ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ಥೆ- 17 ಶಸ್ತ್ರಚಿಕಿತ್ಸೆಗಳ ಬಳಿಕ ಕಂಕಣ ಭಾಗ್ಯ..!

ಟೀಮ್​ ವೈ.ಎಸ್​. ಕನ್ನಡ

1

ಛಲ ಇದ್ದರೆ ಬದುಕಿನಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಇದಕ್ಕೊಂದು ಅತ್ಯುತ್ತಮ ಉದಾಹರಣೆ ಲಲಿತಾ ಬೆನ್ ಬನ್ಸಿ. 26 ವರ್ಷದ ಲಲಿತಾ ಬೆನ್ ಬನ್ಸಿ 5 ವರ್ಷಗಳ ಹಿಂದೆ ಸೋದರ ಸಂಬಂಧಿಯೊಬ್ಬನಿಂದ ಆ್ಯಸಿಡ್ ಅಟ್ಯಾಕ್​ಗೆ ಒಳಗಾಗಿದ್ದರು. ಲಲಿತಾ ಮತ್ತು ಸೋದರ ಸಂಬಂಧಿಯ ನಡುವೆ ಚಿಕ್ಕ ಜಗಳ ಈ ಅಮಾನವೀಯ ಕೃತ್ಯದಲ್ಲಿ ಅಂತ್ಯಕಂಡಿತ್ತು. ಆ್ಯಸಿಡ್ ದಾಳಿ ಬಳಿಕ ಲಲಿತಾ ಜೀವನವೇ ಮುಗಿದು ಹೋಗಿತ್ತು ಅನ್ನುವ ಲೆಕ್ಕಾಚಾರ ಹಾಕಿದ್ದವರೇ ಹೆಚ್ಚು. ಆದ್ರೆ ಇವತ್ತು ಲಲಿತಾ ಸಂತಸದಿಂದ ಇದ್ದಾರೆ. ಹೊಸ ಬದುಕಿನ ಬಗ್ಗೆ ಕನಸು ಕಾಣುತ್ತಿದ್ದಾರೆ.

ಆ್ಯಸಿಡ್ ದಾಳಿಯಿಂದಾಗಿ ಲಲಿತಾ ತನ್ನ ಮುಖಚರ್ಯೆಯನ್ನೇ ಕಳೆದುಕೊಂಡಿದ್ದರು. ಆ್ಯಸಿಡ್ ಅವರ ಮುದ್ದು ಮುಖದ ಶೇಪ್ ಅನ್ನೇ ಬದಲಿಸಿತ್ತು. ಲಲಿತಾ ಸುಮಾರು 17 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಆದ್ರೆ ಹಿಂದಿನಂತೆ ಆಗಲು ಇನ್ನೂ ಸಾಧ್ಯವಾಗಿಲ್ಲ. ಹಲವಾರು ಶಸ್ತ್ರ ಚಿಕಿತ್ಸೆಗಳ ಬಳಿಕ ಲಲಿತಾ ಮುಂಬೈನ ಥಾಣೆ ಬಳಿಕ ಅಜಂಘಢದಿಂದ ಕಲ್ವಾಗೆ ಶಿಫ್ಟ್ ಆಗಿದ್ದರು. ಲಲಿತಾರನ್ನು ಯಾರೂ ಪ್ರೀತಿ ಮಾಡಲ್ಲ ಅಂತ ಅಂದುಕೊಂಡಿದ್ದವರೇ ಹೆಚ್ಚು. ಆದ್ರೆ ಅದೃಷ್ಟ ಅಲ್ಲಿ ಬದಲಾಗಿತ್ತು. ಒಂದು ರಾಂಗ್ ನಂಬರ್ ಲಲಿತಾರ ಬದುಕನ್ನೇ ಬದಲಿಸಿತ್ತು.

ಇದನ್ನು ಓದಿ: ಕಸದಿಂದ ಪರಿಸರವನ್ನು ರಕ್ಷಿಸುವ ಕೊಲ್ಕತ್ತಾ ಮೂಲದ ಸ್ಟಾರ್ಟ್ಅಪ್ ಸಂಸ್ಥೆ- ಇದು ವೈಟಲ್ ವೇಸ್ಟ್​ನ ಸ್ಪೂರ್ತಿದಾಯಕ ಕಥೆ

