ತಿಂಡಿ ಉಚಿತ-ಟೈಮ್​ಗೆ ದುಡ್ಡು..! ಇದು ಬೆಂಗಳೂರಿನ ಸ್ಪೆಷಲ್​ ಹೊಟೇಲ್​​​

ಟೀಮ್​​ ವೈ.ಎಸ್​. ಕನ್ನಡ

1

ಸಿಲಿಕಾನ್​​ ಸಿಟಿ ಬೆಂಗಳೂರಿನಲ್ಲಿ ಊಟ ತಿಂಡಿಗೇನು ಕೊರತೆ ಇಲ್ಲ. ಇಲ್ಲಿ ಕೈಯಲ್ಲಿ ಕಾಸಿದ್ದರೆ ಸಾಕು, ಅವರೇ ಬಾಸ್​. ಊಟದ ವಿಚಾರಕ್ಕೆ ಬಂದ್ರಂತೂ ಸಿಲಿಕಾನ್​ ಸಿಟಿಯಲ್ಲಿ ಏನು ಬೇಕೋ ಅದೆಲ್ಲವೂ ಸಿಗುತ್ತದೆ. ದಕ್ಷಿಣ ಕರ್ನಾಟಕದ ಊಟದ ಶೈಲಿಯಿಂದ ಹಿಡಿದು, ಉತ್ತರ ಕರ್ನಾಟಕದ ಖಡಕ್​ ರೊಟ್ಟಿ ಊಟದ ತನಕ ಎಲ್ಲವೂ ಲಭ್ಯವಿದೆ. ಅಷ್ಟೇ ಅಲ್ಲ ನಾರ್ಥ್​ ಇಂಡಿಯನ್​, ಸೌತ್​ ಇಂಡಿಯನ್​, ಪಂಜಾಬಿ, ಕಾಂಟಿನೆಂಟಲ್​, ಚೈನೀಸ್​ ಹೀಗೆ ನಿಮಗೆ ಯಾವುದು ಇಷ್ಟವೋ ಅದೆಲ್ಲವೂ ಬೆಂಗಳೂರು ಎಂಬ ಮಾಯಾ ನಗರಿಯಲ್ಲಿದೆ. 

ವಲಸಿಗರ ತವರು ಆಗಿ ಬೆಳೆದಿರುವ ಬೆಂಗಳೂರಿನಲ್ಲಿ ಥರಾವೇರಿ ಹೊಟೇಲ್​ಗಳಿವೆ. ಒಂದೊಂದು ಹೊಟೇಲ್​ಗಳಲ್ಲಿ ಒಂದೊಂದು ತಿಂಡಿ ಸಿಗುತ್ತದೆ. ಆದರೆ ಈಗ ನಾವು ಹೇಳಲು ಹೊರಟಿರುವ ಹೊಟೇಲ್​ ಕಥೆ ವಿಭಿನ್ನ. ಈ ಹೋಟೆಲ್​ನಲ್ಲಿ ನೀವು ಹೊಟ್ಟೆ ತುಂಬಾ ತಿನ್ನಬಹುದು. ನೀವು ತಿಂದ ತಿಂಡಿಗೆ ಅಥವಾ ಊಟಕ್ಕೆ ದುಡ್ಡಿಲ್ಲ. ನಿಮಗೆ ಸ್ವಲ್ಪ ಅಚ್ಚರಿ ಆಗಬಹುದು. ಹೇಗೂ ತಿನ್ನುವ ತಿಂಡಿಗೆ ದುಡ್ಡಿಲ್ಲ ಅಂತ ಯೋಚನೆ ಮಾಡಿ, ಒಂದ್ಸಾರಿ ಫ್ರೆಂಡ್ಸ್​ ಜೊತೆ ಸೇರಿಕೊಂಡು ಎಲ್ಲರೂ ನುಗ್ಗಿ ಬಿಡೋಣ ಎಂದುಕೊಂಡ್ರಾ, ಆದ್ರೆ ಅಲ್ಲೂ ಒಂದು ಟ್ವಿಸ್ಟ್​ ಇದೆ. ಹೊಟೇಲ್​ಗೆ ನುಗ್ಗುವುದಕ್ಕೂ ಮೊದಲು ಪೂರ್ತಿ ವಿಚಾರ ಮಾಡಿ ಹೋಗಿ. ಅಲ್ಲಿನ ತಿಂಡಿಗೆ ಹಣವಿಲ್ಲ ಆದರೆ ಅಲ್ಲಿ ನೀವು ಕುಳಿತುಕೊಳ್ಳುವಷ್ಟು ಸಮಯ ಅಲ್ಲಿ ಹಣ ನೀಡಬೇಕು.

ಇದನ್ನು ಓದಿ: ವಯಸ್ಸಾದ ಮೇಲೂ ಅದ್ಭುತ ಕನಸು ಕಾಣಬಹುದು..!

