ಹೋಂ​ ಶಾಪಿಂಗ್​ ಪೈಪೋಟಿ : Naaptol​ನ ಶೇ. 15ರಷ್ಟು ಪಾಲು ಖರೀದಿಸಿದ ಜಪಾನಿನ Mitsui.

ಟೀಮ್​​ ವೈ.ಎಸ್​. ಕನ್ನಡ

ಹೋಂ​ ಶಾಪಿಂಗ್​ ಪೈಪೋಟಿ : Naaptol​ನ ಶೇ. 15ರಷ್ಟು ಪಾಲು ಖರೀದಿಸಿದ ಜಪಾನಿನ Mitsui.

Tuesday December 15, 2015,

2 min Read

Naaptol ಹೋಮ್ ಶಾಂಪಿಂಗ್ ವಲಯದಲ್ಲಿ ಚಿರಪರಿಚಿತ ಹೆಸರು. ಜನ ಮನ್ನಣೆ ಗಳಿಸಿರುವ ಪ್ಲಾಟ್ ಫಾರ್ಮ್. ಬಂಡವಾಳ ಸಂಗ್ರಹದಲ್ಲಿ ಕೂಡ ಅದು ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಷೇರು ಬಂಡವಾಳ ರೂಪದಲ್ಲಿ 343 ಕೋಟಿ ರೂಪಾಯಿ ಸಂಗ್ರಹಿಸಿದೆ. ಜಪಾನಿನ ಮಿಟ್ಸಿ ಆಂಡ್ ಕಂಪೆನಿ ನ್ಯಾಪ್ಟಲ್ ಸಂಸ್ಥೆಯ ಶೇಕಡಾ 15ರಷ್ಟು ಪಾಲನ್ನು ಖರೀದಿಸಿದೆ. ಈ ಖರೀದಿ ಪ್ರಕ್ರಿಯೆಯಿಂದಾಗಿ ಜಪಾನ್ ಸಂಸ್ಥೆ mitsui ಯ ಪಾಲು ನ್ಯಾಪ್ಟಲ್ ನಲ್ಲಿ ಶೇಕಡಾ 20ಕ್ಕೆ ಏರಿದೆ. ಏಪ್ರಿಲ್ ತಿಂಗಳಲ್ಲಿ ಸಿ ರೌಂಡ್ ಪ್ರಕ್ರಿಯೆಯಲ್ಲಿ ನ್ಯಾಪ್ಟಲ್ 136 ಕೋಟಿ ರೂಪಾಯಿ ಸಂಗ್ರಹಿಸಿತ್ತು.

image


ದೇಶದಲ್ಲಿ ಮನೆ ಮಾತಾಗಿರುವ ನ್ಯಾಪ್ಟಲ್ ಪ್ರತಿ ದಿನ 160 ಮಿಲಿಯನ್ ವೀಕ್ಷಕರನ್ನು ತಲುಪುತ್ತಿದೆ. ಇದಲ್ಲದೆ ಹಲವು ವಿಭಿನ್ನ ಕಾರ್ಯಕ್ರಮಗಳ ಮೂಲಕ 350ಕ್ಕೂ ಹೆಚ್ಚು ಗಂಟೆ ಅವಧಿಯ ವಾಣಿಜ್ಯ ಕಾರ್ಯಕ್ರಮಗಳನ್ನು ಹಲವು ಚಾನೆಲ್​ಗಳ ಮೂಲಕ ಪ್ರಸಾರ ಮಾಡುತ್ತಿದೆ. ಪ್ರಾದೇಶಿಕ ಭಾಷೆಗಳಲ್ಲಿಯೂ ಇದು ಮೂಡಿ ಬರುತ್ತಿದೆ. ಆನ್ ಲೈನ್ ಚಾನೆಲ್ ಕೂಡ ಹೊಂದಿದೆ. ಆದರೆ ಹೆಚ್ಚಿನ ಆದಾಯ ಟೆಲಿವಿಷನ್ ಮತ್ತು ಮುದ್ರಣ ಮಾಧ್ಯಮದಿಂದ ಹರಿದು ಬರುತ್ತಿದೆ.

