2015 ಸ್ನ್ಯಾಪ್ ಡೀಲ್ ಗೆ ಯಶಸ್ಸಿನ ವರ್ಷ

ಟೀಮ್ ವೈ ಎಸ್

0

ಅಲ್ಲಿ ಯಶಸ್ಸಿನ ಕಥೆಗಳಿಗೆ, ಸೋಲಿನ ನಿರಾಶೆಗಳಿವೆ. ಆದರೆ, ಗೆಲುವನ್ನು ಆಸ್ವಾದಿಸುವುದರಿಂದ ಎಲ್ಲವನ್ನೂ ಮರೆತುಬಿಡಬಹುದು. ಏಳು-ಬೀಳುಗಳ ಹಾದಿಯಲ್ಲಿ ಗೆಲುವಿನ ಗುರಿ ತಲುಪುತ್ತಿರುವ ಸ್ನ್ಯಾಪ್ ಡೀಲ್ ಯಶಸ್ಸು ಇಂತಹ ಆಸ್ವಾದಕ್ಕೊಂದು ಉದಾಹರಣೆಯಾಗಿ ನಿಲ್ಲುತ್ತದೆ.

2000ದ ಮಧ್ಯಭಾಗದಲ್ಲಿ ಏಷ್ಯಾದಲ್ಲಿ ಇ-ಕಾಮರ್ಸ್ ನ ಉತ್ಕರ್ಷ ಆರಂಭವಾಗಿತ್ತು. 2011ರ ನವೆಂಬರ್ ನಲ್ಲಿ ಚೀನಾದ ಅಲಿಬಾಬಾ ದಿಂದ ಪ್ರೇರಿತಗೊಂಡ ಕುನಾಲ್ ಬಹಲ್ ಮತ್ತು ರೋಹಿತ್ ಬನ್ಸಾಲ್ ಸೇರಿಕೊಂಡು ಸ್ನ್ಯಾಪ್ ಡೀಲ್ ಹುಟ್ಟುಹಾಕಿದರು. ಇದು ದೇಶದ ಮೊದಲ ಆನ್ಲೈನ್ ಮಾರ್ಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೇ ಹೊತ್ತಿನಲ್ಲಿ ಫ್ಲಿಪ್ಕಾರ್ಟ್ ಕೂಡಾ ಅಂಬೆಗಾಲಿಡಲು ಆರಂಭಿಸಿತ್ತು. ಆದರೆ, ಹೊಸತನಗಳೊಂದಿಗೆ ಈ ಸಂಸ್ಥೆಗಳು ತಮ್ಮ ಮಾರುಕಟ್ಟೆ ಸೃಷ್ಟಿಸಿಕೊಂಡವು.

ಜಾಗತಿಕ ಡೀಲರ್ ಇ-ಬೇ ಅದಾಗಲೇ ಭಾರತದಲ್ಲಿ ಚಟುವಟಿಕೆ ಆಂಭಿಸಿತ್ತು. ಅಚ್ಚರಿಯೆಂದರೆ, ಇಬೇ ಮತ್ತು ಆಲಿಬಾಬಾ ಎರಡೂ ಸ್ನ್ಯಾಪ್ ಡೀಲ್ ಈಗ ಬಂಡವಾಳ ಹೂಡಿವೆ.

ಇಂದು ಸ್ನ್ಯಾಪ್ ಡೀಲ್ ಸುಮಾರು 500 ವಿಭಾಗಗಳಲ್ಲಿ 20 ದಶಲಕ್ಷ ಉತ್ಪನ್ನಗಳನ್ನು ಒದಗಿಸುತ್ತಿದೆ. 100 ದಶಲಕ್ಷ ಗ್ರಾಹಕರು ಹಾಗೂ 2,00,000 ವರ್ತಕರು ಸ್ನ್ಯಾಪ್ ಡೀಲ್ ಜೊತೆಗೆ ಇದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ವ್ಯಾಪಾರಿಗಳ ಸಂಖ್ಯೆಯನ್ನು 1 ದಶಲಕ್ಷಕ್ಕೆ ಏರಿಸುವ ಗುರಿ ಹಾಕಿಕೊಂಡಿದೆ ಸ್ನ್ಯಾಪ್ ಡೀಲ್.

