ಫ್ಯಾಶನ್ ಟ್ರೆಂಡ್‌ಗಳ ಮಾರುಕಟ್ಟೆ ಸ್ಟಾಕ್ ಬೈ ಲವ್

ಟೀಮ್​​ ವೈ.ಎಸ್​​.

0

ಲಂಡನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ವಿದ್ಯಾರ್ಥಿಯಾಗಿದ್ದ ತುಷಾರ್ ಅಹ್ಲುವಾಲಿಯಾ, ಜರ್ಮನಿಯ ಇನ್ಕ್ಯುಬೇಟರ್ ರಾಕೆಟ್ ಇಂಟರ್‌ನೆಟ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹೆವೆನ್ ಎಂಡ್‌ ಹೋಮ್ (ಬಮರಂಗ್.ಇನ್) ಎಂಬ ಸಂಸ್ಥೆಯನ್ನು ಮುಂದುವರೆಸಿದ ತುಷಾರ್, ನಂತರ ಈ ಸಂಸ್ಥೆಯನ್ನು ಭಾರತದ ಫ್ಯಾಬ್ ಫರ್ನಿಶ್ ಸಂಸ್ಥೆ ಜೊತೆ ವಿಲೀನಗೊಳಿಸಿದರು. “ನನ್ನ ಜೀವನದ ಆರಂಭದಲ್ಲೇ ಅತ್ಯುತ್ತಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರಿಂದ ಬಹಳಷ್ಟು ಕಲಿಯುವ ಅವಕಾಶ ನನಗೆ ಸಿಕ್ಕಿತು. ಉದ್ಯಮಿಯಾಗ ಬಯಸುವ ಯಾರಿಗಾದರೂ ರಾಕೆಟ್ ಇಂಟರ್‌ನೆಟ್ ಸಂಸ್ಥೆ ವಿಶ್ವದಲ್ಲೇ ಅತ್ಯುತ್ತಮ ಕಲಿಕಾ ಸ್ಥಳ” ಎನ್ನುತ್ತಾರೆ ತುಷಾರ್. ಹೆವೆನ್‌ ಎಂಡ್‌ ಹೋಮ್ ಸಂಸ್ಥೆಯನ್ನು ವಿಲೀನಗೊಳಿಸಿದ ಬಳಿಕ ರಶ್ಮಿ ಅಹ್ಲುವಾಲಿಯಾರ ಜೊತೆಗೂಡಿ ಸ್ಟಾಕ್ ಬೈ ಲವ್ ಎಂಬ ಡಿಜಿಟಲ್ ಫಾಸ್ಟ್ ಫ್ಯಾಶನ್ ಪ್ರೈವೇಟ್ ಸಂಸ್ಥೆಯನ್ನು ಕಟ್ಟಿದರು. ಹೈಪರ್ ಟ್ರೆಂಡಿ, ಧರಿಸಬಲ್ಲ, ಕೈಗೆಟುಕುವ ದರದ ವಸ್ತ್ರಗಳನ್ನು ಉತ್ತಮ ಗುಣಮಟ್ಟದೊಂದಿಗೆ ಮಹಿಳೆಯರಿಗೆ ನೀಡಬಲ್ಲ ಸಂಸ್ಥೆ ಇದಾಗಿತ್ತು. ನವದೆಹಲಿ, ಬರ್ಲಿನ್, ಲಂಡನ್‌ಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಈ ಸಂಸ್ಥೆ, ಮುಂದುವರಿದ ಮಹಿಳೆಯರ ಅಭಿರುಚಿಗೆ ತಕ್ಕಂತೆ ವಿಸ್ತೃತ ಮಾದರಿಯ, ಫ್ಯಾಶನಬಲ್ ಉಡುಪುಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ಒದಗಿಸುತ್ತದೆ.

