ಪ್ರಾಣಿಗಳ ಧ್ವನಿ ಕೇಳಿಸುವ ಗೂಗಲ್..!

ಟೀಮ್​ ವೈ.ಎಸ್​. ಕನ್ನಡ

0

ಗೂಗಲ್​ನಿಂದ ಎಲ್ಲವೂ ಸಾಧ್ಯ ಎಂಬುದಕ್ಕೆ ಗೂಗಲ್ ಮತ್ತೊಂದು ಪ್ರಯತ್ನ ಮಾಡಿ ಯಶಸ್ವಿಯಾಗಿದೆ. ಇನ್ಮುಂದೆ ನಿಮ್ಮ ಮನೆಯ ಕಂದಮ್ಮಗಳಿಗೆ ಪ್ರಾಣಿಗಳ ಚಿತ್ರ ತೋರಿಸಿ ಆ ಪ್ರಾಣಿಗಳ ಬಗ್ಗೆ ನೀವು ವಿವರಿಸುವ ಅಗತ್ಯವಿಲ್ಲ. ಗೂಗಲ್ ಸರ್ಚ್‌ನಲ್ಲಿ ಪ್ರಾಣಿಗಳ ಹೆಸರು ಟೈಪ್ ಮಾಡಿದ್ರೆ ಸಾಕೂ, ಚಿತ್ರಗಳ ಜೊತೆಗೆ ಕ್ಷಣ ಮಾತ್ರಕ್ಕೆ ಅದರ ಬಗ್ಗೆ ಮಾಹಿತಿ ಸಿಗುತ್ತದೆ. ವಿಶೇಷವೆಂದರೆ ಇದೀಗ ಪ್ರಾಣಿಗಳ ಧ್ವನಿಯನ್ನೂ ಕೇಳುವಂತಹ ಸೌಲಭ್ಯವನ್ನು ಗೂಗಲ್ ಒದಗಿಸಿದೆ.

ಹೌದು ಗೂಗಲ್ ಪ್ರತೀಸಲ ತನ್ನ ಹೊಸ-ಹೊಸ ಐಡಿಯಾಗಳಿಂದ ಜನರಿಗೆ ಹತ್ತಿರವಾಗುತ್ತದೆ. ಈ ಬಾರಿಯೂ ಕೂಡ ಅಂತಹಹುದೇ ಒಂದು ಪ್ರಯತ್ನ ಗೂಗಲ್ ಮಾಡಿದೆ. ಪ್ರಾಣಿಗಳ ದನಿ ಹೇಗಿರುತ್ತದೆ ಎಂಬುದನ್ನು ಮಕ್ಕಳಿಗೆ ಹೇಳಿಕೊಡುವುದಕ್ಕಾಗಿ ಗೂಗಲ್ ಹೊಸ ರೀತಿಯಲ್ಲಿ ಮುಂದಾಗಿದೆ. ಪ್ರಾಣಿಗಳ ಚಿತ್ರ ಧ್ವನಿ ಆಲಿಸುವಂತಹ ಸೌಲಭ್ಯವನ್ನು ಒದಗಿಸಿದೆ.

