ಆಫ್ಘಾನಿಸ್ತಾನದಂತಹ ಸಂಘರ್ಷಿತ ವಲಯದಲ್ಲಿ ಯಶಸ್ಸು ಕಂಡ ಗಟ್ಟಗಿತ್ತಿ ಏಯ್ಲೀನ್ ಗ್ವೂ

ಟೀಮ್​ ವೈ.ಎಸ್​. ಕನ್ನಡ

ಆಫ್ಘಾನಿಸ್ತಾನದಂತಹ ಸಂಘರ್ಷಿತ ವಲಯದಲ್ಲಿ ಯಶಸ್ಸು ಕಂಡ ಗಟ್ಟಗಿತ್ತಿ ಏಯ್ಲೀನ್ ಗ್ವೂ

Wednesday December 16, 2015,

7 min Read

ಸಾಮಾಜಿಕ ಮಾಧ್ಯಮಗಳಿಂದ ಬದಲಾವಣೆಯ ಕಥೆ ಅಂತರ್ಜಾಲ ಉಗಮದಷ್ಟೇ ಹಳೆಯದ್ದು. ಅಮೇರಿಕಾದ ಉದ್ಯಮಿ ಏಯ್ಲೀನ್ ಗ್ವೂ ಇಂಟರ್​ನೆಟ್​​ ಸಹಕಾರದೊಂದಿಗೆ ಸಾಮಾಜಿಕ ಬದಲಾವಣೆ ಬಯಸಿದ್ದರು. ಹೀಗೆ ಶುರುವಾದ ಅವರ ಸ್ಟಾರ್ಟ್ ಅಪ್ ಇಂಪ್ಯಾಷನ್ ಮೀಡಿಯಾ. ಇಂಪ್ಯಾಷನ್ ಅನ್ನುವುದು ಡಿಜಿಟಲ್ ಮಾಧ್ಯಮದ ಸಂಸ್ಥೆಯಾಗಿದ್ದು ತಂತ್ರಜ್ಞಾನಗಳ ನೆರವಿನಿಂದ ಸಂಘರ್ಷಗಳಿಗೆ ಸೂಕ್ತ ಸಮಾಧಾನ ಹಾಗೂ ಶಾಂತಿಯನ್ನು ಕಲ್ಪಿಸುವುದು ಇದರ ಮುಖ್ಯ ಆಶಯ. ಈ ರೀತಿಯ ಶಾಂತಿ ವಲಯ ಕಲ್ಪಿಸಲು ಅವರು ಆಯ್ಕೆ ಮಾಡಿಕೊಂಡಿದ್ದು ಆಫ್ಘಾನಿಸ್ತಾನವನ್ನು. ಏಕೆಂದರೇ ಇಲ್ಲಿನ 30 ಮಿಲಿಯನ್ ಜನಸಂಖ್ಯೆಯಲ್ಲಿ ಶೇ.85ರಷ್ಟು ಜನರು ಮೊಬೈಲ್ ಫೋನ್ ಬಳಸುತ್ತಿದ್ದಾರೆ ಅನ್ನುವುದು ಪ್ಲಸ್ ಪಾಯಿಂಟ್.

image


ಇಂಪ್ಯಾಷನ್ ಆಫ್ಘಾನಿಸ್ತಾನ ರಾಷ್ಟ್ರದ ಮೊತ್ತ ಮೊದಲ ಡಿಜಿಟಲ್ ಏಜೆನ್ಸಿ. ಇದರಡಿಯಲ್ಲಿ ಅವರ ತಂಡ ಆಫ್ಘಾನಿಸ್ತಾನದ ಮೊದಲ ಸಿಟಿಜನ್ ಪತ್ರಿಕೋದ್ಯಮದ ವೆಬ್​ಸೈಟ್​ ಪೈವಂದಗಹ್ ಹಾಗೂ ಇನ್ನಿತರೆ ಮೊತ್ತ ಮೊದಲ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ಅವರ ಕಾರ್ಯ ಆಫ್ಘಾನಿಸ್ತಾನದ ಔದ್ಯಮಿಕ ವಾತಾವರಣವನ್ನು ಉತ್ತೇಜಿಸುವಂತದ್ದಾಗಿತ್ತು. ಏಯ್ಲೀನ್ ಹೇಳುವಂತೆ ಆಫ್ಘಾನಿಸ್ತಾನ್ ಮುಂಬರುವ ವರ್ಷಗಳಲ್ಲಿ ಅವರ ವೃತ್ತಿಗೆ ತವರು ಭೂಮಿಯಾಗಲಿದೆ.

image


ತಮ್ಮ ಅತ್ಯುತ್ತಮ ಕೆಲಸದಿಂದಾಗಿ ಏಯ್ಲೀನ್ ವಿಶ್ವ ಆರ್ಥಿಕ ಸಮಿತಿಯ ಸಾಮಾಜಿಕ ಮಾಧ್ಯಮದ ಮೇಲಿನ ಜಾಗತಿಕ ಅಜೆಂಡಾ ಕೌನ್ಸಿಲ್​​ನಲ್ಲಿ ಸೇವೆ ಸಲ್ಲಿಸಿದ್ದರು. ಇಂಟರ್ನೆಟ್​​​​​ನ ಸಾಮರ್ಥ್ಯದ ಅರಿವಿದ್ದ ಅವರು ಜಾಗತಿಕ ನೆಲೆಗಟ್ಟಿನಲ್ಲಿ ಯೋಜನೆಯನ್ನು ಅರ್ಥ ಮಾಡಿಕೊಂಡು ಹೊಸ ಜವಬ್ದಾರಿಯನ್ನು ತಮ್ಮ ಹೆಗಲಲ್ಲಿ ಹೊರುವಂತಾಗಿ ವಿಶ್ವದ ಬೇರೆ ಇಂಟರ್​ನೆಟ್​​ ದಿಗ್ಗಜ ಸಂಸ್ಥೆಗಳಂತೆ ಕಾರ್ಯನಿರ್ವಹಿಸಲು ಸಾಧ್ಯವಾಯಿತು.

