ರೀಸರ್ಚ್​ ಮಾಡಿದ್ದು ಡಾಕ್ಟರೇಟ್​ಗಾಗಿ- ಲಾಭವಾಗಿದ್ದು ಬಿಎಂಟಿಸಿಗೆ..!

ಪಿ ಅಭಿನಾಷ್​​​

ರೀಸರ್ಚ್​ ಮಾಡಿದ್ದು ಡಾಕ್ಟರೇಟ್​ಗಾಗಿ- ಲಾಭವಾಗಿದ್ದು ಬಿಎಂಟಿಸಿಗೆ..!

Thursday October 08, 2015,

3 min Read

ಬೆಂಗಳೂರು ಭಾರತದ ಐಟಿ ಕ್ಯಾಪಿಟಲ್​​.. ಸಿಲಿಕಾನ್​​ ಸಿಟಿ ಅಂದ್ರೆ ಸಾಕು ಒಂದ್ಸಾರಿ ಇನ್ವೆಸ್ಟರ್​​ಗಳು ಕಣ್ಣೆತ್ತಿ ನೋಡ್ತಾರೆ. ಹೊಸ ಬ್ಯುಸಿನೆಸ್​​ ಮಾಡೋದಿಕ್ಕೆ ಪ್ಲಾನ್​​ ಮಾಡಿಕೊಳ್ಳುತ್ತಾರೆ. ಗಾರ್ಡನ್​​ ಸಿಟಿಗೆ ವಲಸೆ ಬರುವವರ ಸಂಖ್ಯೆ ಕೂಡ ಹೆಚ್ಚಿದೆ. ಇಲ್ಲಿ ಓಡಾಡೋದಿಕ್ಕೆ ಬಸ್​​ ಸೌಕರ್ಯವಿದೆ. ಬೆಂಗಳೂರು ಮೆಟ್ರೋಪಾಲಿಟನ್​​ ಟ್ರಾನ್ಸ್​​ಪೋರ್ಟ್​ ಕಾರ್ಪೋರೇಶನ್​​​​​​​ (ಬಿಎಂಟಿಸಿ) ಬಸ್​​ಗಳು ಇಲ್ದೇ ಇದ್ರೆ ಬೆಂಗಳೂರಿಗೆ ಬೆಂಗಳೂರೇ ಸ್ಥಬ್ಧವಾಗೋದು ಗ್ಯಾರೆಂಟಿ. ಅಷ್ಟರ ಮಟ್ಟಿಗೆ ಬಿಎಂಟಿಸಿ ಮತ್ತು ಜನರಿಗೆ ಗಟ್ಟಿಯಾದ ಸಂಬಂಧವಿದೆ.

image


ಬಿಎಂಟಿಸಿ ದೇಶದಲ್ಲೇ ಒಳ್ಳೆಯ ಹೆಸರು ಪಡೆದಿರುವ ಸಾರಿಗೆ ಸಂಸ್ಥೆ. ಸರ್ವೀಸ್​​​ಗಳಿಂದ ಹಿಡಿದು ಟೈಮಿಂಗ್​​ ತನಕವೂ ದೇಶದಲ್ಲೇ ನಂಬರ್​​ವನ್​​. ಆದ್ರೆ, ಕಳೆದ ಕೆಲ ವರ್ಷಗಳಿಂದ ಈ ಬಸ್​ ಸೇವೆ ನಷ್ಟದ ಹಾದಿ ಹಿಡಿದಿದೆ.

ವೋಲ್ವೋಬಸ್​​ ತಂದಿದೆ ಸಂಕಷ್ಟ

ಬಿಎಂಟಿಸಿಯ ನಷ್ಟಕ್ಕೆ ಪ್ರಮುಖ ಕಾರಣವಾಗಿರೋದು ವೋಲ್ವೋ ಬಸ್​​ಗಳು. ವೋಲ್ವೋ ಬಸ್​​ಗಳೇ ಬಿಎಂಟಿಸಿಗೆ ಹೈಫೈ ಟಚ್​ಕೊಟ್ರೂ ಇವುಗಳನ್ನು ಮೈಂಟೇನ್​​ ಮಾಡೋದು ಅಂದ್ರೆ ಬಿಳಿ ಆನೆ ಸಾಕಿದ ಹಾಗೇಯೆ. ವೋಲ್ವೋ ಬಸ್​​ಗಳಿಂದಾಗಿರುವ ನಷ್ಟವನ್ನ ತಗ್ಗಿಸೋದು ಹೇಗೆ ಅನ್ನೋ ಬಗ್ಗೆ ಅಧಿಕಾರಿಗಳು ಮಾತ್ರ ಇನ್ನು ತಲೆಕೆಡಿಸಿಕೊಂಡಿಲ್ಲ. ಹೇಗಿದೆಯೋ ಹಾಗೇ ಕೆಸಲ ನಡಿಲೀ ಅನ್ನೋದು ಅವ್ರ ನಿಲುವು

