ಮಾಹಿತಿ ತಂತ್ರಜ್ಞಾನದ ತರಬೇತಿ ಸಂಸ್ಥೆ ಇಂಟೆಲಿಪಾಥ್

ಟೀಮ್​​ ವೈ.ಎಸ್​​.ಕನ್ನಡ

ಮಾಹಿತಿ ತಂತ್ರಜ್ಞಾನದ ತರಬೇತಿ ಸಂಸ್ಥೆ ಇಂಟೆಲಿಪಾಥ್

Monday November 23, 2015,

3 min Read

ಐಟಿ ಬಿಟಿ ಸಂಸ್ಥೆಗಳಲ್ಲಿ ಈಗ ಉದ್ಯೋಗದ ಅವಕಾಶಗಳು ಹೆಚ್ಚಾಗಿವೆ. ಆದರೆ, ಅಲ್ಲಿ ಕೆಲಸಗಳನ್ನು ಗಿಟ್ಟಿಸಿಕೊಳ್ಳಲು ಸೂಕ್ತ ತರಬೇತಿಯ ಕೊರತೆ ಇದೆ. ಅದರಲ್ಲೂ ಬಿಗ್ ಡಾಟಾ ಹಾಗೂ ಹಡೂಪ್ ಕ್ಷೇತ್ರಗಳಲ್ಲಿ ಒಂದು ಉತ್ತಮ ತರಬೇತಿ ಸಿಗುವುದೇ ಕ್ಲಿಷ್ಟಕರವಾಗಿ ಬಿಟ್ಟಿದೆ. ಇದು ನಾಲ್ಕು ವರ್ಷಗಳ ಹಿಂದಿನ ಕಥೆ. 2011ರಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಬಿಗ್ ಡಾಟಾ ಹಾಗೂ ಹಡೂಪ್ ಕ್ಷೇತ್ರಗಳಲ್ಲಿ ತರಬೇತಿ ಪಡೆಯಲು ಮುಂದಾದಾಗ ಇದಕ್ಕೆ ವಿಧಿಸುತ್ತಿದ್ದ ಮೊತ್ತವೆಷ್ಟು ಗೊತ್ತೇ? ಒಬ್ಬರಿಗೆ 55,000 ರೂಪಾಯಿ.

ತರಬೇತಿ ಪಡೆಯುವ ಸಲುವಾಗಿ ಮುಂದಾದ ದಿವಾಕರ್ ಚಿತ್ತೋರಾ ಹಾಗೂ ಶಿಲ್ಪಾ ಜೈನ್ ಅನುಭವಿಸಿದ್ದ ಕಷ್ಟ ಅಂತಿಷ್ಟಲ್ಲ. ಮುಂದಿನ ದಿನಗಳಲ್ಲಿ ಅವರಿಗೊಂದು ಸತ್ಯ ಅರ್ಥವಾಗಿ ಹೋಗಿತ್ತು. ಪ್ರತಿಯೊಬ್ಬ ಐಟಿ ಉದ್ಯೋಗಿಯು ತನ್ನ ಕ್ಷೇತ್ರದಲ್ಲಿ ಅನುಭವಿಸಿದ್ದ ಕಷ್ಟವನ್ನು ಮನಗಂಡು ಕೈಗೆಟುಕುವ ಬೆಲೆಯಲ್ಲಿ ಸಂಸ್ಥೆಯನ್ನು ಹುಟ್ಟು ಹಾಕಿದರು. ಹಾಗೇ ಅಸ್ತಿತ್ವಕ್ಕೆ ಬಂದ ಸಂಸ್ಥೆಯೇ ಇಂಟೆಲಿಪಾಥ್.

image


ಇಂಟೆಲಿಪಾಥ್ ಬೆಳೆದು ಬಂದ ರೀತಿ

2011ರಲ್ಲಿ ಸ್ಥಾಪಿತವಾದ ಇಂಟೆಲಿಪಾಥ್ ಸಂಸ್ಥೆ ಇಂದು ಹೆಮ್ಮಾರವಾಗಿ ಬೆಳೆದು ನಿಂತಿದೆ. ಕೇವಲ 4 ವರ್ಷಗಳಲ್ಲಿ 40ಕ್ಕೂ ಹೆಚ್ಚು ಗ್ರಾಹಕರು, 100ಕ್ಕೂ ಹೆಚ್ಚು ವಿಷಯಗಳ ಬಗ್ಗೆ ಈ ಸಂಸ್ಥೆ ಭೋದಿಸಲಿದೆ. ಸುಮಾರು 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದವರು Erricson, Wipro, CTS ಮತ್ತು TCS ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿಷ್ಠಿತ ಕಂಪನಿಗಳ ಸಿಇಓಗಳು, 30ಕ್ಕೂ ಹೆಚ್ಚು ಸಂಸ್ಥೆಗಳು ಇಂಟೆಲಿಪಾಥ್ ಮೂಲಕ ಅತ್ಯುತ್ತಮ ತರಬೇತಿ ಪಡೆದಿರುವುದು ವಿಶೇಷವಾಗಿದೆ.