ಯುವರ್​ಸ್ಟೋರಿಯೊಂದಿಗೆ ಮಾತನಾಡಿದ ಅವರು ತಾವು ಆಫ್ಘಾನಿಸ್ತಾನ ಪ್ರವಾಸ ಮಾಡಲು ಅವಕಾಶ ಪಡೆದಿದ್ದು ಹೇಗೆ? ಹಾಗೂ ಇದರಿಂದ ತಾವು ಕಲಿತ ಬದುಕಿನ ಪಾಠಗಳೇನು? ಏಕೆ ಅವರ ಸ್ಟಾರ್ಟ್ ಅಪ್ ಯಶಸ್ಸಿನ ಗುಟ್ಟು ವೈಫಲ್ಯ ಎಂದು ಭಾವಿಸುತ್ತದೆ? ಹೇಗೆ ಬಾಲಿವುಡ್ ಕಾರಣದಿಂದ ಅವರ ಭಾರತೀಯ ಉದ್ಯೋಗಿಗಳು ಆಫ್ಘಾನಿಸ್ತಾನದಲ್ಲಿ ವಿಐಪಿ ಆತಿಥ್ಯ ಪಡೆಯುತ್ತಾರೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ನಿಮ್ಮ ಬಾಲ್ಯದ ಇಚ್ಛೆ ಏನಾಗಿತ್ತು?

ನಾನು ಹುಟ್ಟಿದ್ದು ಚೀನಾದಲ್ಲಿ ಆದರೆ ನನಗೆ ನಾಲ್ಕು ವರ್ಷವಾಗಿದ್ದಾಗ ನಾವು ಅಮೇರಿಕಾಗೆ ತೆರೆಳೆದ್ದೆವು. ನನ್ನ ಪೋಷಕರು ಉದ್ಯಮಿಗಳಾಗಿದ್ದರು. ಹಾಗಾಗಿ ಅವರ ಪ್ರತಿಯೊಂದು ಕ್ಷಣವನ್ನು ಉದ್ಯಮದ ಪ್ರಗತಿಗಾಗಿ ಅರ್ಪಿಸುತ್ತಿದ್ದರು. ಅವರು ನನಗಿಂತ ಹೆಚ್ಚಿನ ಧ್ಯಾನ ಅವರು ತಮ್ಮ ಉದ್ಯಮಕ್ಕೆ ನೀಡುತ್ತಿದ್ದರು. ನಾನು ಏಕಾಂಗಿಯಾಗಿ ಬೆಳೆದರೂ ಚಟುವಟಿಕೆಯಿಂದಲೇ ಬೆಳೆದೆ. ನನಗೆ ಲಾಭವಿಲ್ಲದ ಕ್ಷೇತ್ರದಲ್ಲಿ ಆಗ ಹೆಚ್ಚಿನ ಆಸಕ್ತಿಯಿತ್ತು.

ಹಾಗಿದ್ದರೇ ನೀವು ಎಂಬ್ರೇಸ್ ಉದ್ಯಮವನ್ನು ಆರಂಭಿಸಲು ನಿರ್ಧರಿಸಿದ್ದು ಯಾವಾಗ?

ಸಂಘರ್ಷದ ವಲಯಗಳಲ್ಲಿ ಕೆಲಸ ಮಾಡಲು ನನಗೆ ಅತೀವ ಆಸಕ್ತಿಯಿತ್ತು. ಆದರೆ ಯಾವ ಉದ್ಯಮ ಮತ್ತು ಹೇಗೆ ಆರಂಭಿಸಬೇಕು ಅನ್ನುವ ಬಗ್ಗೆ ಅರಿವಿರಲಿಲ್ಲ. 2009ರಲ್ಲಿ ನಾನು ನನ್ನ ಕಾಲೇಜು ಕಲಿಕೆಯ ಎರಡನೇ ವರ್ಷದಲ್ಲಿದ್ದಾಗ ಆಫ್ಘಾನಿಸ್ತಾನದಲ್ಲಿ ಸಂಶೋಧನಾ ಸಹಾಯಕ್ಕಾಗಿ ತೆರಳುವ ಅತ್ಯುತ್ತಮ ಅವಕಾಶ ಪಡೆದುಕೊಂಡೆ. ಅಲ್ಲಿ ಅಮೇರಿಕಾದ ಮಿಲಿಟರಿ ನೆರವಿನಿಂದ ಪೂರ್ತಿ ಆಫ್ಘಾನಿಸ್ತಾನ ಸಂಚರಿಸಿದೆ. ನನಗಾಗ ಅತಿ ದೊಡ್ಡ ಸಾಂಸ್ಕ್ರತಿಕ ಭಿನ್ನತೆಯ ಪರಿಚಯವಾಯಿತು. ಅಲ್ಲಿನ ಆತಂಕಕಾರಿ ವಾತಾವರಣ ಕಂಡು ನನಗೆ ಆಫ್ಘಾನಿಸ್ತಾನಕ್ಕಿಂತ ಅಮೇರಿಕಾದ ನಡೆ ಅಚ್ಚರಿ ತರಿಸಿತ್ತು. ಅಲ್ಲಿಂದ ಬರುವಾಗ ನಾವು ಹೇಗೆ ಅಮೇರಿಕಾದಂತೆ ವಿದೇಶಾಂಗ ನೀತಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ ಅನ್ನುವ ಬೇಸರದ ಅನುಭವವಾಗಿತ್ತು. ನಾನಾಗ ಅಲ್ಲಿ ಹೇಗೆ ಉತ್ತಮ ವ್ಯವಸ್ಥೆ ಕಲ್ಪಿಸಬಹುದು? ಅಲ್ಲಿ ಯಾವ ಬದಲಾವಣೆ ತರಲು ಸಾಧ್ಯ ಅನ್ನುವ ಬಗ್ಗೆ ಯೋಚಿಸತೊಡಗಿದ್ದೆ.

ನೀವು ಇಂಪ್ಯಾಷನ್ ಆಫ್ಘಾನಿಸ್ತಾನ ಲಾಂಚ್ ಮಾಡುವ ಮೊದಲು ಅಲ್ಲಿನ ಮಾಧ್ಯಮದ ವಿಜ್ಞಾನದಲ್ಲಿ ಡಿಜಿಟಲ್ ತಂತ್ರಜ್ಞಾನದ ಪಾತ್ರ ಹೇಗಿತ್ತು?

