹೋಗಿದೆ. ಸೆಕೆಂಡ್​​ಹ್ಯಾಂಡ್​​​ ಕಾರುಗಳ ಮಾರಾಟದಲ್ಲಿ ಸ್ಥಳಿಯ ದಲ್ಲಾಳಿಗಳೇ 70 ಪ್ರತಿಶತ ವಹಿವಾಟು ಮಾಡುತ್ತಿದ್ದಾರೆಂದು ‘ಒಎಲ್ಎಕ್ಸ್​​ನ ’ ಮಾಜಿ ಮುಖ್ಯಸ್ಥ ಸೌರಭ್ ಪಾಂಡೇ ವಿವರಿಸುತ್ತಾರೆ.

ಹೀಗೆ ಪ್ರತಿಸ್ಪರ್ಧಿ ಕಂಪನಿಗಳನ್ನು ಮರ್ಜ್ ಮಾಡಿಕೊಳ್ಳುತ್ತಿರುವುದರಿಂದ ಏನೂ ಪ್ರಯೋಜನವಾಗುತ್ತಿಲ್ಲ. ವಶಪಡಿಸಿಕೊಳ್ಳುವ ಕೆಲಸ ಬಿಟ್ಟು ಉತ್ತಮ ಯೋಚನೆ, ಟೆಕ್ನಾಲಜಿ ದಕ್ಷ ಐಡಿಯಾಗಳನ್ನು ಅಳವಡಿಸಿಕೊಳ್ಳುವುದು ಕಂಪನಿ ಬೆಳವಣಿಗೆಗಗೆ ಸಹಾಯವಾಗಲಿದೆ.

ಸ್ವಾಧಿನ ಮತ್ತು ಮರ್ಜಿಂಗ್​​ನಿಂದ ಗುರಿ ಮುಟ್ಟಲು ಸಾಧ್ಯ

"ಭಾರತದ ಕಾರ್​ ಮಾರುಕಟ್ಟೆ ಕೂಡ ಈಗ ಅಮೇರಿಕಾದಂತೆ ಬದಲಾಗುತ್ತಿದೆ. ಹೊಸ ಕಾರ್​​ನಿಂದ ಹಳೆ ಕಾರ್ ಖರೀದಿಸುವ ಪ್ರಮಾಣ 1:1.3 ಆಗಿದ್ರೆ, ಅಮೇರಿಕಾದಲ್ಲಿ ಇದು 1:3 ಆಗಿದೆ. ಹಾಗಾಗಿ ಅಮೇರಿಕಾ ಮಾದರಿಯನ್ನು ಹಿಂಬಾಲಿಸಿದ್ರೆ ಹೆಚ್ಚು ಗ್ರಾಹಕರನ್ನು ಸೆಳೆಯಲು ಸಾಧ್ಯ" ಎಂತಾರೆ ಕಾರ್​ದೇಖೊ ಸಂಸ್ಥಾಪಕ ಅಮಿತ್ ಜೈನ್.

ಪ್ರತಿ ಕಂಪನಿಯು ತನ್ನದೆಯಾದ ವಿಶೇಷತೆಯನ್ನು ಹೊಂದಿದೆ. ಪ್ರಿ-ಓನ್​​​ ಕಾರ್​​ನಲ್ಲಿ ‘ಗಾಡಿಸ್' ಹೆಚ್ಚು ಪ್ರಭಾವ ಬೀರಿದೆ. ಗ್ರಾಹಕರನ್ನು ಪ್ರಿ-ಓನ್ ಕಾರ್ ತೆಗೆದುಕೊಳ್ಳುವಂತೆ ಸೆಳೆಯುವಲ್ಲಿ, ಝಿಗ್​​ವೀಲ್ಸ್ ಸಫಲವಾಗಿದೆ. ಕಂಪನಿ ಪ್ರಮಾಣಿತ ಕಾರುಗಳ ಮಾರಾಟದಲ್ಲಿ ಇವರು ಅಗ್ರಗಣ್ಯರು.

