ಒಂದು ಕೆಲಸ- ಹಲವು ಕನಸು- ಇದು ಸ್ವಚ್ಛಭಾರತದ ಗೆಲುವು

ಟೀಮ್​ ವೈ.ಎಸ್​. ಕನ್ನಡ

0

ಸ್ವಚ್ಛ ಭಾರತ- ಸ್ವಸ್ಥ ಭಾರತ. ಎರಡು ವರ್ಷಗಳ ಹಿಂದೆ ಕೇಂದ್ರದ ನರೇಂದ್ರ ಮೋದಿ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಜನ್ಮದಿಂದೇ ಈ ಯೋಜನೆ ಆರಂಭವಾಗಿತ್ತು. ಆದ್ರೆ ಈ ಸ್ವಚ್ಛ ಭಾರತ ಯೋಜನೆಯನ್ನು ಈಗ ನಗರ ಹಾಗೂ ಗ್ರಾಮೀಣ ಸ್ವಚ್ಛಭಾರತ ಯೋಜನೆ ಎಂದು ವಿಂಗಡಿಸಲಾಗಿದೆ. ನಗರಗಳ ಸ್ವಚ್ಛತೆ ಬಗ್ಗೆ ನಗರಾಭಿವೃದ್ಧಿ ಸಚಿವಾಲಯ ಮತುವರ್ಜಿ ವಹಿಸಿದ್ರೆ, ಗ್ರಾಮೀಣ ಸ್ವಚ್ಛಭಾರತದ ಜವಾಬ್ದಾರಿಯನ್ನು ಕುಡಿಯುವ ನೀರು ಮತ್ತು ಪರಿಸರ ನೈರ್ಮಲ್ಯ ಸಚಿವಾಲಯದ ಹೆಗಲಿಗೆ ಒಪ್ಪಿಸಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಸ್ವಚ್ಛಭಾರತ ಯೋಜನೆ ಸಾಕಷ್ಟು ಕೆಲಸ ಮಾಡಿದೆ. ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಸುಮಾರು 2.4 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. MNREGA ಯೋಜನೆ ಅಡಿಯಲ್ಲಿ ಸುಮಾರು 15.04 ಲಕ್ಷ ಶೌಚಾಯಲಗಳು ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಎರಡು ವರ್ಷದ ಹಿಂದೆ ಶೆಕಡಾ 42ರಷ್ಟಿದ್ದ ಶೌಚಾಲಯಗಳ ಸಂಖ್ಯೆ ಈಗ ಶೆಕಡಾ 55.34ಕ್ಕೆ ಏರಿದೆ.

ಸ್ವಚ್ಛಭಾರತ ಆರಂಭವಾದ ಬಳಿಕ ಶೌಚಾಲಯಗಳ ನಿರ್ಮಾಣದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಸ್ವಚ್ಛಭಾರತ ಯೋಜನೆ ಜಾರಿಯಾದ ಮೊದಲ ವರ್ಷದಲ್ಲಿ ಶೆಕಡಾ 446 ಪ್ರತಿಶತ ಶೌಚಾಲಯಗಳ ನಿರ್ಮಾಣವಾಗಿತ್ತು. 35 ಜಿಲ್ಲೆಗಳು ಮತ್ತು ಸುಮಾರು ಒಂದು ಲಕ್ಷ ಗ್ರಾಮಗಳನ್ನು ಬಯಲು ಶೌಚ ಮುಕ್ತ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಹುಟ್ಟಿದ್ದ ಪೋರ್​ಬಂಧರ್ ಜಿಲ್ಲೆಯೂ ಈ ಪಟ್ಟಿ ಸೇರಿಕೊಂಡಿದೆ. ಅಚ್ಚರಿ ಅಂದ್ರೆ ಯಾವುದೇ ಗ್ರಾಮಗಳನ್ನು ಅಥವಾ ಜಿಲ್ಲೆಗಳನ್ನು ಬಯಲುಮುಕ್ತ ಶೌಚಾಲಯ ಅನ್ನೋದನ್ನ ಸರ್ಕಾರ ಗುರುತಿಸಿಲ್ಲ. ಬದಲಾಗಿ ತಟಸ್ಥ ಸಂಸ್ಥೆಯೊಂದು ಈ ಲೆಕ್ಕಾಚಾರವನ್ನು ಹೊರಹಾಕಿದೆ. ಸ್ವಚ್ಛಭಾರತ ಯೋಜನೆ ಕೇವಲ ಶೌಚಾಲಯವನ್ನು ಮಾತ್ರ ಕಟ್ಟಿಸಿಕೊಡುತ್ತಿಲ್ಲ ಬದಲಾಗಿ ಜನರ ಯೋಚನೆಯನ್ನೇ ಬದಲಾವಣೆ ಮಾಡುತ್ತಿದೆ.