ಜೈಪುರ ಮೂಲದ ಸಂಸ್ಥೆ ಇಲ್ಲಿಯವರೆಗೂ ಆಸಕ್ತಿದಾಯಕ ಬೆಳವಣಿಗೆಯ ಪಥವನ್ನು ನಿರ್ಮಿಸಿದೆ. ಪ್ರಸ್ತುತ ಈಗಾಗಲೆ 40ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, 15000ಕ್ಕೂ ಹೆಚ್ಚು ವೃತ್ತಿಪರರಿಗೆ ಋಣಾತ್ಮಕ ಮತ್ತು ಅತ್ಯುತ್ತಮ ತರಬೇತಿಯನ್ನು ಪಡೆದಿದ್ದಾರೆ. ವಿಧ್ಯಾರ್ಥಿಗಳ ವೃತ್ತಿಯಲ್ಲಿ ತನ್ನದೇ ಆದ ಒಂದು ಬದಲಾವಣೆಯನ್ನು ತರುವಲ್ಲಿ ಯಶಸ್ವಿಯಾಗಿದ್ದು, 80ಕ್ಕೂ ಹೆಚ್ಚು ತಾಂತ್ರಿಕ ಶಿಕ್ಷಣ ಕೋರ್ಸ್‌ಗಳನ್ನು ಇಂಟೆಲಿಪಾಥ್ ಸಂಸ್ಥೆ ಆಯೋಜಿಸಿದೆ ಅನ್ನುತ್ತಾರೆ ಸಂಸ್ಥೆಯ ಸಿಇಓ ದಿವಾಕರ್ ಚಿತ್ತೋರಾ.

ವ್ಯಾಪಾರ ಮತ್ತು ಹಣಗಳಿಕೆ

ಕೇವಲ 50 ಸಾವಿರ ರೂಪಾಯಿಗಳ ಬಂಡವಾಳದೊಂದಿಗೆ ಆರಂಭಗೊಂಡ ಇಂಟೆಲಿಪಾಥ್ ಸಂಸ್ಥೆ , ಈಗ ಮಾಹಿತಿ ತಂತ್ರಜ್ಞಾನದ ತರಬೇತಿ ನೀಡುವ ಮುಂಚೂಣಿ ಸಂಸ್ಥೆಗಳಲ್ಲಿ ಒಂದಾಗಿದೆ. ಪ್ರಸ್ತುತ 40ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು 80ಕ್ಕೂ ಹೆಚ್ಚು ತಾಂತ್ರಿಕ ಶಿಕ್ಷಣದ ಕೋರ್ಸಗಳನ್ನು ಆಯೋಜಿಸುವ ಮೂಲಕ ಯಶಸ್ವಿ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಬೆಳವಣಿಗೆಗಾಗಿ 5 ದಶಲಕ್ಷ ಡಾಲರ್ ಅಂದರೆ 19ರಿಂದ 35 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲು ಹೂಡಿಕೆದಾರರು ಸಿದ್ಧಗೊಂಡಿದ್ದಾರೆ.

ಇಂಟೆಲಿಪಾಥ್ ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಣೆ ಮಾಡಲು ನಿರ್ಧರಿಸಿದ್ದು, ಪ್ರಸ್ತುತ ಇರುವ ಕೋರ್ಸಗಳ ಸಂಖ್ಯೆಯನ್ನು 125 ರಿಂದ 500 ಕ್ಕೂ ಹೆಚ್ಚಿಸುವ ಬಗ್ಗೆ ಆಲೋಚನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇ-ಕೋರ್ಸ್‌ಗಳನ್ನು ಪ್ರಾರಂಭಿಸುವ ಉಧ್ಧೇಶವನ್ನು ಸಂಸ್ಥೆ ಹೊಂದಿದೆ. ಸಂಸ್ಥೆಗೆ ಇನ್ನಷ್ಟು ಗ್ರಾಹಕರನ್ನು ಸೇರಿಸಿಕೊಳ್ಳುವ ಬಗ್ಗೆ ಚಿಂತಿಸಲಾಗಿದೆ ಎನ್ನುತ್ತಾರೆ ಸಂಸ್ಥೆಯ ಸಿಇಓ ದಿವಾಕರ್ ಚಿತ್ತೋರಾ.