2009ರಕ್ಕಿಂತ ಮೊದಲು ಅಶ್ರಫ್ ಗನಿ ತಮ್ಮ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸಲು ನಿರ್ಧರಿಸಿದ್ದಾಗ, ಸಾಮಾಜಿಕ ಮಾಧ್ಯಮದ ಆಯಾಮದ ಬಗ್ಗೆ ಪಾಶ್ಚಿಮಾತ್ಯರಿಂದ ಸಮಾಲೋಚಿಸಿ ಕಾರ್ಯರೂಪಕ್ಕೆ ತರುವುದಾಗಿ ಚುನಾವಣಾ ಪ್ರಚಾರದಲ್ಲಿ ಭರವಸೆ ನೀಡಿದ್ದರು. ನನಗಲ್ಲಿ ಕೊಂಚ ಮಟ್ಟಿನ ಪತ್ರಿಕೆಗಳ ನೆರವೂ ಸಿಕ್ಕಿತು. ಸಾಮಾಜಿಕ ಮಾಧ್ಯಮಗಳ ಸಹಾಯದಿಂದ ಆಫ್ಘಾನಿಸ್ತಾನ ಹೊರ ಜಗತ್ತಿನೊಂದಿಗೆ ಸಂಭಾಷಿಸಬೇಕಿತ್ತು. ಇದಕ್ಕಾಗಿ ದೊಡ್ಡದೊಂದು ಯೋಜನೆ ರೂಪಿಸಬೇಕಿತ್ತು.

image


ಆಫ್ಘನ್ ನಿವಾಸಿಗಳು ಅದರಲ್ಲೂ ಯುವಜನತೆ ಫೇಸ್​​ಬುಕ್​ನಲ್ಲಿ ಸಕ್ರಿಯರಾಗಿದ್ದರು. 2007 ಹಾಗೂ 2008ರಿಂದಲೇ ಆ ದೇಶದಲ್ಲಿ ಕೆಲವು ತಂತ್ರಜ್ಞಾನ ಸಂಬಂಧಿ ಯೋಜನೆಗಳು ಪ್ರಾರಂಭವಾಗತೊಡಗಿದ್ದವು.

ಆದರೆ ನಾವು ನೋಡುತ್ತಿರುವುದು ಆಫ್ಘಾನಿಸ್ತಾನದ ಡಿಜಿಟಲ್ ಆಯಾಮದ ಭಾಗವಾಗಿರಲಿಲ್ಲ. ಅಲ್ಲಿ ಸಾಕಷ್ಟು ಸಂಪೂರ್ಣ ಸಂವಹನ ಸಂಸ್ಥೆಗಳು ಬಿಲ್​ಬೋರ್ಡ್​, ಲೀಫ್​ಲೆಟ್​​ಗಳು, ಸೇವಾ ಘೋಷಣೆ ಜೊತೆಗೆ ಟಿವಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದವು. ಆದರೆ ಯಾರೊಬ್ಬರೂ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಗಮನ ಹರಿಸುತ್ತಿರಲಿಲ್ಲ. ಸಾಮಾಜಿಕ ಮಾಧ್ಯಮ ಆಫ್ಘಾನಿಸ್ತಾನದ ಮಹತ್ವವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕಿತ್ತು.

ಎರಡನೇ ಸಲ ನಾನು ಆಫ್ಘಾನಿಸ್ತಾನಕ್ಕೆ ಹೋಗಿದ್ದು ಕಾಬುಲ್​​ನ ಟೆಡ್ಎಕ್ಸ್ ಯೋಜನೆಗೆ ಸಹಕರಿಸಲು ಹೋಗಿದ್ದರು. ಅವರಿಗಾಗಿ ಅಲ್ಲಿ ನಾನು ಕಮ್ಯುನಿಕೇಶನ್ ಹಾಗೂ ಡಿಜಿಟಲ್ ಸ್ಟ್ರಾಟಜಿ ರೂಪಿಸಲು ಸಹಾಯ ಮಾಡಿದ್ದೆ. ನಾನು ಆಗ ಅಲ್ಲಿ ಎರಡು ತಿಂಗಳು ಕಾಲ ಕಳೆದಿದ್ದೆ, ಜೊತೆಗೆ ಸ್ಟಾರ್ಟ್ಅಪ್ ಒಂದಕ್ಕಾಗಿ ಡಾಕ್ಯುಮೆಂಟರಿ ಶೂಟ್ ಮಾಡಿದೆ. ಅಲ್ಲಿನ ಉದ್ಯಮಿಗಳೊಂದಿಗೆ ಮಾತಾಡುತ್ತಲೇ ದೇಶಾದ್ಯಂತ ಟ್ರಾವೆಲ್ ಮಾಡಿದೆ. ನನಗಾಗ ಅರ್ಥವಾಗಿದ್ದು ಉದ್ಯಮಿಗಳೊಂದಿಗೆ ಮಾತಾಡಲು ಇಷ್ಟಪಡುವ ನನಗೆ ಫಿಲಂ ಮೇಕಿಂಗ್ ಬಗ್ಗೆ ಅಸಮಧಾನವಿದೆ ಎಂದು. ನನಗೆ ಕ್ಯಾಮರಾದ ಜೊತೆ ಸುತ್ತಾಡುವುದು ಇಷ್ಟವಿರಲಿಲ್ಲ. ಆ ಎರಡು ತಿಂಗಳ ನಂತರ ನನ್ನ ಬದುಕಿನ ಬಗ್ಗೆ ನಾನು ಮತ್ತೆ ಯೋಚಿಸತೊಡಗಿದ್ದೆ. ನಾನು ಉದ್ಯಮಿಗಳ ಬಗೆಗೆ ಡಾಕ್ಯುಮೆಂಟರಿ ಮಾಡಬಹುದು ಹಾಗೂ ಇದರಿಂದ ಫಿಲ್ಮ್ ಮೇಕಿಂಗ್ ಕುರಿತಾದ ನನ್ನ ಅನಾಸಕ್ತಿಯಿಂದ ಹೊರಬರಬಹುದು ಎಂದು ಯೋಚಿಸಿದ್ದೆ. ನಾನು ಉದ್ಯಮಶೀಲತೆಯಿಂದ ಮಾತ್ರ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ಸಾಧ್ಯ ಎಂದು ಬಲವಾಗಿ ನಂಬಿದ್ದೆ. ನಾನು ಇಲ್ಲಿನ ಔದ್ಯಮಿಕ ವಾತಾವರಣದಲ್ಲೇ ಓರ್ವ ಉದ್ಯಮಿಯಾಗಬಲ್ಲ ಅವಕಾಶ ಇಲ್ಲಿತ್ತು.

