ಎಲ್ಲವನ್ನೂ ಒಗ್ಗೂಡಿಸುವ `ಒನ್ ನೋಟ್'

ಟೀಮ್​​ ವೈ.ಎಸ್​. ಕನ್ನಡ

ಎಲ್ಲವನ್ನೂ ಒಗ್ಗೂಡಿಸುವ `ಒನ್ ನೋಟ್'

Thursday December 03, 2015,

3 min Read

ಆ ದಿನಗಳನ್ನು ನೆನಪಿಸಿಕೊಳ್ಳಿ - ಕುಟುಂಬಗಳು, ಸ್ಟಡಿ ಗ್ರೂಪ್‍ಗಳು, ವಿವಿಧ ತಂಡಗಳು ಮತ್ತು ಕಚೇರಿಗಳಲ್ಲಿ ಯಾವುದೇ ವಿಚಾರವಿದ್ರೂ ಅದನ್ನು ನೋಟಿಸ್ ಬೋರ್ಡ್‍ನಲ್ಲಿ ಹಂಚಿಕೊಳ್ಳಲಾಗ್ತಿತ್ತು. ಇದಕ್ಕಾಗಿ ಬಿಳಿ ಬಣ್ಣದ ಬೋರ್ಡ್ ಅಥವಾ ನೋಟ್‍ಬುಕ್ ಬಳಸಲಾಗುತ್ತಿತ್ತು. ಅದಾದ ಮೇಲೆ ಇಮೇಲ್‍ಗಳ ಜಮಾನಾ ಶುರುವಾಯ್ತು. ಏನೇ ಸಲಹೆ ಸೂಚನೆ ಇದ್ರೂ ಇಮೇಲ್ ಕಳುಹಿಸಲಾಗ್ತಿತ್ತು. ಆದ್ರೆ ಒಟ್ಟಾಗಿ ಕೆಲಸ ಮಾಡುವ ಸಂದರ್ಭಗಳಲ್ಲಿ, ಗಡುವಿನೊಳಗೆ ಕೆಲಸ ಮುಗಿಸಬೇಕಾದ ತರಾತುರಿಯಿದ್ದಾಗ ಪರಸ್ಪರ ಸಹಯೋಗ ಇರಲೇಬೇಕು. ಇದಕ್ಕಾಗಿ `ಒನ್ ನೋಟ್' ಅನ್ನು ಆವಿಷ್ಕರಿಸಲಾಗಿದೆ. ಇದು ವಿನೂತನ `ಆಫೀಸ್-2016' ಅಪ್ಲಿಕೇಷನ್‍ನ ಒಂದು ಭಾಗ.

ಕಳೆದ ಸಪ್ಟೆಂಬರ್‍ನಲ್ಲಿ `ಆಫೀಸ್ - 2016' ಅನ್ನು ಬಿಡುಗಡೆ ಮಾಡಲಾಗಿದೆ. ತಮ್ಮ ಮನೆಯಲ್ಲಿ ಶಾಪಿಂಗ್‍ಗೆ ಹೊರಡುವ ಮುನ್ನ ನೋಟ್‍ಬುಕ್ ಒಂದ್ರಲ್ಲಿ ಲಿಸ್ಟ್ ಮಾಡಿಕೊಳ್ತಾ ಇದ್ರು ಅಂತಾ ಮೈಕ್ರೋಸಾಫ್ಟ್​​ನ ಮಾರ್ಕೆಟಿಂಗ್&ಆಪರೇಷನ್ಸ್ ಜಿಎಂ ಟೈಲರ್ ಬ್ರೈಸನ್ ನೆನಪಿಸಿಕೊಳ್ತಾರೆ. ಬಾಗಿಲ ಎದುರೇ ಆ ನೋಟ್‍ಬುಕ್ ಇರುತ್ತಿತ್ತು, ಎಲ್ಲರ ಶೆಡ್ಯೂಲ್, ರಜೆಯ ವಿವರ ಎಲ್ಲವನ್ನೂ ಅದರಲ್ಲಿ ಬರೆದಿಡ್ತಾ ಇದ್ರು. ಇದನ್ನೆಲ್ಲ ನೀವು `ಒನ್ ನೋಟ್' ಮೂಲಕ ಆನ್‍ಲೈನ್‍ನಲ್ಲೇ ಮಾಡಬಹುದು. ಪ್ರತಿಯೊಂದು ವಿಭಾಗಕ್ಕೂ ನೀವು ಪ್ರತ್ಯೇಕ ಟ್ಯಾಬ್‍ಗಳನ್ನು ಮಾಡಿಕೊಳ್ಳಬಹುದು. ಅದನ್ನು `ಒನ್‍ಡ್ರೈವ್'ನಲ್ಲಿ ಆನ್‍ಲೈನ್‍ನಲ್ಲೇ ಸೇವ್ ಮಾಡಿಟ್ಟುಕೊಳ್ಳಬಹುದು. ಆ ನೋಟ್‍ಬುಕ್ಕನ್ನು ಯಾರು ಬೇಕಾದ್ರೂ ಯಾವ ಡಿವೈಸ್‍ನಿಂದಾದ್ರೂ ಬಳಸಿಕೊಳ್ಳಬಹುದು ಅನ್ನೋ ವಿಸ್ತ್ರತ ಮಾಹಿತಿಯನ್ನು ಟೈಲರ್ ಬ್ರೈಸನ್ ಹಂಚಿಕೊಂಡಿದ್ದಾರೆ.