ಇದನ್ನು ಓದಿ: ಸಿಲಿಕಾನ್​ ಸಿಟಿಗೆ ಎಂಟ್ರಿಕೊಟ್ಟ ಸ್ಕಿನ್​​ಬ್ಯಾಂಕ್​

ಈ ಸೌಲಭ್ಯದ ಉಪಯೋಗ ಸುಲಭವಾಗಿ ಪಡೆಯಬಹುದು. ಗೂಗಲ್ ಬಳಕೆ ಮಾಡುವ ಯಾರು ಬೇಕಾದ್ರೂ, ತಮಗೆ ಬೇಕಾದ ಪ್ರಾಣಿಯ ಹೆಸರು ಆಂಗ್ಲ ಭಾಷೆಯಲ್ಲಿ ಟೈಪ್ ಮಾಡಿದ್ರೆ ಸಾಕೂ ಅಲ್ಲಿ ಪ್ರಾಣಿಯ ಹೆಸರಿನ ಜೊತೆಗೆ ಅದು ಹೇಗೆ ಶಬ್ಧ ಮಾಡುತ್ತದೆ ಎಂಬುದು ಬರುತ್ತದೆ. ಅಲ್ಲಿ ಅದರ ಧ್ವನಿಯನ್ನು ಕೂಡ ನಾವು ಕೇಳಬಹುದು. ಉದಾಹರಣೆಗೆ ಬಳಕೆದಾರರು ಗೂಗಲ್​ನಲ್ಲಿ ಈ ಪ್ರಾಣಿಯ ದನಿ ಯಾವುದು ಎಂಬ ಪ್ರಶ್ನೆ ಕೇಳಿದರೆ, ಸರ್ಚ್ ಇಂಜಿನ್ ಆ ಪ್ರಾಣಿಯ ವಿವರ ಸೇರಿದಂತೆ ಅದರ ಸೈಂಟಿಫಿಕ್​ ಹೆಸರು, ಪ್ರಾಣಿಯ ಹೆಸರು. ಅದರ ಚಿತ್ರದ ಜೊತೆಗೆ ಆ ಪ್ರಾಣಿಯ ಧ್ವನಿಯ ಸ್ಯಾಂಪಲ್​ನ್ನು ತೋರಿಸುತ್ತದೆ. ಪ್ರಾಣಿಗಳ ಧ್ವನಿಯನ್ನು ಸಂಗ್ರಹಿಸಿ ಗೂಗಲ್ ಇಲ್ಲಿ ಬಳಕೆದಾರರ ಮುಂದಿಟ್ಟಿದೆ.

ಈಗಾಗಲೇ ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಜೀಬ್ರಾ, ಕೋತಿ, ಬೆಕ್ಕು, ಸಿಂಹ, ಹಂದಿ, ಆನೆ, ಕುದುರೆ ಸೇರಿದಂತೆ ಮೊದಲಾದ 19 ಪ್ರಾಣಿಗಳ ಧ್ವನಿ ಲಭ್ಯವಿದೆ. ಮುಂದೆ ಹಲವು ಪ್ರಾಣಿಗಳ ಮತ್ತು ಪಕ್ಷಿಗಳ ಧ್ವನಿಯನ್ನು ಆಳವಡಿಸಲು ಗೂಗಲ್ ಮುಂದಾಗಿದೆ. ಹಾಗಾಗಿ ಇನ್ಮುಂದೆ ಸಣ್ಣ ಮಕ್ಕಳಿಗೆ. ಪ್ರಾಣಿಗಳ ಚಿತ್ರವನ್ನು ತೋರಿಸಿ ಅದರ ಪರಿಚಯ ಮಾಡಿಸುವ ಅವಶ್ಯಕತೆಯಿಲ್ಲ. ಸುಮ್ಮನೆ ಗೂಗಲ್​ನಲ್ಲಿ ಆ ಪ್ರಾಣಿ ಹೆಸರು ಟೈಪ್ ಮಾಡಿದ್ರೆ ಸಾಕೂ ಕುಳಿತಲ್ಲೆ ಅದರ ವಿವರ ಮತ್ತು ಅದು ಯಾವ ರೀತಿ ಧ್ವನಿ ಮಾಡುತ್ತದೆ ಎಂಬುದನ್ನು ಕೇಳಿಸಿಕೊಳ್ಳಬಹುದು. ನೀವು ಒಮ್ಮೆ ಟ್ರೈ ಮಾಡಿ ಗೂಗಲ್ನ ಹೊಸ ಸೌಲಭ್ಯವನ್ನು ಎಂಜಾಯ್ ಮಾಡಿ.

ಇದನ್ನು ಓದಿ:

1. ಆರಂಭವಾಗಿದ್ದು 2 ಲಕ್ಷದಿಂದ.. ಈಗ 2 ಕೋಟಿಯ ವಹಿವಾಟು..!

2. ಶೋಷಿತ ಮಹಿಳೆಯರಿಗೆ ಆಸರೆ ಜೊತೆ ಆತ್ಮವಿಶ್ವಾಸ ತುಂಬುತ್ತಿರುವ ಮಹಿಳೆ ಸುನಿತಾ ಕೃಷ್ಣನ್

3. ಹಿರೇಗೌಡರ ಮಂಡ್ಯ ಟು ಇಂಟರ್​ನ್ಯಾಷನಲ್​ ಸ್ಟೋರಿ