ಸ್ಟಾರ್ಟ್ಅಪ್ ಗಳ ಮಾರ್ಕೆಟಿಂಗ್ ಗೆ ಒಂದು ಸ್ಟಾರ್ಟ್ಅಪ್ !

ಟೀಮ್ ವೈ ಎಸ್

ಸ್ಟಾರ್ಟ್ಅಪ್ ಗಳ ಮಾರ್ಕೆಟಿಂಗ್ ಗೆ ಒಂದು ಸ್ಟಾರ್ಟ್ಅಪ್ !

Thursday December 24, 2015,

3 min Read

30 ವರ್ಷದ ಡಿಜಿಟಲ್ ಮಾರ್ಕೆಟಿಯರ್ ಗೌರವ್ ಅವರು ಅಮೆರಿಕಾ ಮೂಲದಕ ಪ್ರಾಗ್ಮೈಟ್ ಕಂಪನಿಯನ್ನು ಪುಣೆಯಲ್ಲಿ ಸ್ಥಾಪಿಸಿದರು. ಮೂರು ವರ್ಷದ ಹಿಂದೆ ಗೌರವ್ ಅವರು ಟೆಕ್ಸಾಸ್ ನ ಗೆಳೆಯ ಸ್ಟಾನ್ಲಿ ಆಡಮ್ಸ್ ಜೊತೆ ಸೇರಿಕೊಂಡು ತಮ್ಮದೇ ಸಂಸ್ಥೆ ಹುಟ್ಟು ಹಾಕಿದರು. ಅದೇ ಆನ್ ಲೈನ್ ಬ್ಯುಸಿನೆಸ್ .ಆರ್ಗ್. ಇದು ಸ್ಟಾರ್ಟಪ್ ಳಿಗೆ ಆರು ವಾರಗಳು ಬೂಟ್ ಕ್ಯಾಂಪ್ ಆಯೋಜಿಸಿ, ಆನ್ಲೈನ್ ಬ್ಯುಸಿನೆಸ್ ಗೆ ಸಹಾಯ ಮಾಡುತ್ತಿದೆ.

ಇಡೀ ಮಾರ್ಕೆಟಿಂಗ್ ಪ್ರಕ್ರಿಯೆಯನ್ನು ಸಾಫ್ಟ್ ವೇರ್ ಮೂಲಕ ಸ್ವಯಂಚಾಲಿತಗೊಳಿಸಬೇಕು ಎನ್ನುವುದು ಗೌರವ್ ಬಯಕೆಯಾಗಿತ್ತು. ನವ್ಯೋದ್ಯಮಿ ಗೆಳೆಯರಿಗಾಗಿ ಒಂದು ಸೆಮಿನಾರ್ ಆಯೋಜಿಸಿದ್ದರು. ಅಲ್ಲಿ ಅವರು ತಮ್ಮ ಸಾಫ್ಟ್ ವೇರ್ ಪ್ರದರ್ಶಿಸಿದರು. ಅವರಿಗೆ ಅದು ಇಷ್ಟವಾದರೂ ಅದ ಅನುಷ್ಠಾನ ಪ್ರಕ್ರಿಯೆ ಬಗ್ಗೆ ಪ್ರಶ್ನೆಗಳಿದ್ದವು. ಹೀಗಾಗಿ ಗೌರವ್ ಅವರು ಕೆಲವು ಕೇಸ್ ಸ್ಟಡಿಗಳನ್ನು ಮಾಡಿದರು. ಅದು ಯಶಸ್ವಿಯಾದ ಕಾರಣ, ಎಲ್ಲರೂ ಅಳವಡಿಸಿಕೊಳ್ಳಲು ಮುಂದೆ ಬಂದರು ಎನ್ನುತ್ತಾರೆ ಗೌರವ್.

ಆನ್ಲೈನ್ ಬ್ಯುಸಿನೆಸ್ ಇಂಜಿನ್ ಎನ್ನುವ ಈ ಸಾಫ್ಟ್ ವೇರ್ ಅನ್ನು ಆನ್ಲೈನ್ ಬ್ಯುಸಿನೆಸ್ ಆರ್ಗ್, ಪುಣೆಯಲ್ಲಿ ಲೋಕಾರ್ಪಣೆ ಮಾಡಿದೆ.

image


ಬೆಳೆಯುವ ಸಿರಿ ಮೊಳಕೆಯಲ್ಲಿ :

