ನಮ್ಮ ಯುವಜನರ ಭವಿಷ್ಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೇಲೆ ಆಧಾರಿತವಾಗಿದೆಯೆ?

ನಮ್ಮ ಯುವಜನರ ಭವಿಷ್ಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೇಲೆ ಆಧಾರಿತವಾಗಿದೆಯೆ?

Friday November 17, 2017,

2 min Read

image


ಪ್ರತಿವರ್ಷ ಭಾರತದಿಂದ ಸುಮಾರು 75 ಲಕ್ಷ ಪದವೀಧರರು ಕಾಲೇಜುಗಳಿಂದ ಹೊರಬರುತ್ತಿದ್ದಾರೆ? ಆದರೆ ಇಷ್ಟೆಲ್ಲ ಜನಕ್ಕೆ ಪೂರೈಸುವಷ್ಟು ನಮ್ಮಲ್ಲಿ ಉದ್ಯೋಗವಕಾಶಗಳಿವೆಯೇ? ಹೊಸ ಹೊಸ ಕೌಶಲ್ಯಗಳನ್ನು ಕಲಿಯುವದರಿಂದ ಮಾತ್ರ ಬೇರೆ ಕ್ಷೇತ್ರಗಳಲ್ಲಿ ನಮ್ಮ ಯುವಕರು ಪಾದಾರ್ಪಣೆ ಮಾಡಬಹುದು. ಈಗ ಅತ್ಯಂತ ಹುಮ್ಮಸ್ಸಿನಲ್ಲಿರುವ ಕ್ಷೇತ್ರವೆಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್.

ನಮ್ಮ ದೇಶದಲ್ಲಿ ಎರದು ತರಹದ ಪದವೀಧರರ ಗುಂಪು ಕಂಡುಬರುವದು, ಒಂದು ಜಾಗತಿಕ ಭಾಷೆ ಇಂಗ್ಲೀಷಿನ ಜ್ಞಾನ ಇರುವವರು ಇನ್ನೊಂದು ಕೇವಲ ಮಾತೃಭಾಷೆಯಲ್ಲಿ ಹಿಡಿತ ಸಾಧಿಸಿರುವವರು. ಮೊದಲನೆಯ ಗುಂಪಿಗೇ ಅವಕಾಶಗಳು ಹೆಚ್ಚಿವೆ ಎಂದರೆ ತಪ್ಪಾಗಲಾರದು.

ಐಐಟಿ ,ಐಐಎಮ್ ಮತ್ತು ಬಿಟ್ಸ್ ಪಿಲಾನಿ ಹಾಗು ಇನ್ನಿತರ ಬಿಜಿನೆಸ್ ಸಂಭದಿಸಿದ ಕಾಲೇಜುಗಳಿಂದ ಹೊರಬರುವ ಪದವೀಧರರ ಬೇಡಿಗೆ ಅತಿ ಹೆಚ್ಚಾಗಿದೆ.

ಆದರೆ ಈಗಿನ ಯುಗದಲ್ಲಿ ಭಾಷೆ, ಕೌಶಲ್ಯಗಳ ಅವಶ್ಯಕತೆಯಿಲ್ಲದೇ ರೋಬೊಟಿಕ್ಸ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಅನೇಕ ಕಾರ್ಯಗಳನ್ನು ಸುಲಭವಾಗಿ ಮಾಡಿ ಮುಗಿಸುತ್ತಿದೆ. ತಾಂತ್ರಿಕ ಮೇಳದಲ್ಲಿ ಇದು ಬಹಳ ಚರ್ಚಾಸ್ಪದವಾದ ವಿಷಯವಾಗಿತ್ತು.

ಅಟೊಮೇಶನ್ ಮೊದಲಿನಿಂದಲೂ ಇರುವ ಕ್ಷೇತ್ರ, ಮುಂಚೆ ಜನರೇ ಅದನ್ನು ನಿಭಾಯಿಸುತ್ತಿದ್ದರೆ ಈಗ ಯಂತ್ರಗಳೆ ಅಲ್ಗಾರಿದಮ್ ಎಲ್ಲ ಬರೆದು ಕಾರ್ಯ ನಿರ್ವಹಿಸುವಲ್ಲಿ ಸಫಲಗೊಂಡಿವೆ. ಟಾವೊ ಆಟೊಮೇಷನ್ ಸರ್ವೀಸ್ ಸಂಸ್ಥಾಪಕ ರವಿ ಹೊಸೂರ್‌ರವರು "ಮನುಷ್ಯ ಮಾಡುತ್ತಿದ್ದ ಅನೇಕ ಕಾರ್ಯಗಳನ್ನು ಈಗ ರೋಬೋಟ್‌ಗಳು ಅತ್ಯಂತ ಸುಲಲಿತ ಮತ್ತು ಸುಗಮವಗಿ ನಿರ್ವಹಿಸುತ್ತಿವೆ, ಇದರಿಂದ ಅನೇಕ ಕಡೆ ಹುಮನ್ ರಿಸೋರ್ಸ್‌ನ ಅವಶ್ಯಕತೆಯೇ ಇಲ್ಲವಾಗಿದೆ" ಎಂದರು.

