ಹೊಸ ಆ್ಯಪ್‍ನ ಆವಿಷ್ಕಾರಕ್ಕೆ ನಾಂದಿ ಹಾಡಿದ ಹೈಪರ್‍ಲೋಕಲ್ ಸೇವೆಗಳು

ಟೀಮ್​​ ವೈ.ಎಸ್​. ಕನ್ನಡ

0

ಆನ್‍ಲೈನ್ ಮಾಧ್ಯಮ ಇತ್ತೀಚಿನ ದಿನಗಳಲ್ಲಿ ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ಇದ್ರಿಂದಾಗಿ ನಮ್ಮ ಹಾಸಿಗೆಗಳು ಆಟದ ಮೈದಾನಗಳಾದ್ರೆ, ಕಂಪ್ಯೂಟರ್ ಮೌಸ್‍ಗಳು ಹೊಸ ಸ್ನೇಹಿತರಾಗಿ ಮಾರ್ಪಟ್ಟಿವೆ. ಶಾಪಿಂಗ್ ಮಾಲ್‍ಗಳು ನಮ್ಮಿಂದ ದೂರವಾಗ್ತಿವೆ. ಬರೀ ಒಂದು ಮ್ಯಾಗಿಗಾಗಿ ಉದ್ದುದ್ದ ಕ್ಯೂನಿಂತು ಕೊಂಡುಕೊಳ್ಳೋ ಕಾಲ ಹೋಗ್ತಿದೆ. ಈಗೇನಿದ್ರೂ ಕೇವಲ ಒಂದು ಬಟನ್ ಒತ್ತಿದ್ರೆ ಸಾಕು, ನಿಮಗಿಷ್ಟದ ಕಾರು, ದಿನಸಿ, ಔಷಧಿಗಳು, ಪ್ರಾಣಿಗಳ ಆಹಾರ ಎಲ್ಲವೂ ಪಡೆಯಬಹುದು. ಇದಕ್ಕಾಗಿ ಜಿಯೋ-ಲೊಕೇಶನ್ ಸರ್ವಿಸ್ ದೇಶದಲ್ಲಿ ಬೃಹತ್ ಆನ್‍ಲೈನ್ ಒಲಯವನ್ನು ಸ್ಥಾಪಿಸಿದೆ. ಇದ್ರಿಂದಾಗಿ ನಮ್ಮ ಜೀವನಶೈಲಿ, ಮನಸ್ಥಿತಿ, ಸಂಬಂಧಗಳು, ಆರೋಗ್ಯದಲ್ಲಿ, ಕ್ರಾಂತಿಯನ್ನೇ ಮಾಡಿವೆ.

ಬುಟ್ಟಿ ಹೊತ್ಕೊಂಡು ತರಕಾರಿ ಬೇಕಾ ತರಕಾರಿ ಅಂತಾ ಕೂಗ್ತಾ ಬರೋ ವ್ಯಾಪಾರಿಗಳಲ್ಲಿ ತರಕಾರಿ ಕೊಳ್ಳೋ ಜನರು ಈಗ ಕಡಿಮೆಯಾಗ್ತಿದ್ದಾರೆ. ಹೈಪರ್ ಲೋಕಲ್ ಆನ್‍ಲೈನ್ ಸೇವೆಗಳು ಇದನ್ನು ಬದಲಾಯಿಸಿವೆ.

ಹಾಗಂತ ಇದು ಸಂಪೂರ್ಣ ಹೊಸದಾದ ವಿದ್ಯಮಾನವೇನಲ್ಲ. ಹಳೆಯ ಆಫ್‍ಲೈನ್ ವ್ಯವಸ್ಥೆಗಳನ್ನೇ ಮರು ವಿನ್ಯಾಸಗೊಳಿಸಿದ್ದು ಇದು ಹೊಸ ಮತ್ತು ಅವಿಸ್ಮರಣೀಯ ಅನುಭವವವನ್ನು ರಚಿಸಲು ತಂತ್ರಜ್ಞಾನದ ಸಹಾಯದಿಂದ ಸಹಾಯಕಾರಿಯಾಗಿದೆ.

`ಕ್ಯೂರೇಷನ್' ಹೊಸ ಕಲ್ಪನೆಗಳಿಗೆ ಮೂಲವಾಗಿದೆ. ಅಮೆರಿಕಾದ ಸೂಪರ್‍ಮಾರ್ಕೆಟ್ ಗ್ರಾಹಕರಿಗೆ ಉತ್ತಮ ಅನುಭವ ನೀಡುವ ಹಿರಿತನವನ್ನು ಮೆರೆದಿದೆ. ನಂತರದ ಸ್ಥಾನ ಭಾರತದ `ಹೈಪರ್‍ಲೋಕಲ್' ಸೇವೆಗೆ ಸಲ್ಲುತ್ತದೆ.

