ವಕೀಲ ವೃತ್ತಿಗೆ ಗುಡ್ ಬೈ ಹೇಳಿದ್ರು- ಸಾವಯವ ಕೃಷಿಕನಾಗಿ ಯಶಸ್ಸಿನ ಹೆಜ್ಜೆ ಇಟ್ರು..!

ಟೀಮ್​​ ವೈ.ಎಸ್​. ಕನ್ನಡ

ವಕೀಲ ವೃತ್ತಿಗೆ ಗುಡ್ ಬೈ ಹೇಳಿದ್ರು- ಸಾವಯವ ಕೃಷಿಕನಾಗಿ ಯಶಸ್ಸಿನ ಹೆಜ್ಜೆ ಇಟ್ರು..!

Wednesday April 26, 2017,

4 min Read

ಬೆಂಗಳೂರಿನಲ್ಲಿ ಮಾಡರ್ನ್ ಜೀವನಕ್ಕೆ ಬೇಕಾದ ಎಲ್ಲವೂ ಸಿಗುತ್ತದೆ. ಪಬ್, ಡ್ಯಾನ್ಸ್ ಕಲ್ಚರ್, ನೈಟ್ ಲೈಫ್ ಎಲ್ಲವೂ ಸುಲಭವಾಗಿ ಸಿಕ್ಕಿಬಿಡುತ್ತದೆ. ಆದ್ರೆ ಹಸಿರು ಎಲ್ಲೂ ಕಾಣುವುದಿಲ್ಲ. ಹೆಚ್ಚಿನವರಿಗೆ ಸಿಟಿ ಲೈಫ್​ನ ಮಧ್ಯೆ ಆರೋಗ್ಯಯುತ, ಸಾವಯವ ಗೊಬ್ಬರಗಳಿಂದ ಬೆಳೆದ ಆಹಾರಗಳು ಕೂಡ ಮರೆತೇ ಹೋಗಿದೆ. ಆದ್ರೆ ಬೆಂಗಳೂರಿನಲ್ಲಿ "ಗ್ರೀನ್ ಪಾತ್ ಎಕೊ ರೆಸ್ಟೋರೆಂಟ್​"ನಲ್ಲಿ ಎಲ್ಲವೂ ವಿಭಿನ್ನ. ಇದು ಬೆಂಗಳೂರಿನ ಹೃದಯ ಭಾಗದಲ್ಲೇ ಇದ್ದರೂ ನೈಸರ್ಗಿಕ ವಿಭಿನ್ನತೆಗಳಿಂದ ಗಮನ ಸೆಳೆಯುತ್ತದೆ. ಇಲ್ಲಿನ ಪೀಠೋಪಕರಗಳು ತಯಾರಾಗಿದ್ದು ಮರುಬಳಕೆ ವಸ್ತುಗಳಿಂದ. ಇಂಡೋರ್​ನಲ್ಲಿ ಸಸ್ಯಗಳಿವೆ. ಇದೆಲ್ಲದರ ಜೊತೆಗೆ ಧಾನ್ಯಗಳ ಮಾರಾಟ ಕೂಡ ನಡೆಯುತ್ತದೆ. ಈ ಕಟ್ಟಡ ಮೂರು ಅಂತಸ್ತುಗಳನ್ನು ಹೊಂದಿದೆ. ಬೆಂಗಳೂರಿನ ವಾತಾವರಣ ಬಿಸಿ ಆಗಿದ್ದರೂ ಈ ಬಿಲ್ಡಿಂಗ್ ಮಾತ್ರ ತಂಪಾಗಿದೆ. ಹಾಗೆಂದ ಮಾತ್ರಕ್ಕೆ ನೀವು ಏರ್ ಕಂಡೀಷನರ್ ಇರಬಹುದು ಅಂತ ಅಂದಿಕೊಂಡ್ರೆ ಅದೂ ತಪ್ಪು. ಯಾಕಂದ್ರೆ ಇಲ್ಲಿ ಯಾವುದೇ ಎ.ಸಿ. ವ್ಯವಸ್ಥೆ ಇಲ್ಲ. ಎಲ್ಲವೂ ನೈಸರ್ಗಿಕವಾಗಿಯೇ ಇದೆ.