ಸ್ವಚ್ಛಭಾರತ ಮಿಷನ್ ಹಲವು ಪ್ರಯೋಜಗಳನ್ನು ಕೂಡ ಪಡೆದುಕೊಂಡಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಮಹಿಳಾ ಮಂಡಳಿಗಳು ವಾರಕ್ಕೊಂದು ದಿನ ಯಾವುದಾದರೂ ಒಂದು ಗ್ರಾಮವನ್ನು ಸ್ವಚ್ಛಗೊಳಿಸುತ್ತಿವೆ. ಇದರಿಂದ ಸುಮಾರು 1 ಲಕ್ಷ ಕಿಲೋಗ್ರಾಂನಷ್ಟು ಪುನರ್ ಬಳಕೆ ಮಾಡಬಹುದಾದ ಕಸಗಳಿಂದ ಸುಮಾರು 5 ಲಕ್ಷ ರೂಪಾಯಿಗಳನ್ನು ಸಂಪಾದಿಸಿವೆ. ಇಂಧೋರ್​ನ  ಖಜರಾನಾ ಗಣೇಶ ದೇವಾಲಯದಲ್ಲಿ ಪ್ರತಿದಿನ ಸಾಕಷ್ಟು ಹೂವುಗಳನ್ನು ಪೂಜಾ ವಿಧಿವಿಧಾನದ ನಂತರ ಬಿಸಾಕಲಾಗುತ್ತಿತ್ತು. ಆದ್ರೆ ಸ್ವಚ್ಛಭಾರತ ಯೋಜನೆಯಿಂದ ಪ್ರಭಾವಿತರಾದ ವ್ಯಕ್ತಿಯೊಬ್ಬರು ಅದನ್ನು ಸಂಗ್ರಹಿಸಿ, ಅದನ್ನು ಕಾಂಪೋಸ್ಟ್ ಗೊಬ್ಬರವನ್ನಾಗಿ ಪರಿವರ್ತಿಸಿದ್ರು. ಈ ಗೊಬ್ಬರ ಸಾಕಷ್ಟು ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಹೀಗೆ ಸ್ವಚ್ಛಭಾರತ ಯೋಜನೆ ಹಲವರಿಗೆ ವಿವಿಧ ರೀತಿಯಲ್ಲಿ ಸಹಕಾರಿ ಆಗಿದೆ.

ಇದನ್ನು ಓದಿ: ಬಡ ಮಹಿಳೆಯೊಳಗಿನ ಉದ್ಯಮಿಗಳನ್ನು ಪ್ರೋತ್ಸಾಹಿಸುವ “ಶಾಂತಾ”

ವಿಶ್ವಬ್ಯಾಂಕ್​  ವರದಿ ಪ್ರಕಾರ ಪರಿಸರ ನೈರ್ಮಲ್ಯದ ಕೊರತೆ ಸುಮಾರು 6.4ರಷ್ಟು ಕಡಿಮೆ ಜಿಡಿಪಿಗೆ ಕಾರಣವಾಗುತ್ತಿದೆ. ಲಂಡನ್​ನ  ಸ್ಕೂಲ್ ಆಫ್ ಹೈಜಿನ್ ಮತ್ತು ಟ್ರೊಫಿಕಲ್ ಮೆಡಸಿನ್ ಪ್ರಕಾರ ಭಾರತದ ಜನರು ಊಟಕ್ಕೂ ಮೊದಲು ಸಾಬೂನು ಬಳಸಿಕೊಂಡು ಕೈ ತೊಳೆದು ಕೊಳ್ಳುವುದಿಲ್ಲ. ಇದರಿಂದಾಗಿ ಸುಮಾರು 19 ಬಿಲಿಯನ್ ಡಾಲರ್ ಮೆಡಿಕಲ್ ಎಮರ್ಜೆನ್ಸಿ ಮತ್ತು ಮಾತ್ರೆಗಳ ಖರೀದಿಯಲ್ಲಿ ವ್ಯರ್ಥವಾಗುತ್ತಿದೆ.

ಸ್ವಚ್ಛಭಾರತ ಯೋಜನೆ ಸಾಕಷ್ಟು ರಾಜ್ಯಗಳಿಗೆ ಹೊಸ ಕೀರ್ತಿಯನ್ನು ತಂದುಕೊಡಲಿದೆ. 2017ರ ಮಾರ್ಚ್ ಹೊತ್ತಿಗೆ ಗುಜರಾತ್, ಕೇರಳ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಮತ್ತು ಮಿಝೋರಂ ರಾಜ್ಯಗಳು ಬಯಲು ಶೌಚಮುಕ್ತ ರಾಜ್ಯಗಳೆಂಬ ಹಿರಿಮೆಯನ್ನು ಪಡೆಯುವುದು ಬಹುತೇಕ ಖಚಿತವಾಗಿದೆ. 2019ರ ಅಕ್ಟೋಬರ್ 2ರ ಹೊತ್ತಿಗೆ ಇಡೀ ಭಾರತವನ್ನು ಬಯಲು ಶೌಚಮುಕ್ತ ದೇಶ ಅಂತ ಘೋಷಿಸುವ ಕನಸು ನರೇಂದ್ರ ಮೋದಿ ಸರಕಾರದ್ದು.

ಇದನ್ನು ಓದಿ:

1. ಉಕ್ಕಿ ಹರಿಯುವ ನದಿಗೆ ಸೇತುವೆ ಕಟ್ಟಿದ್ರು- ಎರಡೂ ಗ್ರಾಮಗಳ ಜನರಿಗೆ ನೆಮ್ಮದಿ ತಂದ್ರು..!

2. ದೇಶ ಸುತ್ತಿ ನೋಡಿ.. ಕೋಶ ಓದಿ ನೋಡಿ

3. ಎ.ಸಿ. ಬಟ್ಟೆ ತೊಡುವ ಕಾಲ ಹತ್ತಿರ ಬರುತ್ತಿದೆ...!