ವಿಶೇಷ ಮಕ್ಕಳಿಗೆ ದಾರಿದೀಪ- ಅನುಭವದಿಂದ ಹುಟ್ಟಿದ ಆ್ಯಡ್ ಲೈಫ್ ಕೇರಿಂಗ್ ಮೈಂಡ್

ಟೀಮ್​​ ವೈ.ಎಸ್​​.

ವಿಶೇಷ ಮಕ್ಕಳಿಗೆ ದಾರಿದೀಪ- ಅನುಭವದಿಂದ ಹುಟ್ಟಿದ ಆ್ಯಡ್ ಲೈಫ್ ಕೇರಿಂಗ್ ಮೈಂಡ್

Thursday October 08, 2015,

3 min Read

ವಿಶೇಷ ಮಗುವಿನ ತಾಯಿಯಾಗಿ ಮಿನು ಬುಡಿಯಾರಿಗೆ ಈ ಮಕ್ಕಳ ಸಮಸ್ಯೆಗಳ ಅರಿವು ಚೆನ್ನಾಗಿಯೇ ಇದೆ. ತಮ್ಮ ವೈಯಕ್ತಿಕ ಅನುಭವಗಳಿಂದ ಪ್ರೇರೇಪಿತರಾದ ಮಿನು ಬುಡಿಯಾ ವಿಶೇಷ ಮಕ್ಕಳ ಮಾನಸಿಕ ಬೆಳವಣಿಗೆಗಾಗಿ ಆ್ಯಡ್ ಲೈಫ್ ಎಂಬ ಆರ್ಟ್ ಸೆಂಟರ್‌ ಅನ್ನು ಪ್ರಾರಂಭಿಸಿದರು. ಕೋಲ್ಕತ್ತಾದಲ್ಲಿ ಇದು ಮೊದಲ ಪ್ರಯತ್ನ. ಸುಮಾರು 30ಕ್ಕೂ ಹೆಚ್ಚು ವೃತ್ತಿಪರರು ವೈದ್ಯಕೀಯ ಮತ್ತು ವೈದ್ಯಕೀಯವಲ್ಲದ ನೆರವನ್ನು ನೀಡುತ್ತಿದ್ದಾರೆ.

image


ಮಿನು ಬುಡಿಯಾ ತಮ್ಮ ಮಗು ಪ್ರಾಚೀಯ ಭವಿಷ್ಯದ ಕುರಿತು ತೀವ್ರವಾಗಿ ಚಿಂತಿಸಿದ್ದರು. ವಿಶೇಷ ಮಗುವಾಗಿರುವ ಪ್ರಾಚೀ ದೊಡ್ಡವಳಾದ ನಂತರ ಹೇಗೆ ಇರುತ್ತಾಳೆ ಎಂಬುದು ಮಿನುರವರನ್ನು ಯೋಚನೆಗೀಡು ಮಾಡಿತ್ತು. ಟಿವಿ ನೋಡುವುದಕ್ಕೆ ಮತ್ತು ಸಂಜೆಯ ವಾಯುವಿಹಾರಕ್ಕೆ ಮಾತ್ರ ಮೀಸಲಾಗುತ್ತಾಳೆಯೇ? ಎಂದು ತುಂಬಾ ಚಿಂತಿಸುತ್ತಿದ್ದರು. ಆದರೆ ಮಗಳು ತೀರಾ ಜಡವಾಗಿರುವುದು ಮಿನುರವರಿಗೆ ಇಷ್ಟವಿರಲಿಲ್ಲ. ಇದು ತಮ್ಮ ಮಗಳೊಬ್ಬಳ ಸಮಸ್ಯೆ ಅಲ್ಲ, ಇನ್ನೂ ಅನೇಕ ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆಂಬುದರ ಅರಿವು ಮಿನುರವರಿಗಿತ್ತು.

