ಸಮ್ಮರ್ ಸವಾರಿಗೆ ಗೂಗಲ್ ತಯಾರಿ

ಟೀಮ್​​ ವೈ.ಎಸ್​. ಕನ್ನಡ

0

ಬೇಸಿಗೆ ರಜೆ ಬಂತು ಎಂದರೆ ಸಾಕೂ ಪ್ರವಾಸಕ್ಕೆ ಹೋಗಲು ಪ್ಲಾನ್ ಹಾಕ್ತಾರೆ. ಕೆಲಸದ ನಡುವೆ ಯಾವ ಸ್ಥಳಕ್ಕೆ ಹೋದರೆ ಸೂಕ್ತ, ಪ್ರವಾಸ ಕೈಗೊಳ್ಳುವ ಮುನ್ನ, ನಾವು ಸದಾ ಅವರಿವರ ಹತ್ತಿರ ಹೋಗಿ ಈ ಕುರಿತು ಚರ್ಚಿಸುತ್ತೇವೆ. ಅವರಿಂದ ಪಡೆದ ಸೂಕ್ತ ಸಲಹೆ ಸೂಚನೆಯ ಮೇರೆಗೆ ನಾವು ನಮ್ಮ ಪ್ರವಾಸ ಕೈಗೊಳ್ಳುತ್ತೇವೆ. ಆದರೆ ಟ್ರಾವೆಲ್ ಏಜೆನ್ಸಿ, ಟೂರ್ ವೆಬ್​ಸೈಟ್​ಗಳನ್ನು ಹುಡುಕುತ್ತ ಆಫರ್​ನಲ್ಲಿ ಯಾವುದೋ ಒಂದು ಪ್ಲಾನ್ ಮೋರೆ ಹೋಗಿ ಮೋಸ ಹೋಗ್ತಿವಿ, ಆದರೆ ಈ ನಿಮ್ಮೆಲ್ಲ ಆಸೆಗಳನ್ನು ಈಡೇರಿಸಲು ಸ್ವತಃ ಗೂಗಲ್ ಮುಂದೆ ಬಂದಿದೆ.

ಇದನ್ನು ಓದಿ: ಬಡವರ ಹಸಿವು ನೀಗಿಸೋ ‘ಅನ್ನಕೂಟ’

ನಾವು ಪ್ರವಾಸಕ್ಕೆ ಹೋಗಲು ಗೂಗಲ್ ಹೇಗೆ ಸಹಾಯ ಮಾಡುತ್ತದೆಯೆಂದು ಅನೇಕರು ಕೇಳಬಹುದು. ನಿಮಗೆ ಅಚ್ಚರಿಯೆನಿಸಿದ್ರು. ಇದನ್ನ ನಂಬಲೇಬೇಕು. ಗೂಗಲ್ ಸರ್ಚ್ ಇಂಜಿನ್ ಎಲ್ಲವನ್ನು ಸರ್ಚ್ ಮಾಡಿಕೊಡುತ್ತದೆ ಎಂದು ನೀವು ಭಾವಿಸಿದರೆ ತಪ್ಪು, ಈ ಬಾರಿ ಸ್ವತಃ ಗೂಗಲ್ ತನ್ನ ಸರ್ಚ್ ಫ್ಲಾಟ್​ಫಾರ್ಮ್​ನಡಿಯಲ್ಲಿ ಡೆಸ್ಟಿನೇಶನ್ ಎಂಬ ಆಯ್ಕೆಯನ್ನು ನೀಡಿದೆ. ಈ ಆಯ್ಕೆ ಎಷ್ಟು ಅನುಕೂಲಕರವೆಂದರೆ. ನಿಮ್ಮಗೆ ಎಲ್ಲ ರೀತಿಯಿಂದಲೂ ಇದು ಮಾರ್ಗದರ್ಶಕನಂತೆ ಸಹಾಯ ಮಾಡಲಿದೆ..

