ಹೊಸ ಕನಸು ಕಟ್ಟಿಕೊಳ್ಳಲು ಪಾಠ ಹೇಳಿದ ಜರ್ನಲಿಸಂ: ಪತ್ರಿಕೋದ್ಯಮದಿಂದ ಉದ್ಯಮದ ಕಡೆ ವಾಲಿದ ವಿಶಾಖಾ ತಲ್ರೇಜಾ

ಟೀಮ್​​ ವೈ.ಎಸ್​​.

0

ಉದ್ಯಮಿಗಳಾದ ಪತು ಕೇಶ್ವಾನಿ, ಲೆಮೆನ್ ಟ್ರೀ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್‌ನ ರಾಹುಲ್ ಪಂಡಿತ್(ಈಗ ಜಿಂಜರ್ ಹೋಟೆಲ್‌ನ ಉದ್ಯಮಿ), ಓಬೇರಾಯ್ ಗ್ರೂಪ್ಸ್ ಆಫ್ ಹೋಟೆಲ್‌ನ ವಿಕ್ರಂ ಓಬೇರಾಯ್, ಮೇಕ್‌ ಮೈ ಟ್ರಿಪ್‌ನ ದೀಪ್ ಕಾಲ್ರಾ ಮತ್ತು ಯಾತ್ರಾ.ಕಾಮ್‌ನ ಶರತ್ ದಾಲ್‌ರಿಂದ ಪ್ರೇರಿತರಾದ ವಿಶಾಖಾ ತಲ್ರೇಜಾರವರು ತಾವೂ ಉದ್ಯಮಿಯಾಗಿ ಬದಲಾದರು.

ಪತ್ರಕರ್ತೆಯಾಗಿ ತಮ್ಮ ಜೀವನವನ್ನು ಆರಂಭಿಸಿದ ವಿಶಾಖಾಗೆ ರಿಪೋರ್ಟಿಂಗ್ ನೆಪದಲ್ಲಿ ಈ ಉದ್ಯಮಿಗಳ ಪರಿಚಯವಾಯಿತು. ಈ ಮೂಲಕ ಅವರು ಬೆಳೆದು ಬಂದ ದಾರಿಗಳ ಬಗ್ಗೆ ತಿಳಿಯಿತು.

ವಿಶಾಖಾ ತಲ್ರೇಜಾ ಉದ್ಯಮ ಕ್ಷೇತ್ರದ ಬೀಟ್‌ನಲ್ಲಿ ಸೇವಾಕ್ಷೇತ್ರಗಳು ಹಾಗೂ ಟ್ರಾವೆಲ್ ವಿಭಾಗದಲ್ಲಿ ರಿಪೋರ್ಟರ್ ಆಗಿ ಕಾರ್ಯನಿರ್ವಹಿಸಿದ್ದವರು. ಹಲವು ವರ್ಷಗಳ ಕಾಲ ಅವರು ಅನೇಕ ಹೋಟೆಲ್ ಮಾಲೀಕರನ್ನೂ ಭೇಟಿಯಾಗಿದ್ದಾರೆ. ಈ ಮೂಲಕ ಅವರ ಉದ್ಯಮದ ಹಾದಿಯನ್ನು ತಿಳಿದ ವಿಶಾಖಾ ತಾವೂ ಒಬ್ಬ ಸಮರ್ಥ ಉದ್ಯಮಿಯಾಗಲು ಬಯಸಿದರು.