ಒಂಬತ್ತು ಪ್ರಾದೇಶಿಕ ಭಾಷೆಗಳ ಮೂಲಕ ಕೂಡ Naaptol ಜನರನ್ನು ಅಂದರೆ ಬಳಕೆದಾರರನ್ನು ಸಂಪರ್ಕಿಸುತ್ತಿದೆ. ಪ್ರತಿ ದಿನ 20 ಸಾವಿರ ಬೇಡಿಕೆಗಳನ್ನು ಈಡೇರಿಸುತ್ತಿದೆ. ಜಪಾನ್ ಮೂಲದ ಮಿಟ್ಸಿ, ಏಷ್ಯಾದ ಟಿಲಿವಿಷನ್ ಕ್ಷೇತ್ರದಲ್ಲಿ ಭಾರೀ ಹೂಡಿಕೆ ಮಾಡುತ್ತಿದೆ. ಜಪಾನಿನ ಟೆಲಿವಿಷನ್ ಶಾಪಿಂಗ್ ಸಂಸ್ಥೆ QVC ಕೂಡ ಇದರಲ್ಲಿ ಸೇರಿದೆ. ಚೀನಾ, ತೈವಾನ್​ ಮತ್ತು ಜಪಾನಿನ ಹೋಂ ಶಾಪಿಂಗ್ ನಲ್ಲಿ ಕೂಡ Mitsui ಬಂಡವಾಳ ಹೂಡಿದೆ.

Naaptolನ ಮುಂದಿನ ಗುರಿ ಏನು..?

ಸಂಪನ್ಮೂಲ ಸಂಗ್ರಹದ ಬಗ್ಗೆ ಮಾಹಿತಿ ನೀಡಿರುವ ನ್ಯಾಪ್ಟಲ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನು ಅಗರ್ವಾಲ್ , ಸಂಸ್ಥೆಯ ಮುಂದಿನ ಬೆಳವಣಿಗೆ ಮೇಲೆ ಕೂಡ ಬೆಳಕು ಚೆಲ್ಲಿದ್ದಾರೆ. ಮುಖ್ಯವಾಗಿ ಸಂಸ್ಥೆಯ ಕಾರ್ಯ ಚಟುವಟಿಕೆ ಬಲಪಡಿಸಲು ನಿಧಿ ಬಳಸುವುದಾಗಿ ಅವರು ತಿಳಿಸಿದ್ದಾರೆ. ಪೂರೈಕೆ ವ್ಯವಸ್ಥೆ ಬಲಪಡಿಸಲಾಗುವುದು. ಮಾಹಿತಿಯ ಗುಣಮಟ್ಟ ಹೆಚ್ಚಿಸಲಾಗುವುದು. ಅತ್ಯಾಧುನಿಕ ಸ್ಟುಡಿಯೋ ನಿರ್ಮಿಸುವ ಚಿಂತನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಪ್ರಾದೇಶಿಕ ಮಾಧ್ಯಮಗಳಲ್ಲಿ ಅಂದರೆ ಭಾಷೆಗಳ ಮೂಲಕ ಜನರನ್ನು ತಲುಪುವ ಗುರಿ. ತಂತ್ರಜ್ಞಾನ ಮೇಲ್ಮಟ್ಟಕ್ಕೆ ಏರಿಸುವುದು ಇದರ ಭಾಗ ಎಂದು ಸ್ಪಷ್ಟಪಡಿಸುತ್ತಾರೆ ಅಗರ್ವಾಲ್.

ಟೆಲಿವಿಷನ್ ಚಾನೆಲ್ ಮೂಲದ ಮಾರಾಟ ಮಾರುಕಟ್ಟೆ ಅಗಾಧವಾಗಿ ಬೆಳೆದಿದೆ. ಇಲ್ಲಿ ಟೆಲಿವಿಷನ್ ಅಂದರೆ ವಾಹಿನಿಗಳ ಮುಖಾಂತರ ವಾಣಿಜ್ಯ ಚಟುವಟಿಕೆ ಗರಿಗೆದರಿದೆ. ಪ್ರತಿದಿನ ಸುಮಾರು 15 ರಿಂದ 20 ಕೋಟಿ ವ್ಯವಹಾರ ನಡೆಯುತ್ತಿದೆ ಎಂದು ಅಂದಾಜಿಸಲಾಗಿದೆ. ಈ ಕ್ಷೇತ್ರದಲ್ಲಿ 1300 ಕೋಟಿ ರೂಪಾಯಿಯಿಂದ 1500 ಕೋಟಿ ರೂಪಾಯಿ ವ್ಯವಹಾರದ ಅವಕಾಶ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಹೋಂ ಶಾಪಿಂಗ್​ನಲ್ಲಿ ಪೈಪೋಟಿ..!

