ಮಹಿಳೆಯರು ಪುರುಷರಿಗಿಂತ ತಾಂತ್ರಿಕವಾಗಿ ಮುಂದು -ಪ್ರತೀಕ್ಷಾ ನಾಯರ್​​

ಟೀಮ್​ ವೈ.ಎಸ್​. ಕನ್ನಡ

0


ಇನ್ನೂ ಕಾಲೇಜಿನಲ್ಲಿ ಓದುತ್ತಿರುವ ಹುಡುಗಿ ಪ್ರತೀಕ್ಷಾ ನಾಯರ್​. ಅವರ ಪ್ರಕಾರ "ಮಹಿಳೆಯರು ಒಂದು ಸಣ್ಣ ಬ್ರೇಕ್ ತೆಗೆದುಕೊಂಡು ಬಂದ್ರೂ, ಅವರ ಮಕ್ಕಳ ಬೆಳವಣಿಗೆಯ ಜೊತೆ-ಜೊತೆಗೆ ಅವರ ಕರಿಯರ್ ಕೂಡ ಯಶಸ್ವಿಯಾಗಿ ನಿಭಾಯಿಸಬಲ್ಲರು".

ಕೇರಳದ ಕೊಲ್ಲಂನಲ್ಲಿ ಹುಟ್ಟಿ ಬೆಳೆದ ಹುಡುಗಿ ಪ್ರತೀಕ್ನಾ ನಾಯರ್​. ತಮ್ಮ ಜೀವನದ 9 ವರ್ಷವನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ. ಅವರ ಕುಟುಂಬ ಸದ್ಯ ತ್ರಿವೇಂಡ್ರಮ್​ನಲ್ಲಿದೆ. 2014ರಲ್ಲಿ ತಮ್ಮ ಶಿಕ್ಷಣದ ಸಲುವಾಗಿ ಪ್ರತೀಕ್ಷಾ ಬೆಂಗಳೂರಿಗೆ ಮರಳಿದ್ರು. ಸದ್ಯ ಅವರು, ಬೆಂಗಳೂರಿನಲ್ಲಿರುವ `ಇಂಟರ್​ನ್ಯಾಷ್​ನಲ್​ ಇನ್ಸಿಟಿಟ್ಯೂಟ್​ ಆಫ್ ಇನ್​​ಫಾರ್ಮೇಶನ್​​ ಟೆಕ್ನಾಲಜಿ' ಯಲ್ಲಿ ಎಂ.ಟೆಕ್ ವ್ಯಾಸಾಂಗ ಮಾಡುತ್ತಿದ್ದಾರೆ.


ಕೋಡಿಂಗ್​ನ ತಜ್ಞ ಹುಡುಗಿ

ಕಂಪ್ಯೂಟರ್ ಸೈನ್ಸ್ ಮತ್ತು ಪ್ರೋಗ್ರಾಮಿಂಗ್ ಬಗ್ಗೆ ಕಲಿತಿರುವ ಪ್ರತೀಕ್ಷಾ, ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್​ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. "ಹಲವು ಬಗೆ-ಬಗೆಯ ತರ್ಕಬದ್ದ ಸವಾಲುಗಳಿಗೆ ಸಮರ್ಪಪಕ ಪರಿಹಾರ ಹುಡುಕುವುದರಲ್ಲಿ, ಯಾವುದೇ ಒಂದು ಪ್ರೋಗ್ರಾಮಿಂಗ್ ಮಾಡುವಾಗ ಬರುವ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ತುಂಬಾ ಖಷಿಯಾಗುತ್ತೆ. ಈ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ನನಗೆ ಸಿಕ್ಕ ಸಮಯವನ್ನೆಲ್ಲಾ ಇಲ್ಲೇ ಏನಾದ್ರು ಹೊಸತನ್ನು ಮಾಡಲು ವಿನಿಯೋಗಿಸುತ್ತೇನೆ" ಎನ್ನುತ್ತಾರೆ ಪ್ರತೀಕ್ಷಾ.

