ಪಿಡ್ಜಾ ಐಸ್‍ಕ್ರಿಮ್..24 ಕ್ಯಾರೆಟ್ ಗೋಲ್ಡ್ ಐಸ್‍ಕ್ರೀಮ್!!!

ವಿಸ್ಮಯ

0

ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ಊಟೋಪಚಾರದ ನಂತರ ಐಸ್‍ಕ್ರೀಮ್ ಕೊಡೋ ಪದ್ಧತಿ ರೂಢಿಯಲ್ಲಿದೆ. ಇತ್ತೀಚೆಗೆ ಯಾವುದೇ ಸಭೆ ಸಮಾರಂಭಕ್ಕೆ ಹೋದ್ರೂ ಐಸ್‍ಕ್ರೀಮ್‍ಗೆ ಮೊದಲ ಆದ್ಯತೆ. ಅದೇ ಒಂದು ಫ್ಯಾಷನ್ ಆಗಿ ಹೋಗಿದೆ. ಊಟದ ನಂತರ ಜೀರ್ಣಕ್ರಿಯೆಗಾಗಿ ಬಾಳೆಹಣ್ಣು ಎಷ್ಟು ಮುಖ್ಯನೋ, ಅಷ್ಟೇ ಐಸ್‍ಕ್ರೀಮ್‍ಗೂ ಪ್ರಮುಖ ಸ್ಥಾನವಿದೆ. ಆಯಾ ವೆಚ್ಚಕ್ಕೆ ತಕ್ಕಂತೆ ಐಸ್‍ಕ್ರೀಮ್ ನೀಡೋದು ಕಾಮನ್ ಆಗಿದೆ. ಕೆಲವರು ಕಪ್ ಐಸ್‍ಕ್ರೀಮ್ ಕೊಟ್ಟರೆ, ಇನ್ನು ಕೆಲವರು ಬೇರೆ ಫ್ಲೇವರ್‍ನ ಐಸ್‍ಕ್ರೀಮ್ ಕೊಡೋದು ಇದೆ.

ಆದರೆ ಈಗ ಇವೆಲ್ಲವನ್ನೂ ಬಿಟ್ಟು ಜನ ಸಭೆ ಸಮಾರಂಭಕ್ಕಾಗಿ ಪಿಡ್ಜಾ ಐಸ್‍ಕ್ರೀಮ್, 24 ಕ್ಯಾರೆಟ್ ಗೋಲ್ಡ್ ಐಸ್‍ಕ್ರೀಮ್, ಸ್ಪೆಶಲ್ ಆರೆಂಜ್ ಐಸ್‍ಕ್ರೀಮ್‍ಗಳಿಗೆ ಬೇಡಿಕೆ ಹೆಚ್ಚಿದೆ. ಅರೇ ಇದೆನಾಪ್ಪ ಪಿಡ್ಜಾ ಐಸ್‍ಕ್ರೀಮ್​..! ಅಂತ ಆಶ್ಚರ್ಯ ಆಗಬಹುದು. ಆದರೆ ಈಗ ಹೆಚ್ಚಾಗಿ ಈ ಐಸ್‍ಕ್ರೀಮ್‍ಗಳಿಗೆ ಬೇಡಿಕೆ ಹೆಚ್ಚಿದೆ. ಈ ರೀತಿಯ ಐಸ್‍ಕ್ರೀಮ್‍ಗಳು ಪ್ರತಿಷ್ಠೆಯ ವಿಷಯವಾಗಿದೆ. ಜನರನ್ನು ಹೆಚ್ಚು ಆಕರ್ಷಣೆ ಮಾಡುತ್ತಿದೆ. ಇಷ್ಟೆಲ್ಲಾ ಪೀಠಿಕೆ ಹಾಕಿದ್ದಮೇಲೆ ಎಲ್ಲಿ ಮಾಡತ್ತಾರೆ ಈ ರೀತಿಯ ಐಸ್‍ಕ್ರೀಮ್‍ಗಳು ಅಂತ ಪ್ರಶ್ನೆ ಮೂಡಬಹುದು. ಇಂತಹ ವಿಶೇಷ ಐಸ್‍ಕ್ರೀಮ್‍ಗಳನ್ನು ರೆಡಿ ಮಾಡೋದು ನಮ್ಮದೇ ಬೆಂಗಳೂರಿನಲ್ಲಿ. ಸುಬ್ರಮಣ್ಯ ಎಂಬುವವರು ವಿಶೇಷ ಐಸ್‍ಕ್ರೀಮ್‍ಗಳ ಸಾರಥಿ.

ಇದನ್ನು ಓದಿ

ಹೊಸ ದಾಖಲೆಯತ್ತ ಸ್ಟಾರ್ ಶೆಫ್ ಗೇಮ್ : ಇದು ಅಡುಗೆ ಭಟ್ಟರ ಆಟ..!

