"N-ಸೀಡ್"​​​- ರೈತರ ಸಮಸ್ಯೆಗಳಿಗೆ ನೇರ ಪರಿಹಾರ..!

ಟೀಮ್​​ ವೈ.ಎಸ್​​.

0

ಕೃಷಿಕ್ಷೇತ್ರ ದೇಶದ ಬೆನ್ನೆಲುಬು . ಆದರೆ, ಇಂದು ದೇಶದಲ್ಲಿ ಕೃಷಿ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ. ರೈತರು ಅಗತ್ಯ ಮಾಹಿತಿ ಇಲ್ಲದೆ ಪರದಾಡುತ್ತಿದ್ದಾರೆ. ಯಾವ ಕಾಲಕ್ಕೆ ಯಾವ ಬೆಳೆ ಬೆಳೆಯಬೇಕು? ಯಾವ ಬೀಜೋತ್ಪನ್ನ ಬಳಕೆ ಮಾಡಿದರೆ ಇಳುವರಿ ಹೆಚ್ಚಾಗುತ್ತದೆ ಅನ್ನೋ ಮಾಹಿತಿ ಇಲ್ಲದೆ ಸಂಕಷ್ಟದ ಮೇಲೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಬೀಜೋತ್ಪನ್ನ ಬಗ್ಗೆ ಮಾಹಿತಿ ನೀಡುವ ಸಲುವಾಗಿಯೇ ಒಂದು ಉದ್ಯಮವಿದೆ. ಅದೇ ಎನ್-ಬಝ್.

ಎನ್-ಬಝ್ ಅನ್ನುವುದು ಬಲವಂತ್ ಸಿಂಗ್ ಅವರ ಕನಸಿನ ಕೂಸು. ಬೀಜೋತ್ಪನ್ನ ಬಗ್ಗೆ ಮಾಹಿತಿ ನೀಡುವ ಸಲುವಾಗಿಯೇ ಆರಂಭಗೊಂಡಿದ್ದು ಎನ್-ಬಝ್ ಬ್ಯುನಿನೆಸ್ ಸೊಲೂಷನ್ ಪ್ರೈವೆಟ್ ಲಿಮಿಟೆಡ್. ಬಲವಂತ್ ಸಿಂಗ್ ಈ ಸಂಸ್ಥೆಯನ್ನು ಕಾಟಾಚಾರಕ್ಕೆ ಹುಟ್ಟು ಹಾಕಲಿಲ್ಲ. ರೈತರ ಮೇಲಿನ ಅತೀವ ಕಾಳಜಿ, ಕೃಷಿ ಕ್ಷೇತ್ರದ ಬಗ್ಗೆ ಕ್ಷಣ ಕ್ಷಣ ಮಾಹಿತಿಯನ್ನು ನೀಡುವುದಕ್ಕೆ ಈ ಸಂಸ್ಥೆಯನ್ನು ಹುಟ್ಟು ಹಾಕಿದರು.

ಎನ್-ಬಝ್ ಪರಿಕಲ್ಪನೆಯೇ ಅತ್ಯದ್ಭುತ. ಬೀಜೋತ್ಪನದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ಒದಗಿಸುವ ಗುರಿಯನ್ನು ಹೊಂದಿದೆ. ಫೋನ್‌ಗಳ ಜೊತೆ ಇ-ಮೇಲ್ ನಲ್ಲೂ ಕೂಡ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಿದೆ.

ಇ-ಬಝ್ ಬೀಜೋತ್ಪನ್ನ ಉದ್ಯಮ ಹುಟ್ಟಿದ್ದು ಹೇಗೆ?

ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ವಾಪಸ್ಸಾದ ಬಲವಂತ್ ಸಿಂಗ್, ಬೀಜೋತ್ಪನ್ನ ಉದ್ಯಮದ ಬಗ್ಗೆ ತಂದೆಯೊಂದಿಗೆ ಸಮಾಲೋಚನೆ ನಡೆಸಿದರು. ಅದಾಗಲೇ ಈ ಉದ್ಯಮದಲ್ಲಿ ಕೆಲಸ ಮಾಡಿದ್ದ ಬಲವಂತ್ ಸಿಂಗ್, ಈ ಕ್ಷೇತ್ರದಲ್ಲಿ ಮಾಹಿತಿಯ ಕೊರತೆ ಇರುವುದನ್ನು ಗಮನಕ್ಕೆ ತಂದರು. ಹೀಗಾಗಿ, ಒಂದು ಪರಿಪೂರ್ಣವಾದ ಮಾಹಿತಿ ಬದಗಿಸುವ ಅಗತ್ಯತೆಯನ್ನು ಮಗನಿಗೆ ಮನದಟ್ಟು ಮಾಡಿದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದ ಬಲವಂತ್ ಸಿಂಗ್, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದರು. ಬೀಜೋತ್ಪನ ಕ್ಷೇತ್ರದ ಬಗ್ಗೆ ಅಧ್ಯಯನ ನಡೆಸಿದ ಬಲವಂತ್ ಸಿಂಗ್ ಇದಕ್ಕಾಗಿ ಇ-ಬಝ್ ಹುಟ್ಟು ಹಾಕಿದರು.

ಉದ್ಯಮದ ಅಭಿವೃದ್ಧಿ ಹೇಗೆ?.

ಬೀಜ ಕಂಪನಿಯಲ್ಲಿದ್ದ ಸಮಯದಲ್ಲಿ ನನಗೆ ಐಟಿ ವಲಯಕ್ಕಿಂತ ಭಿನ್ನವಾಗಿ ಬೀಜ ಉದ್ಯಮವು ನಿಧಾನ ಮತ್ತು ಅಸಂಘಟಿತ ವಲಯ ಎಂದು ಅರ್ಥವಾಯಿತು. ಮೊದಲಿಗೆ ಬೀಜ ಉದ್ಯಮಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಅನ್ನುವುದನ್ನು ಅರ್ಥ ಮಾಡಿಕೊಂಡೆವು. ನಂತರ ಈ ಹಿನ್ನಲೆಯಲ್ಲಿ ನಾನು ವೆಬ್ ಸೈಟ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದೆ. ಈ ವೆಬ್ ಸೈಟ್ ಬೀಜ ಉದ್ಯಮದಲ್ಲಿರುವ ಜನರ ಸಂಸ್ಕೃತಿಗೆ ಹೊಂದಾಣಿಕೆ ಆಯಿತು.

ಅಂತರ್ಜಾಲದ ಬಗ್ಗೆ ಗೊತ್ತಿಲ್ಲದೆ ಇರುವವರಿಗೂ ಕೂಡಾ ಈ ವೆಬ್ ಸೈಟ್ ಮಾಹಿತಿ ಪೂರೈಕೆ ಮಾಡುವಂತಿತ್ತು. ಈ ವೆಬ್ ಸೈಟ್ ಮೂಲಕ ಕನಿಷ್ಠ ಸಮಯದಲ್ಲಿ ಗರಿಷ್ಠ ಮಾಹಿತಿಯನ್ನ ಪಡೆದುಕೊಳ್ಳಬಹುದಾಗಿತ್ತು. ಹೀಗೆ ಹಲವಾರು ಪುನರಾವರ್ತನೆಗಳು ಮತ್ತು ಪರಿಶೀಲನೆಗಳು ನಡೆದ ನಂತರ ಸೀಡ್ ಬಝ್ ಜನ್ಮ ತಾಳಿತು. ನಂತರದ ವರ್ಷಗಳಲ್ಲಿ ಈ ವೆಬ್ ಸೈಟ್ ಹಲವು ಮಾರ್ಪಾಡುಗಳನ್ನು ಕಂಡಿತ್ತು ಅನ್ನುತ್ತಾರೆ ನಿರ್ದೇಶಕ ಬಲವಂತ್ ಸಿಂಗ್.

