ಕನಸಿನ ಒಂದು ಮನೆಯಿರಲಿ ಅದು ಈ ರೀತಿ ನಿರ್ಮಾಣವಾಗಿರಲಿ..

ಟೀಮ್​ ವೈ.ಎಸ್​. ಕನ್ನಡ

ಕನಸಿನ ಒಂದು ಮನೆಯಿರಲಿ ಅದು ಈ ರೀತಿ ನಿರ್ಮಾಣವಾಗಿರಲಿ..

Thursday December 24, 2015,

3 min Read

ಜನರಿಗಾಗಿ ಬಿದಿರಿನ ಮನೆ ಮಾಡುತ್ತಿದೆ ‘ವಂಡರ್ ಗ್ರಾಸ್ ಕಂಪನಿ’

ಬಿದಿರಿನಿಂದಾದ ಮನೆ ಅಲ್ಪವೆಚ್ಚದಿಂದ ಕೂಡಿರುತ್ತವೆ, ಗಟ್ಟಿಯಾಗಿರುತ್ತವೆ..

ಚೀನಾದ ನಂತರ ಹೆಚ್ಚು ಬಿದಿರು ಬೆಳೆಯುವ ದೇಶ ಭಾರತ..

ಸದ್ಯ ಭಾರತದಲ್ಲಿ ಜನಸಂಖ್ಯೆ ಬೆಳೆಯುತ್ತಿರುವ ವೇಗ ನೋಡಿದ್ರೆ, ಪ್ರತಿಯೊಂದಕ್ಕೂ ಪರ್ಯಾಯ ವಿಕಲ್ಪ ಹುಡುಕುವ ಅವಶ್ಯಕತೆಯಿದೆ. ಯಾಕಂದ್ರೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಯಿಂದ ಬಚಾವಾಗಲು ಇದು ಅತ್ಯಂತ ಸರಳ ಮಾರ್ಗ. ನಾವು ಮೊದಲು ಇಂತಹ ವಸ್ತುಗಳನ್ನು ಉಪಯೋಗಿಸುತ್ತಿದ್ವಿ. ಸಮಯದ ಜೊತೆ-ಜೊತೆಗೆ ಬೆಳೆಯುತ್ತಿರುವ ತಂತ್ರಜ್ಞಾನದಿಂದ, ನಾವು ಅವುಗಳ ಬಳಕೆಯನ್ನು ನಿಲ್ಲಿಸಿಬಿಟ್ವಿ. ಅಂತಹದರಲ್ಲೊಂದು ಬಿದಿರಿನ ಮನೆ. ಮೊದಲು ಮನೆಗಳನ್ನು ಬಿದಿರಿನಲ್ಲಿ ಕಟ್ಟಲಾಗುತ್ತಿತ್ತು. ಆದರೆ ಬರ್ತಾ-ಬರ್ತಾ ಅದರ ಸ್ಥಾನವನ್ನು ಇಟ್ಟಿಗೆಯ ಮನೆ ತೆಗೆದುಕೊಂಡ್ವು. ಇಂದು ನಗರದಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲೂ ಇಟ್ಟಿಗೆಯ ಮನೆಗಳನ್ನು ಕಟ್ಟುತ್ತಿದ್ದಾರೆ. ಆದರೆ ವೈಭವ್ ಕಾಳೆಯವರ ಕಂಪನಿ ‘ವಂಡರ್ ಗ್ರಾಸ್’ನ ಮೂಲಕ, ಬಿದಿರಿನಿಂದ ಮಾಡಿದ ಮನೆಗಳ ಪ್ರಯೋಗ ಮಾಡುವಂತೆ ಪ್ರೋತ್ಸಾಹಿಸುತ್ತಿದೆ..

ಚೀನಾದ ನಂತರ ಅತಿಹೆಚ್ಚು ಬಿದಿರು ಬೆಳೆಯುವ ದೇಶ ಭಾರತ. ಭಾರತದಲ್ಲಿ ಎಲ್ಲೆಡೆ ಬಿದಿರು ಬೆಳೆಯಲಾಗುತ್ತದೆ. ಇದು ಗಟ್ಟಿಯಾಗಿರುತ್ತದೆ. ಜೊತೆಗೆ ಅತಿ ವೇಗವಾಗಿ ಬೆಳೆಯುವ ಬೆಳೆಯಿದು. ಬಿದಿರು ಬೆಳೆಯುವುದು ತುಂಬ ಸುಲಭ. ಬಿದಿರು ಐವತ್ತು ವರ್ಷದ ತನಕ ಹಾಳಾಗುವುದಿಲ್ಲ. ಆದ್ದರಿಂದಾಗಿ ಬಿದಿರಿನಿಂದ ಮಾಡಿದ ಮನೆ ವರ್ಷಾನುಗಟ್ಟಲೆ ಬಾಳುತ್ತವೆ. ಇದು ಸುಲಭವಾಗಿ ಸಿಗುವ ಬೆಳೆಯಾಗಿದೆ. ಸಾಮಾನ್ಯ ಮನೆ ಎರಡು ಲಕ್ಷಕ್ಕೆ ನಿರ್ಮಾಣವಾದ್ರೆ. ಬಿದಿರಿನ ಮನೆ ಕೇವಲ ಒಂದು ಕಾಲು ಲಕ್ಷದಲ್ಲೇ ಕಟ್ಟಬಹುದು. ಅತ್ಯಂತ ಕಮ್ಮಿ ಸಮಯದಲ್ಲೇ ಮನೆ ಕಟ್ಟಬಹುದು.

