ಆಹ್! ವೆಂಚರ್‍ನಿಂದ ಆಸ್ತಿ ಹಣಕಾಸು ಸಂಸ್ಥೆ ಓರಿಗಾ ಲೀಸಿಂಗ್ 7 ಕೋಟಿ ರೂ ಸಂಗ್ರಹಿಸಿದೆ

ಆರ್​​.ಪಿ.

0

ಸೃಷ್ಟಿ ಆಸ್ತಿ ಹಣಕಾಸು ವೇದಿಕೆಯಾದ ಓರಿಗಾ ಲೀಸಿಂಗ್ ಸಂಸ್ಥೆ ಆಹ್! ವೆಂಚರ್‍ನಿಂದ 7 ಕೋಟಿ ಸಂಗ್ರಹಿಸಿದೆ. ಇದೇ ವಲಯದ 500 ಸ್ಟಾರ್ಟ್‍ಅಪ್ ಮತ್ತು ಇತರೆ ಉನ್ನತ ಹೂಡಿಕೆದಾರರ ಗಮನ ಸೆಳೆದಿದೆ. ಈ ಹಣವನ್ನು ಆಸ್ತಿ, ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲದ ಗುತ್ತಿಗೆಗೆ ಬಳಸಲಾಗುತ್ತದೆ.

2013ರ ಮೇ ನಲ್ಲಿ ಶ್ರೀರಂಗ್ ತಾಂಬೆ ಪ್ರಾರಂಭಿಸಿದ ಓರಿಗಾ ಲೀಸಿಂಗ್, ಉನ್ನತ ಬೆಳವಣಿಗೆ ಇರುವ ಆರೋಗ್ಯ, ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ, ಪರ್ಯಾಯ ಇಂಧನ, ಉತ್ಪಾದನೆ ಮತ್ತು ಸೇವಾ ವಲಯದ ಕಂಪನಿಗಳಿಗೆ ಆಸ್ತಿ ಗುತ್ತಿಗೆ ಪಡೆಯಲು ಪರ್ಯಾಯ ಹಣಕಾಸಿನ ಮಾರ್ಗವಾಗಿದೆ.

“ಗ್ರಾಹಕರನ್ನು ಸೆಳೆಯುವುದರಿಂದ ಹಿಡಿದು ಆಸ್ತಿ ನಿರ್ವಹಣೆವರೆಗೂ ದೃಢವಾದ ತಂತ್ರಜ್ಞಾನ ನಿರ್ಮಾಣಕ್ಕೆ ಓರಿಗಾ ಲೀಸಿಂಗ್ ಹೂಡಿಕೆ ಮಾಡುವುದು ಒಂದು ಪ್ರಮುಖ ಅಂಶ. ಹೊಸ ಕಲ್ಪನೆಯ ಗುತ್ತಿಗೆ ಸಾಮಗ್ರಿಗಳ ಜತೆಯಲ್ಲಿ ನಾವು ವಿಶ್ವದ ಅತಿದೊಡ್ಡ ಫಿನ್‍ಟೆಕ್ ಲೀಸಿಂಗ್ ಕಂಪನಿಯಾಗಬೇಕೆಂಬ ಮಹದಾಸೆ ಹೊಂದಿದ್ದೇವೆ. ಅಲ್ಲದೇ ಭಾರತ ಒಂದರಲ್ಲೇ 100 ದಶಲಕ್ಷ ಡಾಲರ್ ಮೌಲ್ಯದ ಆಸ್ತಿಯನ್ನು ಮುಂದಿನ 3-4 ವರ್ಷಗಳಲ್ಲಿ ಕಾದಿರಿಸುವ ನಿರೀಕ್ಷೆಯಲ್ಲಿದ್ದೇವೆ” ಎನ್ನುತ್ತಾರೆ ಶ್ರೀರಂಗ್.

ತಮ್ಮ ಗ್ರಾಹಕರಿಗೆ ಲಾಭ ತರುವ ಆಸ್ತಿಗಳನ್ನು ಗುತ್ತಿಗೆ ತೆಗೆದುಕೊಳ್ಳುವೆಡೆ ಸ್ಟಾರ್ಟ್‍ಅಪ್ ಗಮನ ಹರಿಸುತ್ತದೆ. ಅಸೆಟ್ ಲೈಫ್ ಸೈಕಲ್ ಮ್ಯಾನೇಜ್‍ಮೆಂಟ್‍ಗೆ ಪರಿಹಾರ ಅಭಿವೃದ್ಧಿಪಡಿಸಿರೋ ಸಂಸ್ಥೆ, ಕೆಲಸಕ್ಕೆ ತೊಡಗಿಸಿದ ಬಂಡವಾಳ ಮತ್ತು ಮಾರ್ಕೆಟಿಂಗ್ ನಡುವೆ ಗ್ರಾಹಕರು ತಮ್ಮ ಬಂಡವಾಳ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಮಧ್ಯೆ ಓರಿಗಾ ಒಟ್ಟಾರೆಯಾಗಿ ಅವರ ಆಸ್ತಿಗಳನ್ನು ನೋಡಿಕೊಳ್ಳುತ್ತದೆ. ಆಂತರಿಕ ಸಂಚಯಗಳು ಮತ್ತು ಹಣಕಾಸು ಗುತ್ತಿಗೆ ಇವರ ಮುಂದಿನ ವಿಸ್ತರಣಾ ಯೋಜನೆ.