ಕೇವಲ ಕುಟುಂಬದ ಶೆಡ್ಯೂಲ್‍ಗಳನ್ನು ಸಿಂಕ್ ಮಾಡುವುದು ಮಾತ್ರವಲ್ಲ ಮಾತ್ರವಲ್ಲ, `ಒನ್ ನೋಟ್' ಸಮಯೋಚಿತ ಸಹಯೋಗವನ್ನು ಹೆಚ್ಚಿಸಲಿದೆ. ಟೈಲರ್ ಬ್ರೈಸನ್ ಅವರ ತಂಡದಲ್ಲಿರುವ ಅರುಣಭ್ ಕುಮಾರ್ ಅವರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ, ಅವರೆಲ್ಲ ಒಂದು ಆನ್‍ಲೈನ್ ಕಾರ್ಯಕ್ರಮದ ಬಗ್ಗೆ ಮಾತನಾಡ್ತಾ ಇದ್ರು, ಆದ್ರೆ ಒಬ್ಬೊಬ್ಬರು ಒಂದೊಂದು ಸ್ಥಳದಲ್ಲಿದ್ರು. ಚರ್ಚೆ ವೇಳೆ ಒಬ್ಬೊಬ್ಬರಿಗೆ ಹೊಳೆದ ಐಡಿಯಾವನ್ನೂ ಬರೆದಿಟ್ಟುಕೊಂಡ್ರು. ಅದರಲ್ಲಿ ಕೆಲವನ್ನು ಕೈಬಿಟ್ಟು, ಉಳಿದವನ್ನು ಮಾತ್ರ ಪರಿಗಣಿಸಿದ್ರು. ರಿಯಲ್ ಟೈಮ್‍ನಲ್ಲಿ ಅದರಲ್ಲಾದ ಬದಲಾವಣೆ ಹಾಗೂ ಸುಧಾರಣೆಯನ್ನು ಎಲ್ಲರೂ ನೋಡಬಹುದು. ಅಗತ್ಯವಿದ್ದಲ್ಲಿ ಫೋಟೋಗಳನ್ನು ಕೂಡ ಆ ದಾಖಲೆಯಲ್ಲಿ ಸೇರಿಸಬಹುದು.