ಹತ್ತು ಸಂಸ್ಥೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಹಾಗೂ 1.9 ಶತಕೋಟಿ ಡಾಲರ್ ಹೂಡಿಕೆಯೊಂದಿಗೆ ದೆಹಲಿ ಮೂಲದ ಈ ಸಂಸ್ಥೆ ಈಗ 2 ಶತಕೋಟಿಗೂ ಹೆಚ್ಚಿನ ಮೌಲ್ಯದೊಂದಿಗೆ ಭಾರತದ 8 ಯೂನಿಕಾರ್ಗನ್ ಗಳ ಪೈಕಿ ಒಂದೆನಿಸಿದೆ. ಮಾರ್ಚ್ 2016ರೊಳಗೆ ಒಟ್ಟು ಉತ್ಪನ್ನ ಮೌಲ್ಯವನ್ನು 8-10 ಬಿಲಿಯನ್ ಡಾಲರ್ಗೆ ಏರಿಸಲು ಸಂಸ್ಥೆ ಚಿಂತನೆ ನಡೆಸಿದೆ.

ಇ-ಕಾಮರ್ಸ್ ಸುನಾಮಿಯು ಭಾರತದಲ್ಲಿ ಸಾಂಪ್ರದಾಯಿಕ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸ್ನ್ಯಾಪ್ ಡೀಲ್ 2015, ಅತ್ಯದ್ಭುತ ವರ್ಷವಾಗಿ ಪರಿಣಮಿಸಿದೆ. ಸರಿ ಹಾಗೂ ತಪ್ಪು ಕಾರಣಗಳಿಗೆ ಹೆಡ್ಲೈನ್ಸ್ ಆಗುತ್ತಿದ್ದ ಸ್ನ್ಯಾಪ್ ಡೀಲ್ ವರ್ಷಪೂರ್ತಿ ಸುದ್ದಿಯಲ್ಲಿದ್ದಂತೂ ನಿಜ. ಅಷ್ಟೇ ಅಲ್ಲ, ಫ್ಲಿಪ್ಕಾರ್ಟ್ ಮತ್ತು ಅಮೇಜಾನ್ ಜೊತೆಗೆ ತ್ರಿಕೋನ ಸ್ಪರ್ಧೆಗೂ ಇಳಿದಿತ್ತು.

2015ರಲ್ಲಿ ಸ್ನ್ಯಾಪ್ ಡೀಲ್ ಹೆಜ್ಜೆಗುರುತು ಹೀಗಿದೆ..

ಜನವರಿ : ಟಿವಿ ಕಾಮರ್ಸ್ ಗೆ ಎಂಟ್ರಿ : ಭಾರತದಲ್ಲಿ ಅಂತರ್ಜಾಲಕ್ಕಿಂತಲೂ ಟಿವಿಗೆ ದೊಡ್ಡ ಜಾಲವಿದೆ. ಸ್ನ್ಯಾಪ್ ಡೀಲ್ ಇದೀಗ ಈ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದೆ. ಟಿವಿ ಕಾಮರ್ಸ್ ಮೂಲಕ ಮೊದಲ ವರ್ಷ 500 ಕೋಟಿ ವ್ಯವಹಾರ ನಡೆಸುವ ಗುರಿ ಹಾಕಿಕೊಂಡಿದೆ.

ಫೆಬ್ರವರಿ : ಎಕ್ಸ್ ಕ್ಲ್ಯೂಸೀವ್ ಸಿವ್ಲಿ ಇನ್ ಖರೀದಿಸಿದ ಸ್ನ್ಯಾಪ್ ಡೀಲ್

ಎಕ್ಸ್ಕ್ಲೂಸಿವ್ಲಿ.ಇನ್ ಖರೀದಿಯ ಮೂಲಕ ಸ್ನ್ಯಾಪ್ಡೀಲ್ ಫ್ಯಾಷನ್ ಮಾರುಕಟ್ಟೆಗೂ ಲಗ್ಗೆ ಇಟ್ಟಿದೆ. ಮೈಂತ್ರಾವನ್ನು ಫ್ಲಿಪ್ಕಾರ್ಟ್ ಖರೀದಿಸಿದ ಬೆನ್ನಲ್ಲೇ ಸ್ನ್ಯಾಪ್ ಡೀಲ್ ಈ ಡೀಲ್ ಮುಗಿಸಿತ್ತು. ಇ-ಕಾಮರ್ಸ್ ಕ್ಷೇತ್ರದಲ್ಲಿ ಫ್ಯಾಷನ್ ಮಾರುಕಟ್ಟೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ.