ಆನ್ ಲೈನ್ ಶಿಕ್ಷಣ ತರಬೇತಿ

ಕಾಲಕ್ಕೆ ತಕ್ಕಂತೆ ಇಂಟೆಲಿಪಾಥ್ ಸಂಸ್ಥೆಯ ಬೋಧನಾ ವ್ಯವಸ್ಥೆಯೂ ಬದಲಾಗಿ ಹೋಗಿದೆ. ಆನ್ ಲೈನ್ ಶಿಕ್ಷಣ ತರಬೇತಿಯನ್ನು ಈಗ ಪ್ರಸ್ತುತ ಪಡಿಸುತ್ತಿದೆ. 100ಕ್ಕೂ ಹೆಚ್ಚು ಅಧಿಕ ಆನ್ ಲೈನ್ ಇ ಕೋರ್ಸ್ ಗಳು, ನಿಂಚ್ ತಂತ್ರಜ್ಞಾನವಾದ ಬಿಗ್ ಡಾಟಾ, ಉದ್ಯಮ ಇಂಟೆಲಿಜೆನ್ಸ್, ದತ್ತಾಂಶ ವಿಜ್ಞಾನ, ವ್ಯಾಪಾರ ಕೋರ್ಸ್‌ಗಳಾದ ಕಟ್ಟಡ ಶಿಫಾರಸ್ಸುಗಳು, ಎಂಜಿನ್, ಪೈಥಾನ್, ಪ್ರಿನ್ಸ್, ಪಿಎಂಪಿ, ಟೆಬುಲಾ, ಓಬಿಐಇಇ, ಟೇಲೆಂಡ್, ಸ್ಪೋಟ್‌ಫ್ರೀ, ಜಸ್ಪಾರ್, ಎಂಎಸ್‌ಬಿಐ, ಎಸ್ಏಎಸ್, ಡಾಟಾ ಸ್ಟೇಜ್ ಮುಂತಾದ 100ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಸಂಸ್ಥೆಯ ಮೂಲಕ ಇಂಟೆಲಿಪಾಥ್ ನೀಡುತ್ತಿದೆ ಎನ್ನುತ್ತಾರೆ ದಿವಾಕರ್ ಚಿತ್ತೋರಾ.

ಬೇರೆ ಸಂಸ್ಥೆಗಳಿಗೆ ಹೋಲಿಕೆ ಮಾಡಿದರೆ ಇಂಟೆಲಿಪಾಥ್ ನೀಡುವ ತರಬೇತಿ ಕೋರ್ಸ್ ಗಳ ದರ ಕೈಗೆಟುಕುವ ಬೆಲೆಗಳಲ್ಲಿ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಇಲ್ಲಿನ ಕೋರ್ಸ್‌ಗಳು ಕೇವಲ 4000 ರೂಪಾಯಿಗಳಿಂದ ಆರಂಭವಾಗಿ 11000 ರೂಪಾಯಿ ಒಳಗೆ ಮುಕ್ತಾಯವಾಗಲಿದೆ. ನಾವು ಕಲಿಸುವ ಶಿಕ್ಷಣ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವಿದ್ದು ಮತ್ತು ಇ-ಶಿಕ್ಷಣ ಕೋರ್ಸ್‌ಗಳನ್ನು ಕಲಿಯುವವರೆಗೂ ವಿಧ್ಯಾರ್ಥಿಗಳ ಬೆಂಬಲಕ್ಕೆ ಇಂಟೆಲಿಪಾಥ್ ನಿಲ್ಲಲಿದೆ ಅನ್ನುತ್ತಾರೆ ಸಿಇಓ ದಿವಾಕರ್ ಚಿತ್ತೋರಾ. ಈಗಾಗಲೇ ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಲಿಗೆ ಮುಂದಿನ ದಿನಗಳಲ್ಲಿ ಹೊಸ ಕೋರ್ಸ್ ಒಂದನ್ನು ಪ್ರಾರಂಭಿಸುವ ಉದ್ದೇಶವನ್ನೂ ಸಂಸ್ಥೆ ಹೊಂದಿದೆ ಅನ್ನುತ್ತಾರೆ ಅವರು.