ಇದು ವಿಶ್ರಾಂತಿ ಮತ್ತು ಪುನರ್ಭರ್ತಿಯ ಸಮಯವಾಗಿತ್ತು. ಭಾರತದ ಅತ್ಯಂತ ಯಶಸ್ವಿ ವೆಬ್ ಸರಣಿ `ದಿ ವೈರಲ್ ಫೀವರ್' ಇದಕ್ಕೊಂದು ಸರಿಯಾದ ರಚನೆಯನ್ನು ಕಲ್ಪಿಸಿತ್ತು. `ಒನ್ ನೋಟ್ - 2016' ಇದು ಖಾಲಿ ಇರುವ ನೋಟ್ ಬುಕ್‍ಗಿಂತ ಭಿನ್ನವಾಗಿಲ್ಲ. ಆದ್ರೆ `ಒನ್‍ನೋಟ್'ನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿದ್ದು, ಸುಲಭವಾಗಿ ನೀವದನ್ನು ಹುಡುಕಬಹುದು. ಬೇಕಾದ ವಾಕ್ಯ ಅಥವಾ ಶಬ್ಧಗಳ ಬಣ್ಣಗಳನ್ನು ಬದಲಾಯಿಸಬಹುದು. ಪಠ್ಯ, ಫೋಟೋ, ವಿಡಿಯೋ, ಆಡಿಯೋ ತುಣುಕುಗಳು, ಸ್ಕ್ಯಾನ್ ಮಾಡಿದ ಚಿತ್ರಗಳನ್ನು ಇದರಲ್ಲಿ ಸೇವ್ ಮಾಡಿಟ್ಟುಕೊಳ್ಳಬಹುದು. ಒಮ್ಮೆ ನೀವದನ್ನೆಲ್ಲ ಕಾಪಿ ಮಾಡಿ ಇಲ್ಲಿ ಪೇಸ್ಟ್ ಮಾಡಿದರೆ, ಅಗತ್ಯಬಿದ್ದಾಗ ಸೋರ್ಸ್‍ಗಾಗಿ ಹುಡುಕಾಡಬೇಕಾದ ಅವಶ್ಯಕತೆಯಿರುವುದಿಲ್ಲ.

image


ನೀವೊಂದು ರೋಡ್ ಟ್ರಿಪ್ ಆಯೋಜಿಸ್ತಿದ್ದೀರಾ ಅಂದ್ಕೊಳ್ಳಿ, ನೀವು ತೆರಳುವ ಮಾರ್ಗದ ಸ್ಕ್ರೀನ್ ಶಾಟ್ ತೆಗೆದು ಹಾಕಬಹುದು. ಅದರ ಜೊತೆಗೆ ಕಮೆಂಟ್‍ಗಳನ್ನೂ ಕ್ವಿಕ್ ನೋಟ್ಸ್​​​ನಲ್ಲಿ ಸೇರಿಸಬಹುದು. ನಿಮ್ಮ ಜೊತೆ ಪ್ರವಾಸಕ್ಕೆ ಬರ್ತಾ ಇರೋ ಸ್ನೇಹಿತರ ಜೊತೆ ಅದನ್ನು ಹಂಚಿಕೊಳ್ಳಿ, ಅವರ ಅಭಿಪ್ರಾಯವನ್ನೂ ಪಡೆಯಿರಿ. ನಿಮ್ಮ ಐಡಿಯಾವನ್ನು ಎಲ್ಲರೂ ಒಪ್ಪಲೇಬೇಕು ಅಂತಿದ್ದಲ್ಲಿ ನೀವು ಹೋಗ್ತಾ ಇರೋ ಪ್ರದೇಶದ ಅದ್ಭುತ ಚಿತ್ರಗಳು ಅಥವಾ ವಿಡಿಯೋ ತುಣುಕನ್ನು `ಒನ್ ನೋಟ್'ನಲ್ಲಿ ಹಾಕಿ. ಸೂಕ್ತವಾದ ಚಿತ್ರ ಸಿಗಲಿಲ್ಲ ಅಂತಾದ್ರೆ ನೇರವಾಗಿ ಅದೇ ಪೇಜ್‍ನಲ್ಲಿ ನೀವೇ ಅದನ್ನು ಚಿತ್ರಿಸಬಹುದು. ನಿಮ್ಮ ಗ್ರೂಪ್‍ನಲ್ಲಿ ಯಾರೋ ಪಕ್ಷಿಪ್ರಿಯರಿದ್ದಾರೆ ಅಂದ್ಕೊಳ್ಳಿ, ಅಪರೂಪದ ಪಕ್ಷಿಯ ಫೋಟೋಗಳನ್ನು ಪೋಸ್ಟ್ ಮಾಡಿ. ನಿಮ್ಮ ಸ್ನೇಹಿತರು ಅವರ ಅಭಿಪ್ರಾಯಗಳನ್ನು, ಪ್ರಶ್ನೆಗಳನ್ನು ಇದರಲ್ಲಿ ಹಂಚಿಕೊಳ್ತಾರೆ. ಈ ಮೂಲಕ ನೀವು ಆಯೋಜಿಸಿರೋ ಪ್ರವಾಸ ಸಾಕಾರವಾಗುತ್ತದೆ.