ಈ ಎಲ್ಲಾ ಯೋಚನೆಗಳಿಂದ ಇಂತಹ ವಿಶೇಷ ಮಕ್ಕಳಿಗೂ ಸಮಾಜದಲ್ಲಿ ಗುರುತಿಸಿಕೊಳ್ಳಲು ಒಂದು ವೇದಿಕೆಯ ಅವಶ್ಯಕತೆ ಇದೆ ಎಂದು ಮನಗಂಡು ಇಂತಹ ಮಕ್ಕಳ ಸಬಲೀಕರಣಕ್ಕೆ ಮುಂದಾದರು. ಈ ಮಕ್ಕಳು ಸ್ವತಂತ್ರವಾಗಿರಲು ತರಬೇತಿ ಪಡೆದು ಒಂದು ಉದ್ಯೋಗ ಗಿಟ್ಟಿಸಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗಬೇಕು ಎಂಬುದು ಅವರ ಕನಸು. ಈ ಮಕ್ಕಳಲ್ಲಿ ಹೆಚ್ಚು ಚುರುಕಾದವರು ಕಾರ್ಪೋರೇಟ್ ವಲಯದಲ್ಲೂ ಉದ್ಯೋಗ ಗಿಟ್ಟಿಸಬಹುದು ಎಂಬುದು ಮಿನುರವರ ಅಭಿಮತ. ಇಂತಹ ಮಕ್ಕಳನ್ನು ಒಪ್ಪಿಕೊಳ್ಳುವುದು ಒಂದು ಸಾಮಾಜಿಕ ಜವಾಬ್ದಾರಿಯೂ ಹೌದು ಎನ್ನುವ ಮಿನು ಇಂತಹ ಮಕ್ಕಳಿಗೆ ಬೇರೆ ದೇಶಗಳಲ್ಲಿರುವಂತೆ ಮೀಸಲಾತಿಯ ಅವಶ್ಯಕತೆಯೂ ಇದೆ ಎನ್ನುತ್ತಾರೆ.

ಮಿನುರವರಿಗೆ ಮಾನವನ ಮನಸ್ಥಿತಿ ಮತ್ತು ವೈದ್ಯಕೀಯದಲ್ಲಿ ಮೊದಲಿನಿಂದಲೂ ಅದಮ್ಯ ಆಸಕ್ತಿ. ಗ್ರಹಿಕಾ ವರ್ತನೆಯ ಚಿಕಿತ್ಸೆಯ ಕುರಿತು ಪರಿಣಿತಿಯನ್ನೂ ಪಡೆದಿದ್ದಾರೆ. ವಿದ್ಯಾರ್ಥಿ ಕೌನ್ಸಿಲರ್ ಆಗಿ ಶಾಲಾಕಾಲೇಜುಗಳಲ್ಲಿ ಕೆಲಸಮ ಮಾಡಿದ ಅನುಭವವೂ ಇವರಿಗಿದೆ.

ತಮ್ಮ ಮಗಳು ಪ್ರಾಚೀಯನ್ನು ಚಿಕಿತ್ಸೆ ಮತ್ತು ಕೌನ್ಸಿಲಿಂಗ್ಗಾಗಿ ಕರೆದೊಯ್ಯುತ್ತಿದ್ದ ವೇಳೆ ವಿಭಿನ್ನ ಸೇವೆಗಳನ್ನು ಪಡೆಯಲು ಹಲವು ಕ್ಲಿನಿಕ್​​ಗಳನ್ನು ಸುತ್ತಬೇಕಾದ ಪರಿಸ್ಥಿತಿಯನ್ನು ಗಮನಿಸಿದ್ದರು. ಅಲ್ಲದೇ ಇದರಿಂದ ತುಂಬಾ ಮಾನಸಿಕ ಒತ್ತಡವನ್ನೂ ಅನುಭವಿಸಬೇಕಾಗಿತ್ತು. ಹೀಗಾಗಿ ಒಂದೇ ಕಡೆ ಎಲ್ಲಾ ಸೇವೆಗಳು ದೊರಕುವ ಕ್ಲಿನಿಕ್ ಒಂದನ್ನು ಸ್ಥಾಪಿಸುವ ನಿರ್ಧಾರಕ್ಕೆ ಬಂದರು ಮಿನು ಬುಡಿಯಾ.