ಹೀಗೆ ಹುಟ್ಟಿಕೊಂಡಿತು ಹೋಟೆಲ್ ಎಕ್ಸ್ ಪ್ಲೋರರ್. 2014ರ ಆಗಸ್ಟ್‌ ನಲ್ಲಿ ಈ ಹೋಟೆಲ್ ಎಕ್ಸ್ ಪ್ಲೋರರ್ ಉದ್ಯಮವನ್ನು ಆರಂಭಿಸಿದರು ವಿಶಾಖಾ. ಇದರಿಂದ ಪ್ರಯಾಣಿಕರಿಗೆ ಹಿಡನ್ ಜೆಮ್ಸ್ ಎಂಬ ಹೆಸರಿನಲ್ಲಿ ಅಲಂಕಾರಿಕ ವಸ್ತುಗಳ ಪರಿಚಯ ಮಾಡಿಕೊಡಲಾಗುತ್ತಿತ್ತು. ಪರ್ಯಾಯ ವಸತಿ ವ್ಯವಸ್ಥೆಗಳನ್ನು ಮಾಡುವ ಮೂಲಕ ಹೋಟೆಲ್ ಎಕ್ಸ್‌ ಪ್ಲೋರರ್ ತನ್ನ ಜನಪ್ರಿಯತೆಯನ್ನು ಸಾಧಿಸಿಕೊಂಡಿತು. ಪ್ರಯಾಣಿಕರು ಅನುಭವಾತ್ಮಕ ವಸತಿ ವ್ಯವಸ್ಥೆಯನ್ನು ಬಳಸುತ್ತಾರೆ. ಅಲ್ಲದೇ ವಿಲ್ಲಾಗಳು, ಹೋಮ್‌ ಸ್ಟೇಗಳಲ್ಲಿ ಉಳಿದುಕೊಂಡಾಗ ಆಗುವ ಅನುಭವವನ್ನು ಪಡೆಯಲು ಇಚ್ಛಿಸುತ್ತಾರೆ. ಇದಕ್ಕೆಲ್ಲಾ ಒಂದೇ ಜಾಗದಲ್ಲಿ ಪರಿಹಾರ ಸಾಧ್ಯ. ಅದು ಹೋಟೆಲ್ ಎಕ್ಸ್ ಪ್ಲೋರರ್.

ತಮ್ಮ ಹೋಟೆಲ್ ಎಕ್ಸ್ ಪ್ಲೋರರ್ ಉದ್ಯಮ ಬೆಳೆಯಲು ವಿಶಾಖಾ ಟ್ರಾವೆಲ್ ಸಂಘಟಕರನ್ನು ಬಳಸಿಕೊಳ್ಳುತ್ತಾರೆ. ಟ್ರಾವೆಲ್ ಪಾರ್ಟ್‌ನರ್ಸ್‌ ಗಳು ಜನರಿಗೆ ಬುಕಿಂಗ್ ಮಾಡಲು ಸಹಾಯ ಮಾಡುತ್ತಾರೆ. ಈ ಮೂಲಕ ಪ್ರವಾಸಿಗರಿಗೆ ಮಾಹಿತಿ ನೀಡುತ್ತಿದೆ ಹೋಟೆಲ್ ಎಕ್ಸ್ ಪ್ಲೋರರ್. ಈ ಹೋಟೆಲ್ ಎಕ್ಸ್ ಪ್ಲೋರರ್ ಹೋಟೆಲ್‌ಗಳಿಗೆ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದೆ.

ಉದ್ಯಮಿಯಾಗಿ ಪರಿವರ್ತನೆಗೊಂಡ ಅರ್ಥಶಾಸ್ತ್ರಪ್ರವೀಣೆ

ವಿಶಾಖಾ ಒಬ್ಬ ಅರ್ಥಶಾಸ್ತ್ರ ಪದವೀಧರೆ. ನವದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ. ಎಕಾನಮಿಕ್ ಟೈಮ್ಸ್, ಫೈನಾನ್ಶಿಯಲ್ ಎಕ್ಸ್ ಪ್ರೆಸ್ ಮತ್ತು ಟಿವಿ ಟುಡೇ ಸಮೂಹದಲ್ಲಿ ವಿಶಾಖಾ ಬಿಸಿನೆಸ್ ರಿಪೋರ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. 2006ರಲ್ಲಿ ಎಕನಾಮಿಕ್ಸ್ ಟೈಮ್ಸ್ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ವಿಶಾಖಾ 2013ರಲ್ಲಿ ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್‌ನಲ್ಲಿ ಪತ್ರಕರ್ತೆಯ ಜೀವನಕ್ಕೆ ವಿದಾಯ ಹೇಳಿದರು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರಭು ಚಾವ್ಲಾ ಅವರ ಜೊತೆ ಕಾರ್ಯನಿರ್ವಹಿಸುತ್ತಿದ್ದ ವಿಶಾಖಾಗೆ ಆನ್‌ಲೈನ್ ಮುಖಾಂತರ ಏನಾದರೂ ಮಾಡಬೇಕೆಂಬ ಇಚ್ಛೆ ಹುಟ್ಟಿಕೊಂಡಿತು. ಪ್ರಭು ಚಾವ್ಲಾರಿಗೆ ಲಿವೇರೇಜಿಂಗ್ ತಂತ್ರಜ್ಞಾನದ ಕುರಿತಾಗಿ ಅದಮ್ಯ ಆಸಕ್ತಿ ಇತ್ತು. ಅಲ್ಲದೇ ಅವರು ಸಾಮಾಜಿಕ ಜಾಲ ತಾಣಗಳ ಮೂಲಕ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಇದರಿಂದ ವಿಶಾಖಾಗೆ ಪ್ರೇರೇಪಣೆ ಸಿಕ್ಕಂತಾಯಿತು. ಅಲ್ಲದೇ ಈ ವೇಳೆಗಾಗಲೇ ವಿಶಾಖಾಗೆ ತಾವು ಹೆಚ್ಚು ದಿನಗಳ ಕಾಲ ಪತ್ರಕರ್ತೆಯಾಗಿ ಉಳಿಯುವುದು ಸಾಧ್ಯವಿಲ್ಲ ಎಂಬ ವಿಚಾರವೂ ಅರಿವಿಗೆ ಬಂದಿತ್ತು. ಹೀಗಾಗಿ ಏನಾದರೂ ಆನ್‌ಲೈನ್ ವೇದಿಕೆಯನ್ನು ಬಳಸಿಕೊಂಡು ಸೃಜನಾತ್ಮಕ ಕೆಲಸ ಮಾಡಬೇಕೆಂದು ನಿರ್ಧರಿಸಿದೆ ಎಂದು ತಿಳಿಸುತ್ತಾರೆ ವಿಶಾಖಾ.