ನಿಮಗೇನಾದ್ರೂ ಮರೆವಿನ ಸಮಸ್ಯೆ ಇದ್ರೆ, `ಒನ್‍ನೋಟ್'ನಲ್ಲಿ ಟೆಕ್ಸ್ಟ್, ಚಿತ್ರಗಳು ಹಾಗೂ ವಿಡಿಯೋಗಳನ್ನು ಸರ್ಚ್ ಮಾಡುವ ಅವಕಾಶ ಕೂಡ ಇದೆ. ನೋಟ್‍ಬುಕ್‍ನಲ್ಲಿರುವ ನಿಮ್ಮ ಕೈಬರಹವನ್ನು ಮ್ಯಾಚ್ ಮಾಡಿದ್ರೆ ಅದನ್ನು ಕೂಡ ಸಿಂಕ್ ಮಾಡಬಹುದು. ನೀವು ಆನ್‍ಲೈನ್‍ನಲ್ಲೇನೋ ಓದ್ತಿದ್ದೀರಾ ಅಂದ್ಕೊಳ್ಳಿ, ತರಾತುರಿಯಲ್ಲಿ ಅದನ್ನಲ್ಲೇ ನಿಲ್ಲಿಸಿ ಹೋಗಬೇಕಾಗಿ ಬರುತ್ತೆ. ಅಂತಹ ಸಂದರ್ಭಗಳಲ್ಲಿ ನೀವು ಎಲ್ಲಿಯವರೆಗೆ ಓದಿದ್ದೀರಾ ಅನ್ನೋದನ್ನು ಗುರುತಿಟ್ಟುಕೊಳ್ಳಲು `ವೆಬ್ ಕ್ಲಿಪ್ಪರ್' ಅನ್ನು ಬಳಸಬಹುದು. `ಒನ್‍ಡ್ರೈವ್'ನಲ್ಲಿ ನೋಟ್‍ಬುಕ್ ಸೇವ್ ಮಾಡಿದ್ಮೇಲೆ ನೀವು ಆ ಫೈಲನ್ನು ಯಾರ್ಯಾರಿಗೆ ಶೇರ್ ಮಾಡಿರ್ತೀರೋ ಅವರೆಲ್ಲಾ ಒಟ್ಟಿಗೆ ಅದನ್ನು ಓಪನ್ ಮಾಡಬಹುದು, ಬದಲಾವಣೆಯನ್ನೂ ಮಾಡಬಹುದು. ಈ ಬದಲಾವಣೆ ರಿಯಲ್ ಟೈಮ್‍ನಲ್ಲಿ ಬೇರೆ ಬಳಕೆದಾರರಿಗೂ ಕಾಣಿಸುತ್ತೆ.