ಕಳೆದ 2 ವರ್ಷಗಳಲ್ಲಿ ಆ್ಯಡ್ ಲೈಫ್ ಕೇರಿಂಗ್ ಮೈಂಡ್ ಸಂಸ್ಥೆ, 4 ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ವೈದ್ಯಕೀಯ, ತರಬೇತಿ ಮತ್ತು ಅಭಿವೃದ್ಧಿ, ಅಕಾಡೆಮಿಯಾ ಮತ್ತು ಮೈಂಡ್ ಸ್ಪೀಕ್ ವಿಚಾರಗಳಲ್ಲಿ ಸೇವಾ ಸೌಲಭ್ಯ ಇಲ್ಲಿ ಲಭ್ಯವಿದೆ. ವೈದ್ಯಕೀಯ ವಿಭಾಗದಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಮನೋವೈದ್ಯರು, ಮನೋ ವಿಜ್ಞಾನಿಗಳು, ವಿಶೇಷ ಶಿಕ್ಷಕರು, ಮಾನಸಿಕ ಚಿಕಿತ್ಸಕರು, ಮಾತಿನ ಚಿಕಿತ್ಸೆಗಳು, ಧ್ವನಿ ಮತ್ತು ಕೇಳುವಿಕೆಗೆ ಸಂಬಂಧಿಸಿದ ಸೇವೆಗಳು ಲಭ್ಯವಿದೆ. ತರಬೇತಿ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಪೋಷಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಸೇರಿದಂತೆ ಹಲವು ಸಮಾಜದ ಹಲವು ಸ್ತರದ ಜನರಿಗೆ ವಿಶೇಷ ಮಕ್ಕಳ ಕುರಿತು ಕಾರ್ಯಾಗಾರವನ್ನು ನಡೆಸಲಾಗುತ್ತದೆ. ಅಕಾಡೆಮಿಯಾ ವಿಭಾಗದಲ್ಲಿ ಆಟದ ಚಿಕಿತ್ಸೆ, ವರ್ತನೆಯ ಬದಲಾವಣೆ, ಕಲಿಯುವಿಕೆಯ ಸಮಸ್ಯೆ ಇತ್ಯಾದಿಗಳ ಕುರಿತು ವಿವಿಧ ಅಲ್ಪಾವಧಿ ಕೋರ್ಸ್​ಗಳನ್ನು ಹಾಗೂ ಕೌನ್ಸಲಿಂಗ್ ತರಬೇತಿಯನ್ನೂ ನೀಡಲಾಗುತ್ತದೆ. ಮೈಂಡ್ ಸ್ಪೀಕ್ ವಿಭಾಗದಲ್ಲಿ ಪ್ರತಿ ತಿಂಗಳು ಒಂದು ವೇದಿಕೆಯ ಮೇಲೆ ವಿವಿಧ ವಿಷಯಗಳ ಮೇಲೆ ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು, ಮಾತನಾಡಲು ಅವಕಾಶ ನೀಡಲಾಗುತ್ತದೆ.