ಪರ್ಯಾಯ ಹಣಕಾಸಿಗೆ 50 ದಶಲಕ್ಷ ಡಾಲರ್ ಮಾರುಕಟ್ಟೆ ಇದೆಯೆಂದು ಅಂದಾಜು ಮಾಡಲಾಗಿದೆ. ಸಾಂಪ್ರದಾಯಿಕ ಹಣಕಾಸು ಲಭ್ಯವಿರುವ ಮತ್ತು ಹೊಸ ಕಾಲಘಟ್ಟದ ಸಂಸ್ಥೆಗಳ ಅವಶ್ಯಕತೆಗಳ ಮಧ್ಯೆ ದೊಡ್ಡ ಅಂತರವಿದೆ. ಈ ಅಂತರಕ್ಕೆ ಪರ್ಯಾಯ ಹಣಕಾಸು ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ.

ಆಹ್! ವೆಂಚರ್ಸ್ ಸಿಇಒ ಮತ್ತು ಸಂಸ್ಥಾಪಕ ಹರ್ಷದ್ ಲಹೋಟಿ ಹೇಳುವಂತೆ “ಉನ್ನತ ಬೆಳವಣಿಗೆ ಇರೋ ಭಾರತದ ಬ್ಯಾಂಕೇತರ ಮತ್ತು ಬ್ಯಾಂಕ್ ಅಡಿಯಲ್ಲಿರುವ ಎಸ್‍ಎಂಇ ಕಂಪನಿಗಳಿಗೆ ಓರಿಗಾ ಲೀಸಿಂಗ್ ಆಸ್ತಿ ಗುತ್ತಿಗೆ ಪರಿಹಾರ ಕೊಡುವ ಮೊದಲ ಸಂಸ್ಥೆಯಾಗಿದೆ. ಕಂಪನಿಗಳ ಗುರಿ ತಲುಪಲು ಇವರ ಹೈಬ್ರಿಡ್ ಮಾದರಿ ಕೊಡುಗೆಗಳು ಆನ್‍ಲೈನ್ ಡಿಸ್ಕವರಿ ಮತ್ತು ಆಫ್‍ಲೈನ್ ಹಣಕಾಸು ವಸ್ತುಗಳ ಪೂರೈಕೆ ಮಧ್ಯದ ಪರಿಪೂರ್ಣ ಮಿಶ್ರಣವಾಗಿದೆ. ತಮ್ಮಷ್ಟಕ್ಕೆ ತಾವೇ ಹಲವಾರು ದಶಲಕ್ಷ ಡಾಲರ್ ಮುಟ್ಟುವ ಸಾಮಥ್ರ್ಯ ಓರಿಗಾ ಲೀಸಿಂಗ್ ಇದೆ ಅನ್ನೋದು ನಮ್ಮ ನಂಬಿಕೆ. ಮುಂದಿನ ದಶಕದಲ್ಲಿ ಓರಿಗಾಗೆ ಬ್ಯಾಂಕ್ ಆಗುವ ಆಶಯವಿದ್ದು, ಪ್ರಸ್ತುತ ಭಾರತದ ಹಣಕಾಸು ನಡೆಗೆ ಕೊಡುಗೆಯನ್ನು ಕೊಡೊ ಸಾಮರ್ಥ್ಯವಿದೆ”.