ತರಗತಿಯ ಪ್ರಾಜೆಕ್ಟ್ ವಿಚಾರಕ್ಕೆ ಬಂದ್ರೆ, ಒಂದಷ್ಟು ವಿದ್ಯಾರ್ಥಿಗಳು ಒಟ್ಟಾಗಿ ಕುಳಿತು ಬ್ಯಾಂಕ್ ಬಗ್ಗೆ ಪ್ರಾಜೆಕ್ಟ್ ಕೆಲಸ ಮಾಡಬೇಕಾಗಿರುತ್ತೆ ಅಂದ್ಕೊಳ್ಳಿ. ಬ್ಯಾಂಕ್ ಮ್ಯಾನೇಜರ್ ಸಂದರ್ಶನ ಮಾಡಬೇಕು, ಬ್ಯಾಂಕ್‍ಗಳಲ್ಲಿ ಎಷ್ಟು ಬಗೆಯ ಸಾಲ ಸೌಲಭ್ಯವಿದೆ, ಸಾಲ ಹಾಗೂ ಠೇವಣಿ ಮೇಲೆ ಬಡ್ಡಿ ದರ ಎಷ್ಟಿದೆ, ಬ್ಯಾಂಕ್‍ಗಳು ಹೇಗೆ ಹಣ ಮಾಡುತ್ತವೆ, ಆನ್‍ಲೈನ್ ಪಾವತಿ ವ್ಯವಸ್ಥೆ ಹೇಗಿದೆ ಅನ್ನೋದನ್ನೆಲ್ಲ ಅರಿಯಬೇಕು. ಪ್ರಾಜೆಕ್ಟ್ ಸಲ್ಲಿಸಲು ಕೆಲವೇ ದಿನಗಳ ಗಡುವು ಕೊಟ್ಟಿರುತ್ತಾರೆ. ಆಗ ಎಲ್ಲಾ ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ಪ್ರಾಜೆಕ್ಟ್ ಕೆಲಸ ಮಾಡುವುದು ಕಷ್ಟ. ಹಾಗಿದ್ದಾಗ ಅಂಕಿ-ಅಂಶಗಳನ್ನೆಲ್ಲ ಲ್ಯಾಪ್‍ಟಾಪ್‍ನಲ್ಲಿ ಸಿದ್ಧಮಾಡಿ ಅದನ್ನು `ಒನ್ ಡ್ರೈವ್'ನ ನೋಟ್‍ಬುಕ್‍ನಲ್ಲಿ ಸೇವ್ ಮಾಡಬಹುದು. ಮ್ಯಾಕ್, ವಿಂಡೋಸ್ ಅಥವಾ ಆ್ಯಂಡ್ರಾಯ್ಡ್ ಓಎಸ್ ಮೂಲಕವೂ ಕೆಲಸ ಮಾಡಬಹುದು. ಎಲ್ಲಾ ವಿದ್ಯಾರ್ಥಿಗಳು `ಒನ್ ನೋಟ್' ಮೂಲಕ ಪ್ರಾಜೆಕ್ಟ್ ವಿವರವನ್ನು ಸುಲಭವಾಗಿ ಪಡೆಯಬಹುದು.

`ಆಫೀಸ್ 2016' ವನ್ ಡ್ರೈವ್ ಮೂಲಕ 15 ಜಿಬಿ ಉಚಿತ ಸ್ಟೋರೇಜ್ ಸ್ಪೇಸ್ ಹೊಂದಿದೆ. ನಿಮ್ಮ ಪಿಸಿಯಲ್ಲಿರುವ ಫೈಲ್‍ಗಳನ್ನು `ಒನ್ ಡ್ರೈವ್‍ಗೆ ಕಾಪಿ ಅಥವಾ ಮೂವ್ ಮಾಡಬಹುದು. ನಿಮ್ಮ ಪಿಸಿಯಲ್ಲಿ ಕ್ಯಾಮರಾ ಇದ್ರೆ ಸ್ವಯಂಚಾಲಿತವಾಗಿ ಫೋಟೋಗಳು `ಒನ್‍ಡ್ರೈವ್'ನಲ್ಲಿ ಸೇವ್ ಆಗುತ್ತವೆ. ನಿಮಗೆ 15 ಜಿಬಿ ಸ್ಥಳಾವಕಾಶ ಸಾಕಾಗುವುದಿಲ್ಲ ಎನಿಸಿದರೆ, ತಿಂಗಳಿಗೆ 1.99 ಡಾಲರ್ ಬಾಡಿಗೆ ಕೊಟ್ಟು 100 ಜಿಬಿ ಸ್ಪೇಸ್ ಪಡೆಯಬಹುದು. `ಒನ್ ನೋಟ್' ನಿಜಕ್ಕೂ ಒಂದು ಪವರ್‍ಫುಲ್ ಅಸ್ತ್ರ. ಅಂದ್ಮೇಲೆ ಕೂಡಲೇ ನೀವು ಅಪ್‍ಗ್ರೇಡ್ ಆಗಲೇಬೇಕು. ನಿಮಗಾಗಿಯೇ ಈಗ `ಎಕ್ಸ್​​​ಪ್ಲೋರ್ ಆಫೀಸ್ 2016' ಬಂದಿದೆ.

ಅನುವಾದಕರು: ಭಾರತಿ ಭಟ್​​