ಬಲವಂತ್ ಸಿಂಗ್
ಬಲವಂತ್ ಸಿಂಗ್

ವೆಬ್ ಸೈಟ್ ಆರಂಭಿಸಿದಾಗ ಎದುರಾದ ಸವಾಲು

ಆರಂಭದಲ್ಲಿ ವೆಬ್ ಸೈಟ್ ಪ್ರಾರಂಭಿಸಿದಾಗ, ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ನಾನು ವೆಬ್ ಸೈಟ್ ಗಾಗಿ ಹಲವು ವಿಷಯಗಳನ್ನ ಸೃಷ್ಠಿ ಮಾಡುವ ಸ್ವತಂತ್ರ ಹೊಂದಿದೆ. ಯಾರ ಭೇಟಿಯೂ ನೀರಿಕ್ಷಿಸದೇ ಕನಿಷ್ಟ ಪಕ್ಷ ಆರು ತಿಂಗಳು ವೆಬ್ ಸೈಟ್ ನಲ್ಲಿ ಮಾಹಿತಿ ನೀಡಬೇಕಾಗಿತ್ತು. ಆದ್ರೆ ಆ ಸಮಯವು 12 ತಿಂಗಳ ಕಾಲ ವಿಸ್ತರಿಸಲಾಯಿತು. ಗೂಗಲ್ ಮತ್ತು ಇನ್ನಿತರ ಸರ್ಚ್​ ಎಂಜಿನ್ ಗಳು ನಿಯಮಿತವಾಗಿ ಹೊಸ ಹೊಸ ಮಾಹಿತಿಗಾಗಿ ವೆಬ್ ಸೈಟ್ ನ್ನು ಪರಿಶೀಲಿಸಲು ಪ್ರಾರಂಭಿಸಿದವು.

ಆರಂಭದ ಅವಧಿಯಲ್ಲಿ ಹಲವು ಕಂಪನಿಗಳ ಮುಖ್ಯಸ್ಥರು ಹಾಗೂ ವೃತ್ತಿಪರರನ್ನು ಭೇಟಿ ಮಾಡಿದೆ. ಅಲ್ಲದೆ, ಒಂದು ಅಂಗಡಿಯನ್ನು ಬಾಡಿಗೆಗೂ ಪಡೆದೆ. ಈ ಸಂದರ್ಭದಲ್ಲಿ ನಾನೊಂದು ವಿಷಯವನ್ನು ಮನನ ಮಾಡಿಕೊಂಡೆ. ಈ ಉದ್ಯಮದಲ್ಲಿ ವ್ಯಾಪಾರ ಶುರು ಮಾಡುವುದಕ್ಕಿಂತ ಮೊದಲು ಒಂದು ಟ್ರಸ್ಟ್ ನಿರ್ಮಾಣ ಮಾಡಬೇಕೆಂದು. ನಾನು ತಂತ್ರಜ್ಞಾನ, ನನ್ನ ಶಕ್ತಿ ಎಂದು ತಿಳಿದಿದ್ದೆ. ಆದ್ರೆ ಅದು ತಪ್ಪಾಗಿತ್ತು.

