ಹಣೆ ಬರಹ ಬದಲಿಸಿದ 2.60 ಕೋಟಿ ರೂಪಾಯಿ- ಆಟೋ ಡ್ರೈವರ್ ಮಗ ಈಗ ಸೂಪರ್ ಕ್ರಿಕೆಟರ್..!

ಟೀಮ್​ ವೈ.ಎಸ್​. ಕನ್ನಡ

1

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅದೆಷ್ಟೋ ಪ್ರತಿಭೆಗಳನ್ನು ಹುಟ್ಟುಹಾಕಿದೆ. ಕ್ರಿಕೆಟಿಗರ ಪ್ರತಿಭೆಯನ್ನು ಹೊರ ಹಾಕಿದೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ದಾರಿ ತೋರಿಸಿದೆ. ಎಲ್ಲೋ ಇದ್ದವರನ್ನು ಸೂಪರ್ ಸ್ಟಾರ್​​ಗಳನ್ನಾಗಿ ಮಾಡಿದೆ. ಇದರ ಜೊತೆಗೆ ವಿವಾದಗಳು ಕ್ರಿಕೆಟ್​​ಗೆ ಅಂಟಿಕೊಂಡಿದ್ದು ಕೂಡ ಐಪಿಎಲ್​ನಿಂದಲೇ. ಐಪಿಎಲ್​ನಲ್ಲಿರುವ ಕಾಂಚಾಣ ಎಲ್ಲದಕ್ಕೂ ಕಾರಣವಾಗಿದೆ. ಆಟಗಾರರನ್ನು ಶ್ರೀಮಂತರನ್ನಾಗಿದೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಯಾರಿಗೂ ಗೊತ್ತೇ ಇಲ್ಲದ ಯುವ ಕ್ರಿಕೆಟರ್​​ಗಳು ಕೋಟ್ಯಾಧಿಪತಿಗಳಾಗಿದ್ದಾರೆ.

ಮೊಹಮ್ಮದ್ ಸಿರಾಜ್. ಹೈದ್ರಾಬಾದ್​​ನ ಈ ಕ್ರಿಕೆಟಿಗನ ಹೆಸರು ಕೂಡ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಯಾರಿಗೂ ಗೊತ್ತಿರಲಿಲ್ಲ. ಆದ್ರೆ ಈಗ ಸಿರಾಜ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದಕ್ಕೆ ಕಾರಣವಾಗಿದ್ದು ಸಿರಾಜ್ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಡೆದ 2.60 ಕೋಟಿ ರೂಪಾಯಿಗಳು. 20 ಲಕ್ಷ ಮೂಲಬೆಲೆಯಿಂದ ಸಿರಾಜ್ 2.60 ಕೋಟಿ ಪಡೆದು ಸಪ್ರೈಸ್ ಆಟಗಾರನಾಗಿ ಹೊರ ಹೊಮ್ಮಿದ್ದಾರೆ.

ಅಂದಹಾಗೇ ಸಿರಾಜ್ ಹಿಂದೆ ನೋವಿನ ಕಥೆಯೂ ಇದೆ. ಸಿರಾಜ್ ಬೆಳೆದಿದ್ದು ಬಡತನದಲ್ಲಿ. ಹೈದ್ರಾಬಾದ್​ನ ಬಂಜಾರಾ ಹಿಲ್ಸ್ ಬಳಿ ಬಾಡಿ ಮನೆಯೊಂದರಲ್ಲಿ ಸಿರಾಜ್ ಕುಟುಂಬ ವಾಸವಿದೆ. ಗೌಸ್ ಮೊಹಮ್ಮದ್ ಸಿರಾಜ್ ಅಪ್ಪ. ಆಟೋ ಓಡಿಸಿಕೊಂಡು ಗೌಸ್ ಕುಟುಂಬವನ್ನು ಸಾಕುತ್ತಿದ್ದಾರೆ. 30 ವರ್ಷಗಳಿಂದ ಗೌಸ್ ಈ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಆದ್ರೆ ಸಿರಾಜ್ ಈಗ ಕೋಟ್ಯಾಧಿಪತಿ. ಹೀಗಾಗಿ ಅಪ್ಪ ಗೌಸ್ ಮೊಹಮ್ಮದ್ ಇನ್ನುಮುಂದೆ ಆಟೋ ಓಡಿಸುವ ಅಗತ್ಯ ಇಲ್ಲ ಎಂದು ಹೇಳುತ್ತಾರೆ ಸೂಪರ್ ಸ್ಟಾರ್ ಸಿರಾಜ್.

ಇದನ್ನು ಓದಿ: ಕಷ್ಟದ ಜೊತೆ ಗುದ್ದಾಡಿ ಗೆದ್ದ ಛಲಗಾರ – ಸಿಎ ಪಾಸ್ ಮಾಡಿ ಚಾರ್ಟಡ್ ಅಕೌಂಟೆಂಟ್ ಆದ ಚಾಯ್ ವಾಲಾ 

ಸಿರಾಜ್ ಹುಟ್ಟಿದ್ದು 1994ರಲ್ಲಿ. ಚಿಕ್ಕವಯಸ್ಸಿನಲ್ಲಿ ಸಿರಾಜ್ ಯಾವಾತ್ತೂ ಕ್ರಿಕೆಟ್ ಕೋಚಿಂಗ್​ ಅಕಾಡೆಮಿಗೆ ಹೋಗಲಿಲ್ಲ. ಆದ್ರೆ ಕ್ರಿಕೆಟ್ ಪ್ರತಿಭೆ ಇದ್ದೇ ಇತ್ತು. ಸಿಕ್ಕ ಅವಕಾಶಗಳಲ್ಲಿ ಸಿರಾಜ್ ಮಿಂಚಿದ್ರು. 2015-16ರ ರಣಜಿ ಸೀಸನ್​ನಲ್ಲಿ ಹೈದ್ರಾಬಾದ್ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ತು. ತಾನಾಡಿದ ಮೊದಲ ಸೀಸನ್​ನಲ್ಲೇ ಸಿರಾಜ್ 9 ಪಂದ್ಯಗಳಿಂದ 41 ವಿಕೆಟ್ ಪಡೆದು ಗಮನ ಸೆಳೆದ್ರು. ಅಷ್ಟೇ ಅಲ್ಲ ಆಯ್ಕೆಗಾರರು ಸಿರಾಜ್ ಪ್ರದರ್ಶನವನ್ನು ಗಮಿಸಿ ಇರಾನಿ ಟ್ರೋಫಿಗೆ ರೆಸ್ಟ್ ಆಫ್ ಇಂಡಿಯಾ ತಂಡಕ್ಕೆ ಆಯ್ಕೆ ಮಾಡಿದ್ರು.

ಈ ಬಾರಿಯ ರಣಜಿ ಸೀಸನ್​ನಲ್ಲಿ ಈ ಎಡಗೈ ವೇಗದ ಬೌಲರ್ ಸದ್ದು ಮಾಡಿದ್ರು. ಸಿರಾಜ್ ವೇಗ ಮತ್ತು ವೇರಿಯೇಶನ್​ಗಳಿಂದ ಟಿ20 ಫಾರ್ಮೆಟ್​​ಗೆ ಪಕ್ಕಾ ಬೌಲರ್ ಅನ್ನುವುದನ್ನು ಪ್ರೂವ್ ಮಾಡಿದ್ರು. ಐಪಿಎಲ್ ಆಟಗಾರರ ಹರಾಜಿನಲ್ಲಿ   ಸಿರಾಜ್​ಗಾಗಿ ಎಲ್ಲಾ ತಂಡಗಳು ಪೈಪೋಟಿಗೆ ಬಿದ್ದಿದ್ದವು. ಕೊನೆಗೆ ಸನ್ ರೈಸರ್ಸ್ ಹೈದ್ರಾಬಾದ್ ಸಿರಾಜ್​ಗೆ 2.60 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ.

“ ನನ್ನ ಕನಸು ನನಸಾಗಿದೆ. ನನಗೆ ಇಷ್ಟೊಂದು ದುಡ್ಡು ಬರುತ್ತೆ ಅನ್ನುವುದನ್ನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಆದ್ರೆ ಈ ಬಾರಿ ಯಾವುದಾದರೂ ಒಂದು ತಂಡಕ್ಕೆ ಆಡುತ್ತೀನಿ ಅನ್ನುವ ವಿಶ್ವಾಸ ಇತ್ತು. 30 ವರ್ಷಗಳಿಂದ ನನ್ನ ತಂದೆ ಆಟೋ ಓಡಿಸುತ್ತಿದ್ದರು. ಇನ್ನು ಮುಂದೆ ಅವರು ಈ ಕೆಲಸವನ್ನು ಬಿಡಬಹುದು.”
- ಮೊಹಮ್ಮದ್ ಸಿರಾಜ್, ಕ್ರಿಕೆಟರ್

ಸದ್ಯ ಸಿರಾಜ್ ತನ್ನದೇ ಒಂದು ಸ್ವಂತ ಮನೆ ಖರೀದಿಸುವ ಪ್ಲಾನ್ನಲ್ಲಿದ್ದಾರೆ. ಒಟ್ಟಿನಲ್ಲಿ ಐಪಿಎಲ್ ಕ್ರಿಕೆಟರ್ ಒಬ್ಬನ ಅದೃಷ್ಟ ಮತ್ತು ಹಣೆಬರಹವನ್ನು ಬದಲಿಸಿದೆ. 

ಇದನ್ನು ಓದಿ:

1. ಕೈಗಳು ಇಲ್ದೇ ಇದ್ರೂ ಈಕೆ ಅದ್ಭುತ ಕಲಾವಿದೆ..!

2. ಖಡಕ್ ನಿರ್ಧಾರ ಮಾಡುವ ಯುವ ಐಎಎಸ್ ಆಫೀಸರ್- ಆಹಾರ ಉತ್ಪನ್ನಗಳ ಬಗ್ಗೆ ಕಾಳಜಿ ಮೂಡಿಸುತ್ತಿರುವ ಫುಡ್ ಸೇಫ್ಟಿ ಕಮಿಷನರ್

3. ಅಂಧತ್ವಕ್ಕೆ ಸೆಡ್ಡು ಹೊಡೆದ ಭಕ್ತಿ – ನಾಗ್ಪುರ ವಿವಿಯಲ್ಲಿ ಚಿನ್ನದ ಪದಕ ಪಡೆದ ಯುವತಿ 

Related Stories

Stories by YourStory Kannada