ಸ್ಟಾರ್ಟ್ ಅಪ್ ಗಳ ಗುರಿ ಸಾಧನೆಗೆ ಸೂಕ್ತ ತಂತ್ರಜ್ಞರ ಪೂರೈಕೆ : ಕ್ಲೈಂಟ್ ಗಳ ನೆರವಿಗೆ ಸ್ಟಾಕ್ ರೂಂ..

ಟೀಮ್​ ವೈ.ಎಸ್​. ಕನ್ನಡ

0

ಇದು ಸ್ಟಾರ್ಟ್ ಅಪ್ ಗಳ ಯುಗ.. ಭಾರತ ಭವಿಷ್ಯದಲ್ಲಿ ಸ್ಟಾರ್ಟ್ ಅಪ್ ಗಳ ಗೂಡಾಗಲಿದೆ ಅನ್ನೋದು ಸದ್ಯದ ಮಾತು. ಯಾಕಂದ್ರೆ ಬೆಳೆಯುತ್ತಿರುವ ಮಾರ್ಕೆಟ್ ನಲ್ಲಿ ಸ್ಟಾರ್ಟ್ ಅಪ್ ಗಳ ಪಾತ್ರ ಬಲು ದೊಡ್ಡದು.. ಇನ್ನು ಹೊಸದಾಗಿ ಕಾಲಿಡುತ್ತಿರುವ ಉದ್ಯಮಸ್ಥರು ಹಾಗೂ ಹೊಸತನದ ಶುರುವಿನ ಕಡೆ ಗುರಿ ನೆಟ್ಟಿರುವುದು ಸ್ಟಾರ್ಟ್ ಅಪ್ ಗಳ ಮೇಲೆಯೇ. ಇನ್ನು ದೊಡ್ಡ ಮಟ್ಟದ ಹೂಡಿಕೆಗಳು ಸ್ಟಾರ್ಟ್ ಅಪ್ ಗಳತ್ತಲೇ ಚಿತ್ತ ನೆಟ್ಟಿವೆ. ಭವಿಷ್ಯದಲ್ಲಿ ಇದ್ರ ಮಹತ್ವ ಅರಿತಿರುವ ಭಾರತ ಸರ್ಕಾರ ಈಗಾಲೇ ಸ್ಟಾರ್ಟ್ ಅಪ್ ಗಳಿಗೆ ಉತ್ತೇಜನ ನೀಡಲು ಹೊಸ ಯೋಜನೆಗಳನ್ನ ಹಾಕಿಕೊಂಡಿದೆ. ಆದ್ರೆ ಈ ಸ್ಟಾರ್ಟ್ ಅಪ್ ಗಳ ನಿರ್ವಹಣೆ ಅಷ್ಟೊಂದು ಸುಲಭ ಸಾಧ್ಯವಲ್ಲ. ಯಾಕಂದ್ರೆ ಇದನ್ನ ಮುನ್ನೆಡೆಸಲು ಹಾಗೂ ನಿರ್ವಹಿಸಲು ಪಕ್ಕಾ ತಾಂತ್ರಿಕತೆಯುಳ್ಳ ಕೈಗಳು ಬೇಕು. ಇನ್ನು ಸ್ಟಾರ್ಟ್ ಅಪ್ ಗಳ ಈ ಅಗತ್ಯತೆಗಳನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕೆಲವು ಮಧ್ಯವರ್ತಿಗಳು, ಕಂಪನಿಗಳು, ಆನ್ ಲೈನ್ ಪೋರ್ಟಲ್ ಗಳು ಅಗತ್ಯವಿರುವ ಪ್ರತಿಭೆಗಳ ಹುಡುಕಾಟದಲ್ಲಿ ನೆರವಾಗುತ್ತವೆ. ಆದ್ರೆ ಅದು ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಅದೆಷ್ಟೋ ಬಾರಿ ಹೀಗೆ ಸಿಕ್ಕ ಟೆಕ್ ಟೀಂಗಳು ವೈಫಲ್ಯ ಹೊಂದಿದ ಉದಾಹರಣೆಗಳೇ ಹೆಚ್ಚು. ಆ ಟೆಕ್ನಿಗಳೆಲ್ಲಾ ಮಂದಿಗಳೆಲ್ಲಾ ಒಂದೋ ಸರಿಯಾಗಿ ಹೊಂದಾಣಿಕೆಯಾಗುವುದಿಲ್ಲ. ಇಲ್ಲ ಸೇರಿಕೊಂಡ ಸ್ಟಾರ್ಟ್ ಅಪ್ ಗಳಿಗೆ ಉಪಯೋಗವಾಗುವ ಬದಲು ಹೊರೆಯಾಗುತ್ತಾರೆ.