ಗೂಗಲ್ ಡೆಸ್ಟಿನೇಶನ್ ಹೇಗೆ ಕೆಲಸಮಾಡುತ್ತದೆ..?

 ಗೂಗಲ್ ಡೆಸ್ಟಿನೇಶನ್ ಆಯ್ಕೆ ಗೂಗಲ್ನ ಮೊಬೈಲ್ ಸರ್ಚ್ ಆವೃತ್ತಿಯಲ್ಲಿ ಲಭ್ಯವಿದೆ. ಇದು ಜಗತ್ತಿನಾದ್ಯಂತ ತನ್ನ ನೆಟ್​ವರ್ಕ್ ಉಪಯೋಗಿಸಿ, ಪ್ರವಾಸಿಯೋಗ ತಾಣಗಳ ಪಟ್ಟಿ ಮಾಡಿದೆ. ಜತೆಗೆ ಅಲ್ಲಿಗೆ ಹೋಗಲು ಸೂಕ್ತ ಸಾರಿಗೆ, ಪ್ರಯಾಣ ದರ, ಮತ್ತು ತಂಗಲು ಇರುವ ವ್ಯವಸ್ಥೆ ಕುರಿತು ಸೂಕ್ತ ಮಾಹಿತಿ ನೀಡುತ್ತದೆ. ಪ್ರವಾಸಕ್ಕೆ ಎಷ್ಟು ಖರ್ಚಾಗುತ್ತದೆ. ಎಲ್ಲದರ ಬಗ್ಗೆ ಸೂಕ್ತ ಮಾಹಿತಿ ನೀಡುತ್ತದೆ. ಆದರೆ ನೀವು ಸ್ಮಾರ್ಟ್ ಫೋನ್ ಬಳಸುವಂತವರಾಗಿರಬೇಕಷ್ಟೆ..

ನೀವು ಮಾಡಬೇಕಾದದ್ದು ಇಷ್ಟೆ, ಸ್ಮಾರ್ಟ್​ಫೋನ್​ನಲ್ಲಿ ಗೂಗಲ್ ಸರ್ಚ್ ಓಪನ್ ಮಾಡಿ, ಅಲ್ಲಿ ಡೆಸ್ಟಿನೇಶನ್ ಆಯ್ದುಕೊಂಡರೆ ಸಾಕು, ಬಳಿಕ ಅಲ್ಲಿ ನೀವು ಪ್ರವಾಸ ಹೋಗಲಿಚ್ಚಿಸಿರುವ ಸ್ಥಳ, ದಿನಾಂಕವನ್ನು ನಮೂದಿಸಿ. ಆಗ ಗೂಗಲ್ ನಿಮ್ಮ ಆಯ್ಕೆಯ ಸ್ಥಳಕ್ಕೆ ಇರುವ ಸೂಕ್ತ ಸಾರಿಗೆ, ಅವುಗಳ ಪ್ರಯಾಣ ದರ, ಹೋಟೆಲ್​​ಗಳು, ಅವುಗಳಲ್ಲಿನ ದರ ವ್ಯತ್ಯಾಸ, ಕೊಡುಗೆಗಳ ಕುರಿತು ಸೂಕ್ತ ಮಾಹಿತಿ ನೀಡುತ್ತದೆ. ನಿಮ್ಮ ಅರ್ಧ ತಲೆನೋವಿಗೆ ಪರಿಹಾರವಾಗಲಿದೆ..

