ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಿ: ಉತ್ತಮ ಭಾಷಣ ಮಾಡುವ ಕಲೆ ಕಲಿತುಕೊಳ್ಳಿ

ಟೀಮ್​ ವೈ.ಎಸ್​. ಕನ್ನಡ

ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಿ: ಉತ್ತಮ ಭಾಷಣ ಮಾಡುವ ಕಲೆ ಕಲಿತುಕೊಳ್ಳಿ

Friday July 01, 2016,

2 min Read

ಉತ್ತಮ ಭಾಷಣ ಮಾಡುವುದೂ ಒಂದು ಕಲೆ. ಒಬ್ಬ ಯಶಸ್ವಿ ಉದ್ಯಮಿಯಾದವನಿಗೆ ಉತ್ತಮವಾಗಿ ಭಾಷಣ ಮಾಡುವುದು ಗೊತ್ತಿರಬೇಕು. ಜೀವನದಲ್ಲಿ ಯಶಸ್ಸು ಸಾಧಿಸುವಲ್ಲಿ ಈ ಭಾಷಣ ಹೆಚ್ಚು ಉಪಯೋಗಕಾರಿಯಾಗುತ್ತದೆ. ಸ್ಮಾರ್ಟ್ ಜನರು ಇನ್ಮುಂದೆ ಇನ್ನಷ್ಟೂ ಸ್ಮಾರ್ಟ್ ಆಗಿ ಭಾಷಣ ಮಾಡಲು ಅನುಕೂಲಕಾರಿಯಾಗಲಿ ಸ್ಮಾರ್ಟ್ ಆ್ಯಪ್​ವೊಂದು ಮಾರುಕಟ್ಟೆಗೆ ಬಂದಿದ್ದು, ಎಂತವರನ್ನು ಬೇಕಾದ್ರು ಉತ್ತಮ ಭಾಷಣಕಾರರನ್ನಾಗಿ ಮಾಡುವಂತಹ ಗುಣ ಈ ಆ್ಯಪ್​ನಲ್ಲಿದೆ.

image


ಉತ್ತಮ ಭಾಷಣಕಾರನಾಗುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಕೆಲವೇ ಕೆಲವು ಜನರಿಗೆ ಇದು ಸಹಜವಾಗಿ ಬಂದಿರುತ್ತದೆ. ಇನ್ನೂ ಕೆಲವರು ತುಂಬಾ ಕಷ್ಟಪಟ್ಟು ಈ ಕಲೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ಮತ್ತೊಂದಿಷ್ಟು ಜನರಿಗೆ ಭಾಷಣ ಮಾಡುವ ಧೈರ್ಯ ಇರುತ್ತದೆ. ಆದರೆ, ಮಾತಿಗೆ ನಿಂತ ಕೂಡಲೇ ಎಲ್ಲವೂ ಮರೆತು ಹೋಗುತ್ತವೆ. ಸ್ಟೇಜ್ ಫಿಯರ್ ಅನೇಕ ಜನರನ್ನು ಕಾಡುತ್ತದೆ. ಅದರಿಂದಾಗಿಯೇ ಅನೇಕರು ಸ್ಟೇಜ್ ಏರಲು ಸದಾ ಹೆದರುತ್ತಾರೆ. ಆದರೆ ಇದಕ್ಕೆಲ್ಲ ಈಗ ಸುಲಭ ಉಪಾಯ ನಿಮ್ಮ ಕೈಗೆ ಬಂದಿದೆ.

ಇದನ್ನು ಓದಿ: ಗ್ಲಾಮರ್ ಬೊಂಬೆಯಾದ್ಲು ಯೋಗ ಟೀಚರ್..!

ಚತುರ ಭಾಷಣಕಾರರು ಸದಾ ಸ್ವಲ್ಪ ಹೋಮ್ ವರ್ಕ್ ಮಾಡಿಕೊಂಡು ಬಂದಿರುತ್ತಾರೆ. ಅವರ ಪೂರ್ವ ಸಿದ್ಧತೆ ವಿಧಾನ ಇತರರಿಗಿಂತ ಭಿನ್ನವಾಗಿತ್ತದೆ. ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಭಾಷಣದ ವೇಳೆ ಜನರಿಗೆ ಬೇಸರ ತರುವಂತಹ ಫಿಲ್ಲರ್ಸ್​ಬಳಕೆ ಅಲ್ಲಿ ಕಡಿಮೆಯಿರುತ್ತದೆ. ಹಾಗಾಗಿ ಅವರು ಜನರನ್ನು ಹೆಚ್ಚು ಆಕರ್ಷಿಸುವಲ್ಲಿ ಸಫಲರಾಗುತ್ತಾರೆ.

ಭಾಷಣ ಸಿದ್ದತೆಗೆ ಈ ಕಾಲದಲ್ಲಿ ಹಲವು ವಿಧಾನಗಳಿವೆ. ಆದರೆ ಸ್ಮಾರ್ಟ್ ಜನರು ಇನ್ಮುಂದೆ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಸುಲಭವಾಗಿ ಭಾಷಣ ಮಾಡಬಹುದು. ಅವುಗಳಲ್ಲಿ ಒಂದು ಮೊಬೈಲ್ ಆ್ಯಪ್​ಗಳು. ಹತ್ತು ಜನರ ಮುಂದೆ ನಿಂತು, ಯಾವುದೇ ಅಡೆತಡೆ ಇಲ್ಲದೆ ನಿರರ್ಗಳವಾಗಿ ಮಾತನಾಡಲು ನೆರವಾಗುವ ಹಲವು ಆ್ಯಪ್​​ಗಳಿವೆ. ಇವುಗಳಲ್ಲಿ ಕೆಲವು ಉಚಿತವಾಗಿ ಬಳಕೆದಾರರಿಗೆ ಲಭ್ಯವಿದೆ. ಇನ್ನು ಕೆಲವು ಆ್ಯಪ್​​ಗಳಿಗೆ ಹಣ ಪಾವತಿಸಬೇಕು. ಆದರೆ ಉಮ್ಮೊ ಆ್ಯಪ್ 2 ಡಾಲರ್​ನಲ್ಲಿ (136 ರೂಪಾಯಿ) ನಿಮ್ಮ ಇಂಗ್ಲೀಷ್ ಭಾಷಣದ ಲೋಪದೋಷಗಳನ್ನು ತಿಳಿಸುತ್ತದೆ.

image


ಈಗಾಗಲೇ ಸಿದ್ಧಪಡಿಸಿದ ಭಾಷಣವನ್ನು ಈ ಉಮ್ಮೊ ಆ್ಯಪ್ ಮುಂದೆ ಹೇಳಿದರೆ, ಅದು ಮಾತುಗಳನ್ನು ಆಲಿಸುತ್ತಾ, ಪದಗಳನ್ನು ತನ್ನಲ್ಲಿ ದಾಖಲಿಸಿಕೊಳ್ಳುತ್ತದೆ. ಭಾಷಣ ಮಾಡುವಾಗ ಎಷ್ಟು ಬಾರಿ ವಿರಾಮ ನೀಡಲಾಗಿದೆ? 'ಲೈಕ್', ಯಾ, ಯೆಸ್, ಆಬಿಯಸ್ಲಿ 'ಯೂ ನೋ' 'ರೈಟ್'ನಂತಹ ಪದಗಳನ್ನು ಎಷ್ಟು ಸಲ ಬಳಸಲಾಗಿದೆ ಎಂಬುದನ್ನೆಲ್ಲ ದಾಖಲಿಸುತ್ತದೆ. ಅಂತಿಮವಾಗಿ, ಬಳಕೆದಾರ ಮಾಡಿರುವ ಭಾಷಣದ ನಕಲು ಪ್ರತಿಯನ್ನು ಈ ಆ್ಯಪ್ ಮೊಬೈಲ್ ಪರದೆಯ ಮೇಲೆ ತೋರಿಸುತ್ತದೆ.

ನಿಮ್ಮ ಭಾಷಣದಲ್ಲಿ ಹೆಚ್ಚು ಸುಧಾರಣೆಯಾಗಬೇಕು ಎಂದಿದ್ದರೆ, ಫಿಲ್ಲರ್ ಪದಗಳನ್ನು ಬಳಸಿದಾಗಲೆಲ್ಲ ಶಬ್ದ ಹೊರಡಿಸುವಂತೆ ಆ್ಯಪ್​ಗೆ ಬಳಕೆದಾರ ನಿರ್ದೇಶಿಸಬಹುದು. ಫಿಲ್ಲರ್ ಪದಗಳನ್ನು ಅತಿಯಾಗಿ ಬಳಸಿದ ಸಂದರ್ಭದಲ್ಲಿ ಅದನ್ನು ಪರಿಷ್ಕರಿಸಲೂ ಸೂಚಿಸಬಹುದು. ಭಾಷಣದಲ್ಲಿ ಬಳಸಿರುವ ಪದಗಳ ಸಂಖ್ಯೆ, ಒಂದು ಪದವನ್ನು ಎಲ್ಲೆಲ್ಲಿ ಮರು ಬಳಕೆ ಮಾಡಲಾಗಿದೆ, ಪ್ರತಿ ನಿಮಿಷಕ್ಕೆ ಉಚ್ಚರಿಸಿರುವ ಪದಗಳ ಸಂಖ್ಯೆ, ಎಷ್ಟು ಜೋರಾಗಿ ಮಾತನಾಡಲಾಗಿದೆ. ಭಾಷಣದ ಸಂದರ್ಭದಲ್ಲಿ ಸ್ವರ ಒಂದೇ ತರವಾಗಿತ್ತೇ?, ಇಲ್ಲಿ ಪದಗಳನ್ನು ನುಂಗಲಾಯ್ತು. ಕೆಟ್ಟದಾಗಿ ಉಚ್ಚಾರಿಸಲಾಯ್ತೇ ಎಲ್ಲವೂ ಇಲ್ಲಿ ದಾಖಲಾಗುತ್ತದೆ.

ಎಲ್ಲಾ ಮಾಹಿತಿಗಳನ್ನು ಗ್ರಾಫ್ ಸಹಿತ ತೋರಿಸುವ ಸಾಮರ್ಥ್ಯ ಉಮ್ಮೊ ಆ್ಯಪ್​ಗಿದೆ. ಆ್ಯಪ್ ನೀಡುವ ಮಾಹಿತಿಗಳ ಆಧಾರದಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಗುರುತಿಸಿಕೊಂಡು ಅವುಗಳನ್ನು ತಿದ್ದಿಕೊಳ್ಳುವ ಅವಕಾಶ ಭಾಷಣಕಾರನಿಗೆ ಇದೆ. ಹಾಗಾಗಿ ಉತ್ತಮ ಯಶಸ್ಸು ಸಾಧಿಸುವಲ್ಲಿ ಉತ್ತಮ ಭಾಷಣಕಾರರಾಗುವುದು ಅವಶ್ಯಕ. ಇಂತಹ ಹಾದಿಯಲ್ಲಿ ಈ ಆ್ಯಪ್​ಗಳು ಸಹಾಯಕವಾಗಲಿವೆ.

ಇದನ್ನು ಓದಿ: 

1. 63 ವರ್ಷದ ವೃದ್ಧನಿಗಿರುವ ಕಳಕಳಿ ನಮಗೇಕಿಲ್ಲ..?

2. ಮ್ಯಾಜಿಕ್​ ಅಲ್ಲ... ಕಾರು ಓಡೋದಿಕ್ಕೆ ಪೆಟ್ರೋಲ್​, ಡೀಸೆಲ್​ ಯಾವುದೂ ಬೇಡ..!

3. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಮರುಬಳಕೆ - ವಿಜ್ಞಾನಿಗಳಿಂದ ಡೀಸೆಲ್ ತಯಾರಿಕೆ