ಶಿಕ್ಷಣಕ್ಕೆ ಸಿಕ್ಕಿದೆ ಹೊಸ ಅವತಾರ- ಪ್ರಾಕ್ಟೀಕಲ್​ನಲ್ಲೇ ಅಡಗಿದೆ ಭವಿಷ್ಯ..! 

ಟೀಮ್​ ವೈ.ಎಸ್​. ಕನ್ನಡ

5

ಜನಸಂಖ್ಯೆಯ ವಿಷಯದಲ್ಲಿ ಭಾರತ ಚೀನಾಕ್ಕೆ ಸವಾಲೊಡ್ಡುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಚೀನಾ ಜನಸಂಖ್ಯೆಯ ವಿಚಾರದಲ್ಲಿ ಭಾರತಕ್ಕಿಂತ ಹಿಂದೆ ಬೀಳಲಿದೆ. ಭಾರತ ಅತೀ ಹೆಚ್ಚು ಯುವ ಜನತೆಯನ್ನು ಹೊಂದಿದೆ ಅನ್ನುವ ಹೆಗ್ಗಳಿಕೆಯನ್ನೂ ಹೊಂದಿದೆ. ಆದ್ರೆ ತಂತ್ರಜ್ಞಾನದ ವಿಚಾರದಲ್ಲಿ ಭಾರತೀಯರ ಸಾಧನೆ ಏನು..? ಉತ್ತರ ಗೊತ್ತಿಲ್ಲ ಅನ್ನುವುದಷ್ಟೇ ಇದೆ. ಗೂಗಲ್ ಮತ್ತು ಐಪಾಡ್ ನಂತಹ ತಾಂತ್ರಿಕ ಅಭಿವೃದ್ಧಿಯ ಸಾಧನೆಗಳು ಭಾರತದಲ್ಲಿ ಕಾಣ ಸಿಗುವುದಿಲ್ಲ. ಆದ್ರೆ ಇದನ್ನು ಬದಲಿಸಬೇಕು, ಅದಕ್ಕಾಗಿ ಸಾಮಾಜಿಕ ಉದ್ಯಮವನ್ನು ಸ್ಥಾಪನೆ ಮಾಡಬೇಕು ಅಂತ ಕನಸು ಕಟ್ಟಿಕೊಂಡವರು ಬಾಲಾ ದಂಡಪಾಣಿ. ಬಾಲಾ ದಂಡಪಾಣಿ "ಅತ್ರಾಲ್ ಅಕಾಡೆಮಿ"ಯ ಸಂಸ್ಥಾಪಕ. ಈ ಅಕಾಡೆಮಿಯ ಮೂಲಕ ವಿದ್ಯಾರ್ಥಿಗಳ ಹಾಗೂ ಯುವಕರ ಯೋಚನೆ ಬದಲು ಮಾಡುವುದೇ ಅತ್ರಾಲ್ ಮೂಲ ಉದ್ದೇಶವಾಗಿದೆ.

"ಅತ್ರಾಲ್ ಅಕಾಡೆಮಿ"ಯ ಕೆಲಸದ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳುವ ಸಮಯ ಇದಾಗಿದೆ. ಸಾಮಾನ್ಯವಾಗಿ ಶೈಕ್ಷಣಿಕ ಸಮಯದಲ್ಲಿ, ಶಾಲೆಗೆ ಹೋಗುವುದು ಮತ್ತು ಅಲ್ಲಿ ಕಲಿಸಿದ ಪಾಠವನ್ನು ಮತ್ತೆ ಪರೀಕ್ಷೆಯಲ್ಲಿ ಬರೆಯುವುದು ಒಂದೇ ವಿದ್ಯಾರ್ಥಿ ಜೀವನದ ಪಾಠವಾಗಿದೆ. ಜೀವನಕ್ಕೆ ಏನು ಬೇಕು ಅನ್ನುವುದನ್ನು ಅಲ್ಲಿ ಕಲಿಸುವುದಿಲ್ಲ. ಆದ್ರೆ "ಅತ್ರಾಲ್ ಅಕಾಡೆಮಿ"ಯಲ್ಲಿ ಎಲ್ಲವೂ ವಿಭಿನ್ನ. ಇಲ್ಲಿ ವಿದ್ಯಾರ್ಥಿಗಳಿಗೆ ಅವರ ಆಸಕ್ತಿಯ ಫೀಲ್ಡ್ ಯಾವುದು ಅನ್ನುವುದರ ಬಗ್ಗೆ, ಅರಿವು ಮೂಡಿಸಿ, ಅವರಿಗೆ ಆ ನಿಟ್ಟಿನಲ್ಲೇ ತರಬೇತಿ ನೀಡಲಾಗುತ್ತದೆ. ಅಷ್ಟೇ ಅಲ್ಲ ಆಸಕ್ತಿ ದಾಯಕ ವಿಷಯದಲ್ಲಿ ಕಲಿಕೆ ಹೆಚ್ಚು ಅವಕಾಶ ಸಿಕ್ಕಾಗ ಭವಿಷ್ಯ ಕೂಡ ಉಜ್ವಲವಾಗುತ್ತದೆ.