ಮಾರ್ಚ್ : ರುಪೀಪವರ್ ನಲ್ಲಿ ಬಂಡವಾಳ ಹೂಡಿಕೆ

ಆರ್ಥಿಕ ಸೇವೆಗಳನ್ನೂ ಒದಗಿಸಿದ ಭಾರತದ ಪ್ರಪ್ರಥಮ ಆನ್ಲೈನ್ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಈ ಸ್ನ್ಯಾಪ್ ಡೀಲ್ ಪಾತ್ರವಾಗಿದೆ.

ಗೋಜಾವಾದಲ್ಲಿ ಹೂಡಿಕೆ ಮಾಡುವ ಮೂಲಕ ಸರಕು ಸಾಗಾಟ ಕ್ಷೇತ್ರಕ್ಕೂ ಪದಾರ್ಪಣೆ ಮಾಡಿದೆ

ಈ ವರ್ಷದಲ್ಲಿ 5-6 ಸಂಸ್ಥೆಗಳ ಖರೀದಿಗಾಗಿ ಸ್ನ್ಯಾಪ್ ಡೀಲ್ 1 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ರೋಹಿತ್ ಬನ್ಸಾಲ್ ಘೋಷಿಸಿದ್ದರು.

ಏಪ್ರಿಲ್ : ಫ್ರೀಚಾರ್ಜ್ ಖರೀದಿ

400 ಮಿಲಿಯನ್ ಡಾಲರ್ ಗಳಿಗೆ ಸ್ನ್ಯಾಪ್ ಡೀಲ್ ಫ್ರೀಚಾರ್ಜ್ ಅನ್ನು ಖರೀದಿಸುವ ಮೂಲಕ ಮೊಬೈಲ್ ಕಾಮರ್ಸ್ ಕ್ಷೇತ್ರದ ಮುಂಚೂಣಿ ಸಂಸ್ಥೆಯಾಗಿ ಹೊರಹೊಮ್ಮಿತು. ಸೆಪ್ಟಂಬರ್ ತಿಂಗಳಿನಲ್ಲಿ ಫ್ರೀಚಾರ್ಜ್ ಮೂಲಕ ಸ್ನ್ಯಾಪ್ ಡೀಲ್ ಡಿಜಿಟಲ್ ವ್ಯಾಲೆಟ್ಅನ್ನು ಬಿಡುಗಡೆ ಮಾಡಿತು.

ಮೇ : ಮಾರ್ಟ್ ಮೊಬಿ ಖರೀದಿ.

75%ನಷ್ಟು ವಹಿವಾಟು ಮೊಬೈಲ್ ವೇದಿಕೆಯಲ್ಲೇ ನಡೆಯುತ್ತಿರುವುದನ್ನು ಗಮನಿಸಿದ, ಸ್ನ್ಯಾಪ್ ಡೀಲ್ ಮೇ ತಿಂಗಳಿನಲ್ಲಿ ಮೊಬಿ ಮಾರ್ಟನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು.

ಜೂನ್ ತಿಂಗಳಿನಲ್ಲಿ ಮೊಬೈಲ್ ಸೊಲ್ಯೂಷನ್ಸ್ ಸಂಸ್ಥೆ ಲೆಟ್ಸ್ ಗಾಮೋ ಲ್ಯಾಬ್ ನಲ್ಲಿ ಬಂಡವಾಳ ಹೂಡಿಕೆ ಮಾಡಿತು. ಜೂನ್ನಲ್ಲಿ ಆನಂದ್ ಚಂದ್ರಶೇಖರನ್ ಅವರು ಸಿಪಿಓ ಆಗಿ ಸಂಸ್ಥೆ ಸೇರಿಕೊಂಡರು.

ಜುಲೈನಲ್ಲಿ ಫಿನೋಪೇಟೆಕ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಸರಕು ಡೆಲಿವೆರಿಗೆ ಭಾರೀ ಲಾಭವಾಗಲಿದೆ.

