ಆನ್‍ಲೈನ್‍ನಲ್ಲೂ ಸಿಗುತ್ತೆ ಪೂಜೆಗೆ ಬೇಕಾಗುವ ವಸ್ತುಗಳು

ಅಗಸ್ತ್ಯ

0

ಹಬ್ಬ ಬಂತೆಂದರೆ ಸಾಕು ಬೆಳಬೆಳಗ್ಗೆ ಮಾರುಕಟ್ಟೆಗೆ ಹೋಗಿ ಜನಜಂಗುಳಿಯಲ್ಲಿ ಪೂಜೆಗೆ ಬೇಕಾಗುವ ಹೂವು, ಹಣ್ಣು ಮತ್ತಿತರ ವಸ್ತುಗಳನ್ನು ತರುವುದೇ ದೊಡ್ಡ ಸಾಹಸ ಮಾಡಿದಂತೆ. ಅದೇ ಹಬ್ಬಕ್ಕೆ ಬೇಕಾಗುವ ವಸ್ತುಗಳು ಯಾವುದೇ ಕಷ್ಟ ಪಡದೆ ನಿಮ್ಮ ಮನೆಗೇ ಬಂದರೆ. ಎಷ್ಟು ಚೆನ್ನಾಗಿರುತ್ತಲ್ವಾ. ಅಂತಹ ಕಾಲವೂ ಇದೀಗ ಬಂದಿದೆ. ಅದು ನೀವು ಆನ್‍ಲೈನ್ ಮೂಲಕ ಪೂಜೆಗೆ ಬೇಕಾಗುವ ಎಲ್ಲಾ ವಸ್ತುಗಳನ್ನು ಮನೆಗೆ ತರಿಸಿಕೊಳ್ಳಬಹುದು.

ಹೌದು, ಬಟ್ಟೆ, ಪಾದರಕ್ಷೆ, ಎಲೆಕ್ಟ್ರಾನಿಕ್ ವಸ್ತುಗಳು ಆನ್‍ಲೈನ್ ಮಾರಾಟವಾಗುವಂತೆ ಹೂ, ಹಣ್ಣು, ದೇವರ ಫೋಟೊ ಎಲ್ಲವೂ ಆನ್‍ಲೈನ್‍ನಲ್ಲಿ ಮಾರಾಟ ಮಾಡಲಾಗುತ್ತಿದೆ. ಗಿಫ್ಟ್ ಮಾರಾಟ ವೆಬ್‍ಸೈಟ್ ಸೆಂಡ್ ಮೈ ಗಿಫ್ಟ್ ಸಂಸ್ಥೆ ಇದೀಗ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಅದು ಈವರೆಗೆ ಯಾವ ಆನ್‍ಲೈನ್ ಮಾರಾಟ ಸಂಸ್ಥೆಯೂ ಮಾಡದ ಸಾಹಸ. ಅದೇನೆಂದರೆ ದಿನನಿತ್ಯದ ಅಥವಾ ಸಮಾರಂಭಗಳಿಗೆ ಬೇಕಾಗುವ ಪೂಜಾ ವಸ್ತುಗಳನ್ನು ಮಾರಾಟ ಮಾಡಲು www.dailypooja.sendmygift.com ಎಂಬ ವೆಬ್‍ಸೈಟ್ ಆರಂಭಿಸಿದೆ.

ಎಲ್ಲವೂ ಇಲ್ಲಿ ಸಿಗುತ್ತದೆ:

ಪೂಜಾ ಸಾಮಗ್ರಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಟ್ಟಿಗೆ ಸೆಂಡ್ ಮೈ ಗಿಫ್ಟ್ ಮಾಡಿರುವ ಪ್ರಯತ್ನ ಇದೇ ಮೊದಲು. www.dailypooja.sendmygift.com ಹೆಸರಿನಲ್ಲಿ ಆರಂಭವಾಗಿರುವ ಈ ವೆಬ್‍ಸೈಟ್‍ನಲ್ಲಿ ಪ್ರತಿಯೊಂದು ಸಿಗುತ್ತದೆ. ಬಿಡಿ, ಕಟ್ಟಿದ ಹೂವು, ನವಗ್ರಹ, ಗಣೇಶ ಹೋಮದ ಸೆಟ್, ಲಕ್ಷ್ಮೀ, ಗೌರಿ, ಸತ್ಯನಾರಾಯಣ, ನವಗ್ರಹ ಪೂಜೆ ಸೇರಿದಂತೆ 13 ಬಗೆಯ ಪೂಜೆಗಳ ಸೆಟ್, ಹೋಮ ಕುಂಡ, ಹೋಮಕ್ಕೆ ಬೇಕಾಗುವ ಮರ, ತೆಂಗಿನಕಾಯಿ, ಮಾವಿನ ಎಲೆ ಸೇರಿದಂತೆ ಪೂಜೆ ಮತ್ತು ಹೋಮಕ್ಕೆ ಬೇಕಾಗುವ ಪ್ರತಿ ವಸ್ತುವು ಇಲ್ಲಿ ಲಭ್ಯ. ಅಲ್ಲದೆ, ಅವುಗಳ ಬೆಲೆಯೂ ಕೈಗೆಟುವಂತಿವೆ. ಅದರಲ್ಲೂ ಹೂವುಗಳನ್ನು ಖರೀದಿಸಿದರೆ ಎಷ್ಟು ದಿನಕ್ಕೆ ನಿಮಗೆ ಬೇಕು ಎಂಬುದನ್ನು ನೀವು ಸೆಲೆಕ್ಟ್ ಮಾಡಬಹುದು.

