ಕ್ರೇಜ್​ಗಾಗಿ ಮಾಡಿದ್ರು ಸೆಲ್ಫಿ ಸ್ಟಿಕ್​- ಅರ್ಮಾನ್​ ಸಾಧನೆಯನ್ನು ದಾಖಲೆಯನ್ನಾಗಿ ಬರೆಸಿಕೊಂಡ ಗಿನ್ನೆಸ್​ ಬುಕ್​..!

ಟೀಮ್​ ವೈ.ಎಸ್​.ಕನ್ನಡ

0

ಕೆಲವೊಂದು ಸಾರಿ ನಮಗೆ ಗೊತ್ತಿಲ್ಲದ ಮಾಡಿದ ಸಾಧನೆ ಇನ್ನೇನೋ ಆಗಿ ಸುದ್ದಿ ಮಾಡುತ್ತದೆ. ಇನ್ನು ಕೆಲವೊಮ್ಮೆ ಬೆವರು ಹರಿಸಿ, ಕಷ್ಟಪಟ್ರೂ ನಯಾಪೈಸೆಯ ವ್ಯಾಲ್ಯೂ ಕೂಡ ಸಿಗೋದಿಲ್ಲ. ಆದ್ರೆ ಇವತ್ತು ನಾವು ಹೇಳ ಹೊರಟಿರೋದು ಹವ್ಯಾಸ ದಾಖಲೆ ಪುಟ ಸೇರಿಕೊಂಡ ಕಥೆಯನ್ನು. ಅಂದಹಾಗೇ ಇದು ಜಸ್ಟ್​ ದಾಖಲೆ ಪುಟ ಸೇರಿಕೊಂಡಿಲ್ಲ. ಬದಲಾಗಿ ಗಿನ್ನೆಸ್​ ದಾಖಲೆಯಾಗಿ ದಾಖಲಾಗಿದೆ.

ಇದನ್ನು ಓದಿ: ಬಸ್ ಹತ್ತಿ ಲಾಸ್ಟ್​​ ಸ್ಟಾಪ್ ಎಂದು ಹೇಳ್ಬೇಡಿ..!

ಹವ್ಯಾಸ ಎಷ್ಟರ ಮಟ್ಟಿಗೆ ಸುದ್ದಿ ಮಾಡಿದ ಅಂದ್ರೆ ಖ್ಯಾತನಾಮರೆನಿಸಿಕೊಂಡವರು ಬರೆದಿದ್ದ ದಾಖಲೆ ಕೂಡ ಧೂಳೀಪಟವಾಗಿದೆ. ಇಷ್ಟಕ್ಕೂ ಇದು ಹಗಲಿರುಳು ಕೂತು, ನಿದ್ದೆಗೆಟ್ಟು ಮಾಡಿದ ಸಾಧನೆಯಲ್ಲ. ಬದಲಾಗಿ ಹವ್ಯಾಸವನ್ನೇ ಹಠವನ್ನಾಗಿ ಮಾಡಿಕೊಂಡು ಇತಿಹಾಸ ಬರೆದ ಕಥೆ.

ನಾವು ಮಾಡುವ ಕೆಲಸವನ್ನು ಅತಿ ಶ್ರದ್ದೇ ಹಾಗೂ ಎಲ್ಲರಿಗಿಂತ ವಿಭಿನ್ನವಾಗಿ ಮಾಡುವ ಪ್ರಯತ್ನ ಪಟ್ಟಲ್ಲಿ ಅದರ ಪ್ರತಿಫಲ ಸಿಹಿಯಾಗಿರುತ್ತದೆ. ಅನೇಕ ಸಲ ವಿಶ್ವ ದಾಖಲೆ ಕೂಡ ಅಗೋದು ಹೀಗೆ. ನಾವು ಏನೋ ಹೊಸತನ್ನು ಮಾಡಲು ಹೋಗಿ ಅದು ದಾಖಲೆ ಆಗುತ್ತದೆ. ಅಂತಹವೊಂದು ಅದ್ಭುತ ದಾಖಲೆಗೆ ಮಂಗಳೂರಿನ ಅರ್ಮಾನ್ ಎಂಬ ಯುವಕ ಪಾತ್ರನಾಗಿದ್ದಾನೆ. ವಿಶ್ವದ ಅತ್ಯಂತ ಉದ್ದದ ಸೆಲ್ಫಿ ಸ್ಟಿಕ್ ತಯಾರಿಸಿ ಗಿನ್ನಿಸ್ ಬುಕ್ ಸೇರಿದ್ದಾನೆ.

