ಸ್ನೇಹಿತರ ಗುಂಪು ಹುಟ್ಟುಹಾಕಿದ ಸಹಜ ಆರೋಗ್ಯ

ಪೂರ್ವಿಕಾ

0

ಸಹಜ ಆರೋಗ್ಯ ಸಿಗಬೇಕು. ಈ ಕೆಮಿಕಲ್‍ಯುಕ್ತ ಆಹಾರಗಳನ್ನ ತಿಂದು ಸಾಕಾಗಿದೆ. ಯಾವುದೇ ಸೊಪ್ಪು ,ತರಕಾರಿ ,ಹಣ್ಣು ಏನೇ ತಿಂದರೂ ಕೂಡ ನಾಲಿಗೆಗೆ ರುಚಿಸುತ್ತಿಲ್ಲ. ಇನ್ನು ಮಾಧ್ಯಮಗಳಲ್ಲಿ ತರಕಾರಿ ಹಣ್ಣು ಬೆಳೆಯೋದನ್ನ ತೋರಿಸಿದನ್ನ ನೋಡಿ ಅದೆಷ್ಟೋ ಜನ ತರಕಾರಿ-ಹಣ್ಣು ತಿನ್ನೋಕು ಹಿಂದು ಮುಂದು ನೋಡೋವಂತ ಪರಿಸ್ಥಿತಿ ಎದುರಾಗಿದೆ.. ಹಾಗಾದ್ರೆ ಸಹಜವಾಗಿ ಬೆಳೆದ ತರಕಾರಿ ಹಣ್ಣು ಸೊಪ್ಪುತಿನ್ನೋಕೆ ಹಳ್ಳಿಗಳಿಗೆ ಹೋಗಬೇಕಾ.. ಅಥವಾ ತರಕಾರಿ ಹಣ್ಣಿನಿಂದ ದೂರ ಇರಬೇಕಾ ಹೀಗೆ ಸಾಕಷ್ಟು ಚಿಂತೆಗಳು ಇಂದಿನ ಜನರಿಗೆ ಕಾಡುತ್ತೆ . ಯಾಕಂದ್ರೆ ಎಷ್ಟೇ ಇರಲಿ ಏನೇ ಇರಲಿ ಆರೋಗ್ಯ ಅನ್ನೋದು ತುಂಬಾನೇ ಮುಖ್ಯ . ಇಂತದ್ದೆ ಚಿಂತೆ ಹುಟ್ಟಿಕೊಂಡ ತಂಡವಿಂದು ಸಹಜ ಆಹಾರವನ್ನ ರಾಜ್ಯದ ಜನತೆಗೆ ನೀಡುತ್ತಾ ಬಂದಿದೆ.

ಸಹಜ ಸಮೃದ್ದ ಅನ್ನೋ ಸಂಸ್ಥೆಯನ್ನಕಟ್ಟಿ ಬೆಳೆಸಿರೋ ಒಂಬತ್ತು ಜನರ ತಂಡ ರೈತರಿಂದ ಸಹಜವಾಗಿ ಸಾವಯವ ಪದಾರ್ಥಗಳನ್ನ ಬೆಳೆಸಿ ಜನರಿಗೆ ಸಾವಯವ ಪದಾರ್ಥಗಳನ್ನ ನೀಡಬೇಕು ಅಂತ ನಿರ್ಧಾರ ಮಾಡಿದ್ರು. ಮೊದಲಿಗೆ ಈ ಒಂಬತ್ತು ಜನರು ತಮ್ಮದೇ ಒಂದು ತಂಡ ಕಟ್ಟಿಕೊಂಡು ಕೆಲಸದ ಮಧ್ಯೆಯಲ್ಲಿ ಬಿಡುವಿನ ಸಮಯದಲ್ಲಿ ಸಾವಯವ ಕೃಷಿ ಮಾಡೋದಕ್ಕೆ ಶುರು ಮಾಡಿದ್ರು. ನಂತ್ರ ಇದನ್ನ ದೊಡ್ಡ ರೀತಿಯಲ್ಲಿ ಮಾಡಬೇಕು ಅಂತ ಡಿಸೈಡ್ ಮಾಡಿ ಪ್ರತಿ ತಿಂಗಳ ಭಾನುವಾರ ಒಂದೇ ಕಡೇ ಸೇರಿ ಈ ತಂಡ ಸಾವಯವ ಕೃಷಿಯ ಬಗ್ಗೆ ಅಧ್ಯಯನ ಮಾಡೋದಕ್ಕೆ ಶುರು ಮಾಡಿದ್ರು ಅಷ್ಟೇ ಅಲ್ಲದೆ ಪ್ರತಿ ಭಾನುವಾರ ಒಬ್ಬ ಕೃಷಿ ಪರಿಣಿತರನ್ನ ಕರೆಸಿ ಸಾವಯವ ಕೃಷಿಯ ಬಗ್ಗೆ ಮಾಹಿತಿಯನ್ನ ಪಡೆದುಕೊಳ್ಳಲಾರಂಭಿಸಿದ್ರು. ನಂತ್ರ ಬೇರೆಯವ್ರಿಗೆ ಮಾಹಿತಿ ನೀಡೋ ನಿಟ್ಟಿನಲ್ಲಿ 2006 ರಲ್ಲಿ ಸಹಜ ಸಮೃದ್ದ ಒಂದು ಸಂಸ್ಥೆಯಾಗಿ ಹೊರಬಂತು ಅಂದಿನಿಂದ ಸಾವಯವ ಕೃಷಿಗಾಗಿ ಈ ತಂಡ ಕೆಲಸ ಮಾಡಲು ಸಿದ್ದವಾಯ್ತು. ನಂತ್ರ ಸಾವಯವ ರೈತರು ಬೆಳೆದ ಪದಾರ್ಥಗಳನ್ನ ಒಂದೆಡೆ ಸೇರಿಸಿ ಸಹಜ ಸೀಡ್ಸ್ ಅನ್ನೋ ಒಂದು ಗುಂಪನ್ನ ಮಾಡಿದ ಸಹಜ ಟೀಂ ಆ ಪದಾರ್ಥಗಳನ್ನ ಸಾವಯವ ಕೃಷಿ ಮಾಡುತ್ತೇವೆ ಅನ್ನೋ ರೈತರಿಗೆ ಇಲ್ಲಿ ಬೀಜಗಳನ್ನ ನೀಡಲಾಗುತ್ತಿತ್ತು…

ದಿನ ಕಳೆದಂತೆ ರೈತರು ಬೆಳೆದ ಸಾವಯವ ಪದಾರ್ಥಗಳಿಗೆ ಬೆಲೆ ಸಿಗೋದು ಹೇಗೆ ಮತ್ತು ಅವುಗಳನ್ನ ಮಾರಾಟ ಮಾಡಬೇಕು ಅನ್ನೋ ನಿಟ್ಟಿನಲ್ಲಿ ರೈತರಿಗಾಗಿ ಸಹಜ ಆರ್ಗ್ಯಾನಿಕ್‍ ಮಾರುಕಟ್ಟೆಯನ್ನ ನಿರ್ಮಾಣ ಮಾಡಲಾಯ್ತು.. ಸದ್ಯ ಸಹಜ ಆರ್ಗ್ಯಾನಿಕ್ ನಲ್ಲಿ 2000 ಸಾವಿರಕ್ಕೂ ಹೆಚ್ಚು ರೈತರಿಂದ ಸಾವಯವ ಪದಾರ್ಥಗಳು ಬಂದು ಬೀಳುತಿದೆ. ಅಷ್ಟೇ ಅಲ್ಲದೆ 20 ರೈತರ ಗುಂಪು ಈ ಸಹಜ ಆರ್ಗ್ಯಾನಿಕ್ ಪ್ರೊಡ್ಯೂಸರ್ ಕಂಪನಿಗೆ ಮಾಲೀಕರಾಗಿರೋದು ವಿಶೇಷ. ಕೇಂದ್ರ ಸರ್ಕಾರದ ಆದೇಶದಂತೆ ಒಂದು ಹೋಬಳಿಗೆ 100 ಎಕರೆ ಸಾವಯವ ಕೃಷಿ ಮಾಡಬೇಕು ಅದೇರೀತಿಯಲ್ಲಿ 27 ಹಳ್ಳಿಗಳಲ್ಲಿ ಸಾವಯವಕೃಷಿ ಮಾಡೋ ರೈತರೆಲ್ಲರು ಬೆಳೆಯೋ ಆಹಾರ ಪದಾರ್ಥಗಳು ಇಲ್ಲಿ ಬಂದು ಸೇರುತ್ತೆ. ಇವ್ರಷ್ಟೇ ಅಲ್ಲದೆ ಸಾವಯವ ಕೃಷಿ ಮಾಡ್ಬೇಕು ಅಂತ ಆಸಕ್ತಿ ಇರೋ ಎಲ್ಲಾ ರೈತರಿಗೂ ಇಲ್ಲಿ ಅವಕಾಶ ಇದೆ.. ಇನ್ನೂ ಸಾವಯವ ಕೃಷಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲದ ರೈತನಿಗೂ ಇಲ್ಲಿಟ್ರೈನಿಂಗ್ ನೀಡಿ ನಂತ್ರ ತಮ್ಮ ಗುಂಪಿಗೆ ಸೇರಿಸಿಕೊಳ್ಳಲಾಗುತ್ತೆ. ಕೆಲಸದಲ್ಲಿ ಪಕ್ಕಾ ಪ್ರೋಫೆಷನ್‍ಆಗಿರೋ ಸಹಜ ತಂಡ ಕ್ವಾಲಿಟಿಯಲ್ಲಿ ಎಂದಿಗೂ ಕಾಂಪ್ರಮೈಸ್‍ಆಗಿಲ್ಲ.. ಸದ್ಯ ಹೋಲ್ ಸೇಲ್ ನಲ್ಲಿ ಸಾವಯವ ಪದಾರ್ಥಗಳನ್ನ ನೀಡುತ್ತಿರೋ ಸಹಜ ಟೀಂಆದಷ್ಟು ಬೇಗ ತಮ್ಮದೇ ಬ್ರ್ಯಾಂಡ್‍ಅನ್ನ ಮಾರುಕಟ್ಟೆಗೆ ಪರಿಚಯಿಸಲಿದೆ.. ಇನ್ನೂಯಾರಾದ್ರು ಸಹಜ ಈ ಟೀಂ ನಲ್ಲಿ ಸೇರಿಕೊಳ್ಳಬೇಕು ಅಂದ್ರೆ ಅವ್ರಿಗೆ ಹಾರ್ಟ್ಲಿ ವೆಲ್ ಕಂ ಅನ್ನುತ್ತೆ.. ಸಹಜ ಆರ್ಗ್ಯಾನಿಕ್ ನಲ್ಲಿ 200 ವಿಧವಾದ ದಿನಸಿ ಪದಾರ್ಥಗಳು , 40ಕ್ಕೂ ಹೆಚ್ಚು ಸಾವಯವ ತರಕಾರಿಗಳು 10ಕ್ಕೂ ಹೆಚ್ಚು ಸೊಪ್ಪುಗಳು ಲಭ್ಯವಾಗುತ್ತೆ. ಸೊಪ್ಪು ,ತರಕಾರಿ ಹಾಗೂ ದಿನಸಿ ಪದಾರ್ಥಗಳು ಸಾಕಷ್ಟು ರುಚಿಯುಕ್ತವಾಗಿದ್ದು ಈಗಾಗ್ಲೆ ಜನರಿಂದ ಸಾಕಷ್ಟು ಪ್ರಶಂಸೆ ಬಂದಿದೆ.. ನೀವು ಇಲ್ಲಿಯ ಸಹಯವಾಗಿರೋ ಆಹಾರ ಪದಾರ್ಥಗಳನ್ನ ಟೇಸ್ಟ್ ಮಾಡ್ಬೇಕು ಅಂದ್ರೆ ಒನ್ಸ್ ಸಹಜ ಟೀಂಅನ್ನ ಮೀಟ್ ಮಾಡಿ …

Related Stories

Stories by AARABHI BHATTACHARYA