ಇನ್ನು ತಮ್ಮ ಪ್ರೀತಿಯ ಕೆಲಸವಾದ ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಪ್ರತೀಕ್ಷ ಕಾಲಿಟ್ಟರು. ಆಗ ತಮಗೆ ಸಿಕ್ಕ ಸಮಯವನ್ನು ಅಮೂಲ್ಯವಾಗಿ ಬಳಸಿಕೊಳ್ಳುವುದು ಅವರ ವಿಚಾರವಾಗಿತ್ತು. ಅಲ್ಲದೆ ಅವರ ಹಳೆಯ ಕೆಲಸದಿಂದ ಹೆಚ್ಚು ಖುಷಿಯಾಗಿದ್ರು. " ನನ್ನ ಮೊದಲ ಸ್ಪರ್ಧಾತ್ಮಕ ಯೋಜನೆ ಮಾತ್ರ ಸಖತ್ ಬೇಸರ ತರಿಸುವಂತಿತ್ತು. ನಾನು ಕೇವಲ ಒಂದು ಪ್ರಶ್ನೆಗೆ ಮಾತ್ರ ಪರಿಹಾರ ಹುಡುಕುವಲ್ಲಿ ಸಫಲವಾದೆ. ಇದರಿಂದ ತುಂಬಾ ಬೇಸರವಾಗಿತ್ತು. ಹೇಗೋ ನನ್ನ ಗೆಳೆಯರು ನನಗೆ ಆತ್ಮವಿಶ್ವಾಸ ತುಂಬಿದ್ರು. ಇದು ನಿನ್ನ ಮೊದಲ ಪ್ರಾಜೆಕ್ಟ್ ಈಗಲೇ ಹತಾಶೆಯಾಗಬೇಡ, ಇದು ಕೇವಲ ಆರಂಭ ಇನ್ನು ಅನೇಕ ಅವಕಾಶಗಳು ನಿನಗೆ ಸಿಗಲಿವೆ. ನೀನು ಧೃಡ ಸಂಕಲ್ಪ, ಶ್ರದ್ದೆಯಿಂದ ಕೆಲಸ ಮಾಡು ಎಂಬ ಕಿವಿಮಾತು ಹೇಳಿದ್ರು" - ಪ್ರತೀಕ್ಷಾ

ಟೆಕ್ನಾಲಜಿಯಲ್ಲಿ ಮಹಿಳೆಯರು

ಅವರ ಬ್ಯಾಚಿನಲ್ಲಿ 33 ಹುಡುಗರು ಮತ್ತು 29 ಹುಡುಗಿಯರಿದ್ದಾರೆ. ಹೆಚ್ಚು ಕಮ್ಮಿ ಇಬ್ಬರು ಸಮಾನವಾಗಿದ್ದಾರೆ. ಆದರೆ ಅವರೆಂದು ತಾಂತ್ರಿಕ ಕ್ಷೇತ್ರದಲ್ಲಿ ಪುರುಷರ ಪ್ರಭಾವ ಹೆಚ್ಚಿದೆಯೆಂದು ಒಪ್ಪಿಕೊಳ್ಳಲ್ಲು ಸಿದ್ದರಿಲ್ಲ. "ಇಬ್ಬರು ಸಮಾನಂತರದಲ್ಲಿ ಸಮರ್ಥರಿದ್ದಾರೆ. ಆದರೆ ಶಾಲೆ ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ಹೆಣ್ಣುಮಕ್ಕಳನ್ನು ಸಮಾನವಾಗಿ ಕಾಣಬೇಕು. ಯಾಕಂದ್ರೆ ಯಾವುದೇ ಕಷ್ಟದ ಕೋರ್ಸ್ ತಾಂತ್ರಿಕತೆಗೆ ಸಂಬಂಧಿಸಿದ ವಿಷಯ ಬಂದರೆ ಹೆಣ್ಣು ಮಕ್ಕಳಿಂದ ಅದು ಆಗುವುದಿಲ್ಲ ಎಂಬ ವಾತಾವರಣ ಹೆಚ್ಚಿದೆ. ಅದು ಮಹಿಳೆಯರ ಆತ್ಮವಿಶ್ವಾಸ ಕುಂದಲು ಕಾರಣವಾಗುತ್ತಿದೆ. ಅದನ್ನು ಕೊನೆಗಾಣಿಸಿದಲ್ಲಿ. ಸ್ತ್ರೀ ಕೂಡ ಐಟಿ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರವೇಶ ಪಡೆಯಬಹುದು" ಎನ್ನುತ್ತಾರೆ.