ಮೊದಲ ಆಫ್ಘನ್ ಸಾಮಾಜಿಕ ಮಾಧ್ಯಮದ ಕಾರ್ಯಾಗಾರದಲ್ಲಿ ನೀವು ಇಂಪ್ಯಾಷನ್ ಹಾಗೂ ಅದರ ಉಪ ಉತ್ಪನ್ನಗಳಾದ ಪೈವಂದಗಾಹ್, ಸ್ಯಾಡ್​​ರೋಜ್​​ಗೆ ಹೂಡಿಕೆ ಮಾಡಿಸಿಕೊಂಡಿದ್ದು ಹೇಗೆ?

ಇಂಪ್ಯಾಷನ್ ಆಫ್ಘಾನಿಸ್ತಾನ ಪ್ರಾರಂಭವಾಗುವ ಮೊದಲು ಇದು ವೈಫಲ್ಯ ಹೊಂದುವುದು ಅನ್ನುವಂತೆ ಯೋಚಿಸಿದ್ದೆ. ಅಲ್ಲಿ ನಾವು ಸಾಕಷ್ಟು ರಿಸ್ಕ್​​ಗಳನ್ನು ತೆಗೆದುಕೊಂಡೆವು ಅನ್ನುವುದು ಅತಿ ಮುಖ್ಯ ಹಣಕಾಸಿನ ರಿಸ್ಕ್. ನನಗೊಂದು ಅಹಂಕಾರವಿತ್ತು, ಒಂದು ವೇಳೆ ಇದರಲ್ಲಿ ಹಣ ಕಳೆದುಕೊಂಡರೂ ನನಗೇನು ನಷ್ಟವಿಲ್ಲ ಅನ್ನುವ ಭಾವ ನನಗಿತ್ತು. ಹಾಗಾಗಿ ನಮ್ಮ ಪ್ರಯತ್ನವನ್ನು ನಾವು ಸಮಾಧಾನವಾಗಿಯೇ ನಿರ್ವಹಿಸಿದ್ದೆವು. ಆದರೆ ಆಫ್ಘಾನಿಸ್ತಾನದಲ್ಲಿ ನಮ್ಮ ಯೋಜನೆಗೆ ಅತ್ಯದ್ಭುತ ಸ್ವಾಗತ ಸಿಕ್ಕಿತು.

ಆದ್ರೆ ಈ ಅಹಂಕಾರವೇ ನನ್ನಲ್ಲಿ ಆಂತರಿಕ ಚಿಂತನೆ ಹಾಗೂ ಎಲ್ಲವನ್ನೂ ಹೇಗೆ ಸ್ವೀಕರಿಸಿ ನಿರ್ವಹಿಸಬಹುದು ಅನ್ನುವುದನ್ನು ಹೇಳಿಕೊಟ್ಟಿತು. ಹೀಗಾಗಿ ಮೊದಲ ಸೋಶಿಯಲ್ ಮೀಡಿಯಾ ಸಮ್ಮಿಟ್​​ನಲ್ಲಿ ಅಮೇರಿಕನ್ ಸ್ಟೇಟ್ ಡಿಪಾರ್ಟ್​ಮೆಂಟ್​​ನ ಹೂಡಿಕೆ ಮಾಡಿಸಲು ಒಪ್ಪಿಸಿದೆವು. ಈ ಅವಕಾಶ ಸಿಕ್ಕಿದ್ದು ನಮ್ಮಅದೃಷ್ಟವೇ ಆಗಿತ್ತು. ನಿಧಾನವಾಗಿ ಮಾರುಕಟ್ಟೆ ಉತ್ತೇಜನವಾಗುತ್ತಿದ್ದಂತೆ ಬೇರೆ ಬೇರೆ ಪ್ರಾಜೆಕ್ಟ್​ಗಳಿಗೂ ಹೂಡಿಕೆ ಹರಿದು ಬಂದಿತು.

ಇದಾದ ನಂತರ ಇಂಪ್ಯಾಷನ್ ಅಫ್ಘಾನಿಸ್ತಾನ ಯಾವ ರೀತಿಯ ಕಮರ್ಷಿಯಲ್ ಯೋಜನೆಗಳನ್ನು ಕೈಗೆತ್ತಿಕೊಂಡಿತು?

ಸ್ಟಾಂಡರ್ಡ್ ಡಿಜಿಟಲ್ ಏಜೆನ್ಸಿ ಕೆಲಸದಲ್ಲಿ ನಾವು ಉತ್ತಮ ಪಾಲು ಹೊಂದಿದ್ದೆವು. ಎ1 ಜಜೀರಾ ಚುನಾವಣೆ ಪ್ರಚಾರದಲ್ಲಿ ಒಟ್ಟು 34 ಕ್ಷೇತ್ರಗಳಲ್ಲಿ 32ರಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಜನರ ಪ್ರತಿಕ್ರಿಯೆಗಳನ್ನು ತಿಳಿದುಕೊಳ್ಳುವ ಬಗ್ಗೆ ನಾವು ಯೋಜನೆಯನ್ನು ವಿನ್ಯಾಸಗೊಳಿಸಿದ್ದೆವು. ಅದು ಆಫ್ಘಾನಿಸ್ತಾನಕ್ಕೆ ಸಾಮಾಜಿಕ ಮಾಧ್ಯಮದ ಶಕ್ತಿಯನ್ನು ತೋರಿಸಿಕೊಟ್ಟಿತು. ಫೇಸ್​​ಬುಕ್​ನಲ್ಲಿ ನಾವು ಯುರೋಪಿಯನ್ ಯೂನಿಯನ್​ಗಾಗಿ ಜಾಹಿರಾತೊಂದನ್ನು ಮಾಡಿಕೊಟ್ಟಿದ್ದೆವು. ಖಾಸಗಿ ರಂಗದ ಹಲವು ಸಂಸ್ಥೆಗಳಿಗೆ ನಾವು ಪ್ರಾಯೋಜಕತ್ವ ಒದಗಿಸಿಕೊಟ್ಟೆವು. ಇದೇ ಮಾದರಿಯನ್ನು ಅಲ್ಲಿ ಮುಂದುವರೆಸಬೇಕು ಅನ್ನುವ ಯೋಜನೆ ನಮಗಿತ್ತು.