image


ಇದೆಲ್ಲವೂ ಸಾಧ್ಯವಾಗಿದ್ದು ಸಾವಯವ ಕೃಷಿಯ ಕಲ್ಪನೆಯ ಮೂಲಕ. ಇದರ ಕತೃ ಸುಮಾರು 60 ವರ್ಷ ವಯಸ್ಸಿನ ಜಯರಾಮ್. ವಕೀಲರಾಗಿದ್ದ ಜಯರಾಮ್ ಅತೀ ಹೆಚ್ಚು ಮೋಟಾರ್ ಕೇಸ್​ಗಳನ್ನು ದಾಖಲಿಸಿದ ದಾಖಲೆ ಹೊಂದಿದ್ದರು. ಆದ್ರೆ ಈಗ ಆ ಕೆಲಸದ ಬದಲು ಸಾವಯವ ಕೃಷಿ ಮೂಲಕ ಪಾಠ ಹೇಳಲು ಹೊರಟಿದ್ದಾರೆ. 34 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದ ಜಯರಾಮ್ ಈಗ ಬೆಂಗಳೂರಿನ ನೆಲಮಂಗಲದ ಬಳಿಕ ಸಾವಯವ ಕೃಷಿ ಮಾಡುತ್ತಿದ್ದಾರೆ. ನಗರದಲ್ಲಿ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಯೊಂದನ್ನು ಹೊಂದಿದ್ದಾರೆ. ಕೊಡಗಿನಲ್ಲಿ ಹೋಮ್ ಸ್ಟೇ ಒಂದನ್ನು ಆರಂಭಿಸಿದ್ದಾರೆ.

ಇದನ್ನು ಓದಿ: 434 ಮಕ್ಕಳನ್ನು ರಕ್ಷಿಸಿದ ರೇಖಾ ಮಿಶ್ರಾ ಕಥೆ ಕೇಳಿ..!

ಹಳ್ಳಿ ಹುಡುಗನ ಯಶಸ್ಸಿನ ಪಯಣ

ಜಯರಾಮ್ ಹುಟ್ಟಿದ್ದು ತಮಿಳುನಾಡು ಮತ್ತು ಕರ್ನಾಟಕ ಗಡಿ ಪ್ರದೇಶದಲ್ಲಿ. ಜಯರಾಮ್ ತಂದೆ ಮತ್ತು ತಾಯಿ ಬೇರೆ ಬೇರೆ ಜಾತಿಗೆ ಸೇರಿದ್ದರಿಂದ ಕುಟುಂಬಗಳು ಇವರನ್ನು ದೂರವಿಟ್ಟಿದ್ದವು. ಹೀಗಾಗಿ ಜಯರಾಮ್ ಬಾಲ್ಯ ಸಾಕಷ್ಟು ಕಷ್ಟದಿಂದಲೇ ಕೂಡಿತ್ತು. ಜಯರಾಮ್ ಸೇರಿದಂತೆ ಅವರ ಇಬ್ಬರು ಕಿರಿಯ ಸಹೋದರರಿಗೂ ಮನೆ ಬಿಟ್ರೆ ಬೇರೆಯವರ ಟಚ್ ಕೂಡ ಇಲ್ಲದಾಗಿತ್ತು. ಚಿಕ್ಕ ವಯಸ್ಸಿನಲ್ಲೇ ಜಯರಾಮ್ ಮತ್ತು ಸಹೋದರರು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇದು ಜಯರಾಮ್​ಗೆ ಕೃಷಿಯಲ್ಲಿ ಆಸಕ್ತಿಯನ್ನು ಹೆಚ್ಚುವಂತೆ ಮಾಡಿತ್ತು.