ಮಹಿಳೆಯರ ಉದ್ಯೋಗ, ಅವರ ಕೆಲಸದ ಕಾರ್ಯ ವೈಖ್ಯರಿಯ ವಿಷಯ ಬಂದ್ರೆ, ಐಟಿ ತುಂಬಾ ಕಷ್ಟಕರ ಕೆಲಸ ಇಲ್ಲಿ ಖಾಸಗಿ ಜೀವನಕ್ಕೆ ಬೆಲೆಯಿಲ್ಲ ಎಂಬ ಮಾತಿದೆ. ಹಾಗಾಗಿಯೇ ಮಹಿಳೆಯರು ಬೇರೆ ಕ್ಷೇತ್ರದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅವರಿಗೆ ಹಲವು ಐಟಿ ಕ್ಷೇತ್ರದಲ್ಲಿ ಯಶಸ್ವಿಯಾದ ಮಹಿಳೆಯರ ಕಥೆಗಳು ಪ್ರೇರಣೆಯಾಗಬಲ್ಲವು. ಹೆಚ್ಚಾಗಿ ಮಹಿಳೆಯರು ವೈದ್ಯಕೀಯ, ನರ್ಸಿಂಗ್, ಆರ್ಟಿಟೆಕ್ಚರ್ ಮತ್ತು ಫ್ಯಾಶನ್ ಡಿಸೈನಿಂಗ್​​​ ಕ್ಷೇತ್ರವನ್ನು ತಮ್ಮ ವೃತ್ತಿಯಾಗಿ ಆಯ್ದುಕೊಳ್ಳಲ್ಲು ಇಷ್ಟಪಡ್ತಾರೆ. ಆದಾಗ್ಯೂ ಈಗ ಮೊದಲಿಗಿಂತಲೂ ಹೆಚ್ಚು ಮಹಿಳೆಯರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಅವಳ ಹೆಜ್ಜೆ ಗುರುತು

ಟೆಕ್ನಾಲಜಿಯನ್ನು ಸೂಕ್ತವಾಗಿ ಅರಿತಿರುವ ನಿಟ್ಟಿನಲ್ಲಿ ದೊಡ್ಡ ಸಾಧನೆ ಮಾಡಬೇಕೆಂಧು ಹೊರಟಿರುವ ಪ್ರತೀಕ್ಷ, ದೊಡ್ಡ-ದೊಡ್ಡ ಕೆಲಸ ಮಾಡುವ ಗುರಿ ಹೊಂದಿದ್ದಾರೆ. "ಮುಂದಿನ ದೊಡ್ಡ ಕೆಲಸ ಅಂದರೆ. `ಬಿಗ್ ಡಾಟಾ ಅನಲಿಟಿಕ್ಸ್ ಮತ್ತು ಹ್ಯಾಂಡಲಿಂಗ್' ಮಾಡುವುದು. ಈಗಿನ ಜಗತ್ತು ಅದ್ಭುತವಾಗಿದೆ. ಡಾಟಾ ವಿಜ್ಞಾನಿಯಾಗಬೇಕೆಂಬುದು ನನ್ನ ಕನಸಾಗಿದೆ". ಹೆಚ್ಚು ಡಾಟಾವನ್ನು ಅವಲೋಕಿಸುವುದು, ವಿಂಗಡಿಸುವುದು ಮತ್ತು ಪ್ರೊಸೆಸ್​ ಮಾಡುವುದು ಇಲ್ಲಿನ ಕೆಲಸವಾಗಿರುತ್ತದೆ..