ಇಂತಹ ಎಲ್ಲಾ ಪರಿಸ್ಥಿತಿಗಳನ್ನ ಮನಗಂಡ ಒಂದು ತಂಡ ಸದ್ದಿಲ್ಲದೆ ವರ್ಕೌಟ್ ಮಾಡೋದಿಕ್ಕೆ ಶುರುಮಾಡಿತು. ನರೇನ್ ಕೃಷ್ಣ, ಹರಿ ಕೃಷ್ಣನ್ ಮತ್ತು ಆಶೀಶ್ ಕುಮಾರ್ ಸಹೂ ಅವರನ್ನೊಳಗೊಂಡ ತಂಡ ಸ್ಟಾರ್ಟ್ ಅಪ್ ಗಳಲ್ಲಿರುವ ಸಮಸ್ಯೆ ಹಾಗೂ ಅದರಲ್ಲಿರುವ ಲಾಭದ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ನಡೆಸಿತ್ತು. “ ವಿವಿಧ ದೃಷ್ಠಿಕೋನಗಳೊಂದಿಗೆ ಶುರುವಾಗುವ ಸ್ಟಾರ್ಟ್ ಅಪ್ ಗಳಿಗೆ ಸವಾಲುಗಳು ಸಾಕಷ್ಟಿರುತ್ತವೆ. ಅವುಗಳಿಗೆ ಸೂಕ್ತ ತಾಂತ್ರಿಕ ಸಲಹೆ ಹಾಗೂ ಬೆಂಬಲಗಳು ಬೇಕಾಗಿರುತ್ತವೆ. ” ಅಂತಾರೆ 22 ವರ್ಷದ ನರೇನ್. ಈ ಎಲ್ಲಾ ಅಂಶಗಳನ್ನ ಗುರುತಿಸಿದ್ದ ಇವರ ತಂಡ ಹುಟ್ಟುಹಾಕಿರೋದು ಕನಸಿನ ಸ್ಟಾಕ್ ರೂಮ್.

ಇದನ್ನು ಓದಿ: ನಿಮ್ಮ ಮುದ್ದು ಮುದ್ದಾದ ಸಾಕು ಪ್ರಾಣಿಗೆ ಇಲ್ಲಿ ಸಿಗುತ್ತೆ ನ್ಯೂ ಗೆಟಪ್

ಸೂಕ್ತ ಪ್ರತಿಭೆಗಳಿಗಾಗಿ ಹುಡುಕಾಟ..