ಪ್ರವಾಸಕ್ಕೆ ಹೋಗುವವರು. ಟಿಕೆಟ್ಗೆ, ಹೋಟೆಲ್ಗೆ ಎಂದೆಲ್ಲ ಹಲವು ವೆಬ್​​ಸೈಟ್​​ಳನ್ನು ಗೂಗಲ್ ಮಾಡುತ್ತೀರಿ. ಎದ್ದು ಬಿದ್ದು ತಡಕಾಡುತ್ತೀರಿ, ಆದರೆ ಗೂಗಲ್ ಡೆಸ್ಟಿನೇಶನ್ ಈ ಎಲ್ಲ ಆಯ್ಕೆಗಳನ್ನು ನಿಮ್ಮಗೆ ಒಂದೇ ಕಡೆ ನೀಡಲಿದೆ. ಇದರಿಂದ ನಿಮ್ಮ ಸಮಯವೂ ಉಳಿತಾಯವಾಗುತ್ತದೆ. ಯಾವ ಕಿರಿಕಿರಿ ಸಹ ಇರುವುದಿಲ್ಲ. ಬಳಕೆದಾರರ ಆಸಕ್ತಿ, ಹವ್ಯಾಸಕ್ಕೆ ಅನುಗುಣವಾಗಿ ಗೂಗಲ್ ವಿವಿಧ ಆಯ್ಕೆಗಳನ್ನು ಕೂಡಾ ನಿಮ್ಮ ಮುಂದಿಡುತ್ತದೆ. ಜತೆಗೆ ಪ್ರವಾಸಿ ತಾಣಗಳಲ್ಲಿನ ಹವಾಮಾನ, ಯಾವ ಕಾಲದಲ್ಲಿ ಹೋದರೆ ಸೂಕ್ತ, ಯಾವಾಗ ದುಬಾರಿ ದರ ಎಂದೆಲ್ಲ ಹಲವು ವಿಧದ ಮಾಹಿತಿಯನ್ನೂ ಬೆರಳಂಚಿನಲ್ಲೆ ನೀಡುತ್ತದೆ.

ಸ್ಮಾರ್ಟ್​ಫೋನ್ ಇರುವವರು ಕೇವಲ ಗೂಗಲ್ ಡೆಸ್ಟಿನೇಶನ್ ಬಳಸಿದ್ರೆ ಸಾಕೂ, ನಿಮ್ಮ ಮೊಬೈಲ್​ನಲ್ಲಿಯೇ ಒಟ್ಟಾರೆ ಪ್ರವಾಸವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡಬಹುದು. ಮುಂದೆ ಯಾವತ್ತಾದರೂ ನೀವು ಪ್ರವಾಸ ಹೋಗಬೇಕು ಎಂದು ಬಯಸಿದ್ರೆ, ಯಾವ ಸಮಯ ಸೂಕ್ತ, ಪ್ರವಾಸಿ ತಾಣಗಳ ಕುರಿತು ಪ್ರವಾಸಿಗರು ಬರೆದಿರುವ ವಿಮರ್ಶೆ, ರೇಟಿಂಗ್ ಕೂಡ ಇಲ್ಲಿ ದೊರೆಯುತ್ತದೆ. ಹಾಗಾಗಿ ಅಲ್ಪ ಮೊತ್ತದಲ್ಲಿ ಮನಸ್ಸಿಗೆ ಸಮಧಾನ ನೀಡುವಂತ ಪ್ರವಾಸ ಕೈಗೊಳ್ಳಲು ಗೂಗಲ್ ನಿಮ್ಮಗೆ ಮಾರ್ಗದರ್ಶಕನಾಗಿ ಕಾರ್ಯನಿರ್ವಹಿಸಲಿದೆ.

ಇದನ್ನು ಓದಿ

1. ಬಂದಿದೆ ಪ್ಲಾಸ್ಟಿಕ್ ಕರಗಿಸುವ ಬ್ಯಾಕ್ಟೀರಿಯಾ..!

2. ಜ್ಯೂಟ್ ಬ್ಯಾಗ್ ಕಾಲದ ನಂತ್ರ, ಈಗ ಬಾಳೆನಾರಿನ ಬ್ಯಾಗ್ ..

3. ಹಳೆ ವಾಹನಗಳಿಗೆ ಹೊಸ ಲುಕ್ ನೀಡುತ್ತೆ ಈ ಸಂಸ್ಥೆ..!

Related Stories

Stories by YourStory Kannada