ಸ್ಟಾರ್ಟ್ಅಪ್ ಗಳ ತವರು ಮನೆ ಕೋರಮಂಗಲ..!

ಭಾವನಾ

0

ಈಗ ತಾನೆ ಚಿಗುರೊಡೆಯುತ್ತಿರೋ ಸ್ಟಾರ್ಟ್ ಅಪ್ ಕಂಪನಿಗಳ ರಾಷ್ಟ್ರ ರಾಜಧಾನಿಯಾಗುವ ದಾರಿಯಲ್ಲಿ ಭಾರತ ಸಾಗುತ್ತಿದೆ. ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆಯನ್ನೂ ನೀಡಿದ್ದಾರೆ. ಇದೀಗ ಸ್ಟಾರ್ಟ್ ಅಪ್ ಯುಗದತ್ತ ದಾಪುಗಾಲಿಡುತ್ತಿರೋ ಇಡೀ ಇಂಡಿಯಾಗೇ ಸ್ಟಾರ್ಟ್ ಅಪ್ ತವರು ಮನೆಯಾಗಿರೋದು, ಸ್ಟಾರ್ಟ್ ಅಪ್ ಕಂಪನಿಗಳ ಕ್ಯಾಪಿಟಲ್ ನಮ್ಮ ಹೆಮ್ಮೆಯ ಬೆಂಗಳೂರು. ಅದರಲ್ಲೂ ಸ್ಟಾರ್ಟ್ ಅಪ್ ಕಂಪನಿಗಳ ಫೆವರಿಟ್ ನಮ್ಮ ಕೋರಮಂಗಲ.

ಹೌದು, ಸಿಲಿಕಾನ್ ಸಿಟಿಯ ಕೋರಮಂಗಲ ಇಡೀ ದೇಶವನ್ನೇ, ಅಂತರಾಷ್ಟ್ರೀಯ ಬ್ಯುಸಿನೆಸ್ ಮೆನ್ ಗಳನ್ನೇ ತನ್ನತ್ತ ಸೆಳೆಯುತ್ತಿರೋದಕ್ಕೆ ಮುಖ್ಯ ಕಾರಣ ಇಲ್ಲಿ ಚಿಗುರೊಡೆದು ಹೆಮ್ಮರವಾಗಿ ಬೆಳೆದಿರೋ ಸ್ಟಾರ್ಟ್ ಅಪ್ ಕಂಪನಿಗಳು.

ಫ್ಲಿಫ್​ಕಾರ್ಟ್ ಹುಟ್ಟಿದ್ದೇ ಕೋರಮಂಗಲದಲ್ಲಿ...!

ನೂರಾರು ಬಿಲಿಯನ್ ವ್ಯವಹಾರ ನಡೆಸುತ್ತಿರೋ ಸಚಿನ್ ಬನ್ಸಾಲಿಯವರ ಫ್ಲಿಪ್ಕಾರ್ಟ್ ಯಾರಿಗೆ ತಾನೇ ಗೊತ್ತಿಲ್ಲ... ಆದ್ರೆ ಫ್ಲಿಪ್ಕಾರ್ಟ್ ಅನ್ನೋ ಇಂದಿನ ಸಕ್ಸಸ್ ಸ್ಟೋರಿಯ ರೋಚಕ ಕಥೆ ಪ್ರಾರಂಭವಾಗಿದ್ದೂ ಇದೇ ಕೋರಮಂಗಲದಲ್ಲಿ. ಕೋರಮಂಗಲದ ಫೋರಂ ಜಂಕ್ಷನ್ ಬಳಿ ಇರುವ ಕೋಸ್ಟಾ ಕಾಫಿ ಎನ್ನೋ ಕೆಫೆಯಲ್ಲಿ ಕುಳಿತು ಮಾತಕತೆ ನಡೆಸುತ್ತಲೇ ಬೆಳೆದ ಸ್ಟಾರ್ಟ್ ಅಪ್ ಕಂಪನಿ ಫ್ಲಿಪ್ ಕಾರ್ಟ್.

ಇನ್ನು ಟ್ಯಾಕ್ಸಿ ಸರ್ವೀಸ್ ಓಲಾ ದೇಶದಾದ್ಯಂತ ಮಾಡಿರೋ ಮೋಡಿ ಎಲ್ಲರಿಗೂ ಗೊತ್ತು. ಮುಂಬೈ ನಲ್ಲಿ ಹುಟ್ಟಿದ್ರೂ ಕೂಡ ಓಲಾ ಕಂಪನಿ ಓಡೋಡಿ ಬಂದು ನೆಲೆ ಕಂಡು ಕೊಂಡಿದ್ದು ಇದೇ ಕೋರಮಂಗಲದ.ಲ್ಲಿ.ಕೋಸ್ಟಾ ಕಾಫಿ ಎನ್ನೋ ಕೆಫೆಯಲ್ಲಿಯೇ ಬರೋಬ್ಬರೀ 10 ಕ್ಕೂ ಹೆಚ್ಚು ಸಕ್ಸಸ್​ಫುಲ್ ಸ್ಟಾರ್ಟ್ಅಪ್ ಗಳು ಜನ್ಮ ತಳೆದಿವೆ ಅಂದ್ರೆ ಅಚ್ಚರಿಯ ಜೊತೆಗೆ ಹೆಮ್ಮೆಯೂ ಆಗತ್ತೆ. ಇವತ್ತಿಗೂ ಕೋರಮಂಗಲದಲ್ಲಿ ಶೇ.90 ರಷ್ಟು ಸ್ಟಾರ್ಟ್ ಅಪ್ ಕಂಪನಿಗಳ ಜನ್ಮ ತಳೆದಿವೆ, ತಳೆಯುತ್ತಲೇ ಇವೆ.