ಒಬ್ಬ ಪ್ರವಾಸಿಗಳಾಗಿ, ಸ್ಪಾ ಹಾಗೂ ಸಾಮಾಜಿಕ ಜಾಲತಾಣಗಳ ಪ್ರೇಮಿಯಾಗಿರುವ ವಿಶಾಖಾ ಪ್ರವಾಸೋದ್ಯಮದ ಕುರಿತು ಬಹಳಷ್ಟು ಟ್ವೀಟ್ ಮಾಡುತ್ತಾರೆ.

ರಾಹುಲ್‌ ಯಾದವ್‌ರ ಕಥೆಯಿಂದ ಪ್ರೇರಿತರಾದ ವಿಶಾಖಾ

ಹೌಸಿಂಗ್. ಕಾಮ್‌ನ ಸಂಸ್ಥಾಪಕ ಹಾಗೂ ಸಿಇಓ ಆಗಿರುವ ರಾಹುಲ್ ಯಾದವ್‌ರಿಂದ ವಿಶಾಖಾ ಬಹಳಷ್ಟು ಸ್ಪೂರ್ತಿ ಪಡೆದಿದ್ದಾರೆ. ದೊಡ್ಡದೊಂದನ್ನು ನಿರ್ಮಿಸಲು ಹೊರಟು ಅದನ್ನು ತಾವೇ ನಾಶ ಮಾಡುವ ಅವರ ಕಾರ್ಯವಿಧಾನದ ಬಗ್ಗೆ ವಿಶಾಖಾ ಅಚ್ಚರಿ ವ್ಯಕ್ತಪಡಿಸುತ್ತಾರೆ. ಉದ್ಯಮ ಕ್ಷೇತ್ರಕ್ಕೆ ಪ್ರವೇಶ ಪಡೆಯುವ ಯಾರಾದರೂ ತಿಳಿದುಕೊಳ್ಳಲೇಬೇಕಾದ ವ್ಯಕ್ತಿತ್ವ ರಾಹುಲ್‌ರದ್ದು. ಉದ್ಯಮದ ಸಂಪೂರ್ಣವಿಚಾರವನ್ನು ಗಟ್ಟಿಗೊಳಿಸಿಕೊಳ್ಳಲು ರಾಹುಲ್‌ರೇ ತಮಗೆ ಸ್ಪೂರ್ತಿ ಎನ್ನುತ್ತಾರೆ ವಿಶಾಖಾ.

ಮಹಿಳಾ ಉದ್ಯಮಿಗಳ ಬಗ್ಗೆ ಪೂರ್ವಾಗ್ರಹ ಹೊಂದಿರುವ ಹಲವು ಮಂದಿಯನ್ನು ವಿಶಾಖಾ ಸಂದರ್ಶಿಸಿದ್ದಾರೆ. ಅವರಿಗೆ ಮಹಿಳಾ ಉದ್ಯಮಿಗಳ ಬಗ್ಗೆ ಇರುವ ಧೋರಣೆಯಿಂದ ವಿಶಾಖಾಗೆ ಮುಜುಗರ ಉಂಟಾದ ಸಂಧರ್ಭವೂ ಇದೆ.

