ಟ್ರಾವೆಲ್ ಏಜೆಂಟ್ ಸಂಪರ್ಕದ ಮೂಲಕ ರಿಕಂತ್ ಬಹುಕೋಟಿ ಸಾಮ್ರಾಜ್ಯದ ಸ್ಥಾಪಕರಾಗಿದ್ದಾರೆ- "ಈಸ್ ಮೈ ಟ್ರಿಪ್" ನ ಕಥಾನಕ

ಟೀಮ್​ ವೈ.ಎಸ್​

ಟ್ರಾವೆಲ್ ಏಜೆಂಟ್ ಸಂಪರ್ಕದ ಮೂಲಕ ರಿಕಂತ್ ಬಹುಕೋಟಿ ಸಾಮ್ರಾಜ್ಯದ ಸ್ಥಾಪಕರಾಗಿದ್ದಾರೆ- "ಈಸ್ ಮೈ ಟ್ರಿಪ್" ನ ಕಥಾನಕ

Tuesday June 30, 2015,

2 min Read

ಹಣದ ಬೆಲೆ ಒಬ್ಬ ಉದ್ಯಮಿಗಿಂತ ಬೇರೆ ಯಾರಿಗೆ ಚೆನ್ನಾಗಿ ತಿಳಿದಿರುತ್ತದೆ...? ರಿಕಂತ್ ಪಿಟೀ ಒಬ್ಬ ಉತ್ತಮ ಉದ್ಯಮಿ. ರಿಕಂತ್​​ ತಂ​ದೆ ಒಬ್ಬ ವ್ಯಾಪಾರಿ ಆಗಿದ್ದುದ್ದರಿಂದ ಪ್ರಯಾಣ ಅನ್ನೋದು ಸಾಮಾನ್ಯವಾಗಿತ್ತು. ಅವರು ತಮ್ಮ ಪ್ರಯಾಣದ ಟಿಕೆಟ್​ಗಳನ್ನು ಟ್ರಾವೆಲ್ ಏಜೆಂಟ್ ಮೂಲಕ ಬುಕ್ ಮಾಡುತ್ತಿದ್ದರು.

ಇದೆಲ್ಲಾ ಕಥೆಗಳೂ ಸರಿಸುಮಾರು 2005ರ ಆಸುಪಾಸಿನವು. ಈ ವೇಳೆಯಲ್ಲಿ ಆನ್​ಲೈನ್​​ ಟಿಕೆಟಿಂಗ್​ ಅಷ್ಟೊಂದು ಜನಪ್ರಿಯತೆ ಪಡೆದುಕೊಂಡಿರಲಿಲ್ಲ. ಹೀಗಾಗಿ ಏಜೆಂಟ್​ಗಳೇ ಟಿಕೆಟಿಂಗ್​​ನ ಕಿಂಗ್​ ಪಿನ್​ ಆಗಿದ್ದರು. ಒಂದು ದಿನ ರಿಕಂತ್​​ ಆನ್​ಲೈನ್​​ನಲ್ಲಿ ತಮ್ಮ ತಂದೆ ಕೊಂಡುಕೊಂಡಿದ್ದ ಟಿಕೆಟ್​ಗಳ ಬೆಲೆಯನ್ನು ಪರಿಶೀಲಿಸುತ್ತಿದ್ದಾರೆ. ಟಿಕೆಟ್​ನ ಬೆಲೆಗಿಂತ ಏಜೆಂಟ್​​ ಸುಮಾರು 1500 ರೂಪಾಯಿ ಹೆಚ್ಚು ಪಡೆದಿರೋದು ಗಮನಕ್ಕೆ ಬಂತು. ರಿಕಂತ್​​ ತಂದೆ ಅದುವರೆಗೂ ಸುಮಾರು 15 ಟಿಕೆಟ್ ಗಳನ್ನು ಬುಕ್ ಮಾಡಿದ್ದರು. ಇದರಿಂದ ಸುಮಾರು 20 ಸಾವಿರ ಅವರಿಗೆ ನಷ್ಟವಾಗಿತ್ತು.



