ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಯೋಗ್ಯಾಸ್ ಘಟಕ ನಿರ್ಮಾಣ ಮಾಡುವ ಕಂಪನಿ..!

ಟೀಮ್​ ವೈ.ಎಸ್​. ಕನ್ನಡ

ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಯೋಗ್ಯಾಸ್ ಘಟಕ ನಿರ್ಮಾಣ ಮಾಡುವ ಕಂಪನಿ..!

Sunday September 18, 2016,

2 min Read

ಎಂಜಿನಿಯರಿಂಗ್ ಶಿಕ್ಷಣ ಮುಗಿಸಿದ ಎಲ್ಲರಿಗೂ ಒಂದೇ ಕನಸು ಬಹುರಾಷ್ಟ್ರೀಯ ಅಥವಾ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡು ಲಕ್ಷಾಂತರ ರೂಪಾಯಿ ಗಳಿಸಬೇಕು, ಲೈಫಲ್ಲಿ ಸೆಟಲ್ ಆಗಬೇಕು ಎಂಬುದು. ಆದರೆ ಇಲ್ಲಿ ಇಬ್ಬರು ಯುವಕರು ತಮ್ಮ ಎಂಜಿನಯರಿಂಗ್ ಪದವಿ ಮುಗಿಸಿದ ನಂತರ ಎಂಎನ್​ಸಿಗಳಲ್ಲಿ ಕೆಲಸ ಹುಡುಕುವ ಬದಲಿಗೆ ಹಳ್ಳಿಗಳ ಉದ್ಧಾರಕ್ಕಾಗಿ ಅತ್ತ ದೌಡಾಯಿಸಿದ್ದಾರೆ.

image


ಆಂಧ್ರಪ್ರದೇಶದ ಕೌಶಿಕ್ ಮತ್ತು ಮಧ್ಯಪ್ರದೇಶದ ಪಿಯೂಶ್ ಸೊಹಾನಿ ಎಂಬ ಯುವಕರು ಈ ಹಳ್ಳಿಗಳನ್ನು ಉದ್ಧಾರ ಮಾಡುತ್ತೇನೆ ಎಂದು ಬಂದವರು. ಕೌಶಿಕ್ ಮೂಲತಃ ಬ್ಯಾಂಕ್ ಉದ್ಯೋಗಿ ಮಗನಾಗಿದ್ದವರು. ಅವರು ಎಂದಿಗೂ ಹಳ್ಳಿಗಳನ್ನು ಕಂಡಿಲ್ಲ. ಆದರೂ ಅವರಿಗೆ ಕೃಷಿಯ ಬಗ್ಗೆ ರೈತರ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದರು. ಇದೇ ಆಸಕ್ತಿ ಕೌಶಿಕ್ ಅವರನ್ನು ಕೃಷಿ ಎಂಜಿನಿಯರಿಂಗ್​​ನಲ್ಲಿ ಪದವಿಯನ್ನು ಪಡೆಯುವಂತೆ ಮಾಡಿತು. ಕೃಷಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಹೆಚ್ಚಿನ ವ್ಯಾಸಂಗ ಮಾಡಲು ಕೌಶಿಕ್ ದೆಹಲಿಯ ಐಐಟಿಯನ್ನು ಸೇರಿಕೊಂಡರು. ದೆಹಲಿಯ ಐಐಟಿಯಲಿಲ ಕೌಶಿಕ್​ಗೆ ಪಿಯೂಶ್ ಸೊಹಾನಿಯ ಸ್ನೇಹ ದೊರೆಯಿತು.

image


ಕೌಶಿಕ್​ರಂತೆ ಪಿಯೂಶ್ ಸೋಹಾನಿಗೂ ಕೂಡಾ ಹಳ್ಳಿಗಳ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ಇದು ಇವರಿಬ್ಬರ ಗೆಳೆತವನ್ನು ಮತ್ತಷ್ಟು ಹೆಚ್ಚಿಸಿತು. ಈ ಹಂತದಲ್ಲೇ ಇವರಿಬ್ಬರೂ ಸೇರಿ ಗ್ರಾಮೀಣ ಭಾಗದಲ್ಲಿ ಲಭ್ಯವಿರುವ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿಕರಿಗೆ ನೆರವಾಗುವ ಆಲೋಚನೆ ಮಾಡಿದರು. ಆಗ ಬಯೋಗ್ಯಾಸ್ ಬಗ್ಗೆ ಒಂದು ಯೋಜನೆ ಯಾಕೆ ರೂಪಿಸಬಾರದು ಎಂಬ ಆಲೋಚನೆ ಈ ಯುವಕರಿಗೆ ಹೊಳೆದು ಅದನ್ನು ಜಾರಿಗೆ ತಂದರು.