ನಷ್ಟ ಕಡಿಮೆಗೊಂದು ವಿದ್ಯಾರ್ಥಿಯ ಪ್ಲಾನ್​​​​​

ಸಾರಿಗೆ ಸಂಸ್ಥೆಯ ನಿರ್ಲಕ್ಷ್ಯದಿಂದ ಕೋಟ್ಯಾಂತರ ರೂಪಾಯಿ ಬಿಎಂಟಿಸಿಗೆ ಪ್ರತಿವರ್ಷವೂ ನಷ್ಟವಾಗ್ತಾ ಇತ್ತು. ಸಾರಿಗೆ ಸಂಸ್ಥೆಯ ಈ ನಷ್ಟದ ವಿಷಯವನ್ನು ಮುಂದಿಟ್ಟುಕೊಂಡೇ ಅದಕ್ಕೊಂದು ಪರಿಹಾರ  ಮಂಗಳೂರಿನ ಸುರತ್ಕಲ್​​ನ ಎನ್​​ಐಟಿಯಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿರೋ ರವಿರಾಜ್ ಮೂಲಂಗಿ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್​​ನಲ್ಲಿ ಪಿಎಚ್​​ಡಿಗಾಗಿ ರವಿರಾಜ್​​ ಆಯ್ದುಕೊಂಡಿದ್ದು ಬೆಂಗಳೂರು ಸಾರಿಗೆಯ ಹೃದಯ ಬಿಎಂಟಿಸಿಯನ್ನು. ಪ್ರತಿದಿನ ಸರಿಸುಮಾರು ಒಂದುಕೋಟಿಗೂ ಅಧಿಕ ಪ್ರಯಾಣಿಕರ ಪಾಲಿಗೆ ಸಾರಿಗೆಯ ಬೆನ್ನೆಲುಬಾಗಿರುವ ಬಿಎಂಟಿಸಿಯ ನಷ್ಟ ಕಡಿಮೆ ಮಾಡೋದು ಹೇಗೆ ಅನ್ನೋದನ್ನ ರವಿರಾಜ್​​ ಮೊದಲು ಅಭ್ಯಾಸ ಮಾಡಿದ್ರು. ಒಂದು ವರ್ಷಗಳ ಕಾಲ ಬಿಎಂಟಿಸಿ ವ್ಯವಸ್ಥೆ ಬಗ್ಗೆ ಹದ್ದಿನ ಕಣ್ಣಿಟ್ಟು ಅಭ್ಯಾಸ ನಡೆಸಿದ್ರು. ಬಿಎಂಟಿಸಿ ಎಲ್ಲಿ ಎಡವುತ್ತಿದೆ ಅನ್ನೋದನ್ನ ಮೊದಲು ತಿಳಿದುಕೊಂಡ್ರು. ಈ ಬಗ್ಗೆ ವಿಸ್ತ್ರತ ವರದಿ ಸಿದ್ಧಪಡಿಸಿದ್ರು.

ಮೊದಲು ಬಿಎಂಟಿಸಿಯ ನಷ್ಟದ ಹಾದಿಯನ್ನು ತಿಳಿದುಕೊಂಡ ರವಿರಾಜ್​​​ ಅದಕ್ಕೆ ಪರಿಹಾರ ಹೇಗೆ ಅನ್ನೋದನ್ನ ಕೂಡ ಅಭ್ಯಾಸ ಮಾಡಿದ್ರು. ರವಿರಾಜ್​​ನ ರಿಸರ್ಚ್​ನಲ್ಲಿ ಐಷಾರಾಮಿ ವೋಲ್ವೋ ಬಸ್​​ಗಳೇ ಬಿಎಂಟಿಸಿ ಪಾಲಿಗೆ ವಿಲನ್​​ಗಳಾಗಿದ್ದವು. ಆದ್ರೆ ವೋಲ್ವೋ ಬಸ್​​ಗಳಿಲ್ಲದೆ ಬಿಎಂಟಿಸಿಗೆ ಸ್ಟಾರ್​​ಗಿರಿ ಸಿಗೋದಿಲ್ಲ ಅನ್ನೋದು ರವಿರಾಜ್​​ಗೆ ಗೊತ್ತಿತ್ತು. ಹೀಗಾಗಿ ಈ ವೋಲ್ವೋಗಳಿಂದಾಗುವ ನಷ್ಟವನ್ನ ತಗ್ಗಿಸುವುದು ಹೇಗೆ ಅನ್ನೋದ್ರ ಬಗ್ಗೆ ವರದಿ ಸಿದ್ದಪಡಿಸಿದ್ದಾರೆ.

image


ಹೆಚ್ಚು ಖರ್ಚು.. ಲಾಭ ಶೂನ್ಯ..!