image


ರಿಕಂತ್ ಸಹೋದರ ಒಬ್ಬ ಇಂಜಿನಿಯರ್, ಆದುದರಿಂದ ಅವರ ಕುಟುಂಬದವರಿಗೆ ರಿಕಂತ್ ಮೇಲೂ ಕೂಡ ಹೆಚ್ಚು ನಿರೀಕ್ಷೆ ಇತ್ತು. ತಂದೆಗೆ ರಿಕಂತ್​ ಪೈಲಟ್ ಅಥವಾ ಇಂಜಿನಿಯರ್ ಆಗಬೇಕು ಅನ್ನೋ ಆಸೆಗಳಿತ್ತು. ಆದ್ರೆ ರಿಕಂತ್​​​ ಕಾಲೇಜ್​​ಗೆ ಹೋಗೋ ಸಮಯದಲ್ಲೇ ಪೋಷಕರು ಮತ್ತು ಇನ್ನಿತರ ಸಂಬಂಧಿಗಳಿಗೆ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಲಾರಂಭಿಸಿದನು. ರಿಕಂತ್ ತಂದೆ ಅವರ ಸಹೋದ್ಯೋಗಿಗಳಿಗೂ ರಿಕಂತ್ ಬಳಿಯೇ ಟಿಕೆಟ್ ಬುಕ್ ಮಾಡಿಸಲು ಹೇಳುತ್ತಿದ್ದರು. ಕಮಿಶನ್ ರೂಪದಲ್ಲಿ ಸುಮಾರು 100 ರಿಂದ 500 ರೂಗಳನ್ನು ಪಾಕೆಟ್ ಮನೀ ಆಗಿ ಸಂಪಾದನೆ ಮಾಡುತ್ತಿದ್ದ. ಕಮಿಶನ್ ಹಣವನ್ನು ಅವರ ತಂದೆಗೆ ತಿಳಿಯದಂತೆ ಇಡುತ್ತಿದ್ದ.

ಅನೇಕ ಬಾರಿ ಅಲ್ಲದಿದ್ದರೂ, ಪ್ರೌಢಾವಸ್ಥೆಯಲ್ಲಿನ ಅನುಮಾನಗಳನ್ನು ಬಾಲ್ಯದ ಕನಸುಗಳ ಕೊಂಡು ಕೊನೆಗೊಳ್ಳುತ್ತದೆ. ರಿಕಂತ್ ಪದವಿ ಓದಲು ಕುರುಕ್ಷೇತ್ರ ಯೂನಿವರ್ಸಿಟಿಯನ್ನು ಆಯ್ಕೆ ಮಾಡಿಕೊಂಡರು. ತನ್ನ ಸಹೋದರ ನಿಶಾಂತ್ ಜೊತೆ ಸೇರಿ ಡ್ಯೂಕ್ ಟ್ರಾವೆಲ್ ನ್ನು ಆರಂಭ ಮಾಡಿದರು.

ನಿಶಾಂತ್ ಕೂಡ "ಈಸ್ ಮೈ ಟ್ರಿಪ್" ನ ಸಹ ಸಂಸ್ಥಾಪಕ. ಎಸ್ಎಂ ಎಸ್ ಗಳನ್ನು ಕಲಿಸುವುದರ ಮೂಲಕ ತಮ್ಮ ಉದ್ಯಮದ ಸೇವೆಯ ಬಗ್ಗೆ ತಿಳಿಸುತ್ತಿದ್ದರು. ಆ ಸಮಯದಲ್ಲಿ ಸುಮಾರು 20 ರಿಂದ 25 ಜನರು ಮತ್ತೆ ಕಾಲ್ ಮಾಡಿ ಅದರ ಬಗ್ಗೆ ವಿಚಾರಿಸುತ್ತಿದ್ದರು. ಬಹಳ ಬೇಗ ದೇಶದ ಹಲವು ಭಾಗಗಳಿಂದ ಗ್ರಾಹಕರು ಅವರಿಗೆ ಸಿಗಲಾರಂಭಿಸಿದರು. ಅವರು Ebay ಮೂಲಕವೂ ಟಿಕೆಟ್ ಗಳನ್ನು ಮಾರಾಟ ಮಾಡತೊಡಗಿದರು.

image


ಕಂಪನಿ ಬೆಳೆದಂತೆ ಡ್ಯೂಕ್ ಟ್ರ್ಯಾವೆಲ್ಸ್ ನ್ನು "ಈಸ್ ಮೈ ಟ್ರಿಪ್" ಎಂದು ಮರು ನಾಮಕರಣ ಮಾಡಲಾಯಿತು. ಯುಎಸ್ಪಿ ಬಗ್ಗೆ ಕೇಳಿದಾಗ ರಿಕಂತ್ ಕಡಿಮೆ ಬೆಲೆ ಮತ್ತು ನಾವು ಯಾವುದೇ ಸಂಸ್ಕರಣ ಶುಲ್ಕ ತೆಗೆದುಕೊಳ್ಳದೇ ಇರೋದು ಟಿಕೆಟ್​​ ಬೆಲೆಯನ್ನು ಕೊಂಚ ಕಡಿಮೆ ಮಾಡುತ್ತಿದೆ. ಇದು ಗ್ರಾಹಕರ ಉಪಯೋಗಕ್ಕೆ ಬರುತ್ತಿದೆ.

