ನೂರು ನಗರಗಳಿಗೆ ವಿಸ್ತರಿಸಲು ಕ್ಲಿಯರ್​​ಟ್ರಿಪ್ ಚಿಂತನೆ

ಟೀಮ್​​​ ವೈ.ಎಸ್​​. ಕನ್ನಡ

0

ಟ್ರಾವೆಲ್​​ ಸಂಸ್ಥೆಗಳು ಭಾರತದಲ್ಲಿ ತಮ್ಮ ವ್ಯವಹಾರವನ್ನು ದೊಡ್ಡ ಮಟ್ಟದಲ್ಲಿ ಮಾಡಿಕೊಳ್ಳಲು ತಯಾರು ನಡೆಸುತ್ತಿವೆ. ಕೆಲವೊಂದು ಸಂಸ್ಥೆಗಳು ಈಗಾಗಲೇ ಪ್ರಮುಖ ಸೇವೆಗಳೊಂದಿಗೆ ಟೈ ಅಪ್​​ ಆಗಿವೆ. ಆನ್​ಲೈನ್​​​ ಟ್ರಾವೆಲ್​​​​​​ ಸಂಸ್ಥೆ ಮೇಕ್​ ಮೈ ಕ್ಲಿಯರ್​ ಟ್ರಿಪ್​​ ಈಗ ತನ್ನ ಉದ್ಯಮವನ್ನು ವಿಸ್ತರಿಸುವ ಪ್ಲಾನ್​ ಮಾಡಿಕೊಂಡಿದೆ.

ಆನ್​​​ಲೈನ್ ಟ್ರಾವೆಲ್ ಸಂಸ್ಥೆ ಕ್ಲಿಯರ್ ಟ್ರಿಪ್ ಇದೀಗ ದೇಶದ ನೂರು ನಗರಗಳಿಗೆ ವಿಸ್ತರಿಸಲು ಯೋಜನೆ ಹಮ್ಮಿಕೊಂಡಿದೆ. ಮಾರ್ಚ್ 2017ರೊಳಗೆ ಒಟ್ಟು ಆದಾಯದಲ್ಲಿ ತನ್ನ ಚಟುವಟಿಕೆಗಳಿಂದಲೇ ಶೇ.15 ಪಾಲು ಪಡೆಯಲು ಚಿಂತನೆ ನಡೆಸಿದೆ. ಮೊಬೈಲ್ ಮೂಲಕವೇ ಜನರಿಗೆ ಸುಮಾರು 5000 ಚಟುವಟಿಕೆಗಳು ಬುಕ್ಕಿಂಗ್​​ಗಾಗಿ ಲಭ್ಯವಿವೆ. ಕ್ಯುಲಿನರಿ ಕ್ಲಾಸ್​​ಗಳು, ಒಂದು ದಿನದ ಪ್ರವಾಸಗಳು, ನೈಟ್ ಟ್ರೆಕ್ಕಿಂಗ್ ಹೀಗೆ, 50 ನಗರಗಳಲ್ಲಿ ಈ ಆ್ಯಪ್ ಮೂಲಕ ಸೇವೆ ಲಭ್ಯವಿದೆ.

ಕಳೆದ ಕೆಲವು ತಿಂಗಳುಗಳಿಂದ ನಮ್ಮ ಸೇವೆಗಳಿಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಪ್ರತಿದಿನ ನಾವು 800-900 ವಹಿವಾಟುಗಳನ್ನು ಪಡೆಯುತ್ತಿದ್ದೇವೆ. ಡಿಸೆಂಬರ್ ಅಂತ್ಯದ ವೇಳೆಗೆ ನಾವು ಕನಿಷ್ಟ 100 ನಗರಗಳಲ್ಲಿ ಸೇವೆ ನೀಡಲು ಉದ್ದೇಶಿಸಿದ್ದೇವೆ ಎನ್ನುತ್ತಾರೆ ಕ್ಲಿಯರ್ ಟ್ರಿಪ್​​ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಸುಬ್ರಮಣ್ಯ ಶರ್ಮಾ.

ಮಾರ್ಚ್ 2017ರ ವೇಳೆಗೆ ಒಟ್ಟು ಆದಾಯದ ಶೆಕಡಾ 15% ಪಾಲು ನಮ್ಮ ಚಟುವಟಿಕೆಗಳಿಂದಲೇ ಬರಬೇಕು ಎನ್ನುವುದು ನಮ್ಮ ಗುರಿ ಎನ್ನುವ ಸುಬ್ರಮಣ್ಯ ಅವರು ಸಂಸ್ಥೆಯ ಆದಾಯದ ಲೆಕ್ಕ ಮಾತ್ರ ಮುಚ್ಚಿಡುತ್ತಾರೆ.

ನಾವು ದೈನಂದಿನ ವಹಿವಾಟಿನ ಸಂಖ್ಯೆಯನ್ನು ಕನಿಷ್ಟ 5000ಕ್ಕೆ ಏರಿಸಲು ಚಿಂತನೆ ನಡೆಸಿದ್ದೇವೆ. ಸಂಖ್ಯೆ ದೊಡ್ಡದಿರಬಹುದು ಆದರೆ, ವಹಿವಾಟಿನ ಮೊತ್ತ ಚಿಕ್ಕದಾಗಿರಲಿದೆ ಎನ್ನುತ್ತಾರೆ ಅವರು. ಅತಿ ಹೆಚ್ಚಿನ ವಹಿವಾಟು ಬುಕ್ ಆಗುವುದು 500-800 ರೂಪಾಯಿಗಳ ಮಧ್ಯೆ. ಕೆಲವು ಜನರು ಮೈಕ್ರೋ ಹಾರಾಟ (5,500 ರೂ) ಹೆಲಿಕಾಫ್ಟರ್ ಹಾರಾಟ(16,000) ಮತ್ತು ಯಾಚಿಂಗ್(18,000)ಗಳಿಗೆ ನಮ್ಮ ಸೇವೆಯನ್ನೇ ಬಳಸುತ್ತಿದ್ದಾರೆ. ಹಾರ್ಲೆ ಡೇವಿಡ್ಸನ್ ಪ್ರಯಾಣಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಸುಬ್ರಮಣ್ಯ.

Related Stories