ಹಲವು ಸಾಧಕಿಯರು ಪ್ರತೀಕ್ಷಾಳಿಗೆ ಸ್ಫೂರ್ತಿಯಾಗಿದ್ದಾರೆ. ಫೇಸ್​ಬುಕ್​​ನ ಸಿಓಓ ಶೇರಿಲ್ ಸ್ಯಾಂಡ್​ಬರ್ಗ್​ ಮತ್ತು ಗೂಗಲ್​ನ ಸೆಕ್ಯೂರಿಟಿ ಪ್ರಿನ್ಸಸ್ ಪಾರಿಸಾ ಟ್ಯಾಬ್ರಿಜ್​ನಿಂದ ತುಂಬಾ ಪ್ರಭಾವಿತರಾಗಿದ್ದಾರೆ. ಹ್ಯಾಕರ್ ರಾಂಕ್ಸ್​ ವುಮೆನ್ಸ್ ಕಪ್​ನಲ್ಲಿ ಇವರ ತಂಡದ ಕೆಲಸದಿಂದಾಗಿ ಭಾರತ ದೇಶಕ್ಕೆ ಮೂರನೇ ಸ್ಥಾನ ಬಂತು. "ನನ್ನ ಸಹಪಾಠಿ ಜೊತೆ ಕೆಲಸಮಾಡುವುದು ತುಂಬಾ ಸಂತೋಷವಾಯ್ತು. ಇಬ್ಬರೂ ಇಲ್ಲಿ ಕೊಟ್ಟ ಸವಾಲನ್ನು ತುಂಬಾ ಪ್ರೀತಿಯಿಂದ ಸ್ವೀಕರಿಸಿದೆವು. ಕೊಟ್ಟ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದೆವು . ಈ ಸ್ಪರ್ಧೆಯಿಂದ ನಮ್ಮ ಒಂದು ಸಾಧನೆಗೆ ಹೆಗ್ಗುರುತು ಬಂದಂತಾಗಿದೆ. ಇದರಿಂದಾಗಿ ಭವಿಷ್ಯ ಕೋಡಿಂಗ್ ಸವಾಲುಗಳನ್ನು ಸ್ವೀಕರಿಸುವ ಶಕ್ತಿ ನಮಗೆ ಬಂದಿದೆ ಎಂತಾರೆ ಪ್ರತೀಕ್ಷಾ".

ಕರಿಯರ್ ಮತ್ತು ತಾಯ್ತನ

ಮಹಿಳೆಯರು ತಮ್ಮ ಕರಿಯರ್ ಆಯ್ಕೆ ಮಾಡಿಕೊಳ್ಳಬೇಕೋ ಅಥವಾ ಹೋಮ್​​ಮೇಕರ್​ ಆಗಿ ಮುಂದುವರೆಯಬೇಕು ಎಂದು ನಾವು ಕೇಳಿದ ಪ್ರಶ್ನೆಗೆ ಪ್ರತೀಕ್ಷ ತುಂಬಾ ಜಾಣ್ಮೆಯಿಂದ ಉತ್ತರಿಸಿದ್ರು. "ತಮ್ಮ ಮದುವೆಗಾಗಿ ತಮ್ಮ ಕರಿಯರ್​ನ್ನು ಮಹಿಳೆ ಬಲಿಕೊಡುವುದು ನನಗಿಷ್ಟವಿಲ್ಲ. ಅಥವಾ ಗರ್ಭವತಿ, ಹೆರಿಗೆಗೆ, ಬಾಣಂತಿ ಎಂಬ ಕಾರಣಕ್ಕೆ ಕೆಲಸಕ್ಕೆ ವಿದಾಯ ಹೇಳುವುದು ತಪ್ಪು. ಆದರೆ ಆ ನಿರ್ಧಾರ ಅವರಿಗೆ ಬಿಟ್ಟದ್ದು. ಕೆಲವರು ಒಳ್ಳೆಯ ಪತ್ನಿ ಆಗಬೇಕೆಂದಿದ್ರೆ, ಕೆಲವರು ಒಳ್ಳೆಯ ತಾಯಿಯಾಗಬೇಕೆಂಬ ಕಾರಣ ನೀಡಿ ಕೆಲಸ ಬಿಡುತ್ತಾರೆ. ಇವರೆಡನ್ನು ಬ್ಯಾಲೆನ್ಸ್ ಮಾಡುವುದು ಒಂದು ಕಲೆ. ಮಕ್ಕಳು ಒಂದು ಹಂತಕ್ಕೆ ಬೆಳೆದ ಮೇಲೆ ಮಹಿಳೆಯರು ಎಂದಿನಂತೆ ತಮ್ಮ ಕೆಲಸ ಮತ್ತು ತಾಯಿಯಾಗಿ ಯಶಸ್ವಿಯಾಗಿ ಮುಂದುವರೆಯಬಹುದು ಎಂಬುದು ಪ್ರತೀಕ್ಷಾರ ಅಭಿಪ್ರಾಯ".