“ವಿದ್ಯಾರ್ಥಿಗಳು, ತಮಗೆ ಬೇಕಾದ ಮತ್ತು ಆಸಕ್ತಿದಾಯಕ ವಿಷಯಗಳ ಬಗ್ಗೆ ಹೆಚ್ಚು ಕಲಿಯುತ್ತಾರೆ. ಸಂದೇಹಗಳು ಮತ್ತು ಸಂಶಯಗಳು ಹುಟ್ಟಿಕೊಂಡಾಗ ನನ್ನ ಸಹಾಯ ಕೇಳುತ್ತಾರೆ. ನಾನು ಕೆಲವು ಲ್ಯಾಬ್ ಎಕ್ಸ್ ಪರಿಮೆಂಟ್ ಗಳನ್ನು ಮಾಡಲು ಸಲಹೆ ನೀಡುತ್ತೇನೆ. ಇದಕ್ಕಾಗಿ ನಾವು ವಿಶೇಷ ಲ್ಯಾಬ್ ಮತ್ತು ಕಲಿಕಾ ಸಾಮಗ್ರಿಗಳನ್ನು ಹೊಂದಿದ್ದೇವೆ ”
- ಬಾಲಾ ದಂಡಪಾಣಿ, ಅತ್ರಾಲ್ ಅಕಾಡೆಮಿ ಸಂಸ್ಥಾಪಕ

ಶಾಲಯಿಂದ ಮಕ್ಕಳು ಹೊರ ಬೀಳಲು ಮುಖ್ಯ ಕಾರಣ, ಅಧ್ಯಾಪಕರ ಬಗ್ಗೆ ಇರುವ ಭಯ ಮತ್ತು ಅವರು ನೀಡುವ ಶಿಕ್ಷೆ. ಶಿಕ್ಷಣ ವ್ಯವಸ್ಥೆಯಲ್ಲಿ ಅಧ್ಯಾಪಕರಿಗಿಂತ ವಿದ್ಯಾರ್ಥಿಗಳು ಹೆಚ್ಚು ಮಹತ್ವ ಪಡೆಯುತ್ತಾರೆ. ಹೀಗಾಗಿ ಬಾಲಾ ದಂಡಪಾಣಿ, ತನ್ನ ಬಳಿ ಬರುವ ವಿದ್ಯಾರ್ಥಿಗಳಿಗೆ ಟೀಚ್ ಮಾಡುವುದಿಲ್ಲ. ಬದಲಾಗಿ ಅವರ ಆಸಕ್ತಿಯ ವಿಷಯವನ್ನು ಅವರಾಗಿಯೇ ಕಲಿಯಲು ಅವಕಾಶ ನೀಡುತ್ತಾರೆ. ಅತ್ಯುತ್ತಮ ವಾತಾವರಣವನ್ನು ಸೃಷ್ಟಿ ಮಾಡಿ, ಹೊಸ ಯೋಚನೆ ಮೂಡಿಸಲು ಕಸರತ್ತುಗಳನ್ನು ಮಾಡುತ್ತಾರೆ.

“ ಒಮ್ಮೆ ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಮೂರು ಅಥವಾ ನಾಲ್ಕು ದಿನಗಳನ್ನು ಕಳೆದ ಮೇಲೆ, ಅವರಲ್ಲಿರುವ ಭಯ ದೂರವಾಗುತ್ತದೆ. ನಮ್ಮಲ್ಲಿ ಬರುವ ವಿದ್ಯಾರ್ಥಿಗಳಿಗೆ ನಾವು ಯಾವುದೇ ಒತ್ತಡವನ್ನು ಹಾಕುವುದಿಲ್ಲ. ಅತ್ಯಂತ ಸುಲಭ ರೀತಿಯಲ್ಲಿ ಪ್ರಾಕ್ಟೀಲ್ ಅಪ್ರೋಚ್ ಗಳನ್ನು ಹೇಳಿಕೊಡುತ್ತವೆ. ”
- ಬಾಲಾ ದಂಡಪಾಣಿ, ಅತ್ರಾಲ್ ಅಕಾಡೆಮಿ ಸಂಸ್ಥಾಪಕ