ಮೊದ ಮೊದಲು ಮನೆಯ ಮಕ್ಕಳಿಗಾಗಿ ಐಸ್‍ಕ್ರೀಮ್ ಮಾಡುತ್ತಿದ್ದ ಸುಬ್ರಮಣ್ಯ, ಇಂದು ದೊಡ್ಡ ಐಸ್ ಫ್ಯಾಕ್ಟರಿಯನ್ನೇ ಸ್ಥಾಪಿಸಿದ್ದಾರೆ. ಅರ್ಜುನ್ ಐಸ್‍ಕ್ರೀಮ್ ಎಂಬ ಹೆಸರಿನಲ್ಲಿ ಐಸ್‍ಕ್ರೀಮ್ ಫ್ಯಾಕ್ಟರಿ ಸ್ಥಾಪಿಸಿದ್ದಾರೆ. ಆರಂಭದಲ್ಲಿ ಇವರು ಎಲ್ಲರಂತೆ ಕೋನ್ ಐಸ್‍ಕ್ರೀಮ್, ಕುಲ್ಫಿ ಐಸ್‍ಕ್ರೀಮ್, ಕಪ್ ಐಸ್‍ಕ್ರೀಮ್‍ಗಳನ್ನು ರೆಡಿ ಮಾಡಿ ಮಾರಾಟ ಮಾಡುತ್ತಿದ್ರು. ಆನಂತರ ಎಲ್ಲರಂತೆ ಮಾಡುವುದಕ್ಕಿಂತ ಸ್ವಲ್ಪ ಭಿನ್ನವಾಗಿ ಏನಾನ್ನಾದ್ರೂ ಮಾಡಬೇಕು ಎಂಬ ಇಚ್ಛೆಯಿಂದ ಜನರು ಹೆಚ್ಚು ಇಷ್ಟ ಪಡುವ ತಿಂಡಿಗಳ ಮುಖಾಂತರವೇ ಐಸ್‍ಕ್ರೀಮ್ ಮಾಡಲು ಶುರು ಮಾಡಿದ್ರು.

ಪಿಡ್ಜಾ , 24 ಕ್ಯಾರೇಜ್ ಗೋಲ್ಡ್, ಸ್ಯಾಡ್‍ವಿಚ್​, ಬ್ಲಾಕ್ ಮ್ಯಾಜಿಕ್, ಸ್ಪೆಶಲ್ ಆರೆಂಜ್ ಹೀಗೆ ವಿವಿಧ ರೀತಿಯ ಐಸ್‍ಕ್ರೀಮ್ ತಯಾರಿಸಿದ್ರು. ಜನರು ಕೂಡ ಈ ಹೆಸರು ಕೇಳಿ ಐಸ್‍ಕ್ರೀಮ್ ತಿನ್ನಲು ಬರುತ್ತಾರೆ ಅಂತಾರೆ ಸುಬ್ರಮಣಿ. ಮದುವೆ ಸೇರಿದಂತೆ ಇತರೆ ಸಭೆ ಸಮಾರಂಭಗಳಿಗೆ ಈ ಐಸ್‍ಕ್ರೀಮ್‍ಗಳಿಗೆ ಬೇಡಿಕೆ ಹೆಚ್ಚು ಅಂತಾರೆ.

ಕೇವಲ ಬೆಂಗಳೂರು ಮಾತ್ರವಲ್ಲದೇ ರಾಮನಗರ ತುಮಕೂರು, ಮೈಸೂರುಗಳಿಗೆ ಸಪ್ಲೇಯ್ ಕೂಡ ಮಾಡತ್ತಾರೆ. ಈ ಹೊಸ ರೀತಿಯ ಉದ್ಯಮದಿಂದ ನೂರಾರು ಜನಕ್ಕೆ ಕೆಲಸ ನೀಡಿದ್ದಾರೆ. ಅಷ್ಟೇಅಲ್ಲದೇ ಸಮಾರಂಭಕ್ಕೆ ಈ ಐಸ್‍ಕ್ರೀಮ್‍ಗಳನ್ನು ನೀಡುವಾಗ ಮಕ್ಕಳಿಗೆ ಹೆಚ್ಚು ಖುಷಿ ಯಾಗುತ್ತೆ ಅಂತಾರೆ.

ಐಸ್‍ಕ್ರೀಮ್ ಪ್ರಿಯರು ಏನ್ ಹೇಳ್ತಾರೆ??