"ಸಣ್ಣ ಕಂಪನಿಗಳನ್ನು ಮರ್ಜ್ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಮಾರುಕಟ್ಟೆಯಲ್ಲಿ ಹೆಚ್ಚು ಪ್ರಭಾವ ಬೀರಲು, ಗ್ರಾಹಕರನ್ನು ಸೆಳೆಯಲು ಮತ್ತು ವ್ಯಾಪಾರ ಹೆಚ್ಚಿಸಿಕೊಳ್ಳಲು ಕನ್ಸೊಲಿಡೇಶನ್ ಪ್ರಕ್ರಿಯೇ ಸಹಾಯವಾಗುತೆ"ಎಂಬ ಅಭಿಪ್ರಾಯ ಕಾರ್​​ಟ್ರೇಡ್ ಸಂಸ್ಥಾಪಕ ವಿನಯ್ ಸಾಂಘಿ ಅವರದ್ದು.

ಕಾರ್​​ಟ್ರೇಡ್ ಜೊತೆ ಕಾರ್​​ವಾಲೆ ಮರ್ಜ್ ಆಗಿರುವುದರಿಂದ ಸೆಕೆಂಡ್​​ಹ್ಯಾಂಡ್ ಮತ್ತು ಹೊಸ ಕಾರ್ ಎರಡೂ ವಿಭಾಗದಲ್ಲೂ ಕಾರ್​​ಟ್ರೇಡ್ ಮೆಲುಗೈ ಸಾಧಿಸಿದೆ. ಆನ್​ಲೈನ್ ಜಾಹೀರಾತಿನಲ್ಲೂ ನಾವು ಮುನ್ನುಗ್ಗುತ್ತಿದ್ದೇವೆ. ಎಲ್ಲಾ ಕಂಪನಿಗಳನ್ನು ಮರ್ಜ್ ಮಾಡಿಕೊಂಡಿರುವುದರಿಂದ ಈಗ ಸ್ಪರ್ಧೆ ಕೇವಲ ಎರಡು ಕಂಪನಿಗಳಿಗೆ ಮಾತ್ರ ಸೀಮಿತವಾಗಿದೆ.

ಕಂಪನಿಗಳನ್ನು ಸ್ವಾಧಿನ ಪಡಿಸಿಕೊಳ್ಳುವುದು ಜೊತೆಗೂಡಿಕೊಂಡು ನಡೆಸುವುದರಿಂದ ಕೇವಲ ಮಾರುಕಟ್ಟೆಯಲ್ಲಿರುವ ಸ್ಪರ್ಧೆಯನ್ನು ತಗ್ಗಿಸಿದಂತಾಗುತ್ತದೇಯೆ ಹೊರತು ಇದರಿಂದ ಹೆಚ್ಚಿಗೆ ಏನೂ ಲಾಭವಿಲ್ಲ. ಮಾರುಕಟ್ಟೆಯಲ್ಲಿ ಆಯಾ ಕಂಪನಿಗಳು ಎಷ್ಟು ವ್ಯವಹಾರ ಮಾಡುತ್ತಿದ್ದವೋ ಅದು ಅಷ್ಟೇ ಇರುತ್ತದೆ. ಎಂಬುವುದು ಚೀನಾದ ಜಾಹೀರಾತು ಸ್ಟಾರ್ಟ್​​ಅಪ್​​​ ಕಂಪನಿಯ ಅಭಿಪ್ರಾಯವಾಗಿದೆ.

ಆಟೋಮೊಬೈಲ್ ಕಂಪನಿಗಳು ಜಾಹಿರಾತಿನಲ್ಲಿ ಹೇಳಬೇಕಾದನ್ನೇಲ್ಲವನ್ನು ಆನ್​​ಲೈನ್​​ನಲ್ಲಿ ಹೇಳಲು ಸಾಧ್ಯವಾಗಲ್ಲ. ಹಾಗಾಗಿ ಆನ್​ಲೈನ್​​ನಲ್ಲಿ ಅವರು ಗ್ರಾಹಕರನ್ನು ಸೆಳೆಯುವುದು ಕಷ್ಟದ ಕೆಲಸವಾಗಿದೆ. ಯಾಕಂದ್ರೆ, ರೆಡಿಫ್ ಮತ್ತು ಇಂಡಿಯಾ ಟೈಮ್ಸ್​​ನಂತಹ ಇ-ಕಾಮರ್ಸ್ ಶಾಪಿಂಗ್ ತಾಣಗಳು ಇತ್ತೀಚೆಗಷ್ಟೆ ಆರಂಭವಾಗಿರುವ ಫ್ಲಿಫ್​​ಕಾರ್ಟ್, ಸ್ನಾಪ್​​ಡೀಲ್ ಮತ್ತು ಶಾಪ್​ಕ್ಲೂಸ್ ಮುಂದೆ ಮಂಕಾಗಿವೆ. ಆನ್​ಲೈನ್​​​ ಜಾಹೀರಾತಿನಲ್ಲಿ ಉತ್ಪನ್ನದ ವಿವರವನ್ನು ಸರಿಯಾಗಿ ತಿಳಿಸುವುದು ಒಂದು ಕಲೆ ಅಂತಾರೆ ಡ್ರೂಮ್ ಸಂಸ್ಥಾಪಕ ಮತ್ತು ಸಿಇಓ ಸಂದೀಪ್ ಅಗರ್ವಾಲ್..