ಲಲಿತಾ ರಾಂಗ್ ನಂಬರ್ ಒಂದರ ಮೂಲಕ ರವಿಶಂಕರ್ ಅನ್ನುವ ವ್ಯಕ್ತಿಯನ್ನು ಭೇಟಿ ಮಾಡುವ ಹಾಗಾಯಿತು. ಫೋನ್​ನಲ್ಲಿ ಆರಂಭವಾದ ಮಾತುಕತೆ ಮದುವೆ ತನಕ ಬೆಳೆದಿದೆ. ಅಷ್ಟೇ ಅಲ್ಲ ಒಬ್ಬರಿಗೊಬ್ಬರು ಅರ್ಥಮಾಡಿಕೊಂಡಿದ್ದಾರೆ. ಥಾಣೆಯ ಕೋರ್ಟ್​ನಲ್ಲಿ ಇವರು ಸತಿಪತಿಗಳಾಗಲಿದ್ದಾರೆ. ಶಂಕರ್ ನನಗೆ ಪ್ರೀತಿ ಕೊಟ್ಟಿದ್ದಾರೆ. ಪ್ರೀತಿಸಲು ಕಲಿಸಿದ್ದಾರೆ ಅಂತ ಹೇಳುತ್ತಾರೆ ಲಲಿತಾ.

“ ನಾನು ಲಲಿತಾರನ್ನು ಆರಂಭದಿಂದಲೂ ಇಷ್ಟ ಪಟ್ಟಿದ್ದೆ. ನನ್ನ ಆಯ್ಕೆಯನ್ನು ನನ್ನ ಅಮ್ಮ ಒಪ್ಪಿಕೊಳ್ಳುವಂತೆ ಮಾಡಿದೆ. ಲಲಿತಾ ಉತ್ತಮ ಜೀವನ ನಡೆಸಬಲ್ಲಳು. ನಾನು ಮದುವೆಯ ಬಗ್ಗೆ ಇರುವ ಯೋಚನೆಗಳನ್ನು ಬದಲಿಸುವ ಪ್ರಯತ್ನ ಮಾಡುತ್ತಿದ್ದೇನೆ ”
- ಶಂಕರ್, ವರ

ಶಂಕರ್ ಕಾಂಡಿವಿಲಿಯಲ್ಲಿ ಸಿಸಿಟಿವಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜಾರ್ಖಂಡ್ ಮೂಲದವರಾಗಿರುವ ಶಂಕರ್ ರಾಂಚಿಯಲ್ಲಿ ಒಂದು ಪೆಟ್ರೋಲ್ ಬಂಕ್ ಒಂದನ್ನು ಕೂಡ ಹೊಂದಿದ್ದಾರೆ. ಮದುವೆಯ ನಂತರ ಈ ಜೋಡಿ ಮುಂಬೈ ಅಥವಾ ರಾಂಚಿಯಲ್ಲಿ ಜೀವನ ನಡೆಸಬೇಕೋ ಅನ್ನುವ ಬಗ್ಗೆ ಯೋಜನೆಗಳನ್ನು ರೂಪಿಸುತ್ತಿದೆ. ಲಲಿತಾಗೆ ನಟ ವಿವೇಕ್ ಒಬೇರಾಯ್ ಚಿಕಿತ್ಸೆಯ ವಿಚಾರದಲ್ಲಿ ಸಹಾಯ ಮಾಡಿದ್ದು, ಥಾಣೆಯಲ್ಲಿ ಒಂದು ಅಪಾರ್ಟ್ ಮೆಂಟ್ ಅನ್ನು ಕೂಡ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲೂ ವಿವೇಕ್ ಒಬೇರಾಯ್ ಲಲಿತಾಗೆ ಸಹಾಯ ಹಸ್ತ ನೀಡಲಿದ್ದಾರೆ. 

ಇದನ್ನು ಓದಿ:

1. ಭಾರತದ ಮೊತ್ತಮೊದಲ ಪುಸ್ತಕಗಳ ಗ್ರಾಮ- ವೇಲ್ಸ್​​ಟೌನ್ ಸಾಧನೆ ಸರಿಗಟ್ಟಿದ ಮಹಾರಾಷ್ಟ್ರದ ಭಿಲಾರ್

2. ಸಾಧನೆಯ ಹಿಂದಿದೆ ಬೆಟ್ಟದಂತಹ ಪರಿಶ್ರಮ- ಸಾಲ್ಸಾದಲ್ಲಿ ಗಿನ್ನೆಸ್​ ದಾಖಲೆ ಬರೆದ ಸೂರ್ಯಕಾಂತ

3. ಹೆತ್ತವರಿಂದ್ಲೇ ತಿರಸ್ಕೃತಳಾದ ಮಂಗಳಮುಖಿ – ಕೀಳರಿಮೆ ಮೆಟ್ಟಿ ನಿಂತು ಮುನ್ನಡೆದ ಸಾಧಕಿ 

Related Stories

Stories by YourStory Kannada