ಕೋಲ್ಕತ್ತಾದ ಭವಿಷ್ಯದ 13 ಉದ್ಯಮಗಳು

ಟೀಮ್​​ ವೈ.ಎಸ್​​.

ಕೋಲ್ಕತ್ತಾದ ಭವಿಷ್ಯದ 13 ಉದ್ಯಮಗಳು

Saturday November 07, 2015,

3 min Read

ಕೋಲ್ಕತ್ತಾ ಅನ್ನೋದು ಒಂದು ಸುಂದರ ನಗರ. ಭಾರತದ ಪುರಾತನ ನಗರಗಳಲ್ಲಿ ಕೋಲ್ಕತ್ತಾ ಕೂಡ ಒಂದಾಗಿದೆ. ಈ ಪುರಾತನ ನಗರದ ಬಗ್ಗೆ ಒಂದು ಕ್ಷಣ ಕಣ್ಣು ಮುಚ್ಚಿದಾಗ ಹಲವಾರು ಚಿತ್ರಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಆ ಕಾಲದ ಹೌರಾ ಸೇತುವೆ, ಅಂಬಾಸಿಡರ್ ಟ್ಯಾಕ್ಸಿಗಳು, ಬೆಂಗಾಳಿ ತಿಂಡಿ ತಿನಿಸುಗಳು ನೆನಪಾಗುತ್ತವೆ. ಕೋಲ್ಕತ್ತಾ ಮಹಾನಗರದ ಅಂದ ಚೆಂದ ಹೆಚ್ಚಿಸಲು ಈಗ 13 ಉದ್ಯಮಗಳು ಸಿದ್ಧಗೊಂಡಿವೆ.

ಟ್ಯಾಕ್ಸ್ ಮಂತ್ರ

ಅಲೋಕ್ ಪಾಟ್ನಿಯಾ ಎಂಬುವವರಿಂದ ಸ್ಥಾಪನೆಯಾದ ಟ್ಯಾಕ್ಸ್ ಮಂತ್ರ ಉದ್ಯಮಗಳು ಹಾಗೂ smbಗಳಿಗೆ ಕಾನೂನು ಮತ್ತು ತೆರಿಗೆ ಸೇವೆಗಳನ್ನು ಒದಗಿಸುತ್ತದೆ. ಈ ಸಂಸ್ಥೆಯು ತೆರಿಗೆ ಸಂಬಂಧಿತ ವ್ಯವಹಾರಗಳನ್ನು ಕಾಗದ ರಹಿತ ಹಾಗೂ ನೋವು ರಹಿತವಾಗಿಸಲು ಕೋಲ್ಕತ್ತಾ ನಗರ ಪ್ರದೇಶಗಳ ಹೊರಗೂ ಸಹ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ. ಈ ಸಂಸ್ಥೆಯು 5000ಕ್ಕೂ ಹೆಚ್ಚು ಉದ್ಯಮಗಳ ನೋಂದಣಿ ಹಾಗೂ 8000ಕ್ಕೂ ಅಧಿಕ ಉದ್ಯಮಗಳ ನಿರ್ವಹಣೆ ಮಾಡಲು ಸಹಕರಿಸಿದೆ.

image


Buy Hatke

ಅಂತರ್ಜಾಲದಲ್ಲಿ ಬೆಲೆ ಹೋಲಿಕೆ ಮಾಡುವ ಸಾಧನವಾದ ಇದನ್ನು ಗೌರವ್ ಧನಕೆ, ಪ್ರಶಾಂತ್ ಸಿಂಗ್ ಮತ್ತು ಶ್ರೀಕಾಂತ್ ಸೇತುಮಾಧವನ್ ಎಂಬುವವರು ಪ್ರಾರಂಭಿಸಿದರು. ಆಗ ಅವರು ಖರಾಗ್ ಪುರದ ಐಐಟಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದರು. ಅಂತರ್ಜಾಲದಲ್ಲಿ ಮಾರಾಟವಾಗುವ ಉತ್ಪನ್ನಗಳ ಉತ್ತಮ ಬೆಲೆಯನ್ನು ಕಂಡುಹಿಡಿಯುವಲ್ಲಿ ಎದುರಾಗುತ್ತಿದ್ದ ತೊಂದರೆಗಳನ್ನು ಪರಿಹರಿಸುವ ದೃಷ್ಟಿಯಿಂದ ಪ್ರಾರಂಭಿಸಿದರು. ಈ ಸಂಸ್ಥೆಯು ಬೀಜ ಮಾರಾಟವನ್ನು ಒಂದು ಮಿಲಿಯನ್ ಗೆ ಏರಿಸಿದೆ.

