ಯುಪಿಐ ಬರುತ್ತಿದೆ, ಮೊಬೈಲ್ ವಾಲೆಟ್‍ಗಳೇ ಎಚ್ಚರ..!

ಟೀಮ್​ ವೈ.ಎಸ್​. ಕನ್ನಡ

ಯುಪಿಐ ಬರುತ್ತಿದೆ, ಮೊಬೈಲ್ ವಾಲೆಟ್‍ಗಳೇ ಎಚ್ಚರ..!

Thursday February 18, 2016,

5 min Read

ಭಾರತದಲ್ಲಿ ಮೊಬೈಲ್ ವಾಲೆಟ್‍ಗಳು ಅವನತಿಯತ್ತ ಸಾಗಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ಟ್ಯಾಕ್ಸಿ ವೆಂಡರ್‍ಗಳು ಮತ್ತು ಆಹಾರ ಉತ್ಪನ್ನಗಳನ್ನು ಡೆಲಿವರಿ ಮಾಡುವವರ ತಡೆರಹಿತ ಪಾವತಿಯ ಕಥೆಯೇನು ಅನ್ನೋದು ಸದ್ಯದ ಆತಂಕ. ದೇಶದ ಎಲ್ಲಾ ಚಿಲ್ಲರೆ ಪಾವತಿ ವ್ಯವಸ್ಥೆಯ ಜವಾಬ್ಧಾರಿ ಹೊತ್ತಿರುವ `ದಿ ನ್ಯಾಶನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ' (ಎನ್‍ಪಿಸಿಐ) ಬಹುಷಃ ನಿಮಗಾಗಿ ಶುಭ ಸುದ್ದಿಯೊಂದನ್ನು ಹೊತ್ತು ತಂದಿದೆ. ಯುನಿಫೈಡ್ ಪೇಮೆಂಟ್ಸ್ ಇಂಟರ್‍ಫೇಸ್ (ಯುಪಿಐ) ಅನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಇನ್ಮೇಲೆ ಗ್ರಾಹಕರು ಅಕೌಂಟ್ ವಿವರ, ಸೆಕ್ಯೂರಿಟಿ ಪಿನ್‍ನಂತಹ ವೈಯಕ್ತಿಕ ವಿವರಗಳನ್ನು ಸಲ್ಲಿಸಬೇಕಾಗಿಲ್ಲ. ಅಷ್ಟೇ ಅಲ್ಲ, ಯುಪಿಐ ವೇದಿಕೆ ಮೂಲಕ ಎಪಿಐಗಳನ್ನು ನಿರ್ಮಾಣ ಮಾಡಲು ಮುಂದಾಗಿರುವ ಡೆವಲಪರ್ ಕಮ್ಯೂನಿಟಿಗಾಗಿ ಎನ್‍ಪಿಸಿಐ, ಹ್ಯಾಕಥಾನ್ ಅನ್ನು ಕೂಡ ಲಾಂಚ್ ಮಾಡಿದೆ.

ಇದನ್ನು ಓದಿ

ಮೊಬೈಲ್​ನಲ್ಲೇ ಪಿಯುಸಿ ಪ್ರಶ್ನೆ ಪತ್ರಿಕೆ..!

ಯುಪಿಐ ವಿಷದೀಕರಣ...

ಯುಪಿಐ ತನ್ನ ಮೊದಲ ಮೊಬೈಲ್ ಪಾವತಿ ವಿನ್ಯಾಸದೆಡೆಗೆ ಪರಸ್ಪರ ಚಲಿಸುತ್ತದೆ ಮತ್ತು ತ್ವರಿತ ಪಾವತಿಗೆ ಅನುಕೂಲ ಮಾಡಿಕೊಡುತ್ತದೆ. ಆಧಾರ್ ನಂಬರ್ ಅಥವಾ ವಾಸ್ತವ ವಿಳಾಸದಂತಹ ಏಕೈಕ ಗುರುತಿನ ಮೂಲಕ ಗ್ರಾಹಕರಿಗೆ ಹಣ ಪಾವತಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಹಣ ಪಾವತಿ ವಿಧಾನವನ್ನು ಅರ್ಥಮಾಡಿಕೊಳ್ಳಲು ಕೆಲ ಪ್ರಮುಖ ಲಕ್ಷಣಗಳು ಸಹಕಾರಿಯಾಗಿವೆ.