ದಾರಿ ಮುಂದೇನು ಇದೆ

ತಮ್ಮ ಮುಂದಿನ ಹಾದಿ ಕುರಿತು ಪ್ರತೀಕ್ಷಾ ಹೆಚ್ಚು ಉತ್ಸುಕರಾಗಿದ್ದಾರೆ. ತಮ್ಮ ಪದವಿ ಮುಗಿದ ನಂತರ ಅವರು ಡಾಟಾ ಸೈನ್ಸ್​​ನಲ್ಲಿ ಪಿಎಚ್​ಡಿ ಮಾಡುವ ಗುರಿ ಹೊಂದಿದ್ದಾರೆ. "ಡಾಟಾ ಸೈನ್ಸ್​​ನ ಯಾವ ವಿಭಾಗದಲ್ಲಿ ನಾನು ಮುಂದುವರಿಯಬೇಕೆಂಬುದನ್ನು ನಾನಿನ್ನು ನಿರ್ಧಾರ ಮಾಡಿಲ್ಲ. ಸದ್ಯ ನಾನಿನ್ನು ಎಂ.ಟೆಕ್ ದ್ವಿತೀಯ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ. ಮುಂದೆ ಹೋದಂತೆಲ್ಲ ನಾನು ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬಲ್ಲೆ" ಎಂತಾರೆ ಪ್ರತೀಕ್ಷಾ.

ಸಾಧನೆ ಮಾಡಲು ಯಾವಾಗಲು ಸಮಯವಿದೆ. ಟೆಕ್ನಾಲಜಿಯಲ್ಲೇ ತನ್ನ ಭವಿಷ್ಯ ರೂಪಿಸಿಕೊಳ್ಳಲು ಹೊರಟಿರುವ ಪ್ರತಿಕ್ಷಾಗೆ ತಮ್ಮ ಮೇಲೆ ಹೆಚ್ಚಿನ ಆತ್ಮವಿಶ್ವಾಸವಿದೆ. "ಸುಧಾರಣೆಗೊಳ್ಳಲು ಯಾವಾಗಲು ಸಮಯವಿರುತ್ತೆ. ಅದಕ್ಕೆ ನಾನು ಪ್ರತಿದಿನವೂ ನನ್ನನ್ನು ನಾನೇ ಪ್ರೇರೆಪಿಸಿಕೊಳ್ಳುತ್ತಿರುತ್ತೇನೆ. ಎಷ್ಟೋ ಸಲ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುವಲ್ಲಿ ನಾನು ವಿಫಲಳಾಗಿದ್ದೇನೆ. ಆದ್ದರಿಂ ಹತಾಶಳಾಗುವುದಿಲ್ಲ. ನನ್ನ ಸಾಧನೆಗೆ ನಾಳೆ ಎಂಬ ಹೊಸ ದಿನವಿದೆ. ಅದಕ್ಕಾಗಿ ಇಂದಿನ ಸೋಮಾರಿತನ, ಬೇಸರ ಎಲ್ಲವನ್ನೂ ಬಿಟ್ಟು, ಶ್ರಮದಿಂದ ಕೆಲಸ ಮಾಡೋಣ ಆಗ ಮತ್ತಷ್ಟು ಉತ್ತಮ ಫಲಿತಾಂಶ ಮುಂದಿನ ಸಲ ಪಡೆಯಬಹುದೆಂದು ನನ್ನ ಮನಸ್ಸಿಗ ನಾನೇ ಹೇಳಿಕೊಂಡು ಪ್ರತಿಸಲ ಒಂದು ಹೆಜ್ಜೆ ಮುಂದೆ ಸಾಗುತ್ತಿದ್ದೇನೆ"


ಲೇಖಕರು: ತನ್ವಿ ದುಬೆ

ಅನುವಾದಕರು: ಎನ್.ಎಸ್. ರವಿ

Related Stories

Stories by YourStory Kannada