ಮಹಿಳಾ ಉದ್ಯಮಿಗಳ ವೈಯಕ್ತಿಕ ವಿವರಗಳು ಹಾಗೂ ಅವರ ತಪ್ಪುಗಳನ್ನು ಜನರು ಭೂತಕನ್ನಡಿಯಲ್ಲಿ ಹುಡುಕುತ್ತಿರುತ್ತಾರೆ ಎನ್ನುತ್ತಾರೆ ವಿಶಾಖಾ.

ನೀವು ಮನೆಯ ಯಜಮಾನರೇ?, ನಿಮಗೆ ವಿವಾಹವಾಗಿದೆಯೇ? ನಿಮ್ಮ ಪತಿ ಏನು ಮಾಡುತ್ತಿದ್ದಾರೆ? ಇಂತಹ ಪ್ರಶ್ನೆಗಳನ್ನು ಮಹಿಳಾ ಉದ್ಯಮಿಗಳು ಎದುರಿಸಬೇಕಾಗಿರುತ್ತದೆ. ಆದರೆ ಇಂತಹ ಪ್ರಶ್ನೆಗಳನ್ನು ಎದುರಿಸಲು ತಮಗೆ ಇಷ್ಟವಿಲ್ಲ. ಭಾರತದಲ್ಲಿ ಪುರುಷನೊಬ್ಬ ಉದ್ಯಮ ಮಾಡುತ್ತಾನೆ ಎಂದರೆ ಅವನಿಗೆ ಸಿಗುವ ಗೌರವವೇ ಬೇರೆ. ಆದರೆ ಮಹಿಳೆ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರೆ ಅನೇಕ ಅನುಮಾನಗಳು,ಕುತೂಹಲಗಳು ಜನರನ್ನು ಕಾಡುತ್ತವೆ ಎನ್ನುತ್ತಾರೆ ವಿಶಾಖಾ

ಮನೆಯಲ್ಲಿರುವ ಮಾದರಿ ವ್ಯಕ್ತಿಗಳು

ವಿಶಾಖಾರ ತಂದೆಯೂ ಒಬ್ಬ ಉದ್ಯಮಿ. ವಿಶಾಖಾರ ಪ್ರಕಾರ ಅವರು ಅತ್ಯಂತ ಆತ್ಮವಿಶ್ವಾಸ ಹೊಂದಿರುವ, ತಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟಿರುವ ವ್ಯಕ್ತಿ. ಟಿಂಬರ್ ಮತ್ತು ಪ್ಲೈವುಡ್‌ ಬಿಸಿನೆಸ್‌ನಲ್ಲಿ ವಿಶಾಖಾರ ತಂದೆ ಮುಂದುವರೆದಿದ್ದಾರೆ. ವಿಶಾಖಾರ ಅತ್ತೆ ಮಾವ ಕೂಡ ಸರ್ಕಾರಿ ಉದ್ಯೋಗಿಗಳಾಗಿದ್ದು ವಿಶಾಖಾರಿಗೆ ಸಾಕಷ್ಟು ಬೆಂಬಲ ನೀಡುತ್ತಾರೆ.

ವಿಶಾಖಾರ ಪತಿ ರಜತ್ ಗುಹಾರಿಂದ ಕೂಡ ಅವರು ಪ್ರೇರಿತರಾಗಿದ್ದಾರೆ. ವಿಶಾಖಾ ಉದ್ಯಮಿಯಾಗುವ 6 ತಿಂಗಳ ಹಿಂದಷ್ಟೇ ರಜತ್ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಉದ್ಯಮ ಕ್ಷೇತ್ರದಲ್ಲಿ ಮುನ್ನುಗ್ಗಲು ವಿಶಾಖಾಗೆ ಅವರ ಪತಿಯೇ ಸ್ಪೂರ್ತಿ. ತಮ್ಮ ಸ್ವತಂತ್ರ ಪರಿಚಯ ಹಾಗೂ ಉದ್ಯಮಿಯಾಗಿ ಬೆಳೆಯುವುದನ್ನು ಕಂಡು ಸಂತೋಷಪಡುವ ವ್ಯಕ್ತಿ ಅವರು ಎಂದು ತಮ್ಮ ಪತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ವಿಶಾಖಾ. ಹೀಗೆ ಕುಟುಂಬಸ್ಥರ ಸಹಕಾರ ಪಡೆದಿರುವ ವಿಶಾಖಾಗೆ ಮುಂದೆ ಇನ್ನೂ ಹೆಚ್ಚಿದನ್ನು ಸಾಧಿಸುವ ಮನಸ್ಸಿದೆ.

Related Stories