ಓರಿಗಾ ಹೂಡಿಕೆದಾರ ಮತ್ತು ಮಂಡಳಿ ಸದಸ್ಯ ಉಲ್ಲಾಸ್ ದೇಶ್‍ಪಾಂಡೆ ಹೇಳುವಂತೆ, ಯೂರೋಪ್‍ನ 46% ಮತ್ತು ಅಮೆರಿಕದ 72% ಎಸ್‍ಎಂಇ ಫೈನಾನ್ಸ್ ಆಸ್ತಿ ಗುತ್ತಿಗೆ ಮೂಲಕ ನಡೆಯುತ್ತದೆ. ಆದ್ರೆ ಭಾರತದಲ್ಲಿ ಇದು ಒಟ್ಟು ಸಾಲ ಪಾವತಿ ಪ್ರಮಾಣದ ಕೇವಲ 1% ಮಾತ್ರ ಇದೆ. “ಮಧ್ಯಮ ವರ್ಗದ ಉದ್ಯಮಿಗಳ ಹಣಕಾಸು ಅಗತ್ಯತೆಗಳ ಸಹಾಯ ಪೂರೈಸಲು ಇದೊಂದು ಅತ್ಯುತ್ತಮ ಹೊಸ ರೀತಿಯ ವ್ಯಾಪಾರ ಮಾದರಿಯಾಗಿದೆ”.

ಇತ್ತೀಚಿನ ವರ್ಷಗಳಲ್ಲಿ ಫಿನ್‍ಟೆಕ್ ವರ್ಗವು ಜಾಗತಿಕವಾಗಿ ಹೆಚ್ಚು ಬೆಳವಣಿಗೆ ಕಂಡಿದೆ. ಆಕ್ಸೆಂಚರ್‍ನ ಇತ್ತೀಚಿನ ವರದಿಯಂತೆ 2014ರಲ್ಲಿ ಒಟ್ಟಾರೆ ಉದ್ಯಮ ಬಂಡವಾಳ ಹೂಡಿಕೆ 63% ಗೆ ಹೆಚ್ಚಾಗಿದ್ದನ್ನು ಹೋಲಿಸಿದರೆ, ಫಿನ್‍ಟೆಕ್ ಕಂಪನಿಗಳಿಗಳಲ್ಲಿ ಹೂಡಿಕೆಯು ಜಾಗತಿಕವಾಗಿ 201% ರಷ್ಟು ಹೆಚ್ಚಾಗಿದೆ. 2013ರ 4.05 ದಶಲಕ್ಷ ಡಾಲರ್ ಹೂಡಿಕೆಗೆ ವಿರುದ್ಧವಾಗಿ 2014ರಲ್ಲಿ ಜಾಗತಿಕ ಫಿನ್‍ಟೆಕ್ ಉದ್ಯಮ ಹೂಡಿಕೆ ಮೂರರಷ್ಟು ಹೆಚ್ಚಾಗಿದ್ದು 12.21 ದಶಲಕ್ಷ ಡಾಲರ್ ಹೂಡಿಕೆಯಾಗಿದೆ. ಹಣಕಾಸು ತಂತ್ರಜ್ಞಾನ ಪರಿಸರದ ಈಗಿನ ಅತ್ಯುತ್ತಮ ವಿಷಯಗಳೆಂದ್ರೆ ಡಾಟಾ ಅನಲಿಟಿಕ್ಸ್, ಪ್ರಿಡಿಕ್ಟೀವ್ ಮಾಡೆಲಿಂಗ್, ಮೊಬಿಲಿಟಿ, ಪೇಮೆಂಟ್ಸ್, ರಿಸ್ಕ್ ಮ್ಯಾನೇಜ್‍ಮೆಂಟ್ ಮತ್ತು ಭದ್ರತೆ.

ಓರಿಗಾ ಲೀಸಿಂಗ್‍ನ ಹೂಡಿಗೆ ಫಿನ್‍ಟೆಕ್ ವರ್ಗದ ತೀವ್ರ ಉತ್ಸಾಹ ಮತ್ತು ಅತಿಯಾದ ಸಂತೋಷದ ಒಂದು ಭಾಗವಾಗಿದೆ. “ಆದಾಯ ಗಳಿಕೆಗೆ ಆಸ್ತಿ ಗುತ್ತಿಗೆ ಮೂಲಕ ಹಣಕಾಸಿನ ಸಹಾಯವು ಸಾಮರ್ಥ್ಯವನ್ನು ಸೃಷ್ಟಿಸುತ್ತದೆ. ಸಾಮರ್ಥ್ಯ, ಕೆಲಸ ಮತ್ತು ಆದಾಯವನ್ನು ತರುತ್ತದೆ. ದೇಶದ ಜಿಡಿಪಿ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ. ಬಿ2ಬಿ ಹಂತದಲ್ಲಿ ಆರ್ಥಿಕ ಸೇರ್ಪಡೆಯ ಹೊಸ ವಿಚಾರವನ್ನು ಒತ್ತಿ ಹೇಳುತ್ತಿದ್ದೇವೆ” ಎನ್ನುತ್ತಾರೆ ಶ್ರೀರಂಗ್.

Related Stories