"ಎಲ್ಲರಂತೆ ನಮಗೂ ಎಂಎನ್​ಸಿಗಳಲ್ಲಿ ಸುಲಭವಾಗಿ ಕೆಲಸ ಸಿಗುತ್ತಿತ್ತು. ಆದ್ರೆ ನಾವು ಎಲ್ಲರ ಹಾಗೇ ಇದ್ರೆ ಅದಕ್ಕೆ ಹೆಚ್ಚು ಮಹತ್ವ ಇರುವುದಿಲ್ಲ. ಹೀಗಾಗಿ ಏನಾದ್ರೂ ವಿಭಿನ್ನವಾಗಿ ಮಾಡಬೇಕು ಅನ್ನೋ ಆಸೆ ಇತ್ತು. ಜನಕ್ಕೆ ಉಪಯೋಗವಾಗುವ ಜೊತೆಗೆ ಪರಿಸರಕ್ಕೂ ಉಪಕಾರಿಯಾಗುವಂತಹ ಯೋಚನೆ ಮಾಡಿದ್ದೆವು."
- ಕೌಶಿಕ್​, ಸಸ್ಟೇನೆಬಲ್ ಅರ್ಥ್ ಎನರ್ಜಿ ಸಲ್ಯೂಶನ್, ಮಾಲೀಕರು

ದೆಹಲಿಯ ಐಐಟಿಯಲಿ ತಮ್ಮ ಶಿಕ್ಷಣ ಮುಗಿಸಿದ ಈ ಯುವಕರು, ಶಿಕ್ಷಣ ಮುಗಿದ ಕೂಡಲೇ ಹಳ್ಳಿಗಳತ್ತ ಮುಖ ಮಾಡಿದರು. ತಮ್ಮ ಬಳಿಯಿದ್ದ ಮೂರು ಲಕ್ಷ ರೂಪಾಯಿಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ಬಯೋಗ್ಯಾಸ್ ಘಟಕ ನಿರ್ಮಾಣ ಮಾಡಿಕೊಡುವ ‘ಸಸ್ಟೇನೆಬಲ್ ಅರ್ಥ್ ಎನರ್ಜಿ ಸಲ್ಯೂಶನ್’ ಎಂಬ ಕಂಪೆನಿಯನ್ನು ಆರಂಭಿಸಿಬಿಟ್ಟರು. ಮೊದಲಿನಿಂದ ಈ ಬಯೋಗ್ಯಾಸ್ ಯೋಜನೆ ಇದ್ದರೂ ಈ ಇಬ್ಬರು ಯುವಕರ ಸಸ್ಟೇನೆಬಲ್ ಅರ್ಥ್ ಎನರ್ಜಿ ಸಲ್ಯೂಶನ್ ಕಂಪನಿಯಿಂದ ಕಡಿಮೆ ದರದಲ್ಲಿ ಉತ್ತಮ ತಂತ್ರಜ್ಞಾನಗಳನ್ನು ಬಳಸಿ ಈ ಬಯೋ ಗ್ಯಾಸ್ ಘಟಕ ನಿರ್ಮಾಣ ಮಾಡುತ್ತಿದ್ದರು. ಇದು ಇವರಿಗಿರುವ ರೈತರ ಮೇಲಿನ ಕಾಳಜಿಯಾಗಿತ್ತು.ರೈತರ ಮೇಲಿನ ಕಾಳಜಿ, ಇಚ್ಛಾಶಕ್ತಿ ಮತ್ತು ಕಠಿಣ ಪರಿಶ್ರಮ ಇವರ ಸಸ್ಟೇನೆಬಲ್ ಅರ್ಥ್ ಎನರ್ಜಿ ಸಲ್ಯೂಶನ್ ಯೋಜನೆಯನ್ನು ಅಭೂತಪೂರ್ವ ಯಶಸ್ಸಿನೆಡೆಗೆ ತೆಗೆದುಕೊಂಡು ಹೋಯಿತು. ಇದರ ಪರಿಣಾಮ ಇವರ ಬಯೋಗ್ಯಾಸ್ ಘಟಕ ನಿರ್ಮಾಣ ಕಂಪನಿ ಕರ್ನಾಟಕ, ಆಂಧ್ರ, ತೆಲಂಗಾಣ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸಾಕಷ್ಟು ಕಡೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಮತ್ತು ನೂರಾರು ಘಟಕಗಳನ್ನು ನಿರ್ಮಾಣ ಮಾಡಿ ರೈತರ ಮತ್ತು ಜನರ ವಿಶ್ವಾಸ ಗಳಿಸಿದೆ.

image


ಎಷ್ಟು ಖರ್ಚು..?