ಎಲ್ಲವೂ ರಿಕಂತ್ ಅಂದುಕೊಂಡತೆ ನಡೆಯುತ್ತಿತ್ತು. ತಂದೆ ಕೂಡ ಇದಕ್ಕೆ ಒಪ್ಪಿಗೆ ನೀಡಿದರು ನಂತರ ಅವರು ತಮ್ಮ ಉದ್ಯಮವನ್ನು ವಿಸ್ತಾರ ಮಾಡಲಾರಂಭಿಸಿದರು. ಏರ್ ಡೆಕ್ಕನ್ ನ ಸಹಭಾಗಿತ್ವ ದೊಂದಿಗೆ ಕಮಿಶನ್ ಆಧಾರದ ಮೇಲೆ ಏಜೆನ್ಸಿ ತೆಗೆದುಕೊಂಡರು . ಏಜೆಂಟ್​ಗಳ ಜೊತೆ ಸಂಪರ್ಕ ಬೆಳೆಸಿ ಮಾರಾಟವನ್ನು ಆರಂಭಿಸಿದರು. ಈ ಸಮಯದಲ್ಲಿ ಏರ್ ಡೆಕ್ಕನ್ ಸುಮಾರು 500 ರಿಂದ 700 ರೂಗಳಿಗೆ ಟಿಕೆಟ್ ಮಾರಾಟ ಶುರು ಮಾಡಿದರು. ಆದರೆ ದುರಾದೃಷ್ಟ ಏರ್​​ ಡೆಕ್ಕನ್ ಕಡಿಮೆ ಬೆಳೆಯ ಟಿಕೆಟ್ ಮಾರಾಟ ಮಾಡುವುದನ್ನು ನಿಲ್ಲಿಸಿದರು. ಅಗ್ಗದ ಟಿಕೆಟ್ ಇಲ್ಲದೆ ಸಾಕಷ್ಟು ಮಾರಾಟ ಕೂಡ ಕಷ್ಟವಾಯಿತು. ಟಿಕೆಟ್​ ಬ್ಯುಸಿನೆಸ್​​ ಮುಚ್ಚುವ ಅಂಚಿನಲ್ಲಿತ್ತು. 

ಆದ್ರೆ ಮನಸ್ಸಿದ್ರೆ ಮಾರ್ಗ ಹಲವಾರು ಇರುತ್ತದೆ. ಈಸ್ ಮೈ ಟ್ರಿಪ್ ಕಂಪನಿ ಟಿಕೆಟ್​​ನಿಂದ ತನಗೆ ಬರುತ್ತಿದ್ದ ಕಮಿಷನ್​​ನ್ನು ಕಡಿಮೆ ಮಾಡಲು ನಿರ್ಧರಿಸಿದ್ರು. ಟಾರ್ಗೆಟ್​​ ಮುಟ್ಟಲು ಯಾರು ಸಹಾಯ ಮಾಡುತ್ತಾರೋ ಅಂತಹ ಟ್ರಾವೆಲ್​​ ಏಜೆಂಟ್​​ಗಳನ್ನು ಹುಡುಕಿ ತಮ್ಮ ಬ್ಯುಸಿನೆಸ್​​ಗೆ ಹೊಸ ತಿರುವು ಕೊಟ್ರು.

ರಿಕಂತ್ ಅವರ ಪ್ರಯಾಣದಿಂದ ಕೆಲವು ಪಾಠಗಳನ್ನು ಕೂಡ ಕಲಿತುಕೊಂಡಿದ್ದಾರೆ ಅದೇನೆಂದರೆ

1. ಯಾವಾಗಲೂ ನಿಮ್ಮ ಕೆಲಸದ ಮೇಲೆ ಗಮನ ಇರಬೇಕು

2. ಪ್ರಾಮಾಣಿಕವಾಗಿರಬೇಕು

3. ನಿಮ್ಮ ಕೆಲಸ ಮತ್ತು ಉದ್ಯೋಗಿಗಳಿಗೆ ಗೌರವ ಕೊಡಬೇಕು

    Share on
    close