ತಮ್ಮ 14ನೇ ವಯಸ್ಸಿನಲ್ಲಿಯೇ ಗೌರವ್ ಅವರು ಆನ್ಲೈನ್ ಮಾರ್ಕೆಟಿಯರ್ ಆಗಿ ಮೊದಲ ವೇತನ ಪಡೆದರು. ಅದು 1998ರಲ್ಲಿ ಸುಮಾರು 4 ಡಾಲರ್ ಅಂದರೆ 100 ರೂಪಾಯಿಗಳು. ಡೈರೆಕ್ಟಿ ಎಂಬ ಆನ್ಲೈನ್ ಸೇವಾ ಸಂಸ್ಥೆಯಲ್ಲಿ ಬ್ಯುಸಿನೆಸ್ ಡೆವಲಪ್ ಮೆಂಟ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡಿದ ಬಳಿಕ ಪ್ರಾಗ್ ಮೈಟ್ಸ್ ಸೇರಿಕೊಂಡರು. ಈ ಮಧ್ಯೆ, ಸೋಷಿಯಲ್ ಮೀಡಿಯಾ ಕಂಪನಿಯನ್ನು ಟೆಕ್ಸಾಸ್ ನಲ್ಲಿ ಆರಂಭಿಸಿದರು. ಸದ್ಯ ಪ್ರಾಗ್ಮೇಟ್ ನ ನಿರ್ದೇಶಕರಾಗಿರುವ ಗೌರವ್ ಅವರು ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಹೊಸ ಮಾದರಿಯನ್ನು ತರುವ ಅನಿವಾರ್ಯತೆ ಮನಗೊಂಡಿದ್ದಾರೆ.

ಸಾಂಪ್ರದಾಯಿಕ ಡಿಜಿಟಲ್ ಮಾರ್ಕೆಟಿಂಗ್ ಸೇವಾದಾರರು, ಪೂರ್ಣ ಪ್ರಮಾಣದ ಸೇವೆ ಒದಗಿಸುತ್ತಾರೆ. ಅಂದರೆ, ಗೂಗಲ್ ನಲ್ಲಿ ಲಿಸ್ಟಿಂಗ್ ಮಾಡುವುದು, ಸರ್ಚ್ ಇಂಜಿನ್ ಆಪ್ಟಿಮೈಸೇಷನ್, ಗೂಗಲ್ ಮತ್ತು ಫೇಸ್ಬುಕ್ ಜಾಹೀರಾತು, ಈ ಮೇಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಮಾರ್ಕೆಟಿಂಗ್ ವ್ಯವಸ್ಥೆ ಕಲ್ಪಿಸುತ್ತಾರೆ. ಆದರೆ, ಇದೆಲ್ಲದರ ಎಸ್ಇಒ ಗ್ರಾಫ್ ಗೂಗಲ್ ಬಳಿ ಇರುವುದರಿಂದ ಫಲಿತಾಂಶ ತಡವಾಗಿ ಸಿಗುತ್ತದೆ.

ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಆನ್ಲೈನ್ ಶಿಕ್ಷಣ ಪಡೆಯುವ ಅವಕಾಶವೂ ಇದೆ. ಆದರೆ, ಸಮಸ್ಯೆಗಳು ಎದುರಾದಾಗ, ಪರಿಹರಿಸಲು ಯಾರೂ ನಿಮ್ಮ ಬಳಿ ಇರುವುದಿಲ್ಲ. ಈ ಸಮಸ್ಯೆ ನೀಗಿಸುವುದೇ ನಮ್ಮ ಉದ್ದೇಶ ಎನ್ನುತ್ತಾರೆ ಗೌರವ್. ನಿಮ್ಮ ಜೊತೆ 24/7 ಪರಿಣಿತರು ಇದ್ದೇ ಇರುತ್ತಾರೆ. ಅವರು ನಿಮ್ಮ ಯಾವುದೇ ಪ್ರಾಜೆಕ್ಟ್ ಇರಲಿ, ಸರಿಯಾದ ಸಲಹೆ ಮಾರ್ಗದರ್ಶನ ನೀಡುತ್ತಾರೆ.

ಗೌರವ್ ಗುರುಬಕ್ಸಾನಿ

ಗೌರವ್ ಗುರುಬಕ್ಸಾನಿ


ತಮ್ಮ ಯೋಜನೆಯಲ್ಲಿ ಆರಂಭಿಕ ಹಂತದಿಂದ ಕೊನೆಯವರೆಗೆ ಎಲ್ಲವನ್ನೂ ಅಳವಡಿಸಲಾಗಿದೆ ಎನ್ನುತ್ತಾರೆ ಗೌರವ್. ಸರಿಯಾದ ಕೀ ವರ್ಡ್ ಗಳ ಬಳಕೆ, ಸಾಮಾಜಿಕ ಮಾಧ್ಯಮಗಳಿಗೆ ಪ್ರವೇಶ, ಗೂಗಲ್ ಆಡ್ವರ್ಡ್ ಪಡೆಯುವುದು, ಹೀಗೆ ಎಲ್ಲವೂ ಇವರ ಸಾಫ್ಟ್ ವೇರ್ ನಲ್ಲಿದೆ.