ಹೌದು ಹೀಗೊಂದು ಇಂಟರೆಸ್ಟಿಂಗ್ ಹೊಟೇಲ್ ಬೆಂಗಳೂರಿನಲ್ಲಿದೆ. ಅದರ ಹೆಸರು "ದಿ ಮಿನ್ಯೂಟ್ ಬಿಸ್ಟ್ರೋ" ಅಂತ. ನೀವು ಇಲ್ಲಿಗೆ ಹೋದರೆ ತಿನ್ನುವ ತಿಂಡಿಗೆ ದುಡ್ಡ ನೀಡಬೇಕಿಲ್ಲ, ಆದರೆ ಆ ಹೋಟೆಲ್​​ನಲ್ಲಿ ಎಷ್ಟು ಸಮಯ ಕಳೆಯುತ್ತೀರೋ ಆ ಸಮಯಕ್ಕೆ ದುಡ್ಡು ನೀಡಬೇಕು. ಉದಾಹರಣೆಗೆ ನೀವು ಆ ಹೋಟೆಲಲ್ಲಿ ಒಂದು ಗಂಟೆ ಕಳೆಯುತ್ತೀರಿ ಅಂತಿಟ್ಟುಕೊಳ್ಳಿ. ಆಗ ನೀವು ಅಲ್ಲಿ ನಿಮಿಷಕ್ಕೆ ಐದು ರೂಪಾಯಿಯಂತೆ ಮೂರು ನೂರು ರೂಪಾಯಿ ಕೊಡಬೇಕು. ತಿಂಡಿಗೆ ದುಡ್ಡು ನೀಡಬೇಕಿಲ್ಲ.

ವಿದೇಶಗಳಲ್ಲಿ ಫೇಮಸ್

ವಿದೇಶಗಳಲ್ಲಿ ಈ ಥರದ ಪೇ ಪರ್ ಮಿನಿಟ್ ಕೆಫೆಗಳಿವೆ. ಅಲ್ಲಿ ಈ ಫಾರ್ಮಾಟ್ ಸಖತ್ ಫೇಮಸ್ ಆಗಿದೆ. ಇದನ್ನು ನೋಡಿದ ಬೆಂಗಳೂರಿನ ಇನಾಯತ್ ಅನ್ಸಾರಿಯ ಮತ್ತು ನಿಖಿಲ್ ಕಾಮತ್ ಎಂಬ ಸ್ನೇಹಿತರು ಸೇರಿಕೊಂಡು ಈ "ದಿ ಮಿನ್ಯೂಟ್ ಬಿಸ್ಟ್ರೋ" ಎಂಬ ಕೆಫೆಯನ್ನು ಆರಂಭಿಸಿದ್ದಾರೆ. ಈ ರೀತಿಯ ಹೊಟೇಲ್ ಬೆಂಗಳೂರಿಗರಿಗೆ ತುಂಬಾ ಹೊಸ ಕಾನ್ಸೆಪ್ಟ್. ಈ ಹೊಟೇಲ್​​ನಲ್ಲಿ ಆರಾಮಾಗಿ ಕೂತು ಮಾತಾಡಲು, ಹರಟಲು ಇರುವ ಒಂದು ನೆಮ್ಮದಿಯ ತಾಣವಾಗಿದೆ.

" ವಿದೇಶಗಳಲ್ಲಿ ಅದರಲ್ಲೂ ನೆದರ್ಲೆಂಡ್​, ಫ್ರಾನ್ಸ್​ ದೇಶಗಳಲ್ಲಿ ಕೆಲಸ ಮಾಡುವಾಗ ಇಂತಹ ಹೋಟೆಲ್​ಗಳಿಗೆ ಹೋಗುತ್ತಿದ್ದೆವೆ. ಹೊಟೇಲ್​ನಲ್ಲಿ ತಿನ್ನುವ ಆಹಾರದಷ್ಟೇ ಅಲ್ಲಿನ ಸಮಯದ ಮಹತ್ವ ಕೂಡ ತುಂಬಾ ಮುಖ್ಯವಾಗಿದೆ. ಸುಮ್ಮನೆ ಕಾಲ ಕಳೆಯಲು ಹೊಟೇಲ್​ಗೆ ಹೋಗುವವರ ಸಂಖ್ಯೆ ಇಲ್ಲಿ ಕಡಿಮೆ ಇರುತ್ತದೆ. ಅಷ್ಟೇ ಅಲ್ಲ ವೈಯಕ್ತಿಕ ಕೆಲಸಗಳಿಗೆ ಮುಕ್ತ ಅವಕಾಶ ಕೂಡ ಸಿಗುತ್ತದೆ. "
- ರಾಜ್​​, ಗ್ರಾಹಕ, ಸಾಫ್ಟ್​​ವೇರ್​​ ಎಂಜಿನಿಯರ್​​

ಏನೇನು, ಮತ್ತು ಎಷ್ಟು ಚಾರ್ಜ್..?