image


ಇದಲ್ಲದೇ ಶೀಘ್ರದಲ್ಲೇ 5ನೇ ವಿಭಾಗವನ್ನು ಪರಿಚಯಿಸಲಾಗುತ್ತದೆ. ಅದು ಐ.ಕ್ಯಾನ್.ಫ್ಲೈ ಎಂಬ ವಿಭಾಗ. ರಜಾಕಾಲದಲ್ಲಿ ವಿಭಿನ್ನ ಕಾರ್ಯಗಳನ್ನು ಮಾಡುವ ಮೂಲಕ ವಿಶೇಷ ಮಕ್ಕಳನ್ನು ಅವರಿಗಿಷ್ಟ ಬಂದ ನಿರ್ದಿಷ್ಟ ಕೆಲಸಗಳನ್ನು ಮಾಡಲು ಸಂಪೂರ್ಣ ಅವಕಾಶ ನೀಡಲಾಗುತ್ತದೆ. ಇದರಿಂದ ಸಮಾಜಕ್ಕೆ ಅರ್ಥಪೂರ್ಣ ಕಾರ್ಯಗಳನ್ನು ಮಾಡುವಲ್ಲಿ ತಮ್ಮನ್ನು ತಾವು ಒದಗಿಸಿಕೊಳ್ಳುವಂತಹ ಕೆಲಸ ಮಾಡುವ ಅವಕಾಶ ವಿಶೇಷ ಮಕ್ಕಳಿಗೆ ಸಿಕ್ಕಂತಾಗುತ್ತದೆ. ಇಲ್ಲಿ ತರಬೇತಿ ಪಡೆದವರು ನಂತರ ಮನೆಯಲ್ಲಿಯೇ ಕುಳಿತು ಆನ್‌ಲೈನ್ ನಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅಥವಾ ಮಾರುಕಟ್ಟೆಯಲ್ಲಿ ಮಾರಬಹುದಾದ ಉತ್ಪನ್ನಗಳನ್ನು ಮಾಡಲು ಸಹಕಾರಿಯಾಗುತ್ತದೆ. ಐ.ಕ್ಯಾನ್.ಫ್ಲೈಗೆ ದಾಖಲಾಗುವ ಪ್ರತಿಯೊಬ್ಬರ ಮುಖದಲ್ಲೂ ಒಂದು ಮಂದಹಾಸ ಮೂಡುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಆ್ಯಡ್ ಲೈಫ್ ಸಂಸ್ಥೆಯ ಸಂಸ್ಥಾಪಕಿ ಮತ್ತು ನಿರ್ದೇಶಕಿ ಮಿನುಬುಡಿಯಾ.

15 ವರ್ಷಕ್ಕೂ ಮೇಲ್ಪಟ್ಟ ವಿಶೇಷ ಮಕ್ಕಳಿಗೆ ತಮ್ಮ ಆಸಕ್ತಿಗಳ ಕುರಿತು ಜಾಗೃತಗೊಳಿಸುವ, ಅವರ ಯೋಗ್ಯತೆಯನ್ನು ಅವರಿಗೇ ತಿಳಿಸುವ, ಭವಿಷ್ಯದಲ್ಲಿ ಯಾವುದರಲ್ಲಿ ಮುಂದುವರೆಯಬಹುದು ಎಂಬುದರ ಕುರಿತು ಮಾರ್ಗದರ್ಶನ ಮಾಡಲು ಒಂದು ವೇದಿಕೆಯನ್ನು ನಿರ್ಮಿಸುವ ಗುರಿ ಹೊಂದಿದೆ ಐ.ಕ್ಯಾನ್.ಫ್ಲೈ. ಈ ಮೂಲಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ವತಂತ್ರವಾಗಿ ಬದುಕಲು ಅವಕಾಶ ಮಾಡಿಕೊಡುವ ಉದ್ದೇಶ ಈ ಸಂಸ್ಥೆಯದ್ದು.

ವಿಶೇಷ ಮಕ್ಕಳು ಮತ್ತು ಯುವಕರಿಗೆ ಅಗತ್ಯವಿರುವ ಇಂತಹ ಚಟುವಟಿಕೆಯನ್ನು ಅನೇಕ ವರ್ಷಗಳಿಂದ ಇಂತಹ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರರು ರಚಿಸಿದ್ದಾರೆ. ಯಾವುದೇ ತಾರತಮ್ಯವಿಲ್ಲದೇ ಎಲ್ಲಾ ವಿಶೇಷ ಮಕ್ಕಳಿಗೂ ಇಂತಹ ಚಟುವಟಿಕೆಯಲ್ಲಿ ಭಾಗಿಯಾಗುವ ಅವಶ್ಯಕತೆ ಇದೆ. ಕೌಶಲ್ಯ ಆಧಾರಿತ ಚಟುವಟಿಕೆಗಳು ಮತ್ತು ಉತ್ಪನ್ನ ವಿಭಾಗದ ಭಾಗವಾಗಿ ಅಥವಾ ಅವರ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ತರಬೇತಿಯನ್ನೂ ನೀಡಲಾಗುತ್ತದೆ. ಮಕ್ಕಳು ವಿಭಿನ್ನ ವೇಗದಲ್ಲಿ ಕಲಿಯುತ್ತಾರೆ. ಆ್ಯಡ್‌ ಲೈಫ್ ಕೇರಿಂಗ್ ಮೈಂಡ್‌ನ ಶಿಕ್ಷಕರು, ಮಾರ್ಗದರ್ಶಕರು ಈ ಮಕ್ಕಳಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಮೂಲಕ ಕಲಿಯಲು ಸಹಾಯ ಮಾಡುತ್ತಾರೆ.