ನಿಮ್ಮ ಮನೆಯಲ್ಲಿ ಎರಡು ಹಸು ಅಥವಾ ದನ ಕರುಗಳಿದ್ದರೆ ಸಾಕು ಸಸ್ಟೇನಬಲ್ ಅರ್ಥ್ ಎನರ್ಜಿ ಸಲ್ಯೂಶನ್ ವತಿಯಿಂದ ನಿಮಗೆ ಕೇವಲ 12 ಸಾವಿರ ರೂಪಾಯಿ ವೆಚ್ಚದಲ್ಲಿ ಬಯೋ ಗ್ಯಾಸ್ ಘಟಕ ನಿರ್ಮಾಣ ಮಾಡಿಕೊಡುತ್ತಾರೆ ಈ ಯುವಕರು. ನಾಲ್ಕೈದು ರಾಜ್ಯಗಳಲ್ಲಿ ನೂರಾರು ಬಯೋ ಗ್ಯಾಸ್ ಘಟಕ ನಿರ್ಮಾಣ ಮಾಡಿರುವ ಈ ಅರ್ಥ್ ಎನರ್ಜಿ ಕಂಪನಿ ಮುಂದಿನ ವರ್ಷದಲ್ಲಿ ಐದು ಸಾವಿರ ಮನೆಗಳಿಗೆ ಈ ಸೌಲಭ್ಯ ಕಲ್ಪಿಸುವ ಯೋಜನೆ ಹೊಂದಿದೆ.ಈ ಬಯೋಗ್ಯಾಸ್​ನ್ನು ಬಳಸುವುದರಿಂದ ಬರಿದಾಗುವ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅವಲಂಬನೆ ಜನರಲ್ಲಿ ಕಡಿಮೆಯಾಗುತ್ತದೆ ಎಂಬುದು ಈ ಯುವಕರ ಉದ್ದೇಶ. ಇದರ ಜೊತೆಗೆ ರೈತರಿಗೆ ಆರ್ಥಿಕ ಹೊರೆಯು ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಸಸ್ಟೇನಬಲ್ ಅರ್ಥ್ ಎನರ್ಜಿ ಸಲ್ಯೂಶನ್​ನಿಂದ ನಿರ್ಮಾಣವಾಗುವ ಬಯೋಗ್ಯಾಸ್ ಘಟಕದಿಂದ ಪರಿಸರಕ್ಕೆ ಸಾಕಷ್ಟು ಅನುಕೂಲವಿದೆ. ನಿಮಗೂ ಈ ಬಯೋ ಗ್ಯಾಸ್ ಘಟಕ ಬೇಕಿದ್ದರೆ http:www.sustainearth.in ಈ ವೆಬ್​ಸೈಟ್​ಗೆ ಲಾಗ್ ಇನ್ ಆಗಿ ಕಂಪನಿಯವರನ್ನು ಸಂಪರ್ಕಿಸಬಹುದು. 

ಇದನ್ನು ಓದಿ:

1. ಬೆಂಗಳೂರಿಗೆ ಅಂದದ ಟಚ್​- ಗಪ್​ಚುಪ್​ ಆಗಿ ಮಾಡ್ತಿದ್ದಾರೆ ವರ್ಕ್​..!

2. ಪೂಜಾ ಐಟಂಗಳ ಬಗ್ಗೆ ಟೆನ್ಷನ್​ ಬಿಟ್ಟುಬಿಡಿ- ರೆಡಿಪೂಜಾ.ಕಾಂನಲ್ಲಿ ಆರ್ಡರ್​ ಮಾಡಿ..!

3. ಟೇಸ್ಟಿ "ಟೀ" ಮ್ಯಾಜಿಕ್​- ಒಂದೇ ಕಪ್​ ಚಹಾದಲ್ಲಿ ಸಿಗುತ್ತೆ ಉತ್ಸಾಹದ ಕಿಕ್​..!