image


ಭಾರತ ವೇಗವಾಗಿ ವಿಕಾಸವಾಗುತ್ತಿದೆ. ಆದರಂತೆಯೇ ಭಾರತದ ಜನಸಂಖ್ಯೆ ಬೆಳೆಯುತ್ತಿದೆ. ಆದರೆ ಎಲ್ಲರಿಗೂ ಮನೆಕಟ್ಟಿಕೊಳ್ಳುವಷ್ಟು ಶಕ್ತಿಯಿಲ್ಲ. ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಸ್ವಲ್ಪ ಜಮೀನು ಇರುತ್ತದೆ ಆದರೆ ಅವರಿಗೆ ಮನೆಕಟ್ಟುವಷ್ಟು ದುಡ್ಡು ಇರಲ್ಲ. ಎಲ್ಲರಿಗೂ ಮನೆ ಕಟ್ಟಿಸಿಕೊಡುವುದು ಸರ್ಕಾರಕ್ಕೂ ತಲೆನೋವಾಗಿದೆ. ಮನೆ ಕಟ್ಟುವ ಉಪಕರಣಗಳ ಬೆಲೆ ಕೂಡ ಗಗನ ಮುಟ್ಟಿದೆ.

image


ಇಂತಹದರಲ್ಲಿ ‘ವಂಡರ್ ಗ್ರಾಸ್’ ಕಂಪನಿ ಜನರ ಮುಂದೆ ಹೊಸ ವಿಕಲ್ಪ ಮುಂದೆ ಇಟ್ಟಿದೆ. ಜನರು ಬಿದಿರಿನಿಂದ ಮನೆ ಕಟ್ಟಬಹುದು ಎಂದು ತೋರಿಸಿಕೊಟ್ಟಿದೆ. ಈ ಕಂಪನಿಯನ್ನು ಆರಂಭಿಸಿದ್ದು ವೈಭವ್ ಕಾಳೆ. ವೈಭವ್ ಮನೆ ಕಟ್ಟುವಾಗ ಮೊದಲು ಕಾಲಂ, ಪ್ಯಾನಲ್, ಗೋಡೆ ಮತ್ತು ಸ್ಕ್ರೀನ್ ತಂದು ಥಟ್ ಅಂತ ಫಿಕ್ಸ್ ಮಾಡ್ತಾರೆ. ಇದು ಗಟ್ಟಿಯಿರುವುದರ ಜೊತೆಗೆ ನಿರ್ಮಾಣ ಕೂಡ ಅತ್ಯಂತ ಸುಲಭವಾಗಿದೆ. ಬೇಗ ಮನೆ ಕಟ್ಟಬಹುದು. ಅಲ್ಪವೆಚ್ಚದಲ್ಲಿ ಸುಂದರವಾದ ಮನೆ ಕಟ್ಟಬಹುದು. ಇದು ಜನರ ಕನಸನ್ನು ಪೂರ್ತಿಗೊಳಿಸುತ್ತದೆ..

ವೈಭವ್ ಅವರು ಕಂಪನಿ ಆರಂಭಿಸಿ 6 ವರ್ಷವಾಗಿದೆ. ಅವರ ತಂದೆಯೇ ಅವರಿಗೆ ಸದಾ ಪ್ರೇರಣೆಯಾಗಿದ್ರು. ಅವರ ತಂದೆಯ ರಿಸರ್ಚ್​ನ ಅಂಗವಾಗಿ ‘ವಂಡರ್ ಗ್ರಾಸ್’ ಆರಂಭಿಸಲು ಕಾರಣವಾಯ್ತು. ಅವರ ತಂದೆಯ ಹೆಸರು ವೀಣು ಕಾಳೆ. ಅವರು ಬಿದಿರಿನ ಕುರಿತು ಹಲವು ಸಂಶೋಧನೆ ಮಾಡಿದ್ದಾರೆ. ಹಾಗಾಗಿ ಅವರನ್ನು ಜನ್ರೂ ಬಂಬೂ ಮ್ಯಾನ್ ಎನ್ನುತ್ತಿದ್ರು. ಹಾಗಾಗಿ ಅವರು ತಮ್ಮ ತಂದೆಯ ಹಾದಿಯಲ್ಲೇ ನಡೆಯುತ್ತಿದ್ದಾರೆ. ಹಾಗಾಗಿ ಬಿದಿರಿನ ಮೂಲಕ ಜನರ ಮನೆಯ ಅವಶ್ಯಕತೆಯನ್ನು ಪೂರ್ತಿಗೊಳಿಸುವ ಕೆಲಸ ಆರಂಭಿಸಿದ್ದಾರೆ.