ಸದ್ಯ ಮಂಗಳೂರಿನ ಯುವಕ, ವಿಶ್ವದ ಅತ್ಯಂತ ಉದ್ದದ ಸೆಲ್ಫಿ ಸ್ಟಿಕ್ ತಯಾರಿಸಿದ ಸಾಧನೆ ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಂಡಿದೆ. 10.39 ಮೀಟರ್ ಉದ್ದದ ಸೆಲ್ಫಿ ಸ್ಟಿಕ್ ತಯಾರಿಸಿದ್ದ ಅರ್ಮಾನ್ ಈ ಸಾಧನೆ ಮಾಡಿದ್ದಾರೆ.

ಮಣಿಪಾಲದ ಎಂಐಟಿಯಲ್ಲಿ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಓದುತ್ತಿರುವ ಅರ್ಮಾನ್ ವಿಶ್ವದ ಅತಿ ದೊಡ್ಡ ಸೆಲ್ಫಿ ಸ್ಟಿಕ್ ತಯಾರಿಸಿದವನು ಎಂಬ ಕೀರ್ತಿಗೆ ದಾಖಲಾಗಿದ್ದಾರೆ. ಅರ್ಮಾನ್ 10.39ಮೀಟರ್ ಉದ್ದ ಸೆಲ್ಫಿ ಸ್ಟಿಕ್ ತಯಾರಿಸಿದ್ದರು. ಈ ಮೂಲಕ ಅಮೆರಿಕಾದ ಹಾಲಿವುಡ್ ನಟ ಬೆನ್ ಸ್ಟಿಲ್ಲರ್  ಹೆಸರಿನಲ್ಲಿದ್ದ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಬೆನ್​ 8.56 ಮೀಟರ್ ಉದ್ದದ ಸೆಲ್ಫಿಸ್ಟಿಕ್ ತಯಾರಿಸಿ ದಾಖಲೆ ಬರೆದಿದ್ದರು. ಆದ್ರೆ ಈಗ ಅರ್ಮಾನ್​ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆದಿದ್ದಾರೆ.

ಮೂಲತಃ ಅರ್ಮಾನ್ ಮಂಗಳೂರಿನ ಹಂಪನಕಟ್ಟೆಯ ಮುಹಮ್ಮದ್ ಸೂರಿಂಜೆ ಹಾಗೂ ರೆಹನಾ ದಂಪತಿಯ ಪುತ್ರ. 2015ರ ಏಪ್ರಿಲ್ 11 ರಂದು, ಮಣಿಪಾಲ ಎಂಐಟಿಯ 10ನೇ ಬ್ಲಾಕ್​ನಲ್ಲಿರುವ ಮೈದಾನದಲ್ಲಿ ಅರ್ಮಾನ್ ಗಿನ್ನೆಸ್ ದಾಖಲೆಯ ಪ್ರಯತ್ನವನ್ನು ನಡೆಸಿದ್ರು. 10.39 ಮೀಟರ್ ಉದ್ದದ ಸೆಲ್ಫಿ ಸ್ಟಿಕ್​ನ್ನು ಗಣ್ಯರ ಸಮ್ಮುಖದಲ್ಲಿ ಪ್ರದರ್ಶಿಸಿದ್ದರು. ಇದನ್ನು ಸಂಪೂರ್ಣ ಚಿತ್ರೀಕರಣ ಮಾಡಿ, ಅದರ ಛಾಯಾಚಿತ್ರ ಹಾಗೂ ವಿಡಿಯೋ ರೆಕಾರ್ಡ್​ಗಳನ್ನು ಗಿನ್ನಿಸ್ ರೆಕಾರ್ಡ್ ಸಂಸ್ಥೆಗೆ ರವಾನಿಸಲಾಗಿತ್ತು. ಅರ್ಮಾನ್ ಈ ಸಾಧನೆಯನ್ನು ಪರಿಗಣಿಸಿರುವ ಸಂಸ್ಥೆಯು ಅರ್ಮಾನ್ ಸಾಧನೆಯನ್ನು ಗಿನ್ನಿಸ್ ಪುಟಕ್ಕೆ ಸೇರಿಸಿದೆ. ಇದರ ಪ್ರಮಾಣಪತ್ರವನ್ನು ಸಂಸ್ಥೆ ಅರ್ಮಾನ್ ಅವರಿಗೆ ಕಳುಹಿಸಿಕೊಟ್ಟಿದೆ.

ಇದನ್ನು ಓದಿ:

1. ಸಿಟಿಯಲ್ಲೋಂದು ಹಳ್ಳಿ - ಬನ್ನಿ ಮಕ್ಕಳಿಗೆ ಪ್ರಾಣಿ ಪರಿಚಯ ಮಾಡಿಸಿ 

2. ಮುಸ್ಲಿಂರು ನಿರ್ಮಿಸಿದ ರಾಮಮಂದಿರ!

3. ಕಾಯಕವೇ ಕೈಲಾಸ ಹನುಮಂತನ ಸಾಹಸ

Related Stories