ಸ್ಟಾಕ್ ಬೈ ಲವ್ ಸಂಸ್ಥೆಯ ಹಿಂದಿರುವ ತಂಡ

ಈ ಸಂಸ್ಥೆ ಹುಟ್ಟುಹಾಕುವಲ್ಲಿ ತುಷಾರ್ ಜೊತೆ ಕೈಜೋಡಿಸಿರುವವರು ರಶ್ಮಿ ಅಹ್ಲುವಾಲಿಯಾ. ರಶ್ಮಿಯವರು ಲುಗಾನಿ ಜಿಎಂಬಿಹೆಚ್ ಮತ್ತು ಗ್ರೂಪ್‌ನ ಸಹಸಂಸ್ಥಾಪಕರೂ ಸಹ ಹೌದು. ರಶ್ಮಿ ಅವರಿಗೆ ಕಮರ್ಶಿಯಲ್ ಫ್ಯಾಶನ್ ವಿಭಾಗದಲ್ಲಿ ಸುಮಾರು 25 ವರ್ಷಗಳ ಅನುಭವವಿದೆ. ಸ್ಟಾಕ್ ಬೈ ಲವ್ ತಂಡ ರಶ್ಮಿಯವರ ಪಾಶ್ಚಿಮಾತ್ಯ ಫ್ಯಾಶನ್ ಬಗೆಗಿನ ಜ್ಞಾನವನ್ನು ಹೆಚ್ಚಾಗಿ ಅವಲಂಬಿಸಿದೆ. ಈ ಸಂಸ್ಥೆ 1980, 1990 ಮತ್ತು 2000ಕ್ಕೂ ಹಿಂದಿನ ವರ್ಷಗಳ ಫ್ಯಾಶನ್‌ನ ಝಾರಾ, ಲಿಂಡೆಕ್ಸ್, ಹೆಚ್ ಎಂಡ್ ಎಂ, ಸಿ ಎಂಡ್ ಎ. ಒಟ್ಟೋ, ಕರ್ರೆಫೋರ್, ಮೆಟ್ರೋ ಇತ್ಯಾದಿ ಯುರೋಪಿಯನ್ ವಲಯದ ಮಾರುಕಟ್ಟೆಗಳಿಗೆ ದೊಡ್ಡ ಮಟ್ಟದ ವಿತರಕರಾಗಿದ್ದಾರೆ ಸ್ಟಾಕ್ ಬೈ ಲವ್ ತಂಡ.

ರಶ್ಮಿ ಅಹ್ಲುವಾಲಿಯಾ
ರಶ್ಮಿ ಅಹ್ಲುವಾಲಿಯಾ

ಬೇರೆ ಸಂಸ್ಥೆಗಳಿಗೆ ಹೋಲಿಸಿದರೆ ಈ ಸಂಸ್ಥೆ ಹೇಗೆ ವಿಭಿನ್ನ?

ಆನ್‌ಲೈನ್‌ ಮಾರ್ಕೆಟ್(ಯೆಪ್ ಮಿ, ಫ್ರೀಕಲ್ಚರ್, ಝೋವಿ) ವಿಭಾಗದ ಅನೇಕ ಉತ್ಪನ್ನಗಳಲ್ಲಿ ಬೇರೆ ಖಾಸಗಿ ಸಂಸ್ಥೆಗಳಿಗೆ ಹೋಲಿಸಿದರೆ ಸ್ಟಾಕ್ ಬೈ ಲವ್ ಸಂಸ್ಥೆ ವಿಭಿನ್ನವಾಗಿದೆ. ಮೊದಲನೆಯದಾಗಿ, ಅಂತರಾಷ್ಟ್ರೀಯ ಮಟ್ಟದ ಟ್ರೆಂಡ್‌ಗಳಿಂದ ಪ್ರೇರಿತಗೊಂಡ ವಿನ್ಯಾಸಗಳು ಮತ್ತು ಆಂತರಿಕ ವಿನ್ಯಾಸಗಳನ್ನು ಬಳಸಿಕೊಂಡು ಉತ್ಪನ್ನವನ್ನು ಸಿದ್ಧಪಡಿಸಲಾಗುತ್ತದೆ. ಅಲ್ಲದೇ, ಸಮಯದ ಜೊತೆಗೆ ಸ್ಟಾಕ್ ಬೈ ಲವ್‌ನ ಫ್ಯಾಷನ್ ಸಹ ಬದಲಾಗುತ್ತದೆ. ಉತ್ಪನ್ನ ವಿನ್ಯಾಸದಿಂದ ಹಿಡಿದು ವೆಬ್‌ಸೈಟ್‌ಗಳಿಗೆ ವಿನ್ಯಾಸಗಳು ಅಪ್‌ಲೋಡ್ ಆಗಲು 6 ದಿನಗಳು ಬೇಕಾಗುತ್ತದೆ. ಸಂಸ್ಥೆಯಿಂದ ಮಾರುಕಟ್ಟೆಗೆ ಉತ್ಪನ್ನಗಳು ತಲುಪುವ ಅತೀ ಕಡಿಮೆ ಸಮಯವಾಗಿರುತ್ತದೆ.