ಇಷ್ಟೇ ಅಲ್ಲದೆ ಧಾರ್ಮಿಕ ವಸ್ತುಗಳು ಇಲ್ಲಿ ಸಿಗುತ್ತದೆ. ರುದ್ರಾಕ್ಷಿ, ಹರಳುಗಳು, ದೇವರ ಮೂರ್ತಿ, ಮಾರುತಿ ಯಂತ್ರ, ಶ್ರೀ ರಾಹು ಯಂತ್ರ ಸೇರಿದಂತೆ 21 ವಿಧದ ಯಂತ್ರಗಳು ಇಲ್ಲಿ ದೊರೆಯುತ್ತವೆ. ಆದರೆ, ಇವೆಲ್ಲವನ್ನು ಖರೀದಿಸಬೇಕೆಂದರೆ ನೀವು www.dailypooja.sendmygift.comಗೆ ಭೇಟಿ ನೀಡಿ ನಿಮಗೆ ಯಾವ ವಸ್ತು ಬೇಕು ಎಂಬುದನ್ನು ಸೆಲೆಕ್ಟ್ ಮಾಡಿ ನಂತರ ನಿಮ್ಮ ಮನೆ ವಿಳಾಸ, ಮೊಬೈಲ್ ಸಂಖ್ಯೆ ನೀಡಿದರೆ ನಿಮಗೆ ಯಾವಾಗ ಬೇಕೋ ಅಂದು ನಿಮ್ಮ ಮನೆಗೆ ಪೂಜಾ ವಸ್ತುಗಳು ಬರಲಿದೆ. ಪೂಜೆಗಷ್ಟೇ ಅಲ್ಲದೆ ಗೃಹಪ್ರವೇಶ, ಮದುವೆ, ದೇವಸ್ಥಾನದಲ್ಲಿನ ಧಾರ್ಮಿಕ ಕಾರ್ಯಕ್ರಮಗಳಿಗೂ ಇಲ್ಲಿ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲಾಗುತ್ತದೆ.

ಅರ್ಚಕರೂ ಸಿಗುತ್ತಾರೆ:

ಪೂಜಾ ವಸ್ತುಗಳಷ್ಟೇ ಅಲ್ಲದೆ ಇಲ್ಲಿ ಪೂಜೆ, ಹೋಮಗಳನ್ನು ಮಾಡಿಸಲು ಅರ್ಚಕರು ದೊರೆಯುತ್ತಾರೆ. ನೀವು ಯಾವ ಪೂಜೆ ಅಥವಾ ಹೋಮ ಮಾಡಿಸುತ್ತೆವೆಂದು ನೀವು ತಿಳಿಸಿದರೆ ಅದಕ್ಕೆ ತಕ್ಕ ಹಾಗೆ ಅರ್ಚಕರು ನಿಮಗೆ ಸಿಗುತ್ತಾರೆ. ಅಲ್ಲದೆ, ನಿಮಗೆ ಯಾವ ಭಾಷೆಯ ಅರ್ಚಕರು ಬೇಕೆಂಬುದನ್ನು ತಿಳಿಸಿದರೂ ಅಂತಹವರೇ ನಿಮಗೆ ದೊರಕಿಸಿಕೊಡುವ ಕೆಲಸ ಡೈಲಿಪೂಜಾ ಕಡೆಯವರು ಮಾಡುತ್ತಾರೆ.

ಸೆಂಡ್‍ಮೈ ಗಿಫ್ಟ್:

ಪೂಜಾ ವಸ್ತುಗಳನ್ನು ಆನ್‍ಲೈನ್ ಮಾರಾಟಕ್ಕೆ ತಂದಿರುವ ಸೆಂಡ್ ಮೈ ಗಿಫ್ಟ್ ಈಗಾಗಲೆ ಆನ್‍ಲೈನ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದೆ. ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಲವ್ ಪ್ರಪೋಸ್ ಹೀಗೆ ಪ್ರತಿಯೊಂದಕ್ಕೂ ನಿಮಗೆ ಇಷ್ಟವಾದವರಿಗೆ ಆನ್‍ಲೈನ್‍ನಲ್ಲೇ ಬುಕ್ ಮಾಡಿ ಗಿಫ್ಟ್ ಕಳುಹಿಸಬಹುದಾಗಿದೆ.

Related Stories