ಈ " ದಿ ಮಿನ್ಯೂಟ್ ಬಿಸ್ಟ್ರೋ" ಕೆಫೆಯಲ್ಲಿ ಬೆಳಗ್ಗೆ ತಿಂಡಿ ಸಿಗುತ್ತದೆ. ಮಧ್ಯಾಹ್ನದ ಹೊತ್ತು ಹೋದರೆ ಬಫೆ ಇರತ್ತೆ. ಇಲ್ಲಿನ ವಿಶೇಷ ಎಂದರೆ ಯಾವುದೆ ತಿಂಡಿಯನ್ನು ಪಡೆಯಲು ಬಹಳ ಹೊತ್ತು ಕಾಯಬೇಕಾಗಿಲ್ಲ. ಇನ್ನು ಸಾಯಾಂಕಲದ ಹೊತ್ತು ಮಾಂಸಾಹಾರವೂ ಸಿಗುತ್ತದೆ. ಆಗ ಒಂದು ನಿಮಿಷಕ್ಕೆ ಎಂಟು ರೂಪಾಯಿ ನಿಗದಿಗೊಳಿಸಲಾಗಿದೆ. ಬೆಳಗ್ಗೆ ಮತ್ತು ಮಧ್ಯಾಹ್ನ ಪ್ರತೀ ನಿಮಿಷಕ್ಕೆ 5 ರೂಪಾಯಿ ನೀಡಬೇಕಾಗುತ್ತದೆ. 

" ಬೆಂಗಳೂರಿನಲ್ಲಿ ಸಾಕಷ್ಟು ಹೊಟೇಲ್​ಗಳಿವೆ. ಆದ್ರೆ ಎಲ್ಲೂ ಹೆಚ್ಚು ಸಮಯ ಕೊಡುವುದಿಲ್ಲ. ಆದ್ರೆ ನಮ್ಮ ಹೊಟೇಲ್​ನಲ್ಲಿ ಎಷ್ಟು ಹೊತ್ತು ಬೇಕಾದ್ರೂ ಕೂರಬಹುದು. ಅದಕ್ಕೆಂದೇ ನಾವು ಚಾರ್ಜ್​ ಮಾಡುತ್ತೇವೆ. ಬೆಂಗಳೂರಿನಲ್ಲಿ ಇದು ಹೊಸ  ಕಾನ್ಸೆಪ್ಟ್​. ಜನ ನಿಧಾನವಾಗಿ ನಮ್ಮ ಕಡೆ ಆಕರ್ಷಿತರಾಗುತ್ತಿದ್ದಾರೆ. "
- ರಂಜಿತ್​, ಹೊಟೇಲ್​ ಮ್ಯಾನೇಜರ್​​

ಯಾಕೆ ಹೋಗಬೇಕು..?

ಈ ಕೆಫೆಯಲ್ಲಿ ಆರಾಮಾಗಿ ಒಂದು ಕಡೆ ಕೂತು ಫ್ರೆಂಡ್ಸ್ ಜೊತೆ ತಿಂಡಿ ತಿನ್ನುತ್ತಾ ಹರಟಲು. ಯಾರದೇ ತೊಂದರೆ ಇಲ್ಲದೆ ಏನಾದರೂ ಕೆಲಸವಿದ್ದರೆ ಇಲ್ಲದೆ ಕೆಲಸ ಮಾಡಬಹುದು. ಇನ್ನು ಪುಸ್ತಕ ಪ್ರೇಮಿಗಳು ಒಂದು ಕಡೆ ಕೂತು ಪುಸ್ತಕ ಓದುವ ಆಸೆಯನ್ನು ಈ ಕೆಫೆಗೆ ಹೋಗಿ ತೀರಿಸಿಕೊಳ್ಳಬಹುದು. ಇನ್ನು ಕೆಫೆಯಲ್ಲಿ ನಾಲ್ಕೈದು ಜನ ಲ್ಯಾಪ್ಟಾಪ್​​ನಲ್ಲಿ ಸಿನಿಮಾ ನೋಡಬಹುದು. ಇನ್ನೊಂದು ಉಪಯೋಗ ಎಂದರೆ ನೀವೇ ಮನೆಯಿಂದ ಊಟ ತಂದಿದ್ದರೂ ಅದನ್ನು ಇಲ್ಲಿ ಕೂತು ಊಟ ಮಾಡಬಹುದು. ಒಟ್ಟಿನಲ್ಲಿ ತಿನ್ನುವ ತಿಂಡಿಗೆ ಹಣ ನೀಡದೇ ಇದ್ದರು ನೀವು ಕಳೆಯುವ ಸಮಯಕ್ಕೆ ಹಣ ನೀಡುವಂತಹ ಹೊಸ ಮಾದರಿಯ ಹೊಟೇಲ್ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ. 

ಇದನ್ನು ಓದಿ:

1. ರುಚಿ ರುಚಿಯಾಗಿದೆ 'ಹುಡ್ಲಿ'ಯ ಉಪ್ಪಿನ ಕಾಯಿ- ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡಿದ ಯುವಕರಿಗೆ ಜೈ

2. ಹಣೆ ಬರಹ ಬದಲಿಸಿದ 2.60 ಕೋಟಿ ರೂಪಾಯಿ- ಆಟೋ ಡ್ರೈವರ್ ಮಗ ಈಗ ಸೂಪರ್ ಕ್ರಿಕೆಟರ್..!

3. ಕೇವಲ 20 ರೂಪಾಯಿಗೆ ವಾಟರ್ ಪ್ಯೂರಿಫೈಯರ್..!

Related Stories