“ನಾವು ಫ್ಯಾಶನ್ ಟ್ರೆಂಡ್‌ಗಳನ್ನಾಧರಿಸಿದ ಉದ್ಯಮದಲ್ಲಿದ್ದೇವೆ. ಹೀಗಾಗಿ ನಾವು ನಮ್ಮ ಸಂಗ್ರಹಕ್ಕಾಗಿ ಹೆಚ್ಚು ಸಮಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾವು ಪ್ರತಿದಿನವೂ ಹೊಸ ಉತ್ಪನ್ನಗಳನ್ನು ಮಾಡುತ್ತಿರುತ್ತೇವೆ. ನಾವು ಒಂದು ಖಾಸಗಿ ಉದ್ಯಮ ನಡೆಸುತ್ತಿರುವುದರಿಂದ ವಿವಿಧ ಬಗೆಯ ಉತ್ಪನ್ನಗಳನ್ನು ನೀಡುವುದಲ್ಲೇ ಗ್ರಾಹಕರು ಪಾವತಿಸುವ ಮೊತ್ತಕ್ಕೆ ನ್ಯಾಯ ಒದಗಿಸುವ ವಿನ್ಯಾಸಗಳನ್ನು ಮಾಡಬೇಕಿರುತ್ತದೆ” ಎನ್ನುತ್ತಾರೆ ತುಷಾರ್. ಫ್ಯಾಶನ್‌ ಗೆ ಆಯ್ದಕೊಳ್ಳುವ ವಿಷಯ ಸ್ಟಾಕ್ ಬೈ ಲವ್‌ನ ಪ್ರಮುಖ ಸಾರ್ವತ್ರಿಕ ಮಾರಾಟದ ಅಂಶವಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯ ಕಡೆ ಗಮನ ಹಾಗೂ ಸೆಳೆತ

ಇಂಡೋ-ಯುರೋಪಿಯನ್ ಕುಟುಂಬದ ಬೆಂಬಲದೊಂದಿಗೆ ಬೆಳೆಯುತ್ತಿರುವ ಸ್ಟಾಕ್ ಬೈ ಲವ್ ಸಂಸ್ಥೆಗೆ 2015ರವರೆಗೆ ಸಾಂಸ್ಥಿಕ ಹಣಕಾಸಿನ ಮುಗ್ಗಟ್ಟು ತಲೆದೋರುವುದಿಲ್ಲ ಎಂಬ ವಿಶ್ವಾಸ ರಶ್ಮಿ ಹಾಗೂ ತುಷಾರ್‌ಗಿದೆ. ಸರಾಸರಿ 1400 ರೂ. ಮೌಲ್ಯದ 150 ಬೇಡಿಕೆಗಳನ್ನು ಪಡೆಯುತ್ತಿದೆ ಸ್ಟಾಕ್ ಬೈ ಲವ್ ಸಂಸ್ಥೆ. ಕಳೆದ ಕೆಲ ತಿಂಗಳಿನಿಂದ ಪ್ರತಿ ತಿಂಗಳು ತಮ್ಮ ಉದ್ಯಮದಲ್ಲಿ ಶೇ.20ರಷ್ಟು ಅಭಿವೃದ್ಧಿ ಸಾಧಿಸುತ್ತಿದೆ.

ಮುಂದಿನ ಕೆಲವೇ ತಿಂಗಳಲ್ಲಿ ತಮ್ಮ ವೆಬ್‌ಸೈಟನ್ನು ಯುಕೆಯಲ್ಲಿ ಆರಂಭಿಸುವ ಮೂಲಕ ಸಂಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೊಯ್ಯುವ ಉದ್ದೇಶವಿದೆ. ಆದರೆ ಪ್ರೊಡಕ್ಷನ್ ಬ್ಯಾಕ್ ಎಂಡ್ ಮಾತ್ರ ಭಾರತದಲ್ಲಿಯೇ ಇರಲಿದೆ. ಹೆಚ್ ಎಂಡ್ ಎಂ, ಝಾರಾ, ಫಾರೆವರ್ 21, ಆಸೋಸ್ ನಂತಹ ಸಂಸ್ಥೆಗಳಿಗೆ ಪ್ರತಿಸ್ಪರ್ಧಿಯಾಗಿ ಭಾರತದ ಹೊರಗೆ ಜಾಗತಿಕ ಫಾಸ್ಟ್ ಫ್ಯಾಶನ್ ಕಂಪನಿ ತೆರೆಯುವುದು ಸ್ಟಾಕ್ ಬೈ ಲವ್ ಸಂಸ್ಥೆಯ ಗುರಿ.