image


“ನಮ್ಮ ಕುಟುಂಬದ ಕಷ್ಟಗಳ ನಡುವೆಯೂ ನನ್ನ ಅಮ್ಮ ಶಿಕ್ಷಣದ ಬಗ್ಗೆ ಹೆಚ್ಚು ಗಮನಕೊಟ್ಟಿದ್ದರು. ನಮ್ಮ ಊರಿನಲ್ಲದೇ ಇದ್ದ ಸರಕಾರಿ ಶಾಲೆಯಲ್ಲಿ ಶಿಕ್ಷಣ ಆರಂಭವಾಗಿತ್ತು. ನಮ್ಮ ಭವಿಷ್ಯಕ್ಕೆ ಇದು ಮೊದಲ ಹೆಜ್ಜೆ ಅನ್ನುವುದು ನಮ್ಮ ಪೋಷಕರಿಗೆ ಗೊತ್ತಿತ್ತು ”
ಜಯರಾಮ್, ಸಾವಯವ ಕೃಷಿಕ, ಉದ್ಯಮಿ

ಜಯರಾಮ್ ಹುಟ್ಟೂರಿನಲ್ಲೇ ಶಿಕ್ಷಣ ಪಡೆಯಲು ಆರಂಭಿಸಿದ್ರೂ, ಅವರ ಪ್ರತಿಭೆಯನ್ನು ಗುರುತಿಸಿದ ಪೋಷಕರು ಮತ್ತೊಂದು ಶಾಲೆಗೆ ಸೇರಿಸಿದ್ರು. ಆದ್ರೆ ಸಮಾಜ ಜಯರಾಮ್ ರಲ್ಲಿದ್ದ ಸಾಮರ್ಥ್ಯವನ್ನು ಸ್ವೀಕರಿಸಲು ಸಿದ್ಧವಿರಲಿಲ್ಲ. ಹೀಗಾಗಿ ಜಯರಾಮ್ ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಕಾಲಿಡಬೇಕಾಯಿತು.

image


ನಗರದಲ್ಲಿ ವ್ಯಕ್ತಿತ್ವ ವಿಕಸನ

1972ರಲ್ಲಿ ಜಯರಾಮ್ ಬೆಂಗಳೂರಿಗೆ ಆಗಮಿಸಿದ್ದಾಗ ಅವರಿಗೆ ಆಶ್ರಯ ನೀಡಿದ್ದು ಕಮ್ಯೂನಿಟಿ ಹಾಸ್ಟೆಲ್ . ಬೋರ್ಡಿಂಗ್, ಲಾಡ್ಜಿಂಟ್ ಮತ್ತು ಊಟದ ವ್ಯವಸ್ಥೆಯನ್ನು ಹಾಸ್ಟೆಲ್ ನೋಡಿಕೊಳ್ಳುತ್ತಿತ್ತು.

“ ಹಾಸ್ಟೆಲ್ ವ್ಯವಸ್ಥೆಗಾಗಿ ನಾವು ವರ್ಷವೊಂದಿಕ್ಕೆ 55 ರೂಪಾಯಿಗಳನ್ನು ನೀಡಬೇಕಿತ್ತು. ಆ ಕಾಲದಲ್ಲಿ ಇದು ದೊಡ್ಡ ಮೊತ್ತವಾಗಿತ್ತು. ನನ್ನ ಶಾಲಾ ಕಲಿಕೆಯನ್ನು ನೋಡಿ ಪ್ರಾಂಶುಪಾಲರು ಸಂತಸಗೊಂಡಿದ್ದರು. ಅಷ್ಟೇ ಅಲ್ಲ ಭವಿಷ್ಯದಲ್ಲಿ ಯಾವ ಹಾದಿ ಹಿಡಿಯಬೇಕು ಅನ್ನುವುದನ್ನು ತೋರಿಸಿದ್ದರು. ಹೀಗಾಗಿ ನಾನು ರೇಣುಕಾಚಾರ್ಯ ಕಾಲೇಜಿನಲ್ಲಿ ಕಾನೂನು ವಿದ್ಯಾಭ್ಯಾಸ ಆರಂಭಿಸಿದೆ. ಇದು ನನಗೆ ಜಾತಿ ವಿರುದ್ಧ ಧ್ವನಿಯೆತ್ತಲು ಅವಕಾಶ ಮಾಡಿಕೊಟ್ಟಿತ್ತು. ನನ್ನ ಕುಟುಂಬ ಅನುಭವಿಸಿದ ನೋವಿಗೆ ಸಮಾಧಾನ ಹೇಳಲು ನೆರವಾಯಿತು. ”
ಜಯರಾಮ್, ಸಾವಯವ ಕೃಷಿಕ, ಉದ್ಯಮಿ