Mihup’s nectar

ನೆಕ್ಟರ್ ಎಂಬುದು ವೈಯಕ್ತಿಕ ಮೊಬೈಲ್ ಸಹಾಯಕವಾಗಿದೆ. ಇದು ಬಳಕೆದಾರರ ಬೇಡಿಕೆಗನುಗುಣವಾಗಿ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಅಂತರ್ಜಾಲ ಆರ್ಥಿಕ ವ್ಯವಸ್ಥೆಯ ಉತ್ತಮ ಅಂಶಗಳ ಬಗ್ಗೆ ಅಗತ್ಯ ಮಾಹಿತಿಗಳನ್ನು ಒದಗಿಸುತ್ತದೆ. ಇದೊಂದು sms ಆಧಾರಿತ ಅಂತರ್ಜಾಲ ಸರ್ಚ್ ಇಂಜಿನ್ ಆಗಿದೆ. ಹಾಗೂ ಸ್ವತಂತ್ರವಾಗಿ ಮಾಹಿತಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಅಪ್ಲಿಕೇಷನ್ ಮೂರನೇ ವ್ಯಕ್ತಿಯ ವೇದಿಕೆಯಾಗಿದ್ದು ಇದು ಈಗಾಗಲೇ 5 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಹಾಗೂ ಪ್ರತಿ ತಿಂಗಳು ಇದರ ಬಳಕೆದಾರರ ಬೆಳವಣಿಗೆ ಶೇ. 15ರಷ್ಟಿದೆ.

SIBIA ANALYTICS

ಅಂಗುಶುಮನ್ ಭಟ್ಟಾಚಾರ್ಯ ಎಂಬುವವರಿಂದ ಆರಂಭವಾದ ಸಿಬಿಯಾ ಅನಾಲಿಸಿಸ್ಟ್ ಎಂಬುದು ಭವಿಷ್ಯದ ಸೂಚಕವಾಗಿದೆ. ಇದು ಭವಿಷ್ಯದ ಯೋಜನೆಗಳನ್ನು ರೂಪಿಸಲು ಹಾಗೂ ನಿರ್ಧಾರಗಳನ್ನು ಕೈಗೊಳ್ಳಲು ಅಗತ್ಯವಾದ ಆಳವಾದ ಜ್ಞಾನವನ್ನು ನೀಡುತ್ತದೆ. ಆದರ್ಶ ಹಾಗೂ ಕ್ರಮಬದ್ಧತೆ ಇದರ ಸಾಮರ್ಥ್ಯವಾಗಿದೆ. ಅವರು ಇದನ್ನು ಬಿಗ್ ಡಾಟ ಹಾಗೂ ಕ್ಲೌಡ್ ಕಂಪ್ಯೂಟಿಂಗ್ ನಂತಹ ಲಭ್ಯವಿರುವ ತಂತ್ರಜ್ಞಾನಗಳಿಂದ ವಿಸ್ತರಿಸುತ್ತಿದ್ದಾರೆ.

Mind hour

ಈ ತಂತ್ರಜ್ಞಾನ ಸಂಸ್ಥೆಯು ಪ್ರಾರಂಭಿಸಿದ್ದು 2 ಜೋಡಿಯಿಂದ, ಇದೊಂದು 6 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಕಲಿಕೆಯ ಅನುಭವವನ್ನು ಒದಗಿಸುತ್ತದೆ. ಈ ಸಂಸ್ಥೆಯು 10000 ಬಳಕೆದಾರರನ್ನು ಹೊಂದಿದೆ.