ಯುವರ್ ಸ್ಟೋರಿ-ಬಂಡವಾಳ ಸಂಗ್ರಹಿಸಿದ ಮೈನ್ಯೂಕಾರ್

ಆಟೋಮೊಬೈಲ್ ವಿಭಾಗದಲ್ಲಿ ಯಾವ ರೀತಿ ನೆಟ್​​ವರ್ಕ್ ಬೆಳೆಸಬೇಕು, ಆನ್​ಲೈನ್ ಜಾಹೀರಾತಿನಿಂದ ಉಂಟಾಗುವ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದು ಮುಖ್ಯವಾಗಿದೆ. ಮುಂದುವರೆದ ರಾಷ್ಟ್ರಗಳಾದ ಜಪಾನ್, ಅಮೇರಿಕಾ ಮತ್ತು ದಕ್ಷಿಣ ಕೋರಿಯಾ ಮುಂತಾದ ರಾಷ್ಟ್ರಗಳಲ್ಲಿ, ಏಕಮಾತ್ರ ಕಂಪನಿ ವರ್ಗೀಕೃತ ಆನ್​ಲೈನ್ ಜಾಹೀರಾತಿನ ಲೀಡರ್ ಆಗಿ ಹೊರಹೊಮ್ಮಿದೆ.

B2C (BUSSINESS to CUSTOMER) ವಿಭಾಗ ಮತ್ತು C2C (CUSTOMER To CUSTOMER) ಯೋಜನೇಯಿಂದ ವ್ಯವಹಾರ ಹೆಚ್ಚು ಪ್ರಗತಿಯಲ್ಲಿ ಸಾಗುತ್ತಿದೆ. ಗ್ರಾಹಕನಿಂದ ವ್ಯವಹಾರ’, `ಗ್ರಾಹಕನಿಂದ ಗ್ರಾಹಕನಿಗೆ’ ಎಂಬ ವಿಭಾಗದಲ್ಲಿ ಡ್ರೂಮ್ ಮತ್ತು ಗೊಜೂಮೋ ಕಂಪನಿ ತಮ್ಮ ವ್ಯವಹಾರ ಬೆಳೆಸಿಕೊಂಡಿದ್ದಾರೆ. ದಲ್ಲಾಲ್ಲಿಯ ಮಧ್ಯಸ್ಥಿಕೆಯಿಲ್ಲದೆ. ಮಾರುವವ ನೇರವಾಗಿ ಏನಾದ್ರು ಮಾರಬಹುದು ಅಥವಾ ಖರೀದಿಸಬಹುದು. ಮಾರುವವ ಮತ್ತು ಕೊಳ್ಳುವವನನ್ನು ನೇರವಾಗಿ ಸೇರಿಸುವಂತಹ ಹೊಸ ವಿಧಾನವನ್ನು ಈ ಸಂಸ್ಥೆಗಳು ಪರಿಚಯಿಸಿದರಿಂದ 47% ಇವರ ವ್ಯವಹಾರ ಹೆಚ್ಚಿದೆ. ಕಾರ್​​ದೇಖೊ ಕಾರ್​​ಟ್ರೇಡ್ ಕಂಪನಿಗಳಿಗಿಂತ ಇವರು ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಹೊಸ-ಹೊಸ ಯೋಜನೆ ಜನರನ್ನು ಸೆಳೆಯುವಲ್ಲಿ ಸಫಲವಾಗಿವೆ. c2c ವಿಭಾಗದಿಂದಲೇ ಇವರು ಉತ್ತಮ ವ್ಯವಹಾರ ಮಾಡುತ್ತಿದ್ದಾರೆ. ಕಾರ್​​ಟ್ರೇಡ್​​ನವರು ಮೂರನೇಯವರ ಸಹಯೋಗದೊಂದಿಗೆ ತಮ್ಮ ಕಾರುಗಳನ್ನು ಸರ್ಟಿಫೈಡ್ ಮಾಡಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದಾರೆ ಎಂತಾರೆ’ ವಿನಯ್.