ಬೀಜ ಉದ್ಯಮದವರನ್ನು ಭೇಟಿ ಮಾಡಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಚಾರಿಸುವುದು ಟ್ರಸ್ಟ್ ಪುನರ್ ರಚನೆ ಮಾಡುವಲ್ಲಿ ಮೊದಲ ಹೆಜ್ಜೆಯಾಯಿತು. ಈ ಅನ್ವೇಷಣೆಯಲ್ಲಿ ಬೀಜ ಉದ್ಯಮದ ಹಲವಾರು ವೃತ್ತಿಪರರನ್ನು ಭೇಟಿ ಮಾಡಿದೆ. ಬೀಜ ಉದ್ಯಮದಲ್ಲಿ ಮಾಹಿತಿ ವಿನಿಮಯ ಒಂದು ಪ್ರಮುಖ ಸವಾಲಾಗಿತ್ತು. ಈ ವ್ಯಾಪಾರ ಪ್ರದರ್ಶನಗಳು ಕೇವಲ ವೃತ್ತಿಪರರ ಭೇಟಿ ಮತ್ತು ಮಾಹಿತಿಯನ್ನು ಮಾತ್ರ ಒದಗಿಸುತಿತ್ತು. ಇದನೆಲ್ಲಾ ಮನನಗೊಂಡ ನಾನು ಇದನ್ನ ಸರಿಪಡಿಸಲು ದೊಡ್ಡ ಕ್ರಮ ಕೈಗೊಂಡೆ ಅನ್ನುತ್ತಾರೆ ಬಲವಂತ್ ಸಿಂಗ್.

ಈ ಹುಡುಕಾಟದ ವೇಳೆ, ಮಾನವ ಸಂಪನ್ಮೂಲ ನಿರ್ವಹಣೆ, ಆವಿಷ್ಕಾರ, ಹಾಗೂ ಬೀಜದ ಕಂಪನಿಗಳು ಜನರನ್ನು ತಲುಪದಿರುವ ಅಂಶಗಳು ಬೆಳಕಿಗೆ ಬಂದವು. ತದ ನಂತರ ಬೀಜಗಳ ಉದ್ಯಮದಲ್ಲಿ ಅನುಕೂಲಕರ ಸೇವೆಗಳನ್ನು ಸೃಷ್ಟಿಸುವತ್ತ ಗಮನ ಹರಿಸಲಾಯಿತು. ಮಾನವ ಸಂಪನ್ಮೂಲ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಯೋಗ ಬಯಸುವವರು ಅದರಲ್ಲು ಕಂಪನಿಯ ಕೆಲಸದ ಸಂಸ್ಕೃತಿಗೆ ಹೊಂದಿಕೊಳ್ಳುವವರಿಗೆ ನೇಮಕಾತಿ ಸೇವೆಗಳನ್ನು ಪರಿಚಯಿಸಲಾಯಿತು. ಆನ್ ಲೈನ್ ನಲ್ಲಿ ಸೇವೆ ಒದಗಿಸುವ ಮೂಲಕ ಅಭಿವೃದ್ಧಿಪಡಿಸಲಾಯಿತು. ಈಗ ಕೃಷಿಕರ ಪಾಲಿಗೆ ಎನ್​ ಸೀಡ್​​​​​​​​​​ ಅಮೂಲ್ಯ ಕೈಪಿಡಿಯಾಗಿ ಬದಲಾಗಿದೆ.


9 ಗಾರ್ಡನ್ಸ್

ಕೃಷಿ ಹಿನ್ನೆಲೆಯಿಂದ ಬಂದು ಪ್ರಪಂಚದಾದ್ಯಂತ ಅನೇಕ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿದ್ದು, ನಾನು ಕೃಷಿ

ಉತ್ಪನ್ನ ಬೆಳೆದು ಅದು ಊಟದ ಮೇಜು ತಲುಪುವವರೆಗೆ ಎದುರಾಗುವ ಎಲ್ಲ ತೊಂದರೆಗಳನ್ನು ತಿಳಿದುಕೊಂಡಿದ್ದೇನೆ.