ಜುಲೈನಲ್ಲಿ ಶೋಪೋ ಆರಂಭಿಸುವ ಮೂಲಕ ಸ್ನ್ಯಾಪ್ ಡೀಲ್ ಗ್ರಾಹಕರು ಮತ್ತು ವರ್ತಕರ ಮಧ್ಯೆ ನೇರ ಸಂವಹನಕ್ಕೆ ಅವಕಾಶ ಕಲ್ಪಿಸಿದೆ.

ಆಗಸ್ಟ್ ನಲ್ಲಿ ಸ್ನ್ಯಾಪ್ ಡೀಲ್ ಕರಕುಶಲ ವಸ್ತುಗಳ ಮಾರಾಟವನ್ನು ಆರಂಭಿಸಿತು. ಸಿಲಿಕಾನ್ ವ್ಯಾಲಿ ಮೂಲದ ಜಾಹೀರಾತು ನವ್ಯೋದ್ಯಮ ರೆಡ್ಯೂಸ್ ಡಾಟಾವನ್ನು ಖರೀದಿ ಮಾಡಿತು. ಅಕ್ಟೋಬರ್ ನಲ್ಲಿ ಓಮ್ನಿ ಸೇವೆ ಆರಂಭಿಸಿತು. ಇದರಿಂದ ಗ್ರಾಹಕರು ಬಯಸಿದ ಮಳಿಗೆಗಳಲ್ಲಿ ಉತ್ಪನ್ನಗಳನ್ನು ಪರೀಕ್ಷಿಸಿ ನೋಡಲು ಹಾಗೂ ಖರೀದಿ ಮಾಡಿದರೆ ಕೇವಲ ಎರಡೇ ಗಂಟೆಯಲ್ಲಿ ಉತ್ಪನ್ನ ಡೆಲಿವರಿ ಮಾಡುವ ಭರವಸೆ ನೀಡಿತು.

ಕಳೆದ ದೀಪಾವಳಿಗೆ ಹೋಲಿಸಿದರೆ, ಈ ವರ್ಷದ ಹಬ್ಬದ ಸೀಸನ್ ಸೇಲ್ ನಲ್ಲಿ ಸ್ನ್ಯಾಪ್ ಡೀಲ್ ಮೂರು ಪಟ್ಟು ಅಧಿಕ ವಹಿವಾಟು ನಡೆಸಿದೆ. ಇದೇ ತಿಂಗಳಿನಲ್ಲಿ ಏರ್ಸೆಲ್ ಸಿಎಫ್ಒ ಆಗಿದ್ದ ಅನುಪ್ ವಿಕಲ್ ಅವರನ್ನು ಸಂಸ್ಥೆ ತನ್ನ ಬಳಗಕ್ಕೆ ಸೇರಿಸಿಕೊಂಡಿತು.

ನವೆಂಬರ್ ನಲ್ಲಿ ಹೊಸ ಮೊಬೈಲ್ ವರ್ಷನ್, ಸ್ನ್ಯಾಪ್ ಡೀಲ್ ಆರಂಭಿಸಿತು. ಆದರೆ, ಇದರ ಪ್ರಮುಖ ಪ್ರಚಾರ ರಾಯಭಾರಿ ಅಮಿರ್ ಖಾನ್ ಅವರು ಅಸಹಿಷ್ಣುತೆ ಬಗ್ಗೆ ನೀಡಿದ ಒಂದೇ ಒಂದು ಹೇಳಿಕೆ ಎಡವಟ್ಟು ಮಾಡಿಬಿಟ್ಟಿತು. ಅಮಿರ್ ಹೇಳಿಕೆಯ ಕೆಲವೇ ಗಂಟೆಗಳಲ್ಲಿ 22 ಸಾವಿರಕ್ಕೂ ಹೆಚ್ಚು ಜನ ಸ್ನ್ಯಾಪ್ ಡೀಲ್ ಆಪ್ ನ್ನು ಇನ್ ಆಕ್ಟೀವ್ ಮಾಡಿಕೊಂಡರು.

ಲೇಖಕರು - ಅಥಿರಾ ಎ ನಾಯರ್

ಅನುವಾದಕರು - ಪ್ರೀತಂ