ಫುಡ್ ಡೆಲಿವರಿ ಆ್ಯಪ್​ ಸ್ವಿಗ್ಗಿ, ಟ್ಯೂಟರ್ ವಿಸ್ತಾ, ಮನೆ ಮನೆಗೆ ದಿನಸಿ ಸಾಮಾನು ತಲುಪಿಸುವ ಬಿಗ್ ಬಾಸ್ಕೆಟ್, ಹೋಮ್ ಲೇನ್.. ಒಂದಾ ಎರಡಾ ಈ ರೀತಿ ಸಾಲು ಸಾಲು ಸ್ಟಾರ್ಟ್ ಅಪ್ ಕಂಪನಿಗಳ ತವರು ಮನೆ ಕೋರಮಂಗಲ.

ಕೋರಮಂಗಲದ ಮನೆ ಮನೆಗಳಲ್ಲಿಯೂ ಅಪಾರ್ಟ್​ಮೆಂಟ್ ಗಳಲ್ಲಿ, ಕೆಫೆಗಳಲ್ಲಿ ಸ್ಟಾರ್ಟ್ ಅಪ್ ಕಂಪನಿಗಳ ದೊಡ್ಡ ಚರ್ಚೆ ನಡೆಯುತ್ತಲೇ ಇರುತ್ತಿದೆ. ಅದರಲ್ಲೂ 23 ರಿಂದ 30ರ ಒಳಗಿನ ಯುವಕರು ಸ್ಟಾರ್ಟ್ ಅಪ್ ಕಂಪನಿಗಳನ್ನು ಸ್ಟಾರ್ಟ್ ಮಾಡೋದಕ್ಕೆ ದೊಡ್ಡ ಚರ್ಚೆಯಲ್ಲಿ ತೊಡಗಿದ್ದಾರೆ. ಇಂಥ ಸ್ಟಾರ್ಟ್ ಅಪ್ ಗಳಿಗೆ ಹಣ ಹೂಡೋದಕ್ಕೆ ದೊಡ್ಡ ದೊಡ್ಡ ಬಿಲಿಯನೇರ್ ಗಳೇ ಸಾಲುಗಟ್ಟಿ ನಿಂತಿದ್ದಾರೆ ಎನ್ನೋದು ಇಂದಿನ ವಾಸ್ತವ ಸಂಗತಿ. ರತನ್ ಟಾಟಾ, ಇನ್ಫೋಸಿಸ್ ನಾರಾಯಣ ಮೂರ್ತಿ, ನಂದನ್ ನೀಲೇಕಣಿ, ಯಂತಹ ಘಟಾನುಘಟಿಗಳು ಸ್ಟಾರ್ಟ್ ಅಪ್ ಕಂಪನಿಗಳ ಏಲೆ ಹಣ ಹೂಡಿದ್ರೆ, ಇನ್ನೂ ಕೆಲವು ಕಂಪನಿಗಳು ಸ್ಟಾರ್ಟ್ ಅಪ್ ಗಳ ಮೇಲೆ ಬಂಡವಾಳ ಹೂಡುತ್ತಿವೆ.

ಸ್ಟಾರ್ಟ್ ಅಪ್ ಇಂಡಿಯಾ-ಸ್ಟ್ಯಾಂಡ್ ಅಪ್ ಇಂಡಿಯಾ...

ಪ್ರಧಾನಿ ನರೇಂದ್ರ ಮೋದಿಯವರ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಸ್ಟಾರ್ಟ್ ಅಪ್ ಇಂಡಿಯಾ ಪ್ರಪಂಚದಲ್ಲಿ ಭಾರತವನ್ನು ಸ್ಟಾರ್ಟ್ ಅಪ್ ಗಳ ತವರುಮನೆಯನ್ನಾಗಿ ಮಾಡುವ ಸ್ಕೆಚ್ ರೂಪಿಸಿದೆ. ಅಷ್ಟಕ್ಕೂ ಮೊದಲೇ ಬೆಂಗಳೂರು ಅದರಲ್ಲೂ ಕೋರಮಂಗಲ ಸ್ಟಾರ್ಟ್ ಅಪ್ ಗಳ ರಾಜಧಾನಿಯಾಗಿ ಬೆಳೆದು ನಿಂತಿದೆ.