ಟೆಲಿವಿಷನ್ ಅಂದರೆ ಚಾನೆಲ್ ಆಧಾರಿತ ಮಾರಾಟ ವ್ಯವಸ್ಥೆ ವೆಬ್ ಆಧಾರಿತ ಮಾರಾಟ ವ್ಯವಸ್ಥೆಗಿಂತ ಭಿನ್ನವಾಗಿದೆ. ವಾಹಿನಿ ಅವಲಂಬಿತ ಮಾರಾಟ ಜನರನ್ನು ತಲುಪುತ್ತಿದೆ. ವೆಬ್ ಹೆಚ್ಚು ಕಡಿಮೆ ಮಾರ್ಕೆಟಿಂಗ್ ಆಧಾರಿತವಾಗಿದೆ. ಸಣ್ಣ ಸಣ್ಣ ನಗರಗಳಲ್ಲಿ ಜಾಲ ವಿಸ್ತರಣೆಗೆ ಕಾರ್ಯೋನ್ಮುಖವಾಗಿದೆ. ಇದೀಗ ಮಾರುಕಟ್ಟೆ ಬಗ್ಗೆ ಹೇಳುವುದಾದರೆ ಹೋಮ್ ಶಾಪ್ -18 ಮುಂಚೂಣಿಯಲ್ಲಿದೆ. ಬಳಿಕದ ಸ್ಥಾನವನ್ನು ಸ್ಟಾರ್ ಸಿಜೆ, ನ್ಯಾಪ್ಟಲ್, ಟಿವಿಸಿ ಸ್ಕೈ ಶಾಪ್ ಮತ್ತು ಸ್ನ್ಯಾಫ್ ಡೆನ್ ನೆಟ್ ವರ್ಕ್ ಹೊಂದಿದೆ.

ನ್ಯಾಪ್ಟಲ್ ಈ ಮೇಲೆ ಹೇಳಿದ ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸುತ್ತಿದೆ. 2016ರ ಹಣಕಾಸು ವರ್ಷದಲ್ಲಿ 530 ಕೋಟಿ ನಿವ್ವಳ ಲಾಭದ ನಿರೀಕ್ಷೆಯನ್ನು ನ್ಯಾಪ್ಟಲ್ ಹೊಂದಿದೆ. ಈ ಗುರಿ ಸಾಕಾರಗೊಳಿಸುವತ್ತ ಹೆಜ್ಜೆ ಇಟ್ಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಲಾಭ ಪಡೆಯುವ ಗುರಿ ಹೊಂದಿದೆ. ವಾಹಿನಿ ಜಾಲದಲ್ಲಿ ಮಾರುಕಟ್ಟೆ ಮೇಲೆ ಅಧಿಪತ್ಯ ಸ್ಥಾಪಿಸುವ ಪೈಪೋಟಿ ಬಲಿಷ್ಠಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂಬುದು ಕೂಡ ಕುತೂಹಲಕಾರಿಯಾಗಿದೆ. ನ್ಯಾಪ್ಟಲ್, ಸ್ಟಾರ್ ಸಿಜೆ, ಸ್ನ್ಯಾಪ್ ಡೀಲ್ ಡೆನ್ ನೆಟ್ ವರ್ಕ್ , ಮಾರುಕಟ್ಟೆ ಮುಂಚೂಣಿಯಲ್ಲಿರುವ ಹೋಂ ಶಾಪ್​​-18ಗೆ ಯಾವ ರೀತಿಯ ಪೈಪೋಟಿ ನೀಡಲಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಲೇಖಕರು: ಜೈ ವರ್ಧನ್​​

ಅನುವಾದಕರು: ಎಸ್​.ಡಿ