2012ರಿಂದ ಇಲ್ಲಿಯವರೆಗೆ ಇಂಪ್ಯಾಷನ್ ಎಷ್ಟು ಲಾಭದಾಯಕವಾಗಿ ಬೆಳೆದಿದೆ? ಈ ಮಾದರಿ ಅಸ್ಥಿತ್ವ ಉಳಿಸಿಕೊಳ್ಳುವತ್ತ ಸಾಗುತ್ತಿದೆಯಾ?

ನಾವು ಸದಾ ಸಕಾರಾತ್ಮಕ ಹಣದ ಹರಿವನ್ನು ಹೊಂದಿದ್ದೆವು. ನಾವು ಯಾವತ್ತೂ ಸಮಯದ ಅಗತ್ಯತೆಗಾಗಲೀ ಅಥವಾ ಇನ್ಯಾವುದೋ ಅವಲಂಭನೆಗಾಗಿ ಸಾಲ ಪಡೆದುಕೊಳ್ಳಲಿಲ್ಲ. ಆಫ್ಘಾನಿಸ್ತಾದಂತ ರಾಷ್ಟ್ರದಲ್ಲಿ ಅಸ್ಥಿತ್ವ ಉಳಿಸಿಕೊಳ್ಳುವ ಪ್ರಶ್ನೆಯೇ ಅತ್ಯಂತ ಕಠಿಣ. ಕೆಲವು ಸಂಗತಿಗಳು ನಮ್ಮ ನಿಯಂತ್ರಣದಲ್ಲಿರುವಂತದ್ದಾದರೇ, ಇನ್ನೂ ಕೆಲವು ನಮ್ಮ ನಿಯಂತ್ರಣ ಮೀರಿದ್ದಾಗಿರುತ್ತಿತ್ತು.

ಆಫ್ಘಾನಿಸ್ತಾನದ ನೆಲದಲ್ಲಿ ಕೆಲವು ಸಂಸ್ಥೆಗಳು ಅತ್ಯಂತ ಕಡಿಮೆ ತಂತ್ರಜ್ಞಾನದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದವು. ಅವುಗಳಿಗೆ ಹೋಲಿಸಿದಲ್ಲಿ ಟೆಕ್ನಾಲಜಿಯನ್ನು ಸಮರ್ಪಕವಾಗಿ ಅರ್ಥ ಮಾಡಿಕೊಂಡಿದ್ದ ನಮ್ಮ ಸಂಸ್ಥೆ ಗಟ್ಟಿಯಾಗಿ ನೆಲೆಯೂರುತ್ತದೆ ಅನ್ನುವ ವಿಶ್ವಾಸ ನಮಗಿತ್ತು.

ಇಂಪ್ಯಾಷನ್ ಆಫ್ಘಾನಿಸ್ತಾನ ಯೋಜನೆಯಡಿಯಲ್ಲಿ ಯಾವ ಪ್ರಾಜೆಕ್ಟ್ ಅನ್ನು ಉತ್ತೇಜಿಸಲು ನೀವು ಯತ್ನಿಸಿದ್ದಿರಿ?

ನಾವು ಪೈವಂದ್​​ಗಹ್​​ ಅಲ್ಲಿನ ಮೊದಲ ಸಿಟಿಜನ್ ಪತ್ರಿಕೋದ್ಯಮದ ವೇದಿಕೆ. ಪ್ರಸ್ತುತ ನಮ್ಮ ಮಹತ್ತರ ಗಮನ ಇದನ್ನು ಬೆಳೆಸುವುದಷ್ಟೆ. ಕೆಲವು ತಿಂಗಳ ಹಿಂದಷ್ಟೆ ಅಲ್ಲಿನ 34 ಕ್ಷೇತ್ರಗಳಲ್ಲಿ ಸಿಟಿಜನ್ ಜರ್ನಲಿಸ್ಟ್ ಅನ್ನುವ ಮೈಲಿಗಲ್ಲು ಸಾಧಿಸಿದ್ದೇವೆ.

image


ಆಫ್ಘಾನಿಸ್ತಾನದ ಇಂಟರ್ನೆಟ್ ಬಳಕೆದಾರರಿಗೆ ಒಂದು ಅತ್ಯುತ್ತಮ ಔದ್ಯಮಿಕ ವಾತಾವರಣ ಕಲ್ಪಿಸಿಕೊಡುವತ್ತ ನಾವು ಯೋಜನೆ ನಡೆಸಿದ್ದವು. ಅಂತರ್ಜಾಲ ಬಳಸುವ ಜನರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. ಕೇವಲ ಸಾಮಾಜಿಕ ಮಾಧ್ಯಮದಲ್ಲಿರಬೇಕು ಅಥವಾ ಫೇಸ್​​ಬುಕ್​ನಲ್ಲಿರಬೇಕು ಅನ್ನುವುದಕ್ಕಿಂತ ಹೇಗೆ ಆಫ್ಘಾನಿಸ್ತಾನ ಜಗತ್ತಿನ ಜೊತೆ ಸಂಪರ್ಕ ಹೊಂದುತ್ತದೆ ಅನ್ನುವುದು ಮುಖ್ಯ. ಆಫ್ಘಾನಿಸ್ತಾನದ ಸಕಾರಾತ್ಮಕ ಸಾಮಾಜಿಕ ಬದಲಾವಣೆಗೆ ಮಾಧ್ಯಮಗಳನ್ನು ಬಳಸಿಕೊಂಡಿದ್ದು ಮಾತ್ರವಲ್ಲ, ಸಾಮಾಜಿಕ ಮಾಧ್ಯಮಗಳ ಮೂಲಕ ಮಹತ್ವದ ಅಭಿಯಾನಗಳನ್ನು ನಿರ್ವಹಿಸಿದ್ದು ಕಾರಣ ಹೌದು.