ikure- 

ಇದೊಂದು ಆರೋಗ್ಯಕ್ಕೆ ಸಂಬಂಧಿಸಿದ ತಂತ್ರಜ್ಞಾನವಾಗಿದೆ. ಇದು ಆರೋಗ್ಯಕ್ಕೆ ಅಗತ್ಯವಾಗ ಸೇವೆಗಳನ್ನು ಒದಗಿಸುತ್ತದೆ. ಆಸ್ಪತ್ರೆಗಳು ಹಾಗೂ ಕ್ಲಿನಿಕ್ ಗಳು ಕಡಿಮೆ ಇರುವಲ್ಲಿ ರೋಗಿಗಳಿಗೆ ಅಗತ್ಯವಾದ ಚಿಕಿತ್ಸೆಯನ್ನು ರಿಮೋಟ್ ಕಂಟ್ರೋಲ್​​ನಲ್ಲಿ ನೀಡಲು ಸಾಧ್ಯವಾಗುವಂತೆ ಇದರ ಸಾಫ್ಟವೇರ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ.

Surgerica- 

ಅಮಿತ್ ಭಗತ್ ಎಂಬುವವರಿಂದ ಪ್ರಾರಂಭವಾದ ಇದರ ಗುರಿ ಭಾರತದಲ್ಲಿ ಪಾರದರ್ಶಕ ಹೆಲ್ತ್ ಕೇರ್ ನ್ನು ತರುವುದಾಗಿದೆ. ಈ ಸಂಸ್ಥೆ ಬಂಡವಾಳವನ್ನು USD 200000ಕ್ಕೆ ಹೆಚ್ಚಿಸಿದೆ. ಬಳಕೆದಾರರು ಉತ್ತಮ ವೈದ್ಯರು ಹಾಗೂ ಆಸ್ಪತ್ರೆಗಳಿಗಾಗಿಯೂ ಇದನ್ನು ಬಳಸಬಹುದಾಗಿದೆ.

WOW!MOMO

ಸಾಗರ್ ದರ್ಯಾನಿ ಮತ್ತು ಬಿನೋದ್ ಹೋಮಾಗೈ ಎಂಬುವವರು ಇದನ್ನು ಸ್ಥಾಪಿಸಿದರು. ಮೋಮೋಸ್ ನ್ನು ವಿವಿಧ ರೀತಿಯ ಉತ್ಪನ್ನಗಳನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ಆರಂಭಿಸಿದರು. ಈ ಸಂಸ್ಥೆಯು ಮುಂದಿನ 2 ವರ್ಷಗಳಲ್ಲಿ 60 ವಿಭಾಗಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದು, ಐಎಎನ್ ಬಂಡವಾಳ ಪ್ರಮಾಣವನ್ನು ಹೆಚ್ಚಿಸಿದೆ

Out box

ಇದು ಯುವ ಉದ್ಯಮಿಗಳಿಂದ ಪ್ರಾರಂಭವಾದ ಸಂಸ್ಥೆಯಾಗಿದೆ. ಇದು ಗಿಫ್ಟ್ , ಕೇಕ್, ಹಾಗೂ ಹೂವುಗಳನ್ನು ಶುಲ್ಕರಹಿತವಾಗಿ ತಲುಪಿಸುತ್ತದೆ. ಕಾಲ್ ಸೆಂಟರ್ ಮೂಲಕ ಕಾರ್ಯನಿರ್ವಹಿಸುವ ಇದು ಉತ್ತಮ ಪ್ರಾರಂಭವನ್ನು ಹೊಂದಿದೆ. ಹಾಗೂ ಉದ್ಯಮವನ್ನು ವಿಸ್ತರಿಸಲು ವಿವಿಧ ದಾರಿಗಳನ್ನು ಹೊಂದಿದೆ.