‘ವಂಡರ್ ಗ್ರಾಸ್’ ನಾಗ್ಪುರದಲ್ಲಿ ಬಿದಿರಿನ ಉತ್ಪಾದನೆ ಮಾಡುತ್ತದೆ. ನಾಗ್ಪುರದ ಕಾಡಿನಲ್ಲಿ ಬಿದಿರು ಬೆಳೆಯುತ್ತಾರೆ. ಮುಂದಿನ ಎರಡು ವರ್ಷದಲ್ಲಿ ಭುವನೇಶ್ವರ್, ಚೆನ್ನೈ ಮತ್ತು ಪುಣೆಯಲ್ಲಿ ಶೋ ರೂಮ್ ಆರಂಭಿಸುವ ಆಸೆ ಹೊಂದಿದ್ದಾರೆ. ಅಲ್ಲಿ ಅವರು ಬಿದಿರಿನಿಂದ ಮಾಡಿದ ವಿವಿಧ ವಸ್ತುಗಳನ್ನು ಒಂದೆಡೆ ಜನರಿಗೆ ಪರಿಚಯಿಸುವ ಕೆಲಸ ಮಾಡುವುದು ಅವರ ಆಶಯವಾಗಿದೆ.

ಜನರು ಬಿದಿರಿನಿಂದ ಮಾಡಿದ ಮನೆಯತ್ತ ಹೆಚ್ಚು ಆಕರ್ಷಿತರಾಗಲಿ..!

"ಜನರು ಇಂದಿಗೂ ಬಿದಿರಿನಿಂದ ಮಾಡಿದ ಕಟ್ಟಡಗಳ ಬಗ್ಗೆ ಹೆಚ್ಚು ನಂಬಿಕೆಯಿಲ್ಲ. ಅವರ ಪ್ರಕಾರ ಆ ಮನೆಗಳು ಪಕ್ಕಾ ಆಗಿರುವುದಿಲ್ಲ ಎಂತಾರೆ. ಜನರ ಈ ಮನೋಭಾವವನ್ನೇ ಬದಲಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂತಾರೆ ವೈಭವ್. ಜನರಿಗೆ ಈ ಮನೆ ಗಟ್ಟಿಯಾಗಿದ್ದು, ಅಲ್ಪ ವೆಚ್ಚದಲ್ಲಿ ಜನರ ಆಸೆಯನ್ನು ಪೂರೈಸಬಲ್ಲೆವು. ಪರಿಸರದ ದೃಷ್ಟಿಯಿಂದಲೂ ಇವು ಪರಿಸರ ಸ್ನೇಹಿಯಾಗಿವೆ. ಪ್ರಾಕೃತಿಕ ವಿಕೋಪದಲ್ಲೂ ಈ ಮನೆ ತುಂಬಾ ಸುರಕ್ಷಿತವಾಗಿವೆ".

image


"ಬಿದಿರಿನಿಂದ ಮಾಡಿದ ಮನೆಗಳು ಗ್ರಾಮಿಣ ಪ್ರದೇಶಗಳಲ್ಲಿ ಹೆಚ್ಚು ಪ್ರಖ್ಯಾತಿ ಆಗುತ್ತಿವೆ. ಸಣ್ಣ ಪ್ರಮಾಣದಲ್ಲಿ ವೇಗ ಪಡೆದುಕೊಳ್ಳುತ್ತಿದ್ದು, ಬಿದಿರಿನ ಮನೆಯತ್ತ ಜನ ಆಕರ್ಷಿತರಾಗುತ್ತಿದ್ದಾರೆ"..

ಪರಿಸರದ ದೃಷ್ಟಿಯಿಂದಲೂ ಇದು ಹೆಚ್ಚು ಉಪಯೋಗಕಾರಿ. ಹೆಚ್ಚು ಕಾರ್ಬೊನೈಟ್ ಆಕ್ಸೈಡ್ ಗ್ರಹಿಸುತ್ತದೆ. 35 ಪ್ರತಿಶತ ಹೆಚ್ಚು ಆಮ್ಲಜನಕವನ್ನು ಪರಿಸರಕ್ಕೆ ನೀಡುತ್ತದೆ. ಜೊತೆಗೆ ಬಿದಿರು ಬೆಳೆಸಲು ಯಾವುದೇ ರೀತಿಯ ರಾಸಾಯನಿಕ ಗೊಬ್ಬರದ ಅವಶ್ಯಕತೆಯಿಲ್ಲ. ಬಿದಿರನ ಮನೆಯನ್ನು ಎಲ್ಲೆಡೆ ಕಟ್ಟಬಹುದು. ಇದರಲ್ಲಿ ತ್ಯಾಜ್ಯ ಅನ್ನುವುದೇ ಇಲ್ಲ.


ಲೇಖಕರು: ಅಶುತೋಶ್ ಖಾಂತ್ವಲ್

ಅನುವಾದಕರು: ಎನ್.ಎಸ್ ರವಿ