ನರೇನ್ ಬಿಐಟಿಎಸ್ ಪಿಲಾನಿ ಅಲ್ಯುಮನ್ಸ್ ನಲ್ಲಿ ಉದ್ಯೋಗಿಯಾಗಿದ್ರೆ ಆಶೀಶ್ ಭುವನೇಶ್ವರದ ಐಐಟಿ ಕಂಪನಿಯಲ್ಲಿ ಸಿಟಿಒ ಆಗಿದ್ರು. ಅದ್ರಲ್ಲೂ ನರೇನ್ ಹಾಗೂ ಆಶೀಶ್ ಪರಸ್ಪರ ಸ್ನೇಹಿತರು ಅನ್ನೋದು ವಿಶೇಷ. ಇನ್ನು ಹರಿಕೃಷ್ಣ ಅಮೆಜಾನ್ ನಲ್ಲಿ ರಿಕ್ರೂಟ್ ಮೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ರು. ಹಲವು ಸುತ್ತಿನ ಮಾತುಕತೆ ಹಾಗೂ ಚರ್ಚೆಗಳ ನಂತ್ರ ಯಾವುದೋ ಕಾರಣಕ್ಕಾಗಿ ಕೆಲವು ರೆಸ್ಯೂಮ್ ಗಳನ್ನ ಬೇರ್ಪಡಿಸಿದ್ರು. ಅಲ್ಲಿ ಕೆಲವು ವಿಶೇಷ ಅಂಶಗಳನ್ನ ಇವ್ರು ಗಮನಿಸಿದ್ರು. ಇದಾಗ ಬಳಿಕವೇ ಡೆವಲಪರ್ಸ್ ಗಾಗಿ ಪೊರ್ಟ್ ಪೊಲಿಯೋ ಡೆವಲಪ್ ಮಾಡಿದ್ರು. “ ನಾವು 48 ವರ್ಷಗಳ ಕಾಲ ನಾನ್ ಸ್ಟಾಪ್ ಹ್ಯಾಕಥಾನ್ ಮಾಡಲು ಹಾಗೂ ಸೂಕ್ತ ಪ್ರತಿಭೆಗಳನ್ನ ಹುಡುಕಾಡಲು ನಿರ್ಧರಿಸಿದೆವು. ಅಲ್ಲಿ ನಮಗೆ ಸಿಕ್ಕ ಅದ್ಭುತಗಳು ಅಚ್ಚರಿ ಮೂಡಿಸಿದ್ದವು ” ಅಂತ ನರೇನ್ ವಿವರಿಸುತ್ತಾರೆ.

ಎಲ್ಲಾ ಕಂಪನಿಗಳೂ ಒಂದೇ ರೀತಿ ಕೆಲಸಗಾರರನ್ನ ಹಯರ್ ಮಾಡುವುದಿಲ್ಲ. ಆಯಾ ಕಂಪನಿಗಳು ತಮ್ಮದೇ ಆದ ಪ್ರಾಮುಖ್ಯತೆ ಹಾಗೂ ಅಗತ್ಯತೆಗಳನ್ನ ಹೊಂದಿರುತ್ತವೆ. ಎಲ್ಲಾ ಕಂಪನಿಗಳೂ ವೈಯುಕ್ತಿಕ ಲೆವೆಲ್ ನಲ್ಲಿ ಟೆಕ್ನಿಕಲ್ ಟೀಂಗಳನ್ನ ಡೆವಲಪ್ ಮಾಡಲು ಮುಂದಾಗುತ್ತವೆ.

ಸರಳೀಕರಣಗೊಳಿಸುವ ವಿಧಾನ..

ಕಂಪನಿಗಳಿಗೆ ಇರುವ ದೊಡ್ಡ ಸಮಸ್ಯೆ ರಿಕ್ರೂಟ್ ಮೆಂಟ್.. ಇಲ್ಲಿ ತಮಗೆ ಬಂದಿರುವ ಅಪ್ಲಿಕೇಶನ್ ಗಳನ್ನ ಫೈನಲ್ ಮಾಡುವುದರಲ್ಲೇ ಸಮಯ ಕಳೆದುಹೋಗುತ್ತದೆ. ಇಂತಹ ಪ್ರೋಸೆಸ್ ಗಳನ್ನ ಕಡಿತಗೊಳಿಸಿ ಕಂಪನಿಗಳಿಗೆ ನೆರವು ನೀಡಲು ಬಂದಿರೋದು ಸ್ಟಾಕ್ ರೂಮ್.ಐಒ. ವಿವಿಧ ಕಂಪನಿಗಳೊಂದಿಗೆ ಕೈಜೋಡಿಸುರುವ ಸ್ಟಾಕ್ ರೂಂ ಅಗತ್ಯವಿರುವ ತಾಂತ್ರಿಕ ವರ್ಗವನ್ನ ಒದಗಿಸುವುದರಲ್ಲಿ ನಿರತವಾಗಿದೆ. ಇನ್ನು ಸ್ಟಾಕ್ ರೂಮ್ ಹಾದಿ ಕೂಡ ಅಷ್ಟು ಸುಲಭವಲ್ಲ. ಒಮ್ಮೆ ಕ್ಲೈಂಟ್ ಗಳಿಂದ ಬೇಡಿಕೆ ಬಂದ ಕೂಡಲೇ ಅದಕ್ಕೆ ಬೇಕಾದ ಹ್ಯಾಂಡ್ಸ್ ಗಳನ್ನ ಹುಡುಕುವ ಪ್ರಕ್ರಿಯೆ ಶುರುವಾಗುತ್ತದೆ. ಅಲ್ಲದೆ ಆನ್ ಲೈನ್ ನಲ್ಲೂ ಇಂತಹ ಸಮಸೆಗಳೂ ಇನ್ನಿಲ್ಲದಂತೆ ಕಾಡುತ್ತವೆಯ ಇವುಗಳನ್ನ ಸೂಕ್ಷ್ಮವಾಗಿ ಗುರುತಿಸಿಕೊಂಡು ಕ್ಲೈಂಟ್ ಗಳಿಗೆ ನೆರವಾಗೋದು ಸ್ಟಾಕ್ ರೂಂಗಿರುವ ದೊಡ್ಡ ಚಾಲೆಂಜ್..