1) ಮೊಬೈಲ್ ಫೋನ್ ಅನ್ನು ಪ್ರಾಥಮಿಕ ಸಾಧನವಾಗಿ ಬಳಸಿಕೊಂಡು ನೀವು ಹಣ ಪಾವತಿ ಮಾಡಬಹುದು. ವ್ಯಕ್ತಿಯಿಂದ ವ್ಯಕ್ತಿಗೆ, ವ್ಯಕ್ತಿಯಿಂದ ಬ್ಯುಸಿನೆಸ್‍ಗೆ ಮತ್ತು ಬ್ಯುಸಿನೆಸ್‍ನಿಂದ ವ್ಯಕ್ತಿಗೆ ಹಣ ಸಂದಾಯ ಮಾಡಲು ಅವಕಾಶವಿದೆ. ಹಣ ಪಾವತಿ ಮಾತ್ರವಲ್ಲ ಯಾರಿಂದಲಾದ್ರೂ ಹಣ ಸಂಗ್ರಹಿಸಲು ಕೂಡ ಅವಕಾಶ ಕಲ್ಪಿಸಲಾಗಿದೆ.

2) ಹಣ ಪಾವತಿ ಸಂದರ್ಭದಲ್ಲಿ ನಿಮ್ಮ ಆಧಾರ್ ನಂಬರ್, ಮೊಬೈಲ್ ನಂಬರ್ ಮತ್ತು ಅಕೌಂಟ್ ನಂಬರ್ ಅನ್ನು ಕೊಡದೇ ಈ ವೇದಿಕೆಯಲ್ಲಿ ಏಕೀಕೃತ ರೀತಿಯಲ್ಲಿ ಹಣ ಸಂದಾಯ ಮಾಡಬಹುದು. ನಿಮ್ಮ ಬ್ಯಾಂಕ್ ಖಾತೆಗಾಗಿ ನೀವು ವಾಸ್ತವ ಪಾವತಿ ವಿಳಾಸವನ್ನು ಸೃಷ್ಟಿಸಬೇಕು. ನಿರ್ದಿಷ್ಟ ವ್ಯಾಪಾರಿಯ ಖಾತೆಯನ್ನು ಹ್ಯಾಕ್ ಮಾಡಿದರೂ ಕೂಡ ಅವರ ಡಾಟಾ ಬೇಸ್‍ನಲ್ಲಿ ಕೇವಲ ವಾಸ್ತವ ವಿಳಾಸಗಳ ಪಟ್ಟಿ ಇರುವುದರಿಂದ ಭದ್ರತೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗುವುದಿಲ್ಲ. ‘account@provider’ or userid@mypsp (i.e. tarush@icici) ಎಂದು ಪಾವತಿ ವಿಳಾಸಗಳನ್ನು ಸೂಚಿಸಲಾಗಿದೆ. ನಿಮ್ಮ ಗುರುತಿಗಾಗಿ ಕೇವಲ ಆಧಾರ್ ನಂಬರ್ ಅನ್ನು ಮಾತ್ರ ಬಳಸಿಕೊಂಡು ಹಣ ವರ್ಗಾಯಿಸಲು ಈ ವೇದಿಕೆ ಅವಕಾಶ ಕಲ್ಪಿಸಿದೆ. ಇದು ಗ್ರಾಮೀಣ ಭಾಗದ ಜನರಿಗೆ ನಿಜಕ್ಕೂ ಪ್ರಯೋಜನಕಾರಿಯಾಗಿದೆ. ಆಧಾರ್‍ನ ಮಾಜಿ ಮುಖ್ಯಸ್ಥ ನಂದನ್ ನಿಲೇಕಣಿ ಅವರ ಪ್ರಕಾರ 250 ಮಿಲಿಯನ್ ಆಧಾರ್ ಪಾವತಿ ಖಾತೆಗಳಿಂದ ಒಂದು ವರ್ಷದಲ್ಲಿ ಸುಮಾರು 1.2 ಬಿಲಿಯನ್ ವಹಿವಾಟುಗಳು ನಡೆಯುತ್ತವೆ. ಅಷ್ಟೇ ಅಲ್ಲ ಇದಕ್ಕಾಗಿ ದೇಶದಲ್ಲಿ 77,000 ಮೈಕ್ರೋ ಎಟಿಎಂಗಳ ಬಳಕೆಯಾಗುತ್ತದೆ.