ಇಂಟೆಲಿಪಾಥ್ ಸಂಸ್ಥೆಯಲ್ಲಿ ತರಬೇತಿ ನೀಡುವವರು ಅತ್ಯಂತ ನುರಿತವಾಗಿದ್ದಾರೆ. ತರಬೇತಿ ನೀಡುವವರು ಕನಿಷ್ಠ 18 ವರ್ಷಗಳ ಅನುಭವವನ್ನು ಹೊಂದಿರುವವರು ಆಗಿದ್ದಾರೆ. ಈ ಹಿಂದೆ, ಉದ್ಯಮಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಮಾಹಿತಿ ತಂತ್ರಜ್ಞಾನದ ಇಂಚಿಂಚೂ ಬಲ್ಲವರಾಗಿದ್ದಾರೆ.

4 ವರ್ಷದ ಹಿಂದೆ ಕೇವಲ 50 ಸಾವಿರ ರೂಪಾಯಿ ಬಂಡವಾಳದೊಂದಿಗೆ ಆರಂಭಗೊಂಡ ಇಂಟೆಲಿಪಾಥ್, ಇವತ್ತು ಬೃಹಾದಾಕಾರವಾಗಿ ಬೆಳೆದಿದೆ. ಇಂಟೆಲಿಪಾಥ್ ಸಂಸ್ಥೆಯ ಮುಖಾಂತರ ವಿಶ್ವದಾದ್ಯಂತ 2,50,000 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕಂಪನಿಗಳೊಂದಿಗೆ ಮಾತುಕತೆ ನಡೆಸಿ ವಿದ್ಯಾರ್ಥಿಗಳನ್ನು ಒಂದು ಬಿಲಿಯನ್‌ಗೆ ಏರಿಸುವ ಗುರಿಯನ್ನು ಹೊಂದಲಾಗಿದೆ. ಪ್ರತಿ ತಿಂಗಳು ಸಂಸ್ಥೆಗೆ 1 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಿದ್ದು, ಆರಂಭದಲ್ಲಿ ಕೇವ 40 ಮಂದಿ ಇದ್ದ ಕೆಲಸಗಾರರ ಸಂಖ್ಯೆ ಮುಂದಿನ ದಿನಗಳಲ್ಲಿ 60ಕ್ಕೆ ಏರಿಸುವ ಉದ್ದೇಶವನ್ನು ಹೊಂದಲಾಗಿದೆ.

ಗುರಿಯೆಡೆಗೆ ಪಯಣ

ಇಂಟೆಲಿಪಾಥ್ ಸಂಸ್ಥೆ ಮುಂದಿನ ದಿನಗಳಲ್ಲಿ ತಂತ್ರಜ್ಞಾನ ವಿಭಾಗದಲ್ಲಿ ವಿವಿಧ ಕೋರ್ಸ್‌ಗಳನ್ನು ಪರಿಚಯಿಸಲು ಉತ್ಸಕವಾಗಿದೆ, ಕೋರ್ಸ್‌ಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಲು ಕಾರ್ಯಕ್ರಮ ರೂಪಿಸಲು ಮುಂದಾಗಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಒಂದೇ ವೇದಿಕೆಯಲ್ಲೇ ಎಲ್ಲಾ ವೃತ್ತಿಪರ ಶಿಕ್ಷಣ ತರಬೇತಿಗಳನ್ನು ನೀಡಲು 50ಕ್ಕೂ ಹೆಚ್ಚು ದೇಶಗಳಲ್ಲಿ ನಮ್ಮ ಸಂಸ್ಥೆಯನ್ನು ವಿಸ್ಥರಿಸುವ ಉದ್ದೇಶವಿರುವುದಾಗಿ ದಿವಾಕರ್ ಹೇಳುತ್ತಾರೆ.. ಸಂಸ್ಥೆಯ ಪ್ರಗತಿ ಮತ್ತು ಆದಾಯವನ್ನು ಮುಂದಿನ ಎರಡು ವರ್ಷಗಳಲ್ಲಿ 1.5 ಮಿಲಿಯನ್ ಇಂದ 2ಮಿಲಿಯನ್‌ಗೆ ಏರಿಸುವ ಇರಾದೆಯನ್ನು ಇಂಟೆಲಿಪಾಥ್ ಹೊಂದಿದೆ.