ತಮ್ಮ ವಹಿವಾಟಿಗೆ ಅಂತರ್ಜಾಲವನ್ನು ನಂಬಿಕೊಂಡಿರುವ ನವ್ಯೋದ್ಯಮಿಗಳೇ ಗೌರವ್ ಅವರ ಗ್ರಾಹಕರು. ಔಟ್ಸೋರ್ಸಿಂಗ್ ಮಾಡಬಹುದಾದರೂ ಅದು ದುಬಾರಿಯಾಗುವ ಕಾರಣ, ನಮ್ಮ ಸಾಫ್ಟ್ ವೇರ್ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಕಲಿಕೆ ಕಲ್ಪಿಸುತ್ತದೆ ಎನ್ನುತ್ತಾರವರು. ಅದು ಬ್ಲಾಗ್ ಆಗಿರಲಿ ಅಥವಾ ಇ-ಕಾಮರ್ಸ್ ತಾಣವೇ ಆಗಿರಲಿ, ದಿನದಂತ್ಯಕ್ಕೆ ನಿಮಗೆ ಟ್ರಾಫಿಕ್ ನಿಂದಷ್ಟೇ ಆನ್ಲೈನ್ ವಹಿವಾಟು ನಡೆಯುತ್ತದೆ ಎನ್ನುವುದು ಸತ್ಯ.

ಗ್ರಾಹಕರು ಬೇಕಿದ್ದರೆ, ಈ ಸಾಫ್ಟ್ ವೇರನ್ನ ಅನ್ನು ಉಚಿತವಾಗಿ ಪರೀಕ್ಷಿಸಿ ನೋಡಬಹುದು. ಇಷ್ಟವಾದರೆ 3100 ರೂಪಾಯಿ ಕೊಟ್ಟು ಖರೀದಿಸಬಹುದು. ಬಳಕೆ ಬಗ್ಗೆ ಯಾವುದೇ ನಿಯಂತ್ರಣಗಳಿಲ್ಲ. ನಮಗೆ ಗ್ರಾಹಕರ ಸಂಖ್ಯೆ ಮುಖ್ಯ ಹೀಗಾಗಿ ಅತ್ಯಂತ ಕಡಿಮೆ ದರ ನಿಗದಿಪಡಿಸುದ್ದೇವೆ ಎನ್ನುತ್ತಾರೆ ಗೌರವ್.

ಮಾರುಕಟ್ಟೆಯಲ್ಲಿ ಈಗಾಗಲೇ ಡಿಜಿಟಲ್ ವಿದ್ಯಾ, ಎನ್ಐಐಟಿ, ಶಾಪ್ಮ್ಯಾಟಿಕ್, ಬ್ರೀಫ್ಕೇಸ್ನಂತಹ ಸಂಸ್ಥೆಗಳಿವೆ. ಆದರೆ, ನಮ್ಮ ಉತ್ಪನ್ನವೂ ಇವೆಲ್ಲಕ್ಕಿಂತ ವಿಭಿನ್ನವಾಗಿದೆ ಎನ್ನುತ್ತಾರೆ ಗೌರವ್.

ಯುವರ್ ಸ್ಟೋರಿ ಏನು ಹೇಳುತ್ತೆ ?

ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಯಾರೂ ಕೂಡಾ ಸ್ವಯಂಚಾಲಿತ ಪರಿಹಾರ ಕೊಟ್ಟಿಲ್ಲ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಈ ಪ್ರಯತ್ನ ಜೋರಾಗಿ ಸಾಗಿದೆ. ಭಾರತದಲ್ಲಿ ಐಟಿ ಬೂಮ್, ಡಿಜಿಟಲ್ ಮಾರ್ಕೆಟಿಂಗ್ಗೂ ಬೂಮ್ ನೀಡುತ್ತಿದೆ. ಹಾಗಿದ್ದರೂ, ಸ್ಟಾರ್ಟಪ್ಗಳು ಆನ್ಲೈನ್ ಡಿಜಿಟಲ್ ಮಾರ್ಕೆಟಿಂಗ್ ನತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಈ ಸಾಫ್ಟ್ ವೇರ್ ಹೆಚ್ಚು ಸಹಾಯಕವಾಗಬಲ್ಲುದು.

ಲೇಖಕರು - ಅಥಿರಾ ಎ ನಾಯರ್

ಅನುವಾದ - ಪ್ರೀತಂ