ಜೀವನ ಶೈಲಿಗೆ ಬೇಕಾದ ವಸ್ತುಗಳು, ದುರಸ್ತಿ ಕೆಲಸಕ್ಕೆ ಬೇಕಾದ ವಸ್ತುಗಳು ಇವೆಲ್ಲಾ ಸೇವೆಗಳು ನಮ್ಮ ನೆರೆಹೊರೆಯ ಬೆಳವಣಿಗೆಯ ವೇಗಕ್ಕೆ ಸಹಾಯಕವಾಗಿದೆ.

ನೋಟಿಸ್‍ನಂತಹ ಜಿಪಿಎಸ್ ಆಧಾರಿತ ಸೇವೇಗಳು ಸಾಂಪ್ರದಾಯಿಕ,ಸಾಮಾಜಿಕ ಜಾಲ ತಾಣಗಳಾದ ಫೇಸ್‍ಬುಕ್‍ಗಿಂತ ಅತ್ಯುತ್ತಮವಾಗಿವೆ. ಫೇಸ್‍ಬುಕ್‍ನಂತಹ ಸಾಮಾಜಿಕ ಮಾಧ್ಯಮಗಳು ಜನರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿವೆ. ಅದು ಅಗತ್ಯ ಆಧರಿತ ಮಾಧರಿಯಲ್ಲಿ ನೀವು ನಿಮಗನಿಸಿದ್ದನ್ನು ಶೇರ್ ಮಾಡಬಹುದು, ಸಮಸ್ಯೆಗಳನ್ನು ಪೋಸ್ಟ್ ಮಾಡಬಹುದು.

ಎಂದಾದರೂ ನಿಮಗೆ ನೆರವಿನ ಅಗತ್ಯ ಬೀಳಬಹುದು. ಆಗ ನಿಮ್ಮ ನೆರಹೊರೆಯವರಿಗೆ ನೀವ್ಯಾರೆಂದು ಗೊತ್ತಿಲ್ಲದಿರಬಹುದು. ಆಗ ಬಲೂನ್ ಮ್ಯಾಪ್‍ಮೇಲೆ ಗುರುತಿಸಿ ಆನ್‍ಲೈನಿಂದ ನಿಮ್ಮ ಹತ್ತಿರದಲ್ಲೇ ಇರುವ ವ್ಯಕ್ತಿಯಿಂದ ಸಹಾಯ ಪಡೆಯಬಹುದು.

ನಿಮಗೆ ಪರಿಚಯವೇ ಇಲ್ಲದವರಿಗೆ ಸಹಾಯಮಾಡುವ ಸಂದರ್ಭ ನಿಮಗೆ ಬಂದಿದೆಯಾ? ಬಲೂನ್ ನಿಮ್ಮನ್ನು ಮ್ಯಾಪ್ ಮೂಲಕ ಪತ್ತೆ ಮಾಡಿ ನಿಮ್ಮ ಅಕ್ಕಪಕ್ಕದವರಿಂದ ಅಗತ್ಯ ನೆರವು ಕೊಡಿಸುತ್ತದೆ. ವೃತ್ತಿ ನಿಷ್ಟರಿಗೆ ಈ ಆ್ಯಪ್ ತೃಪ್ತಿಯಾಗುವುದಿಲ್ಲ. ಆದ್ರೆ ಜನಸಾಮಾನ್ಯರು ಈ ಬ್ಯುದಿನೆಸ್ ಮಾದರಿಯಿಂದ ಥ್ರಿಲ್ ಆಗಿದ್ದಾರೆ. ಅವರು ಮಾಡಬೇಕಾಗಿರೋದು ಇಷ್ಟೇ. ಆ್ಯಪ್‍ಗೆ ಲಾಗ್‍ಇನ್ ಆಗಿ ಜಿಪಿಎಸ್ ಸ್ವಿಚ್ ಆನ್ ಮಾಡಬೇಕು. ಇದರಿಂದ ಹಣ ಮತ್ತು ಸಮಯ ಉಳಿತಾಯವಾಗುತ್ತದೆ ಜೊತೆಗೆ ಕಾರ್ಬನ್ ಪ್ರಿಂಟ್‍ನಿಂದ ಆಗುವ ಪರಿಸರ ಮಾಲಿನ್ಯ ತಪ್ಪಿಸಬಹುದು.