ಬಾಲಾ ಹುಟ್ಟು ಬೆಳೆದಿದ್ದು ತಮಿಳುನಾಡಿನ ಕುಗ್ರಾಮವೊಂದರಲ್ಲಿ. ವೃತ್ತಿಯಲ್ಲಿ ಎಂಜಿನಿಯರ್. ದುಡ್ಡು ಮಾಡುವ ಉದ್ದೇಶದಿಂದಲೇ ಬಾಲಾ ಎಂಜಿನಿಯರ್ ಆಗಿದ್ದರು. ಬೆಂಗಳೂರಿನಲ್ಲಿ ಕೆಲ ಕಾಲ ಕೆಲಸ ಮಾಡಿದ ಮೇಲೆ ಸಿಂಗಪೂರಕ್ಕೆ ಪ್ರಯಾಣಿಸಿದರು. ಕೆಲಕಾಲದ ಕೆಲಸದ ನಂತರ ಸಿಂಗಪೂರದಲ್ಲೇ ಏನಾದರೂ ಮಾಡಬೇಕು ಅನ್ನುವ ಕನಸು ಹುಟ್ಟಿಕೊಂಡಿತ್ತು. ಸಿಂಗಪೂರದ ಮಕ್ಕಳಿಗೆ ಇಂಗ್ಲೀಷ್ ಕಲಿಸಲು ಆರಂಭಿಸಿದ್ರು. ಸಮಯ ಕಳೆದಂತೆ ತಾಯ್ನಾಡು ಭಾರತದಲ್ಲೂ ಏನಾದರೂ ಸಾಧನೆ ಮಾಡಬೇಕು ಅನ್ನುವ ಆಸೆ ಹೆಚ್ಚಾಗಿ ಅತ್ರಾಲ್ ಅಕಾಡೆಮಿಯನ್ನು ಸ್ಥಾಪಿಸಿದ್ರು.

ಬಾಲಾ ಆರಂಭದಲ್ಲಿ ದೃಷ್ಟಿ ವಿಕಲಚೇತನರಿಗೆ ಕಂಪ್ಯೂಟರ್ ಕಲಿಸಿದ್ರು. ಇದರ ಜೊತೆ ಅನೇಕ ಆ್ಯಕ್ಟಿವಿಟಿಗಳನ್ನು ಮಾಡಿದ್ರು. ಕ್ವಾಂಟಿಟಿಗಿಂತ ಹೆಚ್ಚು ಕ್ವಾಲಿಟಿ ಕೊಡಬೇಕು ಅನ್ನುವ ಕನಸಿನ ಜೊತೆ ತನ್ನ ಅಕಾಡೆಮಿಯನ್ನು ಆರಂಭಿಸಿದ್ರು. ಪ್ರತೀ ವರ್ಷ ಬಾಲಾ ಅಕಾಡೆಮಿಯಲ್ಲಿ ಕೇವಲ 30 ವಿದ್ಯಾರ್ಥಿಗಳಿಗೆ ಕಲಿಯಲು ಅವಕಾಶವಿದೆ. ಆಸಕ್ತಿ ಎಲ್ಲಿ ತನಕ ವಿದ್ಯಾರ್ಥಿಗಳಲ್ಲಿ ಇರುತ್ತದೆಯೋ ಅಲ್ಲಿ ತನಕ ಅವರಿಗೆ ದುಡ್ಡಿನ ಸಮಸ್ಯೆ ಎದುರಾಗುವುದಿಲ್ಲ. ಬಡ ಮಕ್ಕಳಿಗೆ ಅತ್ರಾಲ್ ನಲ್ಲಿ ಉಚಿತ ಶಿಕ್ಷಣವೂ ಸಿಗುತ್ತಿದೆ.  

ಇದನ್ನು ಓದಿ:

1. ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಡೋಂಟ್ ಕೇರ್, ತಂಬಾಕು ಸೇವನೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ..!

2. ಕಥೆ ಬದಲಾಗಲು ಇನ್ನೆಷ್ಟು ವರ್ಷ ಬೇಕು..?

3. ನಡೆದಾಡಲು ಕಷ್ಟಪಡುತ್ತಿದ್ದ ಅಪರ್ಣಾ, ಮೌಂಟ್ ಎವರೆಸ್ಟ್ ಏರಿದ ಕಥೆಯಿದು..!

Related Stories