ಮೊದಮೊದಲು ಈ ಐಸ್‍ಕ್ರೀಮ್‍ಗಳ ಹೆಸರು ಕೇಳಿದಾಗ ತಿನ್ನಬೇಕು ಅಂತ ಆಸೆ ಆಗುತ್ತಿತ್ತು. ನೋಡೋಕೊ ಕಲರ್‍ಫುಲ್ ಆಗಿ ಇರುತ್ತೆ. ಅಷ್ಟೇ ಆಕರ್ಷಸಿತ್ತು. ಮೊದಲು ನಾನು ಕುಲ್ಫಿ ಐಸ್‍ಕ್ರೀಮ್ ಹೆಚ್ಚು ತಿನ್ನುತ್ತಿದ್ದೆ, ಈಗ ಈ ಸ್ಪೆಶಲ್ ಐಸ್‍ಕ್ರೀಮ್‍ಗೆ ಫುಲ್ ಫೀದಾ ಆಗಿದ್ದೀನಿ. ನಾನು ನನ್ ಫ್ರೆಂಡ್ಸ್ ಆಗಾಗ ಟೆಸ್ಟ್ ಮಾಡತ್ತಿವಿ ಅಂತಾರೆ ಕಾವ್ಯ. ಪಾರ್ಟಿ ಮಾಡುವಾಗಲೂ ಈ ಐಸ್‍ಕ್ರೀಮ್‍ಗಳಿಗೆ ಮೊದಲ ಆದ್ಯತೆ ಅಂತಾರೆ ಕಾವ್ಯ.

ಮಕ್ಕಳ ಹುಟ್ಟುಹಬ್ಬಕ್ಕೆ ಆರೆಂಜ್ ಐಸ್‍ಕ್ರೀಮ್, ಪಿಜ್ಹಾ, ಸ್ಯಾಂಡ್‍ ​ ಐಸ್‍ಕ್ರೀಮ್‍ಗಳನ್ನು ತರುಸ್ತೀವಿ. ಇದು ಮಕ್ಕಳಿಗೂ ಹೆಚ್ಚು ಖುಷಿ ನೀಡುತ್ತೆ. ನೋಡೊಕ್ಕೆ ಆಕರ್ಷಕವಾಗಿರೋ ಕಾರಣ ಎಲ್ಲರಿಗೂ ಬಾಯಲ್ಲಿ ನೀರೂರಿಸುವಂತೆ ಮಾಡುತ್ತೆ ಅಂತಾರೆ ಗೃಹಿಣಿ ರಮ್ಯ.

ಸುಬ್ರಮಣಿ ಅವರು ತಮ್ಮ ಫ್ಯಾಕ್ಟರಿಯಲ್ಲಿ ಮಾಡೋ ಈ ಐಸ್‍ಕ್ರೀಮ್‍ಗಳಿಗೆ ಸಾಕಷ್ಟು ಲಾಭವನ್ನು ಗಳಿಸಿದ್ದಾರೆ. ತಮ್ಮದೇ ಹೊಸ ಐಡಿಯಾಗಳಿಂದ ಐಸ್‍ಕ್ರೀಮ್ ತಯಾರಿಸಿ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ಇವರ ಈ ಸಾಧನೆಗೆ ಪತ್ನಿ ಕೂಡ ಸಾಥ್ ನೀಡತ್ತಾರೆ. ಸುಮಾರು 20 ವರ್ಷಗಳಿಂದ ಇದೇ ಉದ್ಯಮದಲ್ಲಿ ಇರೋ ಇವರು ಬೇರೆ ಬೇರೆ ಐಸ್‍ಕ್ರೀಮ್‍ಗಳನ್ನು ತಯಾರಿಸುವ ಚಿಂತನೆಯಲ್ಲಿ ಇದ್ದಾರೆ. ಒಟ್ಟನ್ನಲ್ಲಿ ಸಣ್ಣದಾಗಿ ಆರಂಭಿಸಿ ಇಂದು ಎಲ್ಲ ಮದುವೆ ಸಮಾರಂಭಗಳಲ್ಲಿ ಇವರದ್ದೇ ಐಸ್‍ಕ್ರೀಮ್‍ಗಳಿಗೆ ಪ್ರಮುಖ ಸ್ಥಾನವನ್ನು ಗಿಟ್ಟಿಸಿದ್ದಾರೆ.

ಇದನ್ನು ಓದಿ

ಮೈಸೂರು ಸ್ಯಾಂಡಲ್ ಸೋಪ್​​ನ ಪರಿಮಳಕ್ಕೆಶತಮಾನದ ಇತಿಹಾಸ

ಪೂಜೆ, ಹೋಮ, ಹವನಕ್ಕೊಂದು ಆನ್​​ಲೈನ್ ಸೈಟ್ "ಮಹೂರ್ತಮಜಾ"

ಆನ್​​ಲೈನ್​​ ಟಿ-ಶರ್ಟ್ ಉದ್ಯಮದಲ್ಲಿ ನಷ್ಟ- ಆನ್​ಲೈನ್​​ ಜ್ಯೋತಿಷಿಗಳ ವೆಬ್ ಪೋರ್ಟಲ್​ನಲ್ಲಿ ಲಾಭ..!