ಐ.ಕ್ಯಾನ್.ಫ್ಲೈ ಕೌಶಲ್ಯವೃದ್ಧಿಗೆ ವೇದಿಕೆ ಒದಗಿಸುವುದಲ್ಲದೇ, ಈ ಮಕ್ಕಳ ಆರೈಕೆಗಾಗಿ ಪೋಷಕರಿಗೆ ಕೆಲ ಗಂಟೆಗಳ ಬಿಡುವನ್ನೂ ಒದಗಿಸುತ್ತದೆ. ಪೋಷಕರಿಗೆ ಅವರದ್ದೇ ಆದ ಸಮಯವನ್ನು ನೀಡದಿದ್ದರೆ ಈ ಮಕ್ಕಳ ಕಡೆ ತೋರುವ ಕಾಳಜಿಯಲ್ಲಿ ವ್ಯತ್ಯಾಸವಾಗುತ್ತದೆ ಎಂದು ಒಂದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಹೀಗಾಗಿ ಐ.ಕ್ಯಾನ್.ಫ್ಲೈ ಪೋಷಕರಿಗೆ ಅವರದ್ದೇ ಆದ ಸ್ವತಂತ್ರ ಸಮಯ ಒದಗಿಸುತ್ತದೆ.

ಆ್ಯಡ್ ಲೈಫ್ ಕೇರಿಂಗ್ ಮೈಂಡ್ ಸಂಸ್ಥೆಯನ್ನು ವಿಸ್ತರಿಸುವ ಉದ್ದೇಶ ಹೊಂದಿರುವ ಮಿನು ತಮ್ಮ ಕನಸನ್ನು ನನಸಾಗಿಸುವತ್ತ ಸಾಗುತ್ತಿದ್ದಾರೆ. ಮಿನು ಅವರ ದೊಡ್ಡ ಮಗಳು ಪ್ರೀಯಂ ಕೂಡ ಈಗ ಮಿನು ಅವರ ಜೊತೆ ಕೈಜೋಡಿಸಿದ್ದಾರೆ.

ಮಿನು ಅವರ ಮಗಳು ಪ್ರಾಚೀಯಿಂದ ಮಿನು ತುಂಬಾ ಭಾವನಾತ್ಮಕವಾಗಿ ಯೋಚಿಸಲಾರಂಭಿಸಿದ್ದಾರೆ. ದೇವರು ಏನೇ ಮಾಡಿದರೂ ಅದರ ಹಿಂದೆ ನಿರ್ದಿಷ್ಟ ಕಾರಣವಿದೆ ಎನ್ನುವ ಮಿನು, ಪ್ರಾಚೀಯಿಂದ ಸಮಾಜಕ್ಕೆ ಏನಾದರೂ ಮಾಡಲು ಸಾಧ್ಯವಾಯಿತು. ಆ ದಿಕ್ಕಿನಲ್ಲಿ ತಾವು ಯೋಚಿಸಲು ಸಾಧ್ಯವಾಯಿತು. ಇದರಿಂದ ನನ್ನ ದೃಷ್ಟಿ ಮತ್ತಷ್ಟು ವಿಶಾಲವಾಗಿದೆ. ಹೀಗಾಗಿ ದೇವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ ಮಿನು ಬುಡಿಯಾ.