ದೊಡ್ಡ ಪ್ರಮಾಣದ ಕೃಷಿಯು ಹೆಚ್ಚು ಗೊಬ್ಬರ ಮತ್ತು ಕೀಟನಾಶಕಗಳನ್ನು ಬಯಸುತ್ತದೆ. ಆದರೆ ಸಣ್ಣ ಪ್ರಮಾಣದ ಕೃಷಿಯಲ್ಲಿ ಇವುಗಳ ಅಗತ್ಯವಿರುವುದಿಲ್ಲ. ಇದು ಮನೆಯಲ್ಲಿ ತೋಟಗಾರಿಕೆಗೆ ಬೆಂಬಲಿಸಲು ಮತ್ತು ನಗರ ವರ್ಗದ ಜನರ ನಡುವೆ ಸ್ವಯಂ ಸಮರ್ಥನೀಯ ಬದುಕಲು ನನಗೆ ಸ್ಪೂರ್ತಿಯಾಯಿತು.

9 gardens ಎಂಬುದು ಎಲ್ಲಾ ತೋಟಗಾರಿಕೆ ಅವಶ್ಯಕತೆಗಳಿಗಾಗಿ ಮಿತಿಯಿಲ್ಲದ ಮತ್ತು ಪ್ರಯತ್ನವಿಲ್ಲದ ಖರೀದಿ ಅನುಭವವನ್ನು ಒದಗಿಸುವ ಒಂದು ಪರಿಕಲ್ಪನೆ. ಈ ಪರಿಕಲ್ಪನೆ ಸ್ವಯಂ ಸಮರ್ಥನೀಯವಾಗಿ ಬದುಕಲು ಮತ್ತು ನಗರ ವರ್ಗದ ಜನರ ನಡುವೆ ಕೃಷಿಯನ್ನು ನಿಮ್ಮ ಸ್ವಂತಿಕೆಯಿಂದ ಮಾಡಲು ಪ್ರೋತ್ಸಾಹ ನೀಡುತ್ತದೆ. ಇದನ್ನು ಸಾಧಿಸಲು, ತೋಟ ದೊಡ್ಡದಿರಲಿ ಅಥವಾ ಸಣ್ಣದಿರಲಿ ನೀವು ತೋಟವನ್ನು ನಿರ್ವಹಿಸಲು ಬೇಕಾದ ಎಲ್ಲ ಅಗತ್ಯತೆಗಳನ್ನು ಒದಗಿಸುವ ಒಂದು ವೇದಿಕೆ ಅಸ್ತಿತ್ವದಲ್ಲಿರುವುದು ಮುಖ್ಯವಾಗುತ್ತದೆ. 9 gardens.com ಎಂಬ ವೆಬ್ ಸೈಟ್ ನ್ನು ಸ್ಥಾಪಿಸಲಾಗಿದ್ದು, ನೀವು ತೋಟವನ್ನು ನಿರ್ವಹಿಸಲು ಬೀಜಗಳು, ಒಳಹರಿವು ಭಾಗಗಳ ಅಗತ್ಯವನ್ನು ತಿಳಿಸುತ್ತದೆ. ತೋಟಗಾರಿಕೆ ಮಾಡುವ ಬಯಕೆ ಇದ್ದವರಿಗೆ ಎಲ್ಲಿಂದ, ಹೇಗೆ ಪ್ರಾರಂಭಿಸಬೇಕೆಂದು ತಿಳಿಯದೆ ಇರುವವರಿಗೆ ಸಹಕರಿಸಲು ಮತ್ತೊಂದು ವೇದಿಕೆಯನ್ನು ಸಿದ್ದಗೊಳಿಸಲಾಗಿದೆ. ಈ ವೆಬ್ ಸೈಟನ್ನು ಬಳಕೆದಾರರ ಸ್ನೇಹಿಯಾಗಿ ನಿರ್ಮಿಸಲಾಗಿದೆ ಮತ್ತು ಇದರಲ್ಲಿ ತೋಟಗಾರಿಕೆ ಸಂಬಂಧಿತ ಮಾಹಿತಿಯನ್ನು, ಚಿತ್ರಗಳನ್ನು ಲೋಡ್ ಮಾಡಲಾಗಿದೆ ಅನ್ನುತ್ತಾರೆ ನಿರ್ದೇಶಕ ಬಲವಂತ್ ಸಿಂಗ್.

Related Stories