ಬಾಷ್ ಗ್ಲೋಬಲ್ ಸರ್ವೀಸ್ ಸೊಲ್ಯೂಷನ್ಸ್‌ನ ವಿ.ಪಿ. ಸುಜಾತಾ ದೊರೆಸ್ವಾಮಿ, "2016 ರಲ್ಲಿ ನಾವು ಆಟೊಮೇಷನ್ ಶುರು ಮಾಡಿಕೊಂಡೆವು.ಇದರಿಂದ ಸುಮಾರು ಶೇ.25 ರಶ್ಟು ನಮ್ಮ ಕಾರ್ಯತತ್ಪರತೆ ಹೆಚ್ಚಿಕೊಂಡಿತು. ಇದರಿಂದ ನಮ್ಮ ಸರ್ವೀಸಿನ ಗುಣಮಟ್ಟ ಹೆಚ್ಚಿತು. ಅದಕ್ಕಾಗಿ ಈಗ ನಾವು ಲೆಕ್ಕಪತ್ರ ನಿರ್ವಹಣೆ ಮತ್ತು ಎಚ್ ಸ್ ಎಮ್ ನಲ್ಲಿ ಅನ್ವಯಿಸುತ್ತಿದ್ದೇವೆ" ಎಂದರು.

"ಇದಕ್ಕೆ ತಕ್ಕಂತೆ ಜನರು ಕೂಡ ತಮ್ಮ ಕೌಶಲ್ಯಗಳನ್ನು ಉನ್ನತೀಕರಿಸಿಕೊಳ್ಳಬೇಕು" ಎಂದು ಕೂಡ ಹೇಳಿದರು.

ಎನ್ಟಿಟಿ ಡಾಟಾ ಗ್ಲೋಬಲ್ ಡೆಲಿವರಿ ಸರ್ವಿಸಿಸ್‌ನ ರವಿ ಕುಮಾರ್, "ನಮ್ಮ ಒಂದು ಕ್ಲೈಂಟ್‌ಗೆ ಶೇ.85 ರಷ್ಟು ವೆಚ್ಚ ಕಡಿತ ಬೇಕಿತ್ತು. ನಾವು ರೋಬೊಟಿಕ್ಸ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಇದನ್ನು ಸಾಧಿಸಲು ಸಾಧ್ಯವಾಯಿತು" ಎಂದರು.

ಸಿ‌ಎಂಎಸ್ ಐಟಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್66ನ ಅನುರಾಗ್ ಮೆಹ್ರೋತ್ರ, " ಇನ್ನೇನು ಕೆಲವೇ ವರ್ಷಗಳಲ್ಲಿ ಸುಮಾರು ಶೇ. 90 ರಷ್ಟು ಕೆಲಸಗಳನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಂದಲೇ ನಿಭಾಯಿಸಬಹುದು. ಆಗ ಜನರಿಗೆ ನೌಕರಿಯ ಅಭಾವವಾಗುವದಂತೂ ಖಂಡಿತ", ಎಂದು ನಮ್ಮ ಮುಂದಿನ ಜನಾಗದ ಬಗ್ಗೆ ಇರುವ ಕಾಳಜಿಯನ್ನು ವ್ಯಕ್ತಪಡಿಸಿದರು.

ದಿ ಫ್ಯೂಚರ್ ಆಫ್ ವರ್ಕ್: ಎ ಜರ್ನಿ ಟುವರ್ಡ್ಸ್ 2022 ಬಗ್ಗೆ ಒಂದು ಪಿ ಡಬ್ಲು ಸಿಯ ವರದಿಯ ಪ್ರಕಾರ, 2020 ರಲ್ಲಿ ಉದ್ಯೋಗಗಳು ಲಭ್ಯವಿಲ್ಲದ ಪರಿಣಾಮವಾಗಿ ವಿದ್ಯಾರ್ಥಿ ಪ್ರತಿಭಟನೆ ಜಾಗತಿಕವಾಗಿ ಸ್ಫೋಟಗೊಳ್ಳುತ್ತದೆ ಎಂದು ಉಲ್ಲೇಖಿತವಾಗಿದೆ.

ಭವಿಷ್ಯದ ಉದ್ಯೋಗಗಳಿಗೆ ಯುವಜನರನ್ನು ಸಿದ್ಧಗೊಳಿಸಲು ಸರ್ಕಾರವು ಏಐ, ಡಾಟಾ ಸೈನ್ಸಸ್, ಮತ್ತು ಸೈಬರ್‌ಸುರಕ್ಷೆಗಳಲ್ಲಿ ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಸೂಕ್ತ ಕೆಲಸ ಮಾಡುತ್ತಿದೆ. ಕರ್ನಾಟಕವು 2022 ರ ವೇಳೆಗೆ ಅನೇಕ ಎಂಜಿನಿಯರ್‌ಗಳನ್ನು ಮರುಬಳಕೆ ಮಾಡಲು ಬಯಸಿದೆ ಮತ್ತು ಇದರಿಂದ ನಿಮ್ಮನ್ನು ಹಿಮ್ಮೆಟ್ಟಿಸುವ ಬದಲು ನಿಮ್ಮನ್ನು ಹಿಂಪಡೆದುಕೊಳ್ಳುವ ಕಾರ್ಪೋರೇಟ್ ಪಾಲಿಸಿಗಳು ಬರಬಹುದು.