image


ಹೇಗೆ ನಾವು ಜನತೆಯ ಧ್ವನಿಯನ್ನು ಆಲಿಸಿ ಅದಕ್ಕೆ ಮೌಲ್ಯ ನೀಡುತ್ತೇವೆಯೋ ಅಷ್ಟು ಜನತೆಯೂ ನಿಮ್ಮ ಧ್ವನಿಗೆ ಬೆಂಬಲವಾಗಿ ನಿಲ್ಲುತ್ತದೆ. ಎಲ್ಲಾ ಆಫ್ಘನ್ನರು ಪೈವಂದ್​​ಗಹ್​​​ ಭಾಗವಾಗಬೇಕು ಅನ್ನುವುದು ಇಚ್ಛೆಯಾಗಿತ್ತು. ಪರಿಣಾಮವಾಗಿ ಎಲ್ಲ ಆಫ್ಘಾನಿಸ್ತಾನಿಯರೂ ಇಂಟರ್ನೆಟ್ ಹಾಗೂ ಕಂಟೆಂಟ್​ಗಳನ್ನು ನಿರ್ಮಿಸುವಲ್ಲಿಯೂ ಸಕ್ರಿಯರಾದರು. ನಾವು ಹತ್ತು ಹಲವು ವಿಭಿನ್ನ ಪ್ರಾಜೆಕ್ಟ್​​ಗಳನ್ನು ಮುಂದುವರೆಸಲು ಇದು ಸಹಕಾರಿಯಾಯಿತು.

ಅಂತರ್ಜಾಲ ಮೂಲಸೌಕರ್ಯ ಅತ್ಯಂತ ದುಸ್ತರವಾಗಿರುವ ದೇಶದಲ್ಲಿ ಅಂತರ್ಜಾಲ ಕೇಂದ್ರಿತ ಸಂಸ್ಥೆಯೊಂದನ್ನು ನಡೆಸುವುದು ಎಷ್ಟು ಕಷ್ಟ?

ನಾವು ಸ್ಥಿರ ಅಂತರ್ಜಾಲ ಸಂಪರ್ಕ ಹಾಗೂ ಮಾಹಿತಿ ಬ್ಯಾಕ್ ಅಪ್ ವ್ಯವಸ್ಥೆಗಾಗಿ ಹಣ ಹೂಡಿದ್ದೆವು. ಆಫ್ಘಾನಿಸ್ತಾನದ ಸಾಮಾಜಿಕ ಮಾಧ್ಯಮಗಳ ವಿಚಾರದಲ್ಲಿ ಅಂತರ್ಜಾಲದ ಗುಣಮಟ್ಟ ಮೀರಿ ನಾವು ಯೋಚಿಸಿದ್ದೆವು.

ಸಾಮಾಜಿಕ ಮೀಡಿಯಾಗಳ ಬಳಕೆಯಲ್ಲಿ ಮೊಬೈಲ್ ಫೋನ್​ಗಳೇ ಅತಿ ದೊಡ್ಡ ಮಾಧ್ಯಮ. ಬ್ಲೂ ಟೂತ್ ಸಂಪರ್ಕದಲ್ಲಿ ಮೀಡಿಯಾ ತಂತ್ರಜ್ಞಾನಗಳನ್ನು ಹಂಚಿಕೊಳ್ಳಬಹುದಾಗಿದೆ. ರಿಂಗ್​ಟೋನ್​ಗಳನ್ನಾಗಲಿ ಅಥವಾ ಇನ್ನಿತರೆ ಸೌಲಭ್ಯಗಳನ್ನು ರಸ್ತೆಯ ಬದಿಯಲ್ಲಿ ನಿಂತು ಕ್ಷಣಾರ್ಧದಲ್ಲಿ ಡೌನ್​ಲೋಡ್​​ ಮಾಡಿಕೊಳ್ಳಬಹುದು.

ಸೋಶಿಯಲ್ ಮೀಡಿಯಾ ಪ್ರಭಾವದಿಂದ ಮಾತ್ರ ಆಫ್ಘಾನಿಸ್ತಾನದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಿತು. ಬಹುತೇಕರು ಸೋಶಿಯಲ್ ಮೀಡಿಯಾ ಅಂದರೇ ಫೇಸ್​​ಬುಕ್​​ ಹಾಗೂ ಟ್ವಿಟರ್ ಇನ್ನಿತರೆ ಸೈಟ್​ಗಳು ಎಂದುಕೊಂಡಿದ್ದಾರೆ. ಆದರೆ ಅವುಗಳು ಸಾಮಾಜಿಕ ಮಾಧ್ಯಮಗಳ ವಿಧಗಳಷ್ಟೇ, ಇವುಗಳ ಹೊರತಾಗಿಯೂ ಸಾಮಾಜಿಕ ಮಾಧ್ಯಮದ ವಿಸ್ತಾರ ದೊಡ್ಡದಿದೆ.

ನೀವೊಬ್ಬರು ಅದ್ಭುತ ಮಹಿಳೆಯಾಗಿ ಆಫ್ಘಾನಿಸ್ತಾನದಲ್ಲಿ ಮಹಿಳೆಯರ ತಂಡ ಕಟ್ಟಿ ಮುನ್ನಡೆಸಿದ ಅನುಭವ ಹೇಗಿತ್ತು?

ಆಫ್ಘಾನಿಸ್ತಾನದ ಮಹಿಳೆಯರು ಯಾವಾಗಲೂ ದ್ವಿತೀಯ ದರ್ಜೆಯ ಮಹಿಳೆಯರಂತೆ ವರ್ತಿಸುತ್ತಿರಲಿಲ್ಲ ಆದರೆ ನಾನು ಮಾತ್ರ ಅವರ ಪಾಲಿಗೆ ಅಮೇರಿಕನ್ ಮಹಿಳೆಯಂತೆಯೇ ಇದ್ದೆ. ಅಂದರೆ ನಾನು ಎರಡೂ ಬದಿಯಲ್ಲೂ ಸಾಕಷ್ಟು ವಿಚಾರಗಳನ್ನು ಅರಿತಿದ್ದೆ. ಪುರುಷರನ್ನು ದೂರವಿಟ್ಟು ಆಫ್ಘನ್ ಮಹಿಳೆಯರು ನೀಡುತ್ತಿದ್ದ ಡಿನ್ನರ್​​ಗಳಲ್ಲಿ ನಾನು ಭಾಗವಹಿಸುತ್ತಿದ್ದೆ. ಜೊತೆಗೆ ಮಹಿಳೆಯರು ದೂರ ಉಳಿಯುತ್ತಿದ್ದ ಹೈ-ಕ್ಲಾಸ್ ದರ್ಜೆಯ ಪಾರ್ಟಿಗಳಲ್ಲಿಯೂ ನಾನು ಭಾಗಿಯಾಗುತ್ತಿದ್ದೆ.