ಆ್ಯಪ್ ನೋಟಿಸ್ ಕೇವಲ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದ್ರಲ್ಲಿ ಮಾತ್ರವಲ್ಲ, ಜೊತೆಗೆ ಹೊಸ ಪ್ರತಿಭೆ ಹುಡುಕಿ ಅವರಿಗೆ ಉದ್ಯೋಗ ಒದಗಿಸುವ ಕಾರ್ಯವನ್ನು ಈ ಆ್ಯಪ್ ಮಾಡ್ತಿದೆ. ಜೊತೆಗೆ ನಿಮ್ಮ ಅಕ್ಕಪಕ್ಕವೇ ಪ್ರತಿಭೆಗಳಿದ್ರೆ, ಅವರಿಗೆ ಹೊರ ಜಗತ್ತಿನ ಬಗ್ಗೆ ಗೊತ್ತಿರದಿದ್ರೆ, ಅವರ ಪ್ರತಿಭೆಯನ್ನ ಹೊರತರಲು ಈ ಆ್ಯಪ್ ಕ್ರಾಂತಿಕಾರಿ ಅಪ್ಲಿಕೇಷನ್‍ನನ್ನು ಪರಿಚಯಿಸಿದೆ. ಇಂತಹ ಅನೇಕ ಅಪ್ಲಿಕೇಷನ್‍ಗಳಿವೆ. ಬಳಕೆದಾರರು ಧೃಡವಾದ ಸಂಪರ್ಕಸಾಧನವನ್ನು ಉಪಯೋಗಿಸಲು ಮತ್ತು ತಡೆರಹಿತ ಸಂಚರಣೆಗೆ ಇದು ಸುಲಭವಾಗಿದೆ.

ಇ-ವಾಣಿಜ್ಯ ಉದ್ಯಮಗಳು ನಮ್ಮ ಜೀವನವನ್ನು ತುಂಬಾ ಸುಭವಾಗಿಸಿದೆ. ಮತ್ತು ಯಾವುದೇ ಜಗಳ, ಗಲಾಟೆಯಿಂದ ದೂರವಿರಿಸಿದೆ. ಹೀಗಾಗಿ ಇಂದು ನಮ್ಮ ಜೀವನವೇ ಆನ್‍ಲೈನ್‍ನನ್ನು ಆಧರಿಸಿದೆ. ವಸ್ತುಗಳ ಗುಣಮಟ್ಟ, ಮತ್ತು ಅವುಗಳನ್ನು ತಲುಪಿಸುವ ಸೇವೆಯಲ್ಲಿ ನಾವಿನ್ಯತೆಯನ್ನು ಹೊಸ ಆ್ಯಪ್‍ಗಳು ಆವಿಷ್ಕರಿಸುತ್ತಿವೆ. ಮುಂದೆ ನಾವು ನಮ್ಮ ಎಲ್ಲಾ ಅಗತ್ಯತೆಗಳಿಗೆ ಆನ್‍ಲೈನ್ ಆ್ಯಪ್‍ಗಳನ್ನೇ ಅವಲಂಭಿಸಬೇಕಾಗಬಹುದು.

ಆನ್‍ಲೈನ್ ಸೇವೆಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇವೆ. ಹೊಸ ಹೊಸ ಆ್ಯಪ್‍ಗಳು ಬರ್ತಿವೆ. ಇವುಗಳಲ್ಲಿ ಯಾವುದು ಉಳಿಯತ್ತೋ, ಯಾವುದು ಬಿಡುತ್ತೋ..ಅಲ್ಲಿವರೆಗೂ `ನೋಟಿಸ್ ಆ್ಯಪ್' ಹೊಸ ಹೊಸ ಆವಿಷ್ಕಾರಗಳೊಂದಿಗೆ ನಮ್ಮ ಜೀವನವನ್ನು ಸರಳೀಕರಣಗೊಳಿಸುತ್ತಿದೆ. ಅದೇನೋ ಅಂತಾರಲ್ಲಾ `ಅವಶ್ಯಕತೆಯೇ ಎಲ್ಲಾ ಆವಿಷ್ಕಾರದ ತಾಯಿ'..ಹಾಗೆ ಇದು ಕೂಡಾ.

ಲೇಖಕರು: ಅಮಿತ್​ ಘೋಷ್​​
ಅನುವಾದಕರು: ಟಿಎಎ

Related Stories

Stories by YourStory Kannada