ಕಾನೂನು ಪದವಿ ಬಳಿಕ ಜಯರಾಮ್ ಯಶಸ್ವಿ ವಕೀಲರೊಬ್ಬರ ಬಳಿಯಲ್ಲಿ ಸಹಾಯಕರಾಗಿ ಕೆಲಸ ಆರಂಭಿಸಿದರು. ಅನುಭವ ಪಡೆದ ಹಾಗೇ ಜಯರಾಮ್ ಸ್ವಂತವಾಗಿ ವಕೀಲಿ ವೃತ್ತಿಯನ್ನು ಆರಂಭಿಸಿದ್ರು. ಮೋಟಾರ್ ಕೇಸ್​ಗಳೆಂದ್ರೆ ಜಯರಾಮ್ ಅನ್ನುವಷ್ಟರ ಮಟ್ಟಿಗೆ ಯಶಸ್ಸು ಪಡೆದ್ರು.

“ ಒಂದು ಸಮಯದಲ್ಲಿ ನನ್ನ ಕೈಕೆಳಗೆ ಸುಮಾರು 30 ಜೂನಿಯರ್ ಹುಡಗರಿದ್ದರು. ವಕೀಲನಾಗಿ ನಾನಯ ಯಶಸ್ಸು ಕಂಡಿದ್ದೆ.”
ಜಯರಾಮ್, ಸಾವಯವ ಕೃಷಿಕ, ಉದ್ಯಮಿ

ಯಶಸ್ಸು ಸಿಕ್ಕ ಬಳಿಕ ಜಯರಾಮ್ ಹಣವನ್ನು ಕೂಡ ಸಂಪಾದಿಸಿದ್ರು. ಆದ್ರೆ ತನ್ನ ಪ್ರಯಾಣವನ್ನು ಜಯರಾಮ್ ಅಲ್ಲಿಗೆ ನಿಲ್ಲಿಸಲಿಲ್ಲ. ಬದಲಾಗಿ 1998ರಲ್ಲಿ ವಕೀಲ ವೃತ್ತಿಗೆ ರಾಜಿನಾಮೆ ನೀಡಿದ್ರು. ನೆಲಮಂಗಲದ ಬಳಿ ನೀಲಗಿರಿ ಮರಗಳನ್ನು ಹೊಂದಿದ್ದ 7 ಎಕರೆ ಜಮೀನು ಖರೀದಿ ಮಾಡಿದ್ರು. ಅಲ್ಲಿದ್ದ ಮರಗಳನ್ನೆಲ್ಲಾ ಕಡಿದು ಜಮೀನನ್ನು ಕೃಷಿ ಉಪಯೋಗಕ್ಕೆ ಬಳಸಿಕೊಳ್ಳುವಂತೆ ಸಿದ್ಧಪಡಿಸಿಕೊಂಡ್ರು.

“ ಆರಂಭದಲ್ಲಿ ಜೋಳ ಬೆಳೆಯಲು ಆರಂಭಿಸಿದೆ. ಅದನ್ನು ಬೆಳೆಯಲು ರಾಸಾಯನಿಕಗಳನ್ನು ಉಪಯೋಗಿಸುತ್ತಿದ್ದೆವು. ಆದ್ರೆ ಸಾವಯವ ಕೃಷಿಯಲ್ಲಿ ಯಾರಿಗೂ ನಷ್ಟವಿಲ್ಲ ಅನ್ನುವುದನ್ನು ಅರಿತುಕೊಂಡೆ. ನನ್ನ ತಂದೆ ಕೃಷಿ ಮಾಡುತ್ತಿದ್ದಾಗ ರಾಸಾಯನಿಕಗಳೇ ಇರಲಿಲ್ಲ. ಹೀಗಾಗಿ ನನಗೆ ಸಾವಯವ ಕೃಷಿ ಕಡೆ ಬದಲಾಗಲು ಹೆಚ್ಚು ಕಷ್ಟವಾಗಲಿಲ್ಲ. ”
ಜಯರಾಮ್, ಸಾವಯವ ಕೃಷಿಕ, ಉದ್ಯಮಿ