image


3) ನಿರ್ದಿಷ್ಟ ದಿನ ಪಾವತಿ ಅಂದ್ರೆ ಪೇ ಬೈ ಡೇಟ್ ಈ ವೇದಿಕೆಯ ಇನ್ನೊಂದು ಪ್ರಮುಖ ಲಕ್ಷಣ. ಎಲ್ಲ ಹಣ ಪಾವತಿ ರಿಕ್ವೆಸ್ಟ್‍ಗಳನ್ನು ಸ್ವೀಕರಿಸಿ, ಅದನ್ನು ನೀವು ಮುಂದಕ್ಕೆ ಹಾಕಬಹುದು ಅಂದ್ರೆ ಸ್ನೂಝ್ ಮಾಡಿಟ್ಟುಕೊಳ್ಳಬಹುದು. ಸೇವೆ ಬ್ಲಾಕ್ ಮಾಡುವ ಆತಂಕವಿಲ್ಲದೆ ಎಕ್ಸ್‍ಪೈರಿ ದಿನಾಂಕಕ್ಕೂ ಮುನ್ನ ಹಣ ಪಾವತಿಸಬಹುದು.

4) ಎಲೆಕ್ಟ್ರಾನಿಕ್ ಕ್ಯಾಶ್ ಪೇಮೆಂಟ್‍ಗೆ ಸರಿಸಮನಾದ ಅನೇಕ ಮರುಕಳಿಸುವ ಪಾವತಿಗೂ ಇದು ಅವಕಾಶ ಮಾಡಿಕೊಟ್ಟಿದೆ. ಒಂದು ಬಾರಿ ಸುರಕ್ಷಿತ ದೃಢೀಕರಣ ಮತ್ತು ನಿಯಮ ಆಧಾರಿತ ಪ್ರವೇಶ ಪಡೆಯಬಹುದು. ಸಂಘ ಸಂಸ್ಥೆಗಳಿಗೆ ವೇತನ ಪಾವತಿಸಲು ಈ ವಿಧಾನ ನೆರವಾಗುತ್ತದೆ.

5) ಯುಪಿಐ ಕೂಡ ಪೇಮೆಂಟ್ ಸಿಸ್ಟಮ್ ಪ್ಲೇಯರ್ಸ್ (ಪಿಎಸ್‍ಪಿ) ಅನ್ನು ಸಿದ್ಧಪಡಿಸುತ್ತದೆ. ಪಿನ್, ಬಯೋಮೆಟ್ರಿಕ್ಸ್‍ನಂತಹ ಪಾಸ್‍ವರ್ಡ್‍ಗಳನ್ನು ಬಳಸಿ ಮೊಬೈಲ್ ಅಪ್ಲಿಕೇಷನ್‍ಗಳ ಮೂಲಕ ವಾಸ್ತವ ವಿಳಾಸಗಳ ನಂಬರ್ ಬಳಸಿ ಯಾವುದೇ ಅಕೌಂಟ್‍ನಿಂದ ಹಣ ಪಾವತಿ ಮಾಡಲು ಬ್ಯಾಂಕ್‍ಗಳು ಅವಕಾಶ ನೀಡುತ್ತವೆ. ಬಿಲ್ ಪೇಮೆಂಟ್, ಚಾರಿಟಿ ಡೊನೇಶನ್‍ನಂತಹ ವಿವಿಧ ಕಾರ್ಯಗಳಿಗಾಗಿ ನೀವು ಪ್ರತ್ಯೇಕ ವಾಸ್ತವ ವಿಳಾಸಗಳನ್ನು ಸೃಷ್ಟಿಸಬಹುದು. ಕೆಲ ನಿಯಮಗಳೊಂದಿಗೆ ವಾಲೆಟ್‍ಗಳಂತೆ ಬಳಸಿಕೊಳ್ಳಬಹುದು. ಬಳಕೆದಾರ ಪ್ರತಿ ತಿಂಗಳು ಅಕ್ಷಯ ಪತ್ರ ಡೊನೇಟ್ ಮಾಡುತ್ತಿದ್ದರೆ ವಚ್ರ್ಯುವಲ್ ಅಡ್ರೆಸ್ ಸೃಷ್ಟಿಸಬಹುದು.