ಸ್ಪರ್ಧೆ ಮತ್ತು ಆದಾಯದ ಮಾದರಿ

“ಜಬಾಂಗ್, ಮಿಂತ್ರಾ, ಕೂವ್ಸ್ ಸಂಸ್ಥೆಗಳ ಜೊತೆ ನಾವು ಸ್ಪರ್ಧಿಸುತ್ತಿಲ್ಲ. ಏಕೆಂದರೆ ಈ ಸಂಸ್ಥೆಗಳು ಮೌಲ್ಯದ ಸರಣಿಯ ಕೊನೆಯಲ್ಲಿದೆ. ನಾವುಗಳು ಮೌಲ್ಯದ ಸರಪಳಿಯೊಂದಿಗೆ ಏರುತ್ತಿದ್ದೇವೆ. ಹೀಗಾಗಿ ನಾವು ಈ ಸಂಸ್ಥೆಗಳ ಜೊತೆ ಸ್ಪರ್ಧಿಸುವುದಿಲ್ಲ” ಎನ್ನುತ್ತಾರೆ ತುಷಾರ್. ಭಾರತದಲ್ಲಿ ಸಂಸ್ಥೆ ಬಹಳ ಕಾಲ ನೆಲೆ ನಿಲ್ಲುವ ಯೋಜನೆ ಹಾಕಿಕೊಂಡಿದೆ. ಇನ್ನು 10 ವರ್ಷಗಳಲ್ಲಿ ಭಾರತ ವಿಶ್ವದ ಅತೀ ದೊಡ್ಡ ಗ್ರಾಹಕರ ಮಾರುಕಟ್ಟೆಯಾಗಿ ಅಭಿವೃದ್ಧಿಯಾಗಲಿದೆ. ಇಂತಹ ಅವಕಾಶವನ್ನು ಸ್ಟಾಕ್ ಬೈ ಲವ್ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎನ್ನುತ್ತಾರೆ ತುಷಾರ್.

ಸ್ಟಾಕ್ ಬೈ ಲವ್ ತನ್ನ ಸ್ಥಾನವನ್ನು ಇ- ಕಾಮರ್ಸ್‌ ಕ್ಷೇತ್ರದಲ್ಲಿ ಮಾತ್ರ ಸೀಮಿತವಾಗಿಟ್ಟುಕೊಂಡಿಲ್ಲ. ಇ-ಕಾಮರ್ಸ್ ಕ್ಷೇತ್ರ ಅವರಿಗೆ ಪ್ರಾಥಮಿಕ ಚಿಲ್ಲರೆ ಮಾರುಕಟ್ಟೆಯಾಗಿದೆ. ಉತ್ಪನ್ನವನ್ನೇ ಕೇಂದ್ರವಾಗಿರಿಸಿಕೊಂಡಿರುವ ಫ್ಯಾಶನ್ ಸಂಸ್ಥೆ ಇದು. ಉದ್ಯಮದ ದೃಷ್ಟಿಯಿಂದ ನೋಡಿದರೆ ಸ್ಟಾಕ್ ಬೈ ಲವ್ ಸಂಸ್ಥೆ ಉತ್ತಮ ಮಟ್ಟವನ್ನು ತಲುಪಿದೆ(ಶೇ.70+) ಜೊತೆಗೆ ಅತ್ಯುತ್ತಮ ಮಟ್ಟದ ಗ್ರಾಹಕರನ್ನೂ(ಮತ್ತೆ ಮತ್ತೆ ಇಲ್ಲಿಂದಲೇ ಫ್ಯಾಶನಬಲ್ ವಸ್ತುಗಳನ್ನು ಖರೀದಿಸುವವರ ಸಂಖ್ಯೆಯಲ್ಲಿ ಹೆಚ್ಚಳ) ಹೊಂದಿದೆ.

ಮುಂದಿನ ಯೋಜನೆ

ಬ್ಲೂಕಾಲರ್ ಉದ್ಯೋಗಿಗಳನ್ನೂ ಸೇರಿಸಿ 60 ಮಂದಿ ಕಾರ್ಯನಿರ್ವಹಿಸುವ ಈ ಸಂಸ್ಥೆ ಮುಂದಿನ ಮಾರ್ಚ್ ಮತ್ತು ಆಗಸ್ಟ್ ನಲ್ಲಿ ಯುಕೆ ಮತ್ತು ಜರ್ಮನಿಯಲ್ಲಿ ತನ್ನ ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಗುರಿ ಹೊಂದಿದೆ. ಮುಂದಿನ ಆಗಸ್ಟ್‌ ಒಳಗೆ ಸುಮಾರು 2 ಕೋಟಿ ಹೂಡಿಕೆ ಮಾಡುವ ಉದ್ದೇಶ ಹೊಂದಿದೆ ಸ್ಟಾಕ್ ಬೈ ಲವ್ ಸಂಸ್ಥೆ.

Related Stories