ಅಂದಿನ ಬರಡು ಭೂಮಿ ಈಗ 40 ಎಕರೆಯ ಕೃಷಿ ಭೂಮಿಯಾಗಿ ಬದಲಾಗಿದೆ. ಒಂದು ಕೆರೆ, ಡೈರಿ ಫಾರ್ಮ್ ಇಲ್ಲಿದೆ. ಸುಮಾರು 15 ಸ್ಥಳೀಯ ಕೃಷಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಬಯೋ ಗ್ಯಾಸ್ ಪ್ಲಾಂಟ್ ಕೂಡ ನಿರ್ಮಿಸಲಾಗಿದ್ದು, ಇಲ್ಲಿ ಎಲ್ಲಾ ತ್ಯಾಜ್ಯಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ.

“ ಬೆಂಗಳೂರನ್ನು ಸಾವಯವ ಕೃಷಿಯ ರಾಜಧಾನಿಯನ್ನಾಗಿ ಮಾಡುವ ಕನಸಿದೆ. ನನ್ನ ಯೋಜನೆಗೆ ನಾಯಕತ್ವ ವಹಿಸಿಕೊಳ್ಳುವವರನ್ನು ಬಯಸುತ್ತಿದ್ದೇನೆ. ನನಗೆ ಹಿಂಬಾಲಕರು ಬೇಕಾಗಿಲ್ಲ. ಹೀಗಾದಾಗ ಮಾತ್ರ ಸಮಾದಲ್ಲಿ ಬದಲಾವಣೆ ಕಾಣಲು ಸಾಧ್ಯ”
ಜಯರಾಮ್, ಸಾವಯವ ಕೃಷಿಕ, ಉದ್ಯಮಿ

ಮಾರುಕಟ್ಟೆ ಹೇಗಿದೆ..?

ಭಾರತದಲ್ಲಿ ಈಗ ಅನಾರೋಗ್ಯಕಾರಿ ಆಹಾರಕ್ಕಿಂತ ಆರೋಗ್ಯಕ್ಕೆ ಪೂರಕವಾಗಿರುವ ಆಹಾರದ ಬಗ್ಗೆ ಸಾಕಷ್ಟು ಜಾಗೃತಿ ಮೂಡುತ್ತಿದೆ. ಆರೋಗ್ಯಕಾರಿ ಆಹಾರಕ್ಕೆ ಸಾಕಷ್ಟು ಬೇಡಿಕೆ ಇದೆ. ಆದ್ರೆ ಪೂರೈಕೆ ಮತ್ತು ಬೇಡಿಕೆ ನಡುವೆ ಸಾಕಷ್ಟು ಅಂತರವಿದೆ. ಈ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಗ್ರೀನ್ ಪಾತ್ ಕೆಲಸ ಮಾಡುತ್ತಿದೆ. ಇದು ಗ್ರಾಹಕರ ಮತ್ತು ಕೃಷಿಕರ ನಡುವಿನ ಸೇತುವೆಯಾಗಿ ಕೆಲಸ ಮಾಡುತ್ತಿದೆ.

image


ಬೆಂಗಳೂರಿನಲ್ಲಿ ಮಳಿಗೆ

ಬೆಂಗಳೂರಿನಲ್ಲಿರುವ ಗ್ರೀನ್ ಪಾತ್ ಮಳಿಗೆ ಚಿಕ್ಕ ಚಿಕ್ಕ ಸಾವಯವ ಕೃಷಿಕರ ಮತ್ತು ಗ್ರಾಹಕರ ನಡುವಿನ ಸೇತುವೆಯಾಗಿದೆ. ಕೃಷಿಕರು ಬೆಳೆದ ವಸ್ತುಗಳು ಗ್ರಾಹಕರಿಗೆ ಸಿಗುವಂತೆ ಮಾಡುತ್ತಿದೆ. ಅಷ್ಟೇ ಅಲ್ಲ ಡಿಜಿಟಲ್ ಮಾರ್ಕೆಟ್ ಗೂ ಗ್ರೀನ್ ಪಾತ್ ಎಂಟ್ರಿಯಾಗಿದೆ.