ಕಂಪನಿಗೆ ಸಿಗುವ ಲಾಭ..

ಕ್ಲೈಂಟ್ಸ್ ಗಳಿಗೆ ಒದಗಿಸಬೇಕಾದ ಪ್ರತಿಭೆಗಳು ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಹೀಗಾಗಿ ಬಂದಿರುವ ಅರ್ಜಿಗಳಲ್ಲಿ ಸ್ಕಿಲ್ಸ್ ಹಾಗೂ ಇತರೆ ಬಲವನ್ನ ಅಭ್ಯಾಸ ಮಾಡುತ್ತಾರೆ. ಹ್ಯಾಕಾಥಾನ್ ನಲ್ಲಿ ಗುಣಮಟ್ಟವನ್ನ ಅಳೆಯುತ್ತಾರೆ. ಆಯ್ದ ಅಭ್ಯರ್ಥಿಗಳನ್ನ ಆಯ್ದ ಕಂಪನಿಗಳಿಗೆ ಬೇಡಿಕೆಗೆ ತಕ್ಕಂತೆ ಒದಗಿಸುತ್ತಾರೆ. ಈಗಾಗಲೇ 10 ಸಾವಿರ ಡೆವಲಪ್ ಗಳು ರಿಜಿಸ್ಟರ್ ಆಗಿದ್ದು ನಗರದಲ್ಲಿ 10 ಕ್ಕೂ ಹೆಚ್ಚು ನಿರ್ದಿಷ್ಟ ಕ್ಲೈಂಟ್ ಗಳನ್ನ ಕಾಯ್ದಿರಿಸಿಕೊಳ್ಳಲಾಗಿದೆ. ಇದರಿಂದ ಭರ್ಜರಿ ಲಾಭ ಪಡೆಯುತ್ತಿರುವ ಸ್ಟಾಕ್ ರೂಂ ಸ್ಟಾರ್ಟ್ ಅಪ್ ಗಳ ಪಾಲಿಗೆ ವರದಾನವಾಗಿದೆ.

ಲೇಖಕರು – ಸಿಂಧು ಕಶ್ಯಪ್

ಅನುವಾದ – ಸ್ವಾತಿ, ಉಜಿರೆ 

ಇದನ್ನು ಓದಿ

1. ಹೋಟೆಲ್ ಚಿಕ್ಕದಾದ್ರೂ.. ಹೆಸರು ದೊಡ್ಡದು...!

2. ಜಿಮ್ ರವಿ= ಬಾಡಿ ಬ್ಯುಲ್ಡಿಂಗ್​ಗೆ ಸ್ಫೂರ್ತಿ..!

3. ಉತ್ತಮ ಸೇವೆಗೆ ಮುಂದಾದ ಭಾರತೀಯ ರೈಲ್ವೇ

Related Stories