ಕೆಲವು ಜನರು ನಾನು ಸಂಸ್ಥೆ ನಡೆಸುತ್ತಿರೋದನ್ನು ಸಹಿಸುತ್ತಿಲ್ಲ ಹಾಗಾಗಿ ನನ್ನ ಸಂಸ್ಥೆಯಲ್ಲಿ ಮಹಿಳೆಯರು ಕೆಲಸ ಮಾಡುವುದು ಅವರಿಗೆ ಇಷ್ಟವಿಲ್ಲ.

image


ಭಾರತೀಯ ಪತ್ರಕರ್ತೆ ಹಾಗೂ ಪೈವಂದ್​ಗಹ್​​ ಸಂಪಾದಕಿ ರುಚಿ ಕುಮಾರ್ ಹೀಗೆ ಬರೆಯುತ್ತಾರೆ, ನಾನೊಬ್ಬಳು ಭಾರತೀಯಳು ಅನ್ನುವ ಕಾರಣಕ್ಕೆ ಸಹಕಾರಿಯಲ್ಲದ ಸ್ಥಳದಲ್ಲಿಯೂ ಅನುಕೂಲವಲ್ಲದ ಸಮಯದಲ್ಲಿಯೂ ನನ್ನನ್ನು ಇಲ್ಲಿನ ಜನರು ಉತ್ಸಾಹದಿಂದ ಸ್ವಾಗತಿಸಿದ್ದರು. ಆಫ್ಘಾನಿಸ್ತಾನ ಭಾರತದ ಮಿತ್ರರಾಷ್ಟ್ರ. ಭಾರತ ಹಾಗೂ ಭಾರತೀಯರ ಬಗ್ಗೆ ಇಲ್ಲಿನ ಜನಗಳಲ್ಲಿ ವಿಶೇಷ ಒಲವಿದೆ. ಕಳೆದ 6 ತಿಂಗಳಲ್ಲಿ ನಾನು ಇಲ್ಲಿ ಅತ್ಯುತ್ತಮ ಕ್ಷಣಗಳನ್ನು ಕಳೆದಿದ್ದೇನೆ.

ಭಾರತೀಯ ಉದ್ಯೋಗಿಗಳು ಹಾಗೂ ಭಾರತೀಯರು ಆಫ್ಘಾನಿಸ್ತಾನದಲ್ಲಿ ಅತ್ಯುತ್ತಮ ಅನುಭವ ಗಳಿಸಿಕೊಳ್ಳಬಹುದು. ಆಫ್ಘನ್ ಜನತೆಗೆ ಬಾಲಿವುಡ್ ಚಿತ್ರಗಳ ಮೇಲೆ ವಿಶೇಷ ಮಮತೆಯಿದೆ. ಭಾರತೀಯರು ಅನ್ನುವುದು ತಿಳಿಯುತ್ತಿದ್ದಂತೆ ಇಲ್ಲಿನ ಜನರು ತಮಗರಿವಿಲ್ಲದಂತೆ ಬಾಲಿವುಡ್ ಹಾಡುಗಳ ಸಾಹಿತ್ಯ ಗುನಿಗಿಕೊಳ್ಳುತ್ತಾರೆ.

ಆಫ್ಘಾನಿಸ್ತಾನದ ಇಂಟರ್ನೆಟ್ ಅರಿತ ಯುವ ಸಮುದಾಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?

image


ಆಫ್ಘಾನಿಸ್ತಾನ ರಾಜಕೀಯ ಅಸ್ಥಿರತೆ ಹಾಗೂ ಸಂಘರ್ಷಗಳ ಮೂಲಕ ಜಗತ್ತಿನ ಪಾಲಿಗೆ ಕಾಣಿಸಿಕೊಂಡಿದೆ. ಆದರೆ ಆಫ್ಘಾನಿಸ್ತಾನದ ಯುವಕರು ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಅಲ್ಲಿ ಸಣ್ಣ ಪ್ರಮಾಣದ ಪ್ರಗತಿ ಕಾಣುತ್ತಿರುವ ತಂತ್ರಜ್ಞಾನ ಉದ್ಯಮಿಗಳಿದ್ದಾರೆ. ಅವರು ಆಶಾವಾದಿಗಳು ಹಾಗೂ ಉತ್ಸಾಹಿಗಳು. ಅವರು ಅಲ್ಲಿ ಸಾಕಷ್ಟು ತೊಂದರೆ ತಾಪತ್ರಯಗಳನ್ನು ಅನುಭವಿಸಿದ್ದರೂ ತಮ್ಮ ನಂಬಿಕೆ ಹಾಗೂ ವಿಶ್ವಾಸಗಳನ್ನು ಕಳೆದುಕೊಂಡಿಲ್ಲ.

ಯುದ್ದ ಸಂಘರ್ಷಿತ ವಲಯಗಳಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಹುಡುಕುವುದು ಅಷ್ಟು ಸುಲಭದ ಸಂಗತಿಯೇನಲ್ಲ. ನೀವು ಅಲ್ಲಿ ಪ್ರತಿಭಾನ್ವೇಷಣೆಗೆ ಹಾಕಿಕೊಂಡ ಯೋಜನೆಗಳೇನು?

ಮೊದಲು ಅಲ್ಲಿನ ಆಫ್ಘಾನ್ ಜನರಿಗೆ ಸಾಕಷ್ಟು ಉದ್ಯೋಗಗಳನ್ನು ನೀಡಿದೆವು. ಆದರೆ ಆ ಬಳಿಕ ತಿಳಿಯಿತು ನಮಗೆ ಅಲ್ಲಿ ಬೇಕಿರುವ ಕೌಶಲ್ಯಗಳ ಕೊರತೆಯಿದೆ ಎಂದು. ನಾವು ಸಣ್ಣ ಪ್ರಮಾಣದ ಹಾಗೂ ಇನ್ನೂ ಹೂಡಿಕೆಯಾಗದ ಸ್ಟಾರ್ಟ್ ಅಪ್ ಪ್ರಾರಂಭಿಸಿದ್ದೆವು. ಹೀಗಾಗಿ ಬಹಳ ಕಾಲ ನಾವು ಅಲ್ಲಿನ ಸ್ಥಳೀಯ ಸಂಪನ್ಮೂಲಗಳಿಗೆ ತರಬೇತಿ ನೀಡಬೇಕಾಯಿತು.