“ ಆನ್ ಲೈನ್ ಮಾರುಕಟ್ಟೆಯನ್ನು ಇನ್ನಷ್ಟೇ ಹಿಡಿತಕ್ಕೆ ತೆಗೆದುಕೊಳ್ಳಬೇಕಿದೆ. ಡಿಜಿಟಲ್ ಮಾರ್ಕೆಟ್ ಮೂಲಕ ಅತೀ ಹೆಚ್ಚು ಗ್ರಾಹಕರನ್ನು ತಲುಪುವ ಗುರಿ ಇಟ್ಟುಕೊಂಡಿದ್ದೇವೆ.”
ಜಯರಾಮ್, ಸಾವಯವ ಕೃಷಿಕ, ಉದ್ಯಮಿ

ಗ್ರೀನ್ ಪಾತ್ ಬಗ್ಗೆ

ಸಾವಕೃಷಿ ಕೃಷಿಯನ್ನು ಇದು ಪ್ರೋತ್ಸಾಹಸುತ್ತಿದೆ. ದೇಶದಲ್ಲಿ ಆರ್ಗಾನಿಕ್ ಪ್ರವಾಸಗಳನ್ನು ವ್ಯವಸ್ಥೆ ಮಾಡಿಕೊಂಡಿದೆ. ಈ ಮೂಲಕ ಸ್ವೀಡನ್, ಜರ್ಮನಿ ಮತ್ತು ಯನೈಟೆಡ್ ಕಿಂಗ್ಡಮ್ ನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸಾವಯವ ಕೃಷಿಯ ಲಾಭವನ್ನು ಕೂಡ ಜಯರಾಮ್ ಹೇಳುತ್ತಾರೆ.

- ಸಾವಯವ ಕೃಷಿ ಅತೀ ಕಡಿಮೆ ಬಂಡವಾಳ ಹೂಡಿ ಹೆಚ್ಚು ಲಾಭ ಪಡೆಯಲು ಇರುವ ಸುಲಭ ದಾರಿ

- ಆರೋಗ್ಯಕಾರಿ ಕೃಷಿ ಮತ್ತು ಎಲ್ಲಾ ಕಡೆಯಿಂದಲು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.

- ಕಡಿಮೆ ನೀರು ಬಳಕೆ ಹಾಗೂ ಅತೀ ಹೆಚ್ಚು ಇಳುವರಿ

ಗ್ರಿನ್ ಪಾತ್ ಸಾಧನೆ: ವಾರ್ಷಿಕ 6 ಕೋಟಿ ಆದಾಯ ಹಾಗೂ 4 ಔಟ್ಲೆಗಳಲ್ಲಿ 200ಕ್ಕೂ ಅಧಿಕ ಕಾರ್ಮಿಕರು

ಒಟ್ಟಿನಲ್ಲಿ ಗ್ರೀನ್ ಪಾತ್ ಮೂಲಕ ಸಾವಯವ ಕೃಷಿ ಹಾಗೂ ಆರೋಗ್ಯಕಾರಿ ಧಾನ್ಯ, ಆಹಾರಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡುತ್ತಿದೆ. 

ಇದನ್ನು ಓದಿ:

1. ಅಮ್ಮನ ಪ್ರೀತಿಯನ್ನು ಸಾರುವ ಲಂಚ್ ಬಾಕ್ಸ್- "ವಾಯಾ ಬಾಕ್ಸ್"​ನಲ್ಲಿದೆ ವಿಶೇಷ ಗಮ್ಮತ್ತು

2. ಯಾರಿಗೂ ಬಿಟ್ಟುಕೊಡಬೇಡಿ ನಿಮ್ಮಗುಟ್ಟು- ಸ್ಯಾಲರಿ ಸ್ಲಿಪ್​ನಲ್ಲಿ ಅಡಗಿದೆ ಭವಿಷ್ಯದ ಕನಸು

3. 1000 ಕೋಟಿಯ ವಿಶೇಷ ಪ್ರಾಜೆಕ್ಟ್​- ದಾಖಲೆ ಬರೆಯಲಿದೆ "ದಿ ಮಹಾಭಾರತ್"