Fashionnove

ಶರದ್ ಕುಮಾರ್ ಹಾಗೂ ತನುಶ್ರೀ ಖಂಡೇಲ್ ವಾಲ್ ಎಂಬುವವರು ಈ ಸಂಸ್ಥೆಯನ್ನು ಪ್ರಾರಂಭಿಸಿದರು. ಇದೊಂದು ಸ್ಥಳಾಧಾರಿತ ಫ್ಯಾಷನ್ ಸಂಬಂಧಿತ ಹುಡುಕಾಟದ ವೇದಿಕೆಯಾಗಿದೆ. ಇದು ಸ್ಥಳೀಯ ಸ್ವತಂತ್ರ ಫ್ಯಾಷನ್ ಸ್ಟೋರ್ ಗಳನ್ನು ವ್ಯಾಪಾರಿಗಳಿಗೆ ಸಂಪರ್ಕಿಸುತ್ತದೆ. ಈ ಸಂಸ್ಥೆ ಆರಂಭವಾಗುವ ವೇಳೆ ಕೇವಲ 800 ಅಂಗಡಿಗಳನ್ನು ಒಳಗೊಂಡಿತ್ತು. ಆದರೆ ಇಂದು ಕ್ರಿಕೆಟಿಗ ಉಮೇಶ್ ಯಾದವ್ ಅವರ ಮೂಲಕ ಸಂಖ್ಯೆಯನ್ನು ಹೆಚ್ಚಿಸಿದೆ.

Just hop 24

ಅಂತರ್ಜಾಲ ವಾಣಿಜ್ಯದಲ್ಲಿ ಆರೋಗ್ಯಕರ ಸ್ಪರ್ಧೆಯು ತಾಂತ್ರಿಕ ಅರ್ಥವ್ಯವಸ್ಥೆಯ ಸೂಚನೆಯಾಗಿದೆ. ಇದು ಕಲ್ಕತ್ತಾ ಮತ್ತು ಹೌರಾದಲ್ಲಿ ದಿನಸಿ ಸಾಮಾಗ್ರಿಗಳನ್ನು ಮನೆ ಬಾಗಿಲಿಗೆ ಒದಗಿಸುವ ವೇದಿಕೆಯಾಗಿದೆ. ಇದನ್ನು ಉತ್ಕರ್ಷ್ ಲೋಹಿಯಾ, ಚೇತನ್ ಲೋಹಿಯಾ, ಪೊರಾವ್ ಜೈನ್ ಪ್ರಾರಂಭಸಿದರು. ಇದು ದಿನಕ್ಕೆ 30ಕ್ಕೂ ಅಧಕ ಡೆಲಿವರಿ ನೀಡುತ್ತದೆ.

Packr and paaaltao

ಆರ್ಪನ್ ದಾಸ್ ಅವರಿಂದ ಸ್ಥಾಪನೆಯಾದ ಈ ಎರಡೂ ಸಂಸ್ಥೆಗಳು ಸಾಮ್ಯತೆಯನ್ನು ಹೊಂದಿದೆ. Packr ಒಂದು ಬೇಡಿಕೆ ಜಾರಿ ಕಂಪನಿಯಾಗಿದ್ದು ಇದು ಭಾರತದಾದ್ಯಂತ ಕಾನೂನಾತ್ಮಕವಾಗಿ ಗ್ರಾಹಕರನ್ನು ತಲುಪಲು ಸಹಾಯಕವಾಗಿದೆ. Palaato ಎಂಬುದು ನೈಸರ್ಗಿಕ, ಹ್ಯಾಂಡ್ ಮೇಡ್ ಹಾಗೂ ಗ್ರಾಮೀಣ ಪ್ರದೇಶದ ವಸ್ತುಗಳ ಮಾರುಕಟ್ಟೆಯಾಗಿದೆ.

ಮುಂಬರುವ ತಂತ್ರಜ್ಞಾನ ಆಧಾರಿತ ಕಂಪನಿಗಳನ್ನು ಹುಡುಕುತ್ತಿದ್ದಾಗ ಕಲ್ಕತ್ತಾದಲ್ಲಿ ನಮ್ಮ ಕಣ್ಣಿಗೆ ಬಿದ್ದ ಕಂಪನಿಗಳಿವು. ಅಲ್ಲಿ QSR ವಿಭಾಗದಲ್ಲಿ ಹಲವಾರು ಉದ್ಯಮಗಳಿವೆ. ಟೂಕಿ ಟಾಕಿಯಂತಹ ಉದ್ಯಮಗಳು ಹೆಚ್ಚುತ್ತಿದ್ದು, ಉತ್ತಮ ವಾತಾವರಣ ಹುಡುಕಲು ಬೆಂಗಳೂರಿನ ಕಡೆಗೆ ಸ್ಥಳಾಂತರಿತವಾಗಲಿವೆ.