ಹಾಗಾಗಿ ನಾವು ಮೊದಮೊದಲು ಹೊರ ಜಗತ್ತಿನಿಂದ ಪ್ರತಿಭೆಗಳನ್ನು ಕರೆತರಬೇಕಿತ್ತು. ಭದ್ರತೆಯ ಕಾರಣದಿಂದ ಇದು ಕಷ್ಟವಿತ್ತು. ಇದರಿಂದ ಆ ಪ್ರಯೋಜನವೆಂದರೇ ನಾವು ಇದ್ದ ಸೌಕರ್ಯಗಳನ್ನೇ ಬಳಸಿಕೊಂಡು ಪ್ರತಿಭೆಗಳನ್ನು ಸೃಷ್ಟಿಸಿದೆವು.

ಇಂಪ್ಯಾಷನ್ ಮೂಲಾಭಿವೃದ್ಧಿ ಹಾಗೂ ವಿಸ್ತರಣೆಯನ್ನು ಬೇರೆ ರಾಷ್ಟ್ರಗಳು ಹೇಗೆ ಗಮನಿಸುತ್ತಿವೆ?

ನಾವೀಗ ಇರಾನ್​​ನತ್ತ ದೃಷ್ಟಿ ಇಟ್ಟಿದ್ದೇವೆ. ಓರ್ವ ಅಮೆರಿಕನ್ ಆಗಿ ನಾನು ಅಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ ಅಲ್ಲಿ ಏನಾಗಬಹುದು ಎಂದು ನಾನು ನಿರ್ಧರಿಸಬಲ್ಲೆ.

ತಮ್ಮ ಕೆಲಸದಿಂದ ಸಾಮಾಜಿಕ ಬದಲಾವಣೆಗೆ ಮುಂದಾಗುವ ಉದ್ಯಮಿಗಳಿಗೆ ನಿಮ್ಮ ಸಲಹೆ ಏನು?

ಸ್ಟಾರ್ಟ್ ಅಪ್ ಸಂಸ್ಥೆಗಳನ್ನು ಹುಟ್ಟುಹಾಕುವ ಯುವ ಉದ್ಯಮಿಗಳು ತಮ್ಮ ಸಂಸ್ಥೆಯ ಬಗ್ಗೆ ಒಂದು ಮಟ್ಟದ ವೈಭವೀಕರಣ ಬೆಳೆಸಿಕೊಳ್ಳಬೇಕು. ಜೊತೆಗೆ ತಮ್ಮ ಸ್ನೇಹಿತರೊಂದಿಗೆ ಕನಸುಗಳನ್ನು ಹಂಚಿಕೊಳ್ಳಬೇಕು. ಆದರೆ ನಿಮಗೆ ಯಶಸ್ಸು ಬೇಕೇ ಬೇಕು ಎಂದರೆ ಓರ್ವ ನಾಯಕನಾಗಿ ಸಂಸ್ಥೆಯ ಮೇಲೆ ಹಿಡಿತ ಹಾಗೂ ಗಮನ ಇರಬೇಕು. ಅತ್ಯಂತ ಕಠಿಣ ಆಯ್ಕೆಗಳಿಂದ ಇದು ಸಾಧ್ಯ. ಮೊದ ಮೊದಲು ನಾನು ನಾಯಕತ್ವದ ಅಭಿವೃದ್ಧಿಯತ್ತ ಅಷ್ಟೇನೂ ಗಮನಹರಿಸಿರಲಿಲ್ಲ. ನೀವೊಬ್ಬರು ಉದ್ಯಮಿಯಾದ ಕೂಡಲೇ ನೀವೊಬ್ಬರು ಪರಿಪೂರ್ಣ ನಾಯಕರೂ ಆಗಿರುತ್ತೀರಿ. ನಾಯಕತ್ವದ ಗುಣಗಳು ನಿಮ್ಮೊಳಗೆ ಅಭಿವೃದ್ಧಿ ಹೊಂದಿದಾಗ ಮಾತ್ರ ನಿಮ್ಮ ತಂಡವನ್ನು ಉತ್ತೇಜಿಸಲು ಸಾಧ್ಯ. ಪ್ರತಿಯೊಬ್ಬ ಉದ್ಯಮಿಯೂ ತಮ್ಮ ಪ್ರಾಧಾನ್ಯತೆಯ ಬಗ್ಗೆ ಅರಿತಿರಬೇಕು. ಯಾವ ವಿಚಾರದಲ್ಲಿ ನೀವು ಅತ್ಯುತ್ತಮರಾಗಿದ್ದೀರಿ?, ಯಾವ ವಿಷಯಗಳನ್ನು ನೀವು ಹೆಚ್ಚು ಇಷ್ಟಪಡುತ್ತೀರಿ?, ಓರ್ವ ಸಂಸ್ಥಾಪಕರಾಗಿ ಹಾಗೂ ನಾಯಕರಾಗಿ ನೀವು ಹೇಗೆ ನಿಮ್ಮ ತಂಡವನ್ನು ಮುನ್ನಡೆಸಬಲ್ಲಿರಿ? ಈ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ಕಂಡುಕೊಳ್ಳಬೇಕು. ನೀವು ನಿಮ್ಮ ಸಮಯವನ್ನು ಹೇಗೆ ವಿನಿಯೋಗಿಸಿಕೊಳ್ಳುತ್ತೀರಿ ಎನ್ನುವುದನ್ನು ಗಮನಿಸಿ. ಇವುಗಳೇ ಪ್ರತಿಯೊಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಜವಾಬ್ದಾರಿ ಹೊತ್ತ ನಾಯಕರ ಯಶಸ್ಸಿನ ಒಳಗುಟ್ಟು.


ಲೇಖಕರು: ರಾಖಿ ಚಕ್ರಬೊರ್ತಿ

ಅನುವಾದಕರು: ವಿಶ್ವಾಸ್​​