ಕೋರಮಂಗಲದಿಂದ ಇದೀಗ ಸ್ಟಾರ್ಟ್ ಅಪ್ ಕಂಪನಿಗಳು ನಿಧಾನವಾಗಿ ಎಚ್ ಎಸ್ಆರ್ ಲೇಔಟ್ ನತ್ತ ಹೊರಳಿಕೊಳ್ಳುತ್ತಿದ್ದು ಕೋರಮಂಗಲ ಸುತ್ತಮುತ್ತ 4 ರಿಂದ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿಯೇ ಸ್ಟಾರ್ಟ್ ಅಪ್ ಕಂಪನಿಗಳು ಬೃಹದಾಕಾರವಾಗಿ ಬೆಳೆದು ನಿಲ್ಲುತ್ತಿವೆ.

ಕೋರಮಂಗಲಕ್ಕೂ ಸ್ಟಾರ್ಟ್​ಅಪ್​​ಗೂ ಏನಿದೆ ಸಂಬಂಧ...?

ಕೋರಮಂಗಲ ವಾಸ್ತವ್ಯದ ದೃಷ್ಟಿಯಿಂದ ನೋಡಿದರೂ ಅತ್ಯುತ್ತಮ ಪ್ರದೇಶ. ಇಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಕೂಡ ಹೆಚ್ಚು. ಜೊತೆಗೆ ಇಲ್ಲಿನ ಬ್ಯುಸಿನೆಸ್ ಡಿಸ್ಕಷನ್ ಗೆ ತೆರೆದುಕೊಂಡಿರುವ ಕೆಫೆ, ರೆಸ್ಟೋರೆಂಟ್ ಗಳ ಸಂಖ್ಯೆಯೂ ಹೆಚ್ಚಿದೆ. ಹೊರ ರಾಜ್ಯಗಳಿಂದ ವಲಸಿಗರ ಸಂಖ್ಯೆ ,ಉದ್ಯೋಗಿಗಳ ಸಂಖ್ಯೆ ಕೋರಮಂಗಲದಲ್ಲಿ ಹೆಚ್ಚಿದ್ದು ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುವ ಮನಸ್ಥಿತಿ ಇಲ್ಲಿನ ಜನರದ್ದು. ಹೀಗಾಗಿಯೇ ಫ್ಲಿಫ್ ಕಾರ್ಟ್ ನಿಂದ ಹಿಡಿದು ಸ್ವಿಗ್ಗಿಯವರೆಗೆ ಸ್ಟಾರ್ಟ್ಅಪ್ ಅಂದಾಕ್ಷಣ ಕೋರಮಂಗಲವೇ ನೆನಪಾಗೋದು.

ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿರುವ ಸ್ಟಾರ್ಟ್ ಅಪ್ ಇಂಡಿಯಾ ದೇಶವನ್ನು ಸ್ಟ್ಯಾಂಡ್ ಅಪ್ ಮಾಡೋದ್ರಲ್ಲಿ ಎರಡು ಮಾತಿಲ್ಲ. ಯೂತ್ ಎಂಟ್ರಪ್ರಿನರ್ ಪಾಲಿಗೆ ಹೊಸ ಬಂಡವಾಳ ಹೂಡುವವರ ಸಂಖ್ಯೆಯೂ ಹೆಚ್ಚುತ್ತಿದ್ದು ದೇಶದ ಅಭಿವೃದ್ದಿಯಲ್ಲಿ ಬದಲಾವಣೆ ಖಂಡಿತ ಸಾಧ್ಯವಿದೆ. ಇದೇ ಕಾರಣಕ್ಕೆ ಕೋರಮಂಗಲ ಸ್ಟಾರ್ಟ್ ಅಪ್ ಹಬ್ ಆಗಿ ಬೆಳೆದಿದ್ದು, ಮುಂದೆ ಬೆಂಗಳೂರು ಸ್ಟಾರ್ಟ್ ಅಪ್ ಕಂಪನಿಗಳ ರಾಜಧಾನಿಯಾಗೋದ್ರಲ್ಲಿ ಡೌಟೇ ಇಲ್ಲ ಅಂತಾರೆ ಹೊಸದಾಗಿ ಸ್ಟಾರ್ಟ್ ಅಪ್ ಕಂಪನಿ ಬ್ರೋ4ಯು ಸ್ಥಾಪಿಸಿರೋ ಸಿಇಓ ಪ್ರಮೋದ್ ಹೆಗ್ಡೆ.

ಸದ್ಯಕ್ಕೆ ಸಿಲಿಕಾನ್ ಸಿಟಿ, ಐಟಿ-ಬಿಟಿ ಸಿಟಿ ಅನ್ನೋ ಹೆಗ್ಗಳಿಕೆಗಳನ್ನು ಹೊಂದಿರುವ ಬೆಂಗಳೂರು ಇನ್ನು ಕಲೆವೇ ದಿನಗಳಲ್ಲಿ ಸ್ಟಾರ್ಟ್ ಅಪ್ ಸಿಟಿಯಾಗಿ ದೊಡ್ಡ ಐಕಾನ್ ಆಗೋದ್ರಲ್ಲಿ ಕನ್ನಡಿಗರ ಹೆಮ್ಮೆಯೂ ಇದೆ.

Related Stories