ಕಳೆದ 10 ತಿಂಗಳಲ್ಲಿ `‘ಡ್ರೂಮ್’ ಮತ್ತು ‘ಗೋಜೂಮೊ’ ಉತ್ತಮವಾಗಿ ಅಭಿವೃದ್ಧಿ ಹೊಂದಿವೆ. ಸಂದೀಪ್ ಅವರ ಪ್ರಕಾರ ಕಂಪನಿ ಮೂರಂಕಿಯಲ್ಲಿ ಅಭಿವೃದ್ಧಿ ಹೊಂದಿದೆ. ಲೈಟ್​​ಬಾಕ್ಸ್ ವೆಂಚರ್ ಮತ್ತು ಜಪಾನನ್ ಇಂಟರ್ನೆಟ್ ಫರ್ಮ್ ಬಿನೊಸ್ ಕಂಪನಿಯ ಸಹಾಯದಿಂದ ಡ್ರೂಮ್ 100 ಕೋಟಿಯಷ್ಟು ಹಣವನ್ನು ಈಗಾಗಲೇ ಶೇಖರಿಸಿಕೊಂಡಿದೆ. “ ನಾವು C2C ವಿಭಾಗದಿಂದಲೂ ವ್ಯವಹಾರವನ್ನು ವೃದ್ಧಿಸಿಕೊಳ್ಳುವ ಇರಾದೆಯಲ್ಲಿದ್ದೇವೆ. ಪ್ರತಿಸ್ಫರ್ಧಿ ಕಂಪನಿಗಳು ಈಗ ಈ ಫಥದಲ್ಲಿ ಸಾಗುತ್ತಿವೆ ನಾವು ಕೂಡ ಇದನ್ನು ಅನುಸರಿಸಲ್ಲಿದ್ದೇವೆ ಎಂತಾರೆ ಸಂದೀಪ್.

ವರ್ಗಿಕೃತ ಜಾಹೀರಾತಿನಲ್ಲಿ ಹೆಚ್ಚು ಹೆಸರು ಮಾಡಿರುವ ಓಎಲ್ಎಕ್ಸ್ ಮತ್ತು ಕ್ವಿಕರ್ ಸಂಸ್ಥೆಗಳು ಪರದಾಡುತ್ತಿವೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಕ್ವಿಕರ್ ಕಾರ್ಸ್ ಪ್ರವೇಶ ಪಡೆದಿದೆ. ಆದರೆ ಅನೇಕ ದೊಡ್ಡ-ದೊಡ್ಡ ಕಂಪನಿಗಳ ಪೈಪೋಟಿಯ ಮುಂದೆ, ಕಂಪನಿ ಗ್ರಾಹಕರ ಗಮನಸೆಳೆಯಲು ವ್ಯಾಪಾರ ಅಭಿವೃದ್ಧಿಪಡಿಸಿಕೊಳ್ಳಲ್ಲು ಪರದಾಡುತ್ತಿದೆ. ಬಳಕೆಯಾದ ಕಾರುಗಳ ವಿಭಾಗದಲ್ಲಿ ಕ್ವಿಕರ್ ಸ್ವಲ್ಪ ಯಶಸ್ವಿಯಾಗಿದೆ. ಅದರೆ ಸದ್ಯದ ಮಾರುಕಟ್ಟೆಯಲ್ಲಿ ಯಾವುದೇ ಸಣ್ಣ ಕಂಪನಿ ಬಂದರು ಅದನ್ನು ಸ್ವಾಧೀನ ಪಡಿಸಿಕೊಳ್ಳುವುದು ಅಥವಾ ಮರ್ಜ್ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಹಾಗಾಗಿ ಯಾವ ಕಂಪನಿ ಬೇಕಾದ್ರು ಈಗ ಯಾರ ಜೊತೆಯಾದ್ರು ಕೈ ಜೋಡಿಸಿದ್ರು ಆಶ್ಚರ್ಯವಿಲ್ಲ ಅಂತಾರೆ ಕಾರ್​​ದೇಖೋದ ಅಮಿತ್.

ಲೇಖಕರು: ಜೈ ವರ್ಧನ್​​
ಅನುವಾದಕರು: ಎನ್​​.ಎಸ್​​. ರವಿ

Related Stories