6) ಸಂಗ್ರಾಹಾಗಾರ ಮತ್ತು ಮುಚ್ಚಿದ ವ್ಯವಸ್ಥೆಗಳಿಲ್ಲದೆ ಪೇಮೆಂಟ್ ಸಿಸ್ಟಮ್ ಪ್ಲೇಯರ್‍ಗಳಿಗೆ ಇಂಟರ್‍ಆಪರೇಬಲ್ ಸಿಸ್ಟಮ್ ಅನ್ನು ಯುಪಿಐ ಕಲ್ಪಿಸಿದೆ. ನೀವು ಯಾವ ಬ್ಯಾಂಕ್‍ನಿಂದಲಾದ್ರೂ ವಹಿವಾಟು ನಡೆಸಬಹುದು. ಮೊಬೈಲ್ ಫೋನ್‍ಗಳನ್ನೂ ಸಂಯೋಜನೆಗೊಳಿಸಿ, ಎಂ-ಪಿನ್‍ಗಳನ್ನು ಕೂಡ ಈ ವೇದಿಕೆ ಪ್ರಮಾಣೀಕರಣಗೊಳಿಸಿದೆ. ಅದಾಗ್ಯೂ ಈ ಎಲ್ಲ ಘಟಕಗಳು ಯುಪಿಐಗೆ ದೂರು ನೀಡಲೇಬೇಕು. ಹಾಗಾಗಿ ಮೊಬೈಲ್ ನಂಬರ್, ಆಧಾರ್ ಸಂಖ್ಯೆ ಅಥವಾ ಎಂ-ಪಿನ್‍ಗಳಿಗೆ ಎಕ್ಸೆಸ್ ಪಡೆಯುವ ಮೂಲಕ ನೀವು ವಹಿವಾಟು ನಡೆಸಬಹುದು.

7) ಕೊನೆಯದಾಗಿ 1-ಕ್ಲಿಕ್-2 ಫ್ಯಾಕ್ಟರ್ ದೃಢೀಕರಣ ಬಳಸಿಕೊಂಡು ಹಣ ಪಾವತಿಸುವ ಸಾಮಥ್ರ್ಯವನ್ನು ಕೂಡ ಇದು ಹೊಂದಿದೆ. ಯಾವುದೇ ಸ್ವೈಪಿಂಗ್ ಡಿವೈಸ್‍ಗಳಿಲ್ಲದೆ, ಟೋಕನ್‍ಗಳನ್ನು ಬಳಸದೆ ನಿಮ್ಮ ವೈಯಕ್ತಿಕ ಫೋನ್‍ಗಳ ಮೂಲಕ ಹಣ ಪಾವತಿಸುವ ಅವಕಾಶವೂ ಇದೆ.

ಹಾಗಾಗಿ ಯುಪಿಐಗಳನ್ನು ಅಳವಡಿಸಿದ್ರೆ ಫ್ರಿಕ್ಷನ್‍ಲೆಸ್ ಪೇಮೆಂಟ್‍ಗಳನ್ನು ಸೂಕ್ತವಾಗಿ ನಿಭಾಯಿಸಬಹುದು. ವಾಲೆಟ್‍ಗಳಿಂಗೆ ಫಂಡ್ ವರ್ಗಾಯಿಸಬೇಕಾಗಿಲ್ಲ, ನಿಯಮಗಳ ತಲೆನೋವು ಕೂಡ ಇರುವುದಿಲ್ಲ. ಉತ್ತಮ ವಹಿವಾಟಿನ ಮೂಲಕ ಗ್ರಾಹಕರು ಅವರ ಹಣವನ್ನು ಬೇಕಾದಂತೆ ಬಳಸಿಕೊಳ್ಳಲು ಯುಪಿಐ ಅನುವು ಮಾಡಿಕೊಡುತ್ತದೆ. ಅವರಿಗೆ ಭದ್ರತೆಯ ಆತಂಕ ಕೂಡ ಇರುವುದಿಲ್ಲ. ಎನ್‍ಪಿಸಿಐಗೆ ಸಂಬಂಧಿತ ಕಾಮನ್ ಲೈಬ್ರರಿ ಅಥವಾ ಪೇಮೆಂಟ್‍ಗಳ ಲ್ಯಾಂಡಿಂಗ್ ಪೇಜ್ ಕೂಡ ಆ್ಯಪ್‍ನಲ್ಲೇ ಇರಲಿದೆ. ಈ ಎಲ್ಲ ಲಕ್ಷಣಗಳು ವೆಬ್‍ಸೈಟ್‍ನಲ್ಲಿ ಲಭ್ಯವಿದ್ದು, ಯಾರು ಬೇಕಾದ್ರೂ ಕಲೆಕ್ಷನ್ ರಿಕ್ವೆಸ್ಟ್‍ಗಳನ್ನು ಮಾಡಬಹುದು. ಹಾಗಾಗಿ ಭಾರತೀಯ ಮೊಬೈಲ್ ವಾಲೆಟ್‍ಗಳು ಅಳಿವಿನತ್ತ ಸಾಗಿಲ್ಲ ಅನ್ನೋದು ದೃಢವಾಗುತ್ತದೆ.

ವರ್ಗೀಕರಣ ವ್ಯವಸ್ಥೆಯನ್ನು ರಚಿಸುವ ಸಲುವಾಗಿ ಆನ್ ಬೋರ್ಡಿಂಗ್ ವೆಚ್ಚ ಕಡಿಮೆ ಮಾಡುವ ಅಗತ್ಯವಿದೆ ಅಂತಾ ಯುನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಪ್ ಇಂಡಿಯಾದ ಅಧ್ಯಕ್ಷ ಹಾಗೂ ಎನ್‍ಪಿಸಿಐ ಸಲಹೆಗಾರ ನಂದನ್ ನಿಲೇಕಣಿ ಅಭಿಪ್ರಾಯಪಟ್ಟಿದ್ದಾರೆ. ಯುಪಿಐ ಕಂಪ್ಲೇಂಟ್ ಬ್ಯಾಂಕ್‍ನಲ್ಲಿ ಮೊಬೈಲ್ ನಂಬರ್ ನೋಂದಣಿ ಮಾಡಿದ್ರೆ ಕೆಲಸ ಮುಗಿದಂತೆಯೇ ಲೆಕ್ಕ. eಏಙಅ ಗೆ ಆರ್‍ಬಿಐ ಅನುವು ಮಾಡಿಕೊಟ್ಟಲ್ಲಿ ಅತ್ಯಂತ ಶೀಘ್ರವಾಗಿ ಬಳಕೆದಾರರು ಬ್ಯಾಂಕ್ ಖಾತೆ ತೆರೆಯಬಹುದು ಅನ್ನೋದು ನಂದನ್ ನಿಲೇಕಣಿ ಅವರ ಸಲಹೆ.

`ಯುವರ್‍ಸ್ಟೋರಿ' ಮಾಹಿತಿ - ಕ್ರಮಪಲ್ಲಟನೆ ಮತ್ತು ಸಂಯೋಜನೆ

ಕ್ಯಾಶ್ ಆನ್ ಡೆಲಿವರಿಯ ಫಂಡ್‍ಗಳನ್ನು ಸಂಗ್ರಹಿಸಲು ಇ-ಕಾಮರ್ಸ್ ಪ್ಲೇಯರ್‍ಗಳಿಗೆ ಇದು ನೆರವಾಗಲಿದೆ. ಗ್ರಾಹಕರ ಖಾತೆ ಮಾಹಿತಿ ಸೋರಿಕೆಯ ಯಾವುದೇ ರಿಸ್ಕ್ ಇರುವುದಿಲ್ಲ. ವ್ಯಾಪಾರಿಗಳು ಯಾವುದೇ ಕಾರ್ಡ್ ಇಲ್ಲದೆ ಗ್ರಾಹಕರನ್ನು ತಲುಪಬಹುದು. ಕ್ಯಾಶ್ ಆನ್ ಡೆಲಿವರಿಯಲ್ಲಿ ಗ್ರಾಹಕರಿಗೆ ಬಿಲ್ ಸ್ಪ್ಲಿಟ್ಟಿಂಗ್, ವ್ಯಾಪಾರಿಗಳ ಪೇಮೆಂಟ್ ಮತ್ತು ಹಣ ರವಾನೆಯಂತಹ ಅನೇಕ ಪ್ರಯೋಜನಗಳನ್ನು ಒದಗಿಸುತ್ತಿದೆ. ಒಬ್ಬ ವ್ಯಕ್ತಿಗೆ ಕೂಡ ಉದ್ಯಮದಂತೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುತ್ತದೆ. ಸೇವೆ ಹಾಗೂ ಉತ್ಪನ್ನಗಳಿಗೆ ಸಂಬಂಧಪಟ್ಟ ಹಣ ಸಂಗ್ರಹ ಮಾಡುವ ಸಮಸ್ಯೆಗಳನ್ನು ಪರಿಹರಿಸಲಿದೆ. ಇದು ಫ್ರೀಚಾರ್ಜ್, ಪೇಟಿಮ್, ಪೇಯು ಮತ್ತು ಆಕ್ಸಿಜನ್ ವಾಲೆಟ್‍ನಂತಹ ಸಂಸ್ಥೆಗಳಿಗೆ ಕೊಂಚ ಹೊಡೆತ ನೀಡಲಿದೆ. ಯಾಕಂದ್ರೆ ನಿಯಮಗಳು ವಾಲೆಟ್ ಟು ವಾಲೆಟ್ ವಹಿವಾಟನ್ನು ಅನುಮತಿಸುವುದಿಲ್ಲ. ಉದಾಹರಣೆಗೆ ನೀವು ಮೊಬಿವಿಕ್‍ನಿಂದ ಪೇಟಿಮ್‍ಗೆ ವಹಿವಾಟು ನಡೆಸುವಂತಿಲ್ಲ. ಅರೆ ಮುಚ್ಚಿದ ವಾಲೆಟ್‍ಗಳಾದ ವೊಡಾಫೋನ್‍ನ ಎಂ-ಪೆಸಾ ಮತ್ತು ಏರ್ಟೆಲ್ ಮನಿಗೂ ಇದು ಅನ್ವಯವಾಗುತ್ತದೆ. ಈ ವೇದಿಕೆ ಮೂಲಕ ಕಾರ್ಯಾಚರಣೆ ನಡೆಸಲು ಅವರು 15ಕ್ಕೂ ಹೆಚ್ಚು ಬ್ಯಾಂಕ್‍ಗಳೊಂದಿಗೆ ಪಾಲುದಾರರಾಗಬೇಕು. ಪೇಟಿಮ್‍ನಂತಹ ವಾಲೆಟ್‍ಗಳಿಗೆ ಇದು ಸುಲಭವಿಲ್ಲ, ಅವರ ಪೇಮೆಂಟ್ ಬ್ಯಾಂಕ್‍ನಡಿ ವಾಲೆಟ್ ರಿಜಿಸ್ಟರ್ ಆಗಿರಲೇಬೇಕು.

ಆದ್ರೆ ಸ್ನಾಪ್‍ಡೀಲ್‍ಗೆ ಇದರಿಂದ ಕಾರ್ಯಾಚರಣೆ ಸುಲಭವಾಗಲಿದೆ. ಯುಪಿಐ ವೇದಿಕೆಯಲ್ಲಿ ಹೊಸದಾಗಿ ಪ್ರವೇಶಿಸಿದವರನ್ನು ಫ್ರೀಚಾರ್ಜ್ ದುರ್ಬಲಗೊಳಿಸಬಹುದು. ಒಂದು ಪ್ರಿಪೇಯ್ಡ್ ಕಾರ್ಡ್ ಮೂಲಕ ಎಲ್ಲ ಆನ್‍ಲೈನ್ ವ್ಯಾಪಾರಿಗಳಿಗೆ ಹಣ ಪಾವತಿಸಲು ಅವಕಾಶ ಮಾಡಿಕೊಡುವ ಮೂಲಕ ಫ್ರೀಚಾರ್ಜ್ ಗೋ, ವಹಿವಾಟು ಕುಣಿಕೆಯನ್ನು ಮುರಿಯಲು ಪ್ರಯತ್ನಿಸಬಹುದು. ಆದಾಗ್ಯೂ ಇ-ವಾಲೆಟ್ ಮಿತಿಗಳು ಅಸ್ತಿತ್ವದಲ್ಲಿವೆ.

ಸದ್ಯ ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಬಿಟ್ಟು ಕೊಡುತ್ತಿಲ್ಲ ಎಂಬುದನ್ನು ಸ್ಟಾರ್ಟ್‍ಅಪ್‍ಗಳು ಅರ್ಥಮಾಡಿಕೊಳ್ಳಬೇಕು. ಪಿಎಸ್‍ಪಿ ಬ್ಯಾಂಕ್‍ಗಳ ಜೊತೆ ಪಾಲುದಾರರಾಗುವ ಮೂಲಕ ಅವರು ಯುಪಿಐ ವೇದಿಕೆ ಪ್ರವೇಶಿಸಬಹುದು. ನಗದು ರಹಿತ ಪೇಮೆಂಟ್‍ಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಈ ವೇದಿಕೆ ನೆರವಾಗಲಿದೆ ಅನ್ನೋದು ಐಸ್ಪಿರಿಟ್‍ನ ಸಹ ಸಂಸ್ಥಾಪಕ ಶರದ್ ಶರ್ಮಾ ಅವರ ಅಭಿಪ್ರಾಯ. ಮೊಬೈಲ್ ಪೇಮೆಂಟ್ ಕಂಪನಿ ಮೊಮೋ ಸಂಸ್ಥೆಯ ಸಹ ಸಂಸ್ಥಾಪಕ ಕಾರ್ತಿಕ್ ವಿದ್ಯಾನಾಥನ್ ಅವರ ಪ್ರಕಾರ, ಪಾಲುದಾರ ಬ್ಯಾಂಕ್‍ಗಳ ಹುಡುಕಾಟದಿಂದ ಇದೊಂದು ಮಾರಾಟ ಪ್ರಕ್ರಿಯೆಯಂತಾಗುತ್ತದೆ ಎನ್ನುತ್ತಾರೆ. ಇದಲ್ಲದೆ ಎಪಿಐ ಹಕ್ಕುಗಳೊಂದಿಗೆ ಸಹ ಬ್ಯಾಂಕ್‍ಗಳು ಈ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದೆಂದು ಲೆಕ್ಕಾಚಾರ ಹಾಕುತ್ತವೆ. ಯುಪಿಐ ಪ್ಲಾಟ್‍ಫಾರ್ಮ್‍ನ ಪಾಲುದಾರ ಬ್ಯಾಂಕ್‍ಗಳು ಎಸ್‍ಬಿಐ ಸ್ಟೇಟ್ ಬ್ಯಾಂಕ್ ಬಡ್ಡಿಯಂತಹ ತಮ್ಮದೇ ವಾಲೆಟ್‍ಗಳನ್ನು ಹೊಂದಿವೆ. ಇದೀಗ ದಿಢೀರನೆ ತಂತ್ರಜ್ಞಾನ ಸುಧಾರಣೆ ಹೊಂದಿದ್ದು ಪ್ರೈವೇಟ್ ವಾಲೆಟ್‍ಗಳೊಂದಿಗೆ ಪೈಪೋಟಿಗಿಳಿದಿವೆ. ಕೆಲವೇ ತಿಂಗಳುಗಳಲ್ಲಿ ಆರ್‍ಬಿಐ ವಾಲೆಟ್‍ಗಳನ್ನು ಅಳವಡಿಸಿಕೊಳ್ಳಲಿದೆ ಎಂಬ ವಿಶ್ವಾಸ ಎ.ಪಿ.ಹೋತಾ ಅವರದ್ದು. ಆದ್ರೆ ನಮಗ್ಯಾಕೆ ಮೊದಲ ಸ್ಥಾನದಲ್ಲಿ ವಾಲೆಟ್ ಬೇಕು ಅನ್ನೋದು ಪ್ರಶ್ನೆ. ಈ ವೇದಿಕೆಯ ಪ್ರಯೋಜನಗಳನ್ನು ಸ್ಟಾರ್ಟ್‍ಅಪ್‍ಗಳು ಹೇಗೆ ಬಳಸಿಕೊಳ್ಳುತ್ತವೆ ಅನ್ನೋದೇ ಕುತೂಹಲಕರ.

ಲೇಖಕರು: ತಾರುಶ್ ಭಲ್ಲಾ

ಅನುವಾದಕರು: ಭಾರತಿ ಭಟ್

ಇದನ್ನು ಓದಿ

ಮೆಟ್ರೋ ಸಿಟಿಯಲ್ಲಿ ಗುಬ್ಬಚ್ಚಿಗಳಿಗೆ ಬೆಚ್ಚನೆ ಗೂಡು

2. ಸೂರ್ಯಶಕ್ತಿಯಿಂದ ಉದ್ಯೋಗ ಸೃಷ್ಟಿ, ಕುಗ್ರಾಮಗಳ ಅಭಿವೃದ್ಧಿ

3. ಮಹಿಳೆ ಏನನ್ನಾದರೂ ಸಾಧಿಸಬಲ್ಲಳು ಎಂಬುದನ್ನ ತೋರಿಸಿಕೊಟ್ಟ ‘ಸೋಲಾರ್ ಅಕ್ಕ’.