ಅಂದಹಾಗೇ ಐಷಾರಾಮಿ ವೋಲ್ವೋ ಬಸ್​​ಗಳು ಬಿಳಿ ಆನೆಯಂತೆ, ಖರೀದಿ ಮಾಡುವಾಗ್ಲೂ ಕಾಸ್ಟ್ಲೀ, ಮೈಂಟೆನೆನ್ಸ್ ಕೂಡ ದುಬಾರಿ. ಎಲ್ಲಾ ಬಸ್​​ಗಳಿಂತ ವೋಲ್ವೋ ಬಸ್​​ಗಳ ಟಿಕೆಟ್ ದರವೂ ಹೆಚ್ಚು. ಆದ್ರೆ ಲಾಭ ಮಾತ್ರ ಶೂನ್ಯ. ಹೀಗಾಗಿ ಬಿಎಂಟಿಸಿ, ವೊಲ್ವೋ ಬಸ್​​ಗಳಿಂದ ನಷ್ಟವನ್ನೇ ಅನುಭವಿಸ್ತಾ ಇದೆ. ಈ ನಷ್ಟದಿಂದ ಹೊರಬರೋದಾದ್ರು ಹೇಗೆ ಅನ್ನೋದನ್ನ ಸ್ಟಡಿ ಮಾಡಿ ಐಐಎಸ್​​​ನಲ್ಲಿ ಪಿಎಚ್​​ಡಿ ಪಡೆದಿದ್ದು ರವಿರಾಜ್​​. Performance Evaluation of public bus Transport operations in Karnataka by Using Non Parametric and multivariate analysis ಅನ್ನೊ ಪ್ರಬಂಧವನ್ನ ಸಿದ್ಧಪಡಿಸಿ ವೋಲ್ವೋ ಬಸ್​​ಗಳಿಂದಾಗುವ ನಷ್ಟವನ್ನ ಹೇಗೆ ತಗ್ಗಿಸಿಕೊಳ್ಳಬಹುದು ಅನ್ನೋದ್ರ ಬಗ್ಗೆ ರವಿರಾಜ್​​​​​​​ ಸಾರಿಗೆ ಸಂಸ್ಥೆಗೆ ಟಿಪ್ಸ್​​ ನೀಡಿದ್ದಾರೆ.

ಲಾಸ್​​ ಕಡಿಮೆ ಮಾಡೋ ಪ್ಲಾನ್​​​

ಬೆಂಗಳೂರು ನಗರದಲ್ಲಿ ಒಟ್ಟು 39 ಬಿಎಂಟಿಸಿ ಡಿಪೋಗಳಿವೆ. ಈ ಪೈಕಿ, 5 ವೋಲ್ವೋ ಬಸ್ ಡಿಪೋಗಳಾಗಿವೆ. ಇದ್ರಲ್ಲಿ ಡಿಪೋದಿಂದ ಬಸ್ ಹೊರಡುವ ನಿಲ್ದಾಣಕ್ಕೆ ಬರುವ ಮಾರ್ಗವನ್ನ ಡೆಡ್ ಕಿಲೋಮೀಟರ್ ಅಂತಾ ಕರೆಯಲಾಗತ್ತೆ. ಅಂದ್ರೆ, ಅಲ್ಲಿ ಯಾವುದೇ ಪ್ರಯಾಣಿಕರು ಪ್ರಯಾಣ ಮಾಡದೇ ಖಾಲಿ ಬಸ್ ನಿಲ್ದಾಣಕ್ಕೆ ಬರುತ್ತೆ. ಸದ್ಯ ಬಿಎಂಟಿಸಿ ಬಳಿ ಇರುವ ಅಂದಾಜು 800 ವೋಲ್ವೋ ಬಸ್​​ಗಳು, ಡಿಪೋದಿಂದ ನಿಲ್ದಾಣವನ್ನ ತಲುಪಲು ಪ್ರತಿ ನಿತ್ಯ 3,573ಡೆಡ್ ಕಿಲೋಮೀಟರ್ ಕ್ರಮಿಸ್ತಾ ಇವೆ. ಹೀಗಾಗಿ ಇದೇ ಬಸ್​​ಗಳನ್ನ ನಿಲ್ದಾಣದ ಹತ್ತಿರದ ಡಿಪೋಗಳಿಗೆ ಶಿಫ್ಟ್ ಮಾಡಿದ್ರೆ, ನಿತ್ಯ ಅಂದಾಜು 73,904 ರೂಪಾಯಿಗಳಷ್ಟು ಹಣವನ್ನ ಉಳಿಸಬಹುದು ಅಂತಾ ಅಧ್ಯಯನ ತಿಳಿಸಿದೆ.. ಡೆಡ್ ಕಿಲೋಮೀಟರ್ಸ್​ನ್ನು ಕಡಿಮೆ ಮಾಡುವ ಮೂಲಕ ನಷ್ಟದಿಂದ ಹೊರಬರಬಹುದು ಅನ್ನೋದನ್ನ ಸಾಭೀತು ಪಡಿಸಿದ್ದಾರೆ. ಈ ಬಗ್ಗೆ ಹೇಳುವ ರವಿರಾಜ್​​​, " ವೋಲ್ವೋ ಬಸ್​​ಗಳ ಡೆಡ್ ಕಿಲೋಮೀಟರ್ಸ್​ಗಳನ್ನ ಕಡಿಮೆ ಮಾಡುವ ಮೂಲಕ ಬಸ್ಗಳಿಂದಾಗುತ್ತಿರುವ ನಷ್ಟವನ್ನ ತಕ್ಕಮಟ್ಟಿಗೆ ತಗ್ಗಿಸಬಹುದು. ಇದು ವೋಲ್ವೋಗಳಿಗೆ ಮಾತ್ರ ಸೀಮಿತವಲ್ಲ. ಸಾಮಾನ್ಯ ಬಸ್​​ಗಳಲ್ಲೂ ಡಿಪೋ ಬಳಿ ಇರುವ ಬಸ್ ನಿಲ್ದಾಣಗಳಿಂದಲೇ ಪ್ರಯಾಣಿಕರ ಸಂಚಾರ ಆರಂಭಿಸಿದ್ರೆ, ಕೋಟ್ಯಂತರ ರೂಪಾಯಿ ನಷ್ಟವನ್ನ ತಗ್ಗಿಸಬಹುದು" ಅಂತ ಹೇಳ್ತಿದ್ದಾರೆ.

ಇನ್ನು 39 ಡಿಪೋಗಳ ಪೈಕಿ ನಿತ್ಯ ಏಳು ಸಾವಿರ ಬಸ್​​​ಗಳು 31,893 ಡೆಡ್ ಕಿಲೋಮೀಟರ್ ಗಳನ್ನ ಕ್ರಮಿಸ್ತಿವೆ. ಇದನ್ನೂ ಕೂಡಾ ಕಡಿಮೆ ಮಾಡಲು ಸಾಧ್ಯವಿದ್ದು ವಾರ್ಷಿಕ 10 ಕೋಟಿಗೂ ಹೆಚ್ಚು ಹಣ ಉಳಿಸಲು ಸಾಧ್ಯವಿದೆ ಅಂತ ಹೇಳ್ತಾರೆ ರವಿರಾಜ್​​​. ತಮ್ಮ ಪಿಹೆಚ್​​ಡಿ ಪ್ರತಿಯನ್ನ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೂ ನೀಡಿ ಸಂಸ್ಥೆಯಲ್ಲಿನ ನಷ್ಟ ಕಡಿಮೆ ಮಾಡಲು ಹೊಸ ಐಡಿಯಾ ಕೊಟ್ಟಿದ್ದಾರೆ. ರವಿರಾಜ್​​ರ ಈ ಅಧ್ಯಯನ ಕೇವಲ ಬಿಎಂಟಿಸಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ಕೆಎಸ್ಆರ್​​ಟಿಸಿ ಸೇರಿದಂತೆ, ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆ ಗಳಿಗೆ ಉಪಯೋಗವಾಗಲಿದೆ. ಒಬ್ಬ ಪಿಹೆಚ್​​ಡಿ ವಿದ್ಯಾರ್ಥಿಯ ದೂರದೃಷ್ಟಿ ಇಡೀ ಸಾರಿಗೆ ವ್ಯವಸ್ಥೆಯನ್ನೇ ಬದಲಿಸಬಹುದು ಅನ್ನೊದಿಕ್ಕೆ ರವಿರಾಜ